ವಾಟ್ಸ್‌ಆಪ್ ಲೈವ್ ಲೋಕೆಷನ್ ಆಯ್ಕೆ; ಹೊಸ ಅನುಭವ

Written By:

ವಾಟ್ಸ್‌ಆಪ್ ದಿನಕ್ಕೊಂದು ಹೊಸ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಈಗಾಗಲೇ ವಿಶ್ವದ ನಂ.1 ಸೋಶಿಯಲ್ ಮೇಸೆಜಿಂಗ್ ಆಪ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಫೇಸ್‌ಬುಕ್ ಒಡೆತನಕ್ಕೆ ಸಿಕ್ಕ ಮೇಲೆ ವಾಟ್ಸ್‌ಆಪ್ ನಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದಾಗಿದೆ.

ವಾಟ್ಸ್‌ಆಪ್ ಲೈವ್ ಲೋಕೆಷನ್ ಆಯ್ಕೆ; ಹೊಸ ಅನುಭವ

ಓದಿರಿ: ಇನ್ನು ಮುಂದೆ ಆಧಾರ್ ಜೆರಾಕ್ಸ್ ಪ್ರತಿ ಬೇಡ: ಈ ಆಪ್ ಇದ್ದರೇ ಸಾಕು

ಈ ಬಾರಿ ವಾಟ್ಸ್‌ಆಪ್ ಲೈವ್ ಲೋಕೆಷನ್ ಆಯ್ಕೆಯನ್ನು ನೀಡಿದ್ದು, ರಿಯಲ್ ಟೈಮಿನಲ್ಲಿ ಲೋಕೆಷನ್ ತೋರಿಸಲಿದೆ. ಚಾಟ್ ನಲ್ಲಿಯೇ ಲೈವ್ ಲೋಕೆಷನ್ ಅನ್ನು ಶೇರ್ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಲಿದೆ.

ಈ ಲೈವ್‌ ಲೋಕೆಷನ್ ಷೇರಿಂಗ್ ಆಯ್ಕೆಯನ್ನು ವಾಟ್ಸ್‌ಆಪ್ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ನೀಡಿದೆ. ಈ ಹೊಸ ಆಯ್ಕೆಯನ್ನು ಬಳಕೆ ಮಾಡಿಕೊಳ್ಳುವುದು ಸುಲಭವಾಗಿದ್ದು, ಬಳಕೆದಾರಿಗೆ ಹೊಸ ಅನುಭವನ್ನು ನೀಡಲಿದೆ.

ವಾಟ್ಸ್‌ಆಪ್ ಲೈವ್ ಲೋಕೆಷನ್ ಆಯ್ಕೆ; ಹೊಸ ಅನುಭವ

ಓದಿರಿ: ಜಿಯೋ ಫೋನ್‌ಗಿಂತಲೂ BSNL ಫೋನ್ ಬೆಸ್ಟ್: ಬೇಕಿದ್ರೆ ನೀವೇ ನೋಡಿ..!

ಈ ಹಿಂದೆ ಇದೇ ಮಾದರಿಯ ಆಯ್ಕೆಯನ್ನು ಟೆಲಿಗ್ರಾಂ ಬಿಡುಗಡೆ ಮಾಡಿತ್ತು. ಈ ಮೂಲಕ ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಮುಂದಾಗಿತ್ತು. ಇದರಿಂದ ಬಳಕೆದಾರರನ್ನು ಕಳೆದುಕೊಳ್ಳುವ ಭಯದಿಂದ ತಾನು ಸಹ ಈ ಹೊಸ ಆಯ್ಕೆಯನ್ನು ಬಿಡುಗಡೆ ಮಾಡಿದೆ.

ಗೂಗಲ್ ಮ್ಯಾಪ್ಸ್ ಸಹಾಯ ವಾಟ್ಸ್‌ಆಪ್ ಈ ಹೊಸ ಸೇವೆಯನ್ನು ನೀಡಲಿದ್ದು, ಇದಕ್ಕಾಗಿಯೇ ಈ ಹಿಂದೆಯೇ ಮ್ಯಾಪ್ ನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿತ್ತು. ಈಗಾಗಲೇ ಪ್ರತಿ ತಿಂಗಳು 1 ಬಿಲಿಯನ್ ಬಳಕೆದಾರರನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Mobile app to make Aadhaar verification easier. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot