ರಿಲಾಯನ್ಸ್ ಜಿಯೋದ 'ಲೈಫ್ ವಾಟರ್‌ 1' ಫೋನ್‌ ಕೈಯಲ್ಲೇ ಸ್ಫೋಟ!

Written By:

ಮುಕೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಸಂಸ್ಥೆ ಅಧಿಕೃತವಾಗಿ 4G ಸೇವೆಯನ್ನು ಪ್ರಕಟಗೊಳಿಸಿದೆ. ಜಿಯೋ ಎಲ್ಲರ ನೆಚ್ಚಿನ ಪ್ರಸ್ತುತ ಟೆಲಿಕಾಂ ಸೇವೆಯಾಗಿದೆ. ವಿಶೇಷವಾಗಿ ಅತೀ ಕಡಿಮೆ ಬೆಲೆಯ ಡಾಟಾ ಬೆಲೆಯು ಭಾರತೀಯರಿಗೆ ಅತ್ಯುಪಯುಕ್ತವಾಗಿದೆ. ಅಲ್ಲದೇ ಜಿಯೋ ಸಿಮ್‌ ಅನ್ನು ಈಗ ಬ್ಲಾಕ್‌ಮಾರುಕಟ್ಟೆಯಲ್ಲೂ ಮಾರಾಟ ಮಾಡಲಾಗುತ್ತಿದೆ.

ಅಂದಹಾಗೆ ರಿಲಾಯನ್ಸ್ ಜಿಯೋ ಉತ್ತಮ ಆಫರ್ ಒಂದುಕಡೆಯಾದರೆ ಇನ್ನೊಂದು ಕಡೆ ನೀವು ತಿಳಿಯಲೇ ಬೇಕಾದ ಇನ್ನೊಂದು ಮಾಹಿತಿ ಇದೆ. ಅದು ರಿಲಾಯನ್ಸ್‌ ಜಿಯೋ ಲೈಫ್‌ ವಾಟರ್‌ ಒನ್‌ ಫೋನ್‌ ಬಗ್ಗೆ. ಈ ವಿಶೇಷ ಮಾಹಿತಿ ಏನು ಎಂಬುದನ್ನು ಲೇಖನ ಓದಿ ತಿಳಿಯಿರಿ.

ರಿಲಾಯನ್ಸ್‌ 4G ಸ್ಮಾರ್ಟ್‌ಫೋನ್‌ 'LYF Water 5' ಬೆಲೆ 11,699

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ ಪೋಸ್ಟ್

ಫೇಸ್‌ಬುಕ್‌ ಪೋಸ್ಟ್

ಫೇಸ್‌ಬುಕ್‌ ಬಳಕೆದಾರರೊಬ್ಬರು ಹಲವು ಇಮೇಜ್‌ಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಇವುಗಳು ಜಿಯೋ ಲೈಫ್ 'ವಾಟರ್‌ ಒನ್‌ ಫೋನ್‌' ಬಗ್ಗೆ ಗಮನಹರಿಸಬೇಕಾದ ವಿಷಯವಾಗಿದೆ.

ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ ಪೇಜ್‌

'ಗೆಡಿ ರೋಟ್‌ ಜಮ್ಮು' ಎಂಬುವವರು ಜಿಯೋ ಲೈಫ್ 'ವಾಟರ್‌ ಒನ್ ಫೋನ್‌' ಕೈಯಲ್ಲಿ ಇದ್ದಾಗಲೇ ಸ್ಫೋಟಗೊಂಡಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವರದಿ

ವರದಿ

ವರದಿ ಪ್ರಕಾರ ಜಿಯೋ 'ವಾಟರ್‌ ಒನ್ ಫೋನ್‌' ಬಳಕೆದಾರರು ತಮ್ಮ ಡಿವೈಸ್‌ನಲ್ಲಿ ಫೇಸ್‌ಬುಕ್ ಅನ್ನು ಬ್ರೌಸಿಂಗ್‌ ಮಾಡುತ್ತಿರುವ ವೇಳೆ ಕೈಯಲ್ಲೇ ಡಿವೈಸ್ ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ಕೈ ಗಾಯವಾಗಿದೆ.

ಸ್ಫೋಟಕ್ಕೆ ಕಾರಣ

ಸ್ಫೋಟಕ್ಕೆ ಕಾರಣ

ಫೇಸ್‌ಬುಕ್‌ ಬ್ರೌಸಿಂಗ್‌ ವೇಳೆ 'ವಾಟರ್‌ ಒನ್‌ ಫೋನ್‌' ಸ್ಫೋಟಗೊಂಡಿದೆ. ಆದರೆ ಇದಕ್ಕೆ ನಿರ್ಧಿಷ್ಟ ಕಾರಣ ಏನು ಎಂದು ತಿಳಿದುಬಂದಿಲ್ಲ.

ಸ್ಫೋಟಗೊಂಡ ಡಿವೈಸ್‌ಗಳು

ಸ್ಫೋಟಗೊಂಡ ಡಿವೈಸ್‌ಗಳು

ಇತ್ತೀಚೆಗೆ ಹಲವು ಡಿವೈಸ್‌ಗಳು ಸ್ಫೋಟಗೊಂಡಿರುವ ವರದಿಗಳಾಗಿದ್ದು, ನೋಟ್ 7 ಬ್ಯಾಟರಿ ಸ್ಫೋಟಗೊಂಡಿತ್ತು, ಒನ್‌ಪ್ಲಸ್‌ 3 ಮತ್ತು ಐಫೋನ್‌ ಸಹ ನಿರ್ಧಿಷ್ಟ ಕಾರಣವಿಲ್ಲದೇ ಸ್ಫೋಟಗೊಂಡಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Reliance Jio's LYF Smartphone 'Water' Allegedly Explodes In User's Hand. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot