ಧ್ವನಿ ನಿಯಂತ್ರಣವಿರುವ ಹೊಸ 4ಕೆ ಆ್ಯಕ್ಷನ್ ಕ್ಯಾಮೆರ ಗಾರ್ಮಿನ್ ವರ್ಬ್ ಅಲ್ಟ್ರಾ 30.

|

ಗಾರ್ಮಿನ್ ಕಂಪನಿಯು ಹೊಚ್ಚ ಹೊಸ ವರ್ಬ್ ಆ್ಯಕ್ಷನ್ ಕ್ಯಾಮೆರಾವನ್ನು ಘೋಷಿಸಿದೆ. ವರ್ಬ್ ಅಲ್ಟ್ರಾ 30 ಹೆಸರಿನ ಈ ಕ್ಯಾಮೆರಾದಲ್ಲಿ ಇಲ್ಲಿಯವರೆಗೂ ಯಾವ ಆ್ಕಕ್ಷನ್ ಕ್ಯಾಮೆರಾದಲ್ಲೂ ಇರದ ಸೌಲಭ್ಯಗಳಿರಲಿವೆ.

ಧ್ವನಿ ನಿಯಂತ್ರಣವಿರುವ ಹೊಸ 4ಕೆ ಆ್ಯಕ್ಷನ್ ಕ್ಯಾಮೆರ ಗಾರ್ಮಿನ್ ವರ್ಬ್ ಅಲ್ಟ್ರಾ 30

ಗಾರ್ಮಿನ್ ಕಂಪನಿಯು ಕ್ಯಾಮೆರಾಗಳನ್ನು ತಯಾರಿಸುವುದಕ್ಕಿಂತಲೂ ಹೆಚ್ಚಾಗಿ ಫಿಟ್ನೆಸ್ ಟ್ರ್ಯಾಕರ್ ಗಳನ್ನು ತಯಾರಿಸುತ್ತಿತ್ತು. ಆದರೆ, ಕಳೆದ ವರ್ಷ ಕಂಪನಿಯು ವರ್ಬ್ ಅನ್ನು ಬಿಡುಗಡೆಗೊಳಿಸಿತು ಮತ್ತು ಈ ಕ್ಯಾಮೆರಾದ ಬಗ್ಗೆ ಬಳಕೆದಾರರಿಂದ ಹೊಗಳಿಕೆಯ ಮಾತುಗಳು ಕೇಳಿಬಂದವು. ಗೋಪ್ರೋ ಮತ್ತು ಸೋನಿ ಕಂಪನಿಯ ಆ್ಯಕ್ಷನ್ ಕ್ಯಾಮೆರಾಗಳಿಗೆ ಉತ್ತಮ ಪ್ರತಿಸ್ಫರ್ಧಿಯಾಯಿತು.

ರಿಲಾಯನ್ಸ್ ಜಿಯೋದ 'ಲೈಫ್ ವಾಟರ್‌ 1' ಫೋನ್‌ ಕೈಯಲ್ಲೇ ಸ್ಫೋಟ!

ಗೋಪ್ರೋ ಮತ್ತು ಸೋನಿ ಕಂಪನಿಯ 4ಕೆ ಕ್ಯಾಮೆರಾಗಳು ಅಷ್ಟೇನೂ ಉತ್ತಮವಾಗಿರದ ಕಾರಣ ಅವುಗಳ ಮಾರಾಟ ಕುಸಿತ ಕಂಡಿದೆ ಎನ್ನುವುದನ್ನು ಗಮನಿಸಬೇಕು.

ಜೀವನ ಸುಲಭವಾಗಿಸಲು ಗೊತ್ತಿರಬೇಕಾದ ಹ್ಯಾಕ್ ಗಳು.

ವರ್ಬ್ ಅಲ್ಟ್ರಾ 30 ಕ್ಯಾಮೆರಾ ಹಿಂದಿನ ಕ್ಯಾಮೆರಾದಂತೆಯೇ ಚಿಕ್ಕದಾಗಿದೆ, ವಿನ್ಯಾಸವೂ ಅದೇ ರೀತಿಯಲ್ಲಿದೆ. ಗಾರ್ಮಿನ್ ವರ್ಬ್ ಅಲ್ಟ್ರಾ 30ರ ಗುಣವಿಶೇಷತೆಗಳನ್ನು ಕೆಳಗೆ ಓದಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿನ್ಯಾಸ ಮತ್ತು ದೇಹ.

ವಿನ್ಯಾಸ ಮತ್ತು ದೇಹ.

ವಿನ್ಯಾಸದ ಲೆಕ್ಕಾಚಾರದಲ್ಲಿ ವರ್ಬ್ ಅಲ್ಟ್ರಾ 30 ಕ್ಯಾಮೆರಾದಲ್ಲಿ ಹೆಚ್ಚಿನ ಬದಲಾವಣೆಗಳೇನಿಲ್ಲ. ಹಿಂದಿನ ಕ್ಯಾಮೆರಾದಂತೆಯೇ ಇದರಲ್ಲೂ ಪುಟ್ಟ ಚೊಕ್ಕ ವಿನ್ಯಾಸವಿದೆ.

ಹೊಸ ವಿಶೇಷತೆಗಳು ಹಲವಿದೆ.

ಹೊಸ ವಿಶೇಷತೆಗಳು ಹಲವಿದೆ.

ಹೊಸ ವರ್ಬ್ ಅಲ್ಟ್ರಾ 30 ಕ್ಯಾಮೆರಾದಲ್ಲಿ ಆಸಕ್ತಿ ಕೆರಳಿಸುವ ಹಲವು ವಿಶೇಷತೆಗಳಿವೆ. ಎಲೆಕ್ಟ್ರಾನಿಕ್ 3 ಆ್ಯಕ್ಸಿಸ್ ಇಮೇಜ್ ಸ್ಟೆಬಿಲೈಜೇಷನ್ ಇರುವುದರಿಂದ ತುಂಬ ಉತ್ತಮ ಚಿತ್ರಗಳನ್ನು ತೆಗೆಯಬಹುದು. ಹೆಸರೇ ತಿಳಿಸುವಂತೆ, ಈ ಕ್ಯಾಮೆರಾದಲ್ಲಿ 4ಕೆ ವೀಡಿಯೋಗಳನ್ನು ರೆಕಾರ್ಡ್ ಮಾಡಬಹುದು ಹಾಗೂ ಸ್ಲೋ ಮೋಷನ್ ವೀಡಿಯೋಗಳನ್ನು ಚಿತ್ರಿಸಬಹುದು.

ಸ್ಲೋ ಮೋಷನ್ ವೀಡಿಯೋ ತೆಗೆಯುವಾಗ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಜೇಷನ್ ಕಾರ್ಯನಿರ್ವಹಿಸುತ್ತದೆ.

ಸ್ಲೋ ಮೋಷನ್ ವೀಡಿಯೋ ತೆಗೆಯುವಾಗ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಜೇಷನ್ ಕಾರ್ಯನಿರ್ವಹಿಸುತ್ತದೆ.

ಈ ಕ್ಯಾಮೆರಾದ ವಿಶೇಷತೆಯೆಂದರೆ 60ಎಫ್.ಪಿ.ಎಸ್ ಸ್ಲೋ ಮೋಷನ್ ವೀಡಿಯೋ ತೆಗೆಯುವಾಗಲೂ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಜೇಷನ್ ಕಾರ್ಯನಿರ್ವಹಿಸುತ್ತದೆ.

ಧ್ವನಿ ನಿಯಂತ್ರಣ.

ಧ್ವನಿ ನಿಯಂತ್ರಣ.

ವರ್ಬ್ ಅಲ್ಟ್ರಾ 30ರಲ್ಲಿರುವ ಮತ್ತೊಂದು ವಿಶಿಷ್ಟತೆಯೆಂದರೆ ಧ್ವನಿಯಿಂದ ಕ್ಯಾಮೆರಾವನ್ನು ನಿಯಂತ್ರಿಸುವ ಸೌಲಭ್ಯ. ಒಂದಷ್ಟು ದೂರದಿಂದ 'ಓಕೆ ಗಾರ್ಮಿನ್' ಎಂದು ಕೂಗಿದರೆ ಕ್ಯಾಮೆರಾದ ಲೈಟುಗಳು ಬ್ಲಿಂಕ್ ಆಗುತ್ತದೆ, ಅದರರ್ಥ, ನಿಮ್ಮ ಆದೇಶಗಳನ್ನು ತೆಗೆದುಕೊಳ್ಳಲು ಅದು ಸಿದ್ಧವಾಗಿದೆ ಅಂತ.

ನಂತರ 'ರೆಕಾರ್ಡ್ ಎ ವೀಡಿಯೋ', 'ಟೇಕ್ ಎ ಫೋಟೋ' ಎಂದು ಹೇಳುವ ಮೂಲಕ ಕ್ಯಾಮೆರಾವನ್ನು ಉಪಯೋಗಿಸಬಹುದು. ಗೋಪ್ರೋದ ಹೀರೋ 5ರಲ್ಲೂ ಈ ಸೌಲಭ್ಯವಿರುವ ಬಗ್ಗೆ ಸುದ್ದಿಗಳಿವೆ.

ಲೈವ್ ಇವೆಂಟನ್ನು ಸ್ಟ್ರೀಮ್ ಮಾಡಿ.

ಲೈವ್ ಇವೆಂಟನ್ನು ಸ್ಟ್ರೀಮ್ ಮಾಡಿ.

ನಿಮ್ಮ ವರ್ಬ್ ಅಲ್ಟ್ರಾ 30 ಅನ್ನು ಐಫೋನ್ ಅಥವಾ ಐಪ್ಯಾಡಿಗೆ ಡಾಟಾಗಾಗಿ ಸಂಪರ್ಕಿಸಿ ಮತ್ತು ಲೈವ್ ಇವೆಂಟನ್ನು ಸ್ಟ್ರೀಮ್ ಮಾಡಬಹುದು ಎಂದು ಗಾರ್ಮಿನ್ ಕಂಪನಿ ತಿಳಿಸಿದೆ. ಆದರೆ, ಲೈವ್ ಸ್ಟ್ರೀಮಿಂಗ್ 720ಪಿಯಲ್ಲಿ ಮಾತ್ರ ಸಾಧ್ಯ. ಕ್ಯಾಮೆರಾದಲ್ಲಿ ವೈಫೈ ಇದೆಯೋ ಇಲ್ಲವೋ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ಗಾರ್ಮಿನ್ ತಿಳಿಸುವ ಪ್ರಕಾರ ಡಾಟಾ ಸಂಪರ್ಕದ ಮೂಲಕ ಲೈವ್ ಸ್ಟ್ರೀಮಿಂಗ್ ಸಾಧ್ಯ.

ಬೆಲೆ.

ಬೆಲೆ.

ಗಾರ್ಮಿನ್ ವರ್ಬ್ ಅಲ್ಟ್ರಾ 30ರ ಬೆಲೆ $499 (ಅಂದಾಜು 34,000 ರುಪಾಯಿ). ಈ ಬೆಲೆಗೆ ತಕ್ಕುದಾದ ಕ್ಯಾಮೆರಾ ಇದು.

Best Mobiles in India

Read more about:
English summary
Garmin has announced a completely upgraded action camera for the company's own VIRB action camera. Dubbed as the VIRB Ultra 30, it comes with various set of new features which haven't seen on any action camera till date.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X