Subscribe to Gizbot

ಇಂದಿನಿಂದ ಕಂಪ್ಯೂಟರ್‌ಗೆ ವಾಟ್ಸಾಪ್‌ ಅಪ್ಲಿಕೇಶನ್‌

Written By:

ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುವವರು ಇನ್ನುಮುಂದೆ ತಮ್ಮ ವಾಟ್ಸಾಪ್‌ ಮೆಸೇಜ್‌ಗಳನ್ನು ನೋಡಲು ಪದೇ ಪದೇ ಮೊಬೈಲ್‌ ತೆಗೆದು ನೋಡುವ ಅವಶ್ಯಕತೆ ಇಲ್ಲ. ಇಂದಿನಿಂದ ಡೆಸ್ಕ್‌ಟಾಪ್‌ಗಳಿಗೆ ವಾಟ್ಸಾಪ್‌ ಅಪ್ಲಿಕೇಶನ್‌ ಲಭ್ಯ. ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಅನ್ನು ವಿಂಡೋಸ್‌ 8 ಮತ್ತು ಅದಕ್ಕಿಂತ ಹೆಚ್ಚಿನ ವಿಂಡೋ ವರ್ಸನ್‌ಗಳಿಗೆ, ಮ್ಯಾಕ್‌ ಓಎಸ್‌ X 10.9 ಮತ್ತು ಅದಕ್ಕಿಂತ ಹೆಚ್ಚಿನ ವರ್ಸನ್‌ಗಳಿಗೆ ಬಿಡುಗಡೆ ಮಾಡಿದೆ. ನೀವು ಕಂಪ್ಯೂಟರ್ ಬಳಕೆದಾರರೇ? ಹಾಗಾದ್ರೆ ವಾಟ್ಸಾಪ್‌ನ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ಗಾಗಿ ಮತ್ತು ಅದನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಲು ಲೇಖನದ ಸ್ಲೈಡರ್‌ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ ಮೆಸೇಜಿಂಗ್ ಸರ್ವೀಸ್‌

1

ಕೇವಲ ವೆಬ್‌ ಮುಖಾಂತರ ದೊರೆಯುತ್ತಿದ್ದ ವಾಟ್ಸಾಪ್‌ ಮೆಸೇಜಿಂಗ್ ಸರ್ವೀಸ್‌ 16 ತಿಂಗಳುಗಳ ನಂತರ ಈಗ ಡೆಸ್ಕ್‌ಟಾಪ್‌ ಬಳಕೆದಾರರಿಗೆ ಅಪ್ಲಿಕೇಶನ್‌ ಮೂಲಕ ದೊರೆತಿದೆ.

ಇಂದಿನಿಂದ ಡೌನ್‌ಲೋಡ್‌ ಮಾಡಿ

2

ಫೇಸ್‌ಬುಕ್‌ ಒಡೆತನದ ವಾಟ್ಸಾಪ್, 'ಅಪ್ಲಿಕೇಶನ್‌ ವಿಂಡೋಸ್‌ 8 ಮತ್ತು ಅದಕ್ಕಿಂತ ಹೆಚ್ಚಿನ ವಿಂಡೋ ವರ್ಸನ್‌ಗಳಿಗೆ, ಮ್ಯಾಕ್‌ ಓಎಸ್‌ X 10.9 ಮತ್ತು ಅದಕ್ಕಿಂತ ಹೆಚ್ಚಿನ ವರ್ಸನ್‌ಗಳಿಗೆ ಇಂದಿನಿಂದ ಲಭ್ಯ ಎಂದು ಹೇಳಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ಗೆ ಇನ್‌ಸ್ಟಾಲ್‌ ಮಾಡಿ

ಫೋನ್‌ಗಳಿಗಿಂತ ವಿಸ್ತರಣೆ

3

ಅಂದಹಾಗೆ ವಾಟ್ಸಾಪ್‌ ಆಂಡ್ರಾಯ್ಡ್‌, ಐಓಎಸ್‌, ವಿಂಡೋಸ್‌ ಫೋನ್‌ಗಳಿಗಾಗಿ ನೀಡಿದ್ದ ಅಪ್ಲಿಕೇಶನ್‌ಗಳನ್ನು ವಿಸ್ತರಣೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಬಳಕೆ ಹೇಗೆ?

4

ಡೆಸ್ಕ್‌ಟಾಪ್‌ನಲ್ಲಿನ ವಾಟ್ಸಾಪ್‌ ಅಪ್ಲಿಕೇಶನ್‌ಗೆ ಲಾಗಿನ್‌ ಆಗಲು ಮೊಬೈಲ್‌ನಲ್ಲಿನ ವಾಟ್ಸಾಪ್‌ ಅಪ್ಲಿಕೇಶನ್‌ ಓಪನ್‌ ಮಾಡಿ QR ಕೋಡ್‌ ಸ್ಕ್ಯಾನ್‌ ಮಾಡಬೇಕು. ಎಲ್ಲಾ ಚಾಟಿಂಗ್‌ ಡೇಟಾ ಒಮ್ಮೆಯೇ ಲೋಡ್‌ ಆಗುತ್ತದೆ.

ಉಪಯೋಗವೇನು?

5

ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ನ ವೆಬ್‌ ಅಪ್ಲಿಕೇಶನ್‌ ಬಳಸುವುದರಿಂದ ಡೆಸ್ಕ್‌ಟಾಪ್‌ ನೋಟಿಫಿಕೇಶನ್ ಪಡೆಯಬಹುದು ಮತ್ತು ಎಲ್ಲಾ ರೀತಿಯ ಕೀಬೋರ್ಡ್ ಶಾರ್ಟ್‌ಕಟ್ ಅನ್ನು ಸಹ ಪಡೆಯಬಹುದು. ಅಲ್ಲದೇ ವೇಗವಾಗಿ ರೆಸ್ಪಾನ್ಸ್‌ ಪಡೆಯಬಹುದು.

 ಉಪಯೋಗವೇನು?

6

ವಾಟ್ಸಾಪ್ ಅನ್ನು ಬಳಕೆ ಮಾಡುವ ಎಲ್ಲರೂ ಸಹ ದಿನದಲ್ಲಿ ಹೆಚ್ಚು ಕಾಲ ಬಳಸುವುದರಿಂದ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವವರು ತಮ್ಮ ಮೆಸೇಜ್‌ಗಳಿಗಾಗಿ ಪದೇ ಪದೇ ಮೊಬೈಲ್‌ ಓಪನ್‌ ಮಾಡಿ ನೋಡುವುದು ತಪ್ಪುತ್ತದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಕಂಪ್ಯೂಟರ್‌ಗೆ ವಾಟ್ಸಾಪ್‌ ಅಪ್ಲಿಕೇಶನ್‌ ಅಂತೂ ಬಂತು
ಆಂಡ್ರಾಯ್ಡ್‌ನಲ್ಲಿ ನಿಮ್ಮದೇ ರಿಂಗ್‌ಟೋನ್‌ ಸೌಂಡ್‌ ಸೇರಿಸುವುದು ಹೇಗೆ?
ಆನ್‌ಲೈನ್‌ ಹಣ ವರ್ಗಾವಣೆಯಲ್ಲಿ ಆಂಟಿವೈರಸ್‌ಗಳಿಂದ ಕಡಿಮೆ ಸುರಕ್ಷೆ: ಎಚ್ಚರ!!

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
WhatsApp just released desktop apps for Mac and Windows. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot