ಕ್ಲೋಸ್‌ ಅಪ್‌ ಶಾಟ್‌ನಲ್ಲಿ ಅತ್ಯುತ್ತಮ ಫೋಟೊ ಸೆರೆಹಿಡಿಯಲು ಈ ಟಿಪ್ಸ್‌ ಅನುಸರಿಸಿ!

|

ಫೋಟೊಗ್ರಫಿ ಎಂದರೇ ಎಲ್ಲರಿಗೂ ಇಷ್ಟ. ಆದರೆ ಫೋಟೊಗ್ರಫಿ ಕೇಲವರಿಗೆ ಹವ್ಯಾಸವಾದರೇ ಇನ್ನೂ ಕೇಲವರಿಗೆ ಅದೇ ವೃತ್ತಿ. ವೆಡ್ಡಿಂಗ್‌ ಫೋಟೊಗ್ರಫಿ, ಫ್ಯಾಶನ್‌ ಫೋಟೊಗ್ರಫಿ, ಪ್ರಾಡಕ್ಟ್‌ ಫೋಟೊಗ್ರಫಿ, ವೈಲ್ಡ್‌ ಫೋಟೊಗ್ರಫಿ, ಸೇರಿದಂತೆ ಹಲವು ವಿಧಗಳಲ್ಲಿ ಫೋಟೊಗ್ರಫಿ ಮಾಡಬಹುದಾಗಿದೆ. ಹಾಗೇ ಅವುಗಳಲ್ಲಿ ಮೈಕ್ರೊ ಫೋಟೊಗ್ರಫಿ ಸಹ ಒಂದಾಗಿದ್ದು, ಇದು ಸೂಕ್ಷ್ಮವು ಮತ್ತು ಚಾಲೆಂಜಿಂಗ್ ಆಗಿದೆ.

ಕ್ಲೋಸ್‌ ಅಪ್‌ ಶಾಟ್‌ನಲ್ಲಿ ಅತ್ಯುತ್ತಮ ಫೋಟೊ ಸೆರೆಹಿಡಿಯಲು ಈ ಟಿಪ್ಸ್‌ ಅನುಸರಿಸಿ!

ಹೌದು, ಮೈಕ್ರೊ ಫೋಟೊಗ್ರಫಿಯಲ್ಲಿ ವಸ್ತುವನ್ನು ಸೆರೆಹಿಡಿಯಲು ಆಸಕ್ತಿ ಮತ್ತು ತಾಳ್ಮೆ ಎರಡು ಅತೀ ಮುಖ್ಯವಾಗಿದೆ. ಈ ಫೋಟೊಗ್ರಾಫಿಯಲ್ಲಿ ವಸ್ತುವನ್ನು ಹತ್ತಿರದಿಂದ ಸೆರೆ ಹಿಡಿಯಲಾಗುತ್ತದೆ. ಫೋಟೊವು ಪ್ರಖರವಾಗಿ ಮತ್ತು ಹೆಚ್ಚು ಸ್ಪಷ್ಟವಾಗಿ ಮೂಡಿಬಂದರೆ ಮಾತ್ರ ಮೈಕ್ರೊ ಫೋಟೋಗ್ರಫಿ ಬೆಸ್ಟ್ ಎನಿಸುತ್ತದೆ. ಅತ್ಯುತ್ತಮವಾಗಿ ಫೋಟೊ ಮೂಡಿಬರಲು ಬೇಕಿದ್ದರೆ ಉಪಯುಕ್ತ ಲೆನ್ಸ್‌ಗಳನ್ನು ಬಳಸಿಕೊಳ್ಳಬಹುದು.

ಕ್ಲೋಸ್‌ ಅಪ್‌ ಶಾಟ್‌ನಲ್ಲಿ ಅತ್ಯುತ್ತಮ ಫೋಟೊ ಸೆರೆಹಿಡಿಯಲು ಈ ಟಿಪ್ಸ್‌ ಅನುಸರಿಸಿ!

ಮೈಕ್ರೊ ಫೋಟೊಗ್ರಾಫಿಯಲ್ಲಿ ವಸ್ತುವಿನ ಸೂಕ್ಷ್ಮ ಅಂಶಗಳು ಸ್ಪಷ್ಟವಾಗಿ ಕಾಣುವಂತಿರಬೇಕು ಹಾಗಾಗಿ ಫೋಕಸಿಂಗ್ ಪ್ರಮುಖ ಪಾತ್ರವಹಿಸುತ್ತದೆ. ಅದಕ್ಕಾಗಿ ಹಲವು ಫೋಕಸ್‌ ಆಯ್ಕೆಗಳು ಇವೆ. ಚಿಕ್ಕ ಪುಟ್ಟ ಹೂಗಳು, ಕೀಟ್‌ಗಳ ಫೋಟೊಗ್ರಫಿಯನ್ನು ನೀವು ಗಮನಿಸಬಹುದು ಅವು ಮೈಕ್ರೊ ಫೋಟೊಗಳಾಗಿವೆ. ಹಾಗಾದರೇ ಮೈಕ್ರೊ ಫೋಟೊಗ್ರಾಫಿಯಲ್ಲಿ ಅತ್ಯುತ್ತಮ ಫೋಕಸ್‌ ನಲ್ಲಿ ಫೋಟೊ ಸೆರೆಹಿಡಿಯಲು ಗಮನಿಸಬೇಕಾದ ಅಂಶಗಳನ್ನು ತಿಳಿಯಲು ಮುಂದೆ ಓದಿರಿ.

ಆಟೋ ಫೋಕಸ್‌

ಆಟೋ ಫೋಕಸ್‌

ವಸ್ತುಗಳ ಕ್ಲೊಸ್‌ಅಪ್‌ ಶಾರ್ಟ್‌ ಸೆರೆಹಿಡಿಯಲು ಕ್ಯಾಮೆರಾ ಆಯ್ಕೆಯಲ್ಲಿ ಆಟೋ ಫೋಕಸ್‌ ಆಯ್ಕೆಯನ್ನು ಬಳಸಬಹುದಾಗಿದೆ. ಕ್ಯಾಮೆರಾ ಲೆನ್ಸ್‌ ಬೆಳಕಿನ ಅಂಶಗಳನ್ನು ಆದರಿಸಿ ತಾನಾಗಿಯೇ ಆಟೋ ಫೋಕಸ್‌ ಮಾಡಿಕೊಳ್ಳುತ್ತದೆ. ಸರಿಯಾಗಿ ಕ್ಲಿಕ್‌ ಮಾಡಿ ಅತ್ಯುತ್ತಮ ಫೋಟೊ ಸೆರೆಹಿಡಿಯಬಹುದಾಗಿದೆ. ಆದರೆ ಕೆಲವೊಮ್ಮೆ ಸರಿಯಾಗಿ ಫೋಕಸ್‌ ಮಾಡದಿದ್ದಾಗ ಮ್ಯಾನುವಲ್‌ ಆಯ್ಕೆ ಮೂಲಕ ಸೆರೆ ಹಿಡಿದರೆ ಉತ್ತಮ.

ಮ್ಯಾನುವಲ್‌ ಫೋಕಸ್‌

ಮ್ಯಾನುವಲ್‌ ಫೋಕಸ್‌

ಆಟೋ ಫೋಕಸ್‌ನಲ್ಲಿ ಅಷ್ಟು ಸ್ಪಷ್ಟವಾಗಿ ಫೋಟೊಗಳು ಬರದಿದ್ದಾಗ ಮ್ಯಾನುವಲ್‌ ಆಯ್ಕೆಯೇ ಬೆಸ್ಟ್‌. ಕ್ಯಾಮೆರಾದಲ್ಲಿ ಸರಿಯಾದ ಮೋಡ್‌ಗೆ ಸೆಟ್ಟಿಂಗ್‌ ಮಾಡಿಕೊಂಡು ಫೋಕಸ್‌ ರಿಂಗ್‌ ಅನ್ನು ತಿರುಗಿಸುವ ಮೂಲಕ ಸ್ಪಷ್ಟ ಚಿತ್ರ ಮೂಡುವಂತೆ ಕ್ಲಿಕ್‌ ಮಾಡಬಹುದು. ಈ ಆಯ್ಕೆಯಲ್ಲಿ ಎಲ್‌ಇಡಿ ಡಿಸ್‌ಪ್ಲೇನಲ್ಲಿ ಚಿತ್ರಗಳನ್ನು ಗಮನಿಸಬಹುದಾಗಿರುವುದು ನೆರವಾಗಲಿದೆ. ಅಗತ್ಯಕ್ಕೆ ತಕ್ಕನಾಗಿ ಜೂಮ್‌ ಸಹ ಮಾಡಿಕೊಳ್ಳಬಹುದು.

ಫೋಕಸ್‌ ಪ್ಲೇಟ್‌

ಫೋಕಸ್‌ ಪ್ಲೇಟ್‌

ಮೈಕ್ರೊ ಫೋಟೊ ಹೆಚ್ಚು ಸ್ಪಷ್ಟವಾಗಿ ಮೂಡಿಬರಲು ಫೋಕಸ್‌ ಪ್ಲೇಟ್‌ ಬಳಸುತ್ತಾರೆ. ಕ್ಯಾಮೆರಾದ ಟ್ರಾಯ್‌ಪೋಡ್‌ಗೆ ಫೋಕಸ್‌ ಪ್ಲೇಟ್‌ ಅನ್ನು ಜೋಡಿಸಿಕೊಂಡು 1:1 ಅನುಪಾತದಲ್ಲಿ ಅಥವಾ ಒಂದು ಅಂದಾಜಿನ ಮೇಲೆ ಲೆನ್ಸ್‌ ಸೆಟ್‌ ಮಾಡಿಕೊಳ್ಳಬಹುದು. ಕ್ಯಾಮೆರಾ ಮುಂದಕ್ಕೆ ಮತ್ತು ಹಿಂದಕ್ಕೆ ಚಲಿಸುವಂತಿದ್ದು, ಪ್ರತಿ ಚಲನೆಯಲ್ಲಿಯೂ ಫೋಕಸ್‌ನಲ್ಲಿ ಬದಲಾವಣೆ ಕಾಣುತ್ತಿರಿ ನಿಮಗೆ ಸೂಕ್ತ ಫೋಕಸ್‌ ಅನಿಸಿದಾಗ ಕ್ಲಿಕ್‌ ಮಾಡಬಹುದು.

ರಾಕಿಂಗ್ ಟೆಕ್ನಿಕ್‌

ರಾಕಿಂಗ್ ಟೆಕ್ನಿಕ್‌

ಕ್ಯಾಮೆರಾದೊಂದಿಗೆ ಯಾವುದೇ ಟ್ರಾಯ್‌ಪೋಡ್‌ ಇಲ್ಲದಿದ್ದಾಗ ಈ ರಾಕಿಂಗ್ ಟೆಕ್ನಿಕ್ ನಲ್ಲಿ ಫೋಟೊ ಕ್ಲಿಕ್‌ ಮಾಡಬಹುದಾಗಿದೆ. ಫೋಕಸ್‌ ಪ್ಲೇಟ್‌ ಇಲ್ಲದೇ ವಸ್ತುವಿನ ಸನಿಹ ಹೋಗಿ ಮ್ಯಾನುವಲ್ ಆಯ್ಕೆಗಳನ್ನು ಬಳಸಿ ಸರಿಯಾಗಿ ಮತ್ತು ಸ್ಥಿರವಾಗಿ ಪೋಕಸ್‌ ಮಾಡಿ ಫೋಟೊ ಕ್ಲಿಕ್ಕಿಸಬಹುದಾಗಿದೆ. ಬಹುತೇಕ ಸಂದರ್ಭಗಳಲ್ಲಿ ಫೋಟೊ ಬ್ಲರ್‌ ಆಗಿರುವ ಸಾಧ್ಯತೆಗಳಿರುತ್ತವೆ.

ಟ್ರಾಯ್‌ಫೋಡ್‌ ಬಳಸಿ

ಟ್ರಾಯ್‌ಫೋಡ್‌ ಬಳಸಿ

ಇಂದಿನ ಬಹುತೇಕ ಟ್ರಾಯ್‌ಪೋಡ್‌ಗಳಲ್ಲಿ ಅಭಿವ್ಯಕ್ತಿಗೊಳಿಸುವ ಕೇಂದ್ರದ ಕಾಲಂ ಕಂಡುಬರುತ್ತವೆ(articulating centre column) ಇದರ ನೆರವಿನಿಂದ ಕ್ಯಾಮೆರಾವನ್ನು ಅಡ್ಡಲಾಗಿ ಸೆಟ್‌ಮಾಡಿ ಬಹುದಾಗಿದೆ. ಇವುಗಳ ಬಳಕೆಯಿಂದ ಕ್ಯಾಮೆರಾವನ್ನು ನೆಲೆದ ಹತ್ತಿರವರೆಗೂ ಒಯ್ಯಬಹುದಾಗಿದ್ದು, ಫೋಕಸ್‌ ಪ್ಲೇಟ್‌ ಬಳಸಿ ಸೆರೆಹಿಡಿಯುವಂತೆ ಇದರಲ್ಲಿಯೂ 1:1 ಅನುಪಾತದಲ್ಲಿ ಫೋಟೊ ಸೆರೆಹಿಡಿಯಬಹುದು.

ಓದಿರಿ : ಸೂಪರ್‌ ಫಾಸ್ಟ್‌ ವೇಗದಲ್ಲಿ ಕೆಲಸ ಮಾಡಲಿದೆ 'ಗೂಗಲ್ ಅಸಿಸ್ಟಂಟ್' ಹೊಸ ಆವೃತ್ತಿ! ಓದಿರಿ : ಸೂಪರ್‌ ಫಾಸ್ಟ್‌ ವೇಗದಲ್ಲಿ ಕೆಲಸ ಮಾಡಲಿದೆ 'ಗೂಗಲ್ ಅಸಿಸ್ಟಂಟ್' ಹೊಸ ಆವೃತ್ತಿ!

Best Mobiles in India

English summary
Macro photography: five ways to focus your close-up shots..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X