Subscribe to Gizbot

ಆನ್‌ಲೈನ್‌ ಹಣ ವರ್ಗಾವಣೆಯಲ್ಲಿ ಆಂಟಿವೈರಸ್‌ಗಳಿಂದ ಕಡಿಮೆ ಸುರಕ್ಷೆ: ಎಚ್ಚರ!!

Written By:

ಕಂಪ್ಯೂಟರ್‌ ಹೊಂದಿರುವ ಬಹುಸಂಖ್ಯಾತರು ತಮ್ಮ ಕಂಪ್ಯೂಟರ್‌ ಯಾವುದೇ ವೈರಸ್‌ನಿಂದ ದಾಳಿಯಾಗಬಾರದೆಂದು ಆಂಟಿವೈರಸ್‌ ಅನ್ನು ಹೊಂದಿರುವುದು ಕಂಪ್ಯೂಟರ್‌ ಬಳಕೆದಾರರಿಗೆಲ್ಲಾ ಗೊತ್ತೇ ಇದೆ. ಅಲ್ಲದೇ ಲೈಸನ್ಸ್ ಹೊಂದಿರುವ ಆಂಟಿವೈರಸ್‌ ಹೊಂದುವುದಕ್ಕಿಂತ ಹೆಚ್ಚಾಗಿ ಉಚಿತ ಆಂಟಿವೈರಸ್‌ ಹೊಂದುವವರೇ ಹೆಚ್ಚು, ಆದರೆ ಇಂದು ಕಂಪ್ಯೂಟರ್‌ ಸುರಕ್ಷೆಗಾಗಿ ಬಳಸುವ ಆಂಟಿವೈರಸ್ ಆನ್‌ಲೈನ್‌ ಹಣ ವರ್ಗಾವಣೆಯಲ್ಲಿ ಯಾವುದೇ ಸುರಕ್ಷೆ ನೀಡುವುದಿಲ್ಲವಂತೆ.

ಅಂದಹಾಗೆ ಈ ಮಾಹಿತಿಯನ್ನು 14 ಪ್ರಖ್ಯಾತ ಸಾಫ್ಟ್‌ವೇರ್‌ಗಳನ್ನು ಸಂಶೋಧಕರು ವಿಶ್ಲೇಷಿಸಿ ಆನ್‌ಲೈನ್‌ ಹಣ ವರ್ಗಾವಣೆಯಲ್ಲಿ ಆಂಟಿವೈರಸ್‌ ಸಾಫ್ಟ್‌ವೇರ್‌ಗಳು ಯಾವುದೇ ಸುರಕ್ಷೆ ನೀಡುವುದಿಲ್ಲ ಎಂದಿದ್ದು, ಅವರು ಹೇಳಿರುವ ಇತರೆ ಪ್ರಮುಖ ಅಂಶಗಳೇನು ಎಂದು ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಟಿವೈರಸ್

ಆಂಟಿವೈರಸ್

14 ಪ್ರಖ್ಯಾತ ಆಂಟಿವೈರಸ್‌ ಸಾಫ್ಟ್‌ವೇರ್‌ಗಳನ್ನು ಸಂಶೋಧಕರು ವಿಶ್ಲೇಷಿಸಿ ಆನ್‌ಲೈನ್‌ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಸುರಕ್ಷೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಆಂಟಿವೈರಸ್‌ ಸಾಫ್ಟ್‌ವೇರ್‌ಗಳು

ಆಂಟಿವೈರಸ್‌ ಸಾಫ್ಟ್‌ವೇರ್‌ಗಳು

ಆಂಟಿವೈರಸ್‌ ಸಾಫ್ಟ್‌ವೇರ್‌ಗಳು ಡೇಟಾ ಸುರಕ್ಷೆ, ವೈರಸ್‌ ಡಿಲೀಟ್ ಮಾಡುವುದು, ವೆಬ್‌ನಲ್ಲಿನ ದುರುದ್ದೇಶಪೂರಿತ ವಿಷಯಗಳಿಂದ ಬಳಕೆದಾರರನ್ನು ರಕ್ಷಿಸುವ ಬದಲು ಬಳಕೆದಾರರಿಗೆ ಹಾನಿಯುಂಟು ಮಾಡುತ್ತವೆ ಎಂದು ಹೇಳಿದ್ದಾರೆ.

ಬ್ರೌಸರ್‌ಗಳು

ಬ್ರೌಸರ್‌ಗಳು

ಪ್ರಸ್ತುತ ಬ್ರೌಸರ್‌ಗಳು ಕಡಿಮೆ ಸುರಕ್ಷತೆ ನೀಡುತ್ತಿದ್ದು, ಅಧಿಕ ಸಮಸ್ಯೆಯನ್ನು ಉಂಟುಮಾಡುತ್ತಿವೆ ಎಂದು ಕೆನಡಾದಲ್ಲಿನ ಮಾಂಟ್ರಿಯಲ್ ಪ್ರದೇಶದ 'ಕಾನ್ಕಾರ್ಡಿಯ ವಿಶ್ವವಿದ್ಯಾಲಯ'ದ ಸಂಶೋಧಕರಾದ 'ಕ್ಸೇವಿಯರ್‌ ದಿ ಕಾರ್ನೆ ದಿ ಕಾರ್ನವಾಲೆಟ್‌' ಎಂಬುವವರು ಹೇಳಿದ್ದಾರೆ.

 ಬ್ರೌಸರ್‌ಗಳು

ಬ್ರೌಸರ್‌ಗಳು

ಬ್ರೌಸರ್‌ಗಳು ವೆಬ್‌ಸೈಟ್‌ಗಳ ಸರ್ಟಿಫಿಕೇಟ್‌ ಅನ್ನು ಪರಿಶೀಲಿಸಬೇಕು. ವೆಬ್‌ಸೈಟ್‌ ಪ್ರಾಮಾಣಿಕ ಸಂಸ್ಥೆಯಿಂದ ಸರ್ಟಿಫಿಕೇಟ್‌ ಪಡೆದಿದೆಯೇ ಎಂದು ಪರಿಶೀಲಿಸಬೇಕು ಎಂದು ಹೇಳಲಾಗಿದೆ.

ಕಂಪನಿಗಳು ಮತ್ತು ಕಂಪ್ಯೂಟರ್‌ ಬಳಕೆದಾರರು

ಕಂಪನಿಗಳು ಮತ್ತು ಕಂಪ್ಯೂಟರ್‌ ಬಳಕೆದಾರರು

ಕಂಪ್ಯೂಟರ್‌ ಬಳಕೆದಾರರು ಮತ್ತು ಕಂಪನಿಗಳಲ್ಲಿ ಕಂಪ್ಯೂಟರ್‌ ಹೊಂದಿರುವವರು ಹೆಚ್ಚು ಸುರಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ಎಚ್ಚರವಹಿಸಬೇಕು ಎಂದು ಹೇಳಲಾಗಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ

ಅತೀ ಶೀಘ್ರದಲ್ಲಿ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್‌ಗಳು

ಸ್ಯಾಮ್‌ಸಂಗ್‌ ಲಾಂಚ್‌ ಮಾಡಲಿದೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Antivirus Softwares Can Make Online Transactions Less Secure, according to study. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot