Subscribe to Gizbot

ಚೀನಾ ಸಂಶೋಧಕರಿಂದ 100 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಅಭಿವೃದ್ಧಿ

Posted By:

ಅಗ್ಗದ ಎಲೆಕ್ಟ್ರಾನಿಕ್‌ ಸಾಧನಗಳನ್ನು ತಯಾರಿಸಿ ವಿಶ್ವದಲ್ಲೇ ಪ್ರಸಿದ್ದಿ ಪಡೆದ ಚೀನಾ ಸಂಶೋಧಕರು ಈಗ ಹೊಸದಾಗಿ 100 ಮೆಗಾ ಪಿಕ್ಸೆಲ್‌ ಕ್ಯಾಮೆರಾವನ್ನು ಅಭಿವೃದ್ಧಿಪಡಿಸಿದ್ದಾರೆ.

ಚೀನಾದ ವಿಜ್ಞಾನ ಅಕಾಡೆಮಿಯ ಅಪ್ಟಿಕ್ಸ್ ಅಂಡ್ ಎಲೆಕ್ಟ್ರಾನಿಕ್ಸ್ ಸಂಸ್ಥೆ(Institute of Optics and Electronics) ಈ ಕ್ಯಾಮೆರಾವನ್ನು ಆವಿಷ್ಕಾರಿಸಿದ್ದು, ಈ ಕ್ಯಾಮೆರಾಕ್ಕೆ ಐಒಇ3-ಕನ್ ಬಾನ್(IOE3-Kanban ) ಎಂದು ಹೆಸರಿಡಲಾಗಿದೆ.

ಚೀನಾ ಸಂಶೋಧಕರಿಂದ 100 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಅಭಿವೃದ್ಧಿ

ಈ ಕ್ಯಾಮೆರಾದಿಂದ, ಪ್ರವಾಹ, ಬರ ಮುಂತಾದ ಸನ್ನಿವೇಶಗಳಲ್ಲಿ ಆಗಸದಿಂದಲೇ ಅತ್ಯಂತ ಹೆಚ್ಚಿನ ಗುಣಮಟ್ಟದ ಚಿತ್ರಗಳನ್ನು ಸೆರೆ ಹಿಡಿಯಬಹುದಾಗಿದೆ.ಈ ಕ್ಯಾಮೆರಾ ನೋಡಲು ಸಣ್ಣದಾಗಿದ್ದು, ಕಡಿಮೆ ತೂಕ ಹೊಂದಿದ್ದು 10,240×10,240 ಪಿಕ್ಸೆಲ್‌ ಗುಣಮಟ್ಟದಲ್ಲಿ ಚಿತ್ರ ಸೆರೆಹಿಡಿಯಬಹುದಾಗಿದೆ.ಮೈನಸ್‌ 20 ಡಿ.ಸೆ. ಉಷ್ಣಾಂಶದಿಂದ ಹಿಡಿದು 52 ಡಿ.ಸೆ. ಉಷ್ಣಾಂಶದಲ್ಲೂ ಯಾವುದೇ ತೊಂದರೆ ಇಲ್ಲದೆ ಫೋಟೋಗಳನ್ನು ತೆಗೆಯಬಹುದು ಎಂದು ಇದನ್ನು ಅಭಿವೃದ್ಧಿ ಪಡಿಸಿದ ಸಂಶೋಧಕರು ತಿಳಿಸಿದ್ದಾರೆ.

ನಗರ ಯೋಜನೆ,ಸಾರಿಗೆ ವ್ಯವಸ್ಥೆ ಮತ್ತು ಒಂದು ಪ್ರದೇಶ ವೈಮಾನಿಕ ನಕ್ಷೆ ತಯಾರಿಸಲು ಕ್ಯಾಮೆರಾ ಸಹಕಾರಿಯಾಗಲಿದೆ.ಈ ಹಿಂದೆ ಇದೇ ಸಂಸ್ಥೆ 81ಮೆಗಾ ಪಿಕ್ಸೆಲ್‌ ಕ್ಯಾಮೆರಾವನ್ನು ಅಭಿವೃದ್ಧಿಪಡಿಸಿತ್ತು.

ಇದನ್ನೂ ಓದಿ : ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ?

ಇದನ್ನೂ ಓದಿ: ಸ್ಪೈ ಗ್ಯಾಜೆಟ್‌ಗಳನ್ನು ನೋಡಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot