ಸೋನಿ ಪರಿಚಯಿಸಲಿದೆ ವಿಶ್ವದ ಅತ್ಯಂತ ಪುಟ್ಟ 4K ವಿಡಿಯೊ ಕ್ಯಾಮೆರಾ.!

|

ಹೊಸತನದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಭಾರಿ ಜನಪ್ರಿಯ ಗಳಿಸಿರುವ 'ಸೋನಿ' ಕಂಪನಿ ತನ್ನ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾಗಳಿಂದ ಫೋಟೋಗ್ರಫಿ ಪ್ರಿಯರ ಫೇವರೆಟ್ ಸಂಸ್ಥೆಯಾಗಿದೆ. ಇದೀಗ ಇಡೀ ವಿಶ್ವವೇ ತಿರುಗಿ ನೋಡುವಂತಹ ಕ್ಯಾಮೆರಾ ಉತ್ಪನ್ನ ಒಂದನ್ನು ಪರಿಚಯಿಸಲು ಉತ್ಸುಕವಾಗಿದ್ದು, ಫೋಟೋಗ್ರಫಿ ಪ್ರಿಯರಿಗೆ ಭರ್ಜರಿ ಖುಷಿ ಕೊಡಲಿದೆ.

ಸೋನಿ ಪರಿಚಯಿಸಲಿದೆ ವಿಶ್ವದ ಅತ್ಯಂತ ಪುಟ್ಟ 4K ವಿಡಿಯೊ ಕ್ಯಾಮೆರಾ.!

ಹೌದು, ಸೋನಿ ಕಂಪನಿ RX0 II ಹೆಸರಿನ ಪುಟ್ಟ ವಿಡಿಯೋ ರೆಕಾರ್ಡರ್ ಅನ್ನು ರಿಲೀಸ್‌ ಮಾಡಲಿದ್ದು, ವಿಶ್ವದಲ್ಲಿಯೇ ಅತೀ ಚಿಕ್ಕ 4K ವಿಡಿಯೋ ರೆಕಾರ್ಡಿಂಗ್ ಸಾಧನವೆಂದು ಗುರುತಿಸಿಕೊಳ್ಳಲಿದೆ. 15.3 ಮೆಗಾಪಿಕ್ಸಲ್‌ ಸಾಮರ್ಥ್ಯವನ್ನು ಹೊಂದಿರುವ ಈ ಪುಟಾಣಿ ರೆಕಾರ್ಡರ್ Exmor RS ಇಮೇಜ್‌ ಸೆನ್ಸಾರ್‌ ಜೊತೆಗೆ ಸೋನಿಯ BIONZ X ಇಂಜಿನ್ ಸಹ ಹೊಂದಿದೆ.

ಸೋನಿ ಪರಿಚಯಿಸಲಿದೆ ವಿಶ್ವದ ಅತ್ಯಂತ ಪುಟ್ಟ 4K ವಿಡಿಯೊ ಕ್ಯಾಮೆರಾ.!

ಪ್ರತಿ ಸೆಕೆಂಡಿಗೆ 1,000 ಸೂಪರ್‌ ಸ್ಲೋ ಮೊಷನ್ ವಿಡಿಯೊ ರೆಕಾರ್ಡಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದ್ದು, ಇಮೇಜಿಂಗ್ ಎಡ್ಜ್‍ ಆಪ್‌ ಬಳಸಿ ಮೂಲಕ ಮೊಬೈಲ್‌ ವೈಯರ್‌ಲೆಸ್‌ ಕಂಟ್ರೋಲ್ ಮಾಡಬಹುದಾದ ಸೌಲಭ್ಯ ಇದೆ ಎನ್ನಲಾಗುತ್ತಿದೆ. ಹಾಗಾದರೇ ಸೋನಿಯ RX0 II ವಿಡಿಯೋ ರೆಕಾರ್ಡರ್ ಇತರೆ ಏನೆಲ್ಲಾ ಅದ್ಭುತ ಫೀಚರ್ಸ್‌ಗಳನ್ನು ಹೊತ್ತು ಬರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸೈನ್

ಡಿಸೈನ್

ಪುಟ್ಟ ರಚನೆಯನ್ನು ಹೊಂದಿರುವ ಸೋನಿಯ RX0 II ವಿಡಿಯೋ ರೆಕಾರ್ಡರ್‌ 2.32 x 1.59 x 1.37 ಇಂಚುಗಳ ಸುತ್ತಳತೆಯನ್ನು ಹೊಂದಿದ್ದು, ಇದರ ತೂಕ ಕೇವಲ 132ಗ್ರಾಂ ಆಗಿರಲಿದೆ. ಇದರೊಂದಿಗೆ ವಾಟರ್‌ಪ್ರೊಫ್, ದೂಳು ಮುಕ್ತ ಮತ್ತು ಹಾನಿಗೆ ಒಳಪಡದ ಬಾಹ್ಯ ರಚನೆಯನ್ನು ಹೊಂದಿದೆ ಎನ್ನಲಾಗುತ್ತಿದೆ.

ಪಿಕ್ಸಲ್ ಮತ್ತು ಲೆನ್ಸ್‌

ಪಿಕ್ಸಲ್ ಮತ್ತು ಲೆನ್ಸ್‌

15.3 ಮೆಗಾಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರುವ ಸೋನಿಯ RX0 II ವಿಡಿಯೋ ರೆಕಾರ್ಡರ್‌, Exmor RS ಇಮೇಜ್‌ ಸೆನ್ಸಾರ್‌ ಮತ್ತು ಸೋನಿಯ BIONZ X ಇಂಜಿನ್ ಸಹ ಹೊಂದಿದೆ. Zeiss ಕಂಪನಿಯ 24mm ವೈಲ್ಡ್‌ ಆಂಗಲ್ ಫಿಕ್ಸಡ ಲೆನ್ಸ್‌ ಇರಲಿದ್ದು, 4K ಗುಣಮಟ್ಟದ ವಿಡಿಯೋ ರೆಕಾರ್ಡಿಂಗ್ ಸೌಲಭ್ಯವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಐ ಆಟೋಫೋಕಸ್‌

ಐ ಆಟೋಫೋಕಸ್‌

ಐ ಆಟೋಫೋಕಸ್‌ ಅನ್ನು ಹೊಂದಿದ್ದು, ವೇಗ, ಅಕ್ಯುರಸಿಯಲ್ಲಿ ಮತ್ತು ಐ AF ಫೀಚರ್ ಆಯ್ಕೆಯಲ್ಲಿ ಅಪ್‌ಡೇಟ್‌ ಮಾಡಿದೆ. ಹೀಗಾಗಿ ಹಾಫ್ ಶೆಟರ್ ಒತ್ತುವ ಮೂಲಕ ಆಟೋಮ್ಯಾಟಿಕ್ ಆಗಿ ಫೋಕಸ್‌ ಮಾಡಿಕೊಳ್ಳುತ್ತದೆ. ಮೆನು ಸಿಸ್ಟಮ್‌ ನಲ್ಲಿ ಎಡ ಕಣ್ಣು, ಬಲಗಣ್ಣು ಮತ್ತು ಆಟೋ ಎಂಬ ಆಯ್ಕೆಗಳು ಲಭ್ಯವಿರಲಿವೆ.

ಅಪ್‌ಗ್ರೇಡ್ ಮಾದರಿ

ಅಪ್‌ಗ್ರೇಡ್ ಮಾದರಿ

ಸೋನಿ ಕಂಪನಿ ಈ ಹಿಂದೆ RX0 ಹೆಸರಿನ ಪುಟ್ಟ ವಿಡಿಯೊ ರೆಕಾರ್ಡರ್ ಅನ್ನು ಬಿಡುಗಡೆ ಮಾಡಿತ್ತು, ಈ ಹೊಸ RX0 II ವಿಡಿಯೋ ರೆಕಾರ್ಡರ್‌ ಬಹುತೇಕ ಹಿಂದಿನ ಮಾದರಿಯನ್ನೇ ಹೋಲುವಂತೆ ಕಂಡುಬಂದರೂ ಹೊಸ ಸಾಕಷ್ಟು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ಸೂಪರ್‌ ಸ್ಲೋ ಮೊಷನ್

ಸೂಪರ್‌ ಸ್ಲೋ ಮೊಷನ್

ಸೂಪರ್‌ ಸ್ಲೋ ಮೋಷನ್ ಆಯ್ಕೆಯನ್ನು ಹೊಂದಿರಲಿದ್ದು, ಪ್ರತಿ ಸೆಕೆಂಡ್‌ಗೆ 1000 ಫ್ರೇಮ್‌ಗಳನ್ನು ರೆಕಾರ್ಡ್‌ ಮಾಡುವ ಸಾಮರ್ಥ್ಯವನ್ನು ಈ ಸಾಧನ ಹೊಂದಿರಲಿದೆ ಎನ್ನಲಾಗುತ್ತಿದೆ. ಕಂಪನಿಯ RX0 ವಿಡಿಯೊ ರೆಕಾರ್ಡರ್ 960fps ಸಾಮರ್ಥ್ಯದ ಸ್ಲೋ ಮೋಷನ್ ಆಯ್ಕೆಯನ್ನು ಹೊಂದಿತ್ತು.

ವೇಗದ ಶೆಟರ್

ವೇಗದ ಶೆಟರ್

ಸೋನಿಯ RX0 II ವಿಡಿಯೋ ರೆಕಾರ್ಡರ್‌ Anti-Distortion ಶೆಟರ್ ಅನ್ನು ಒಳಗೊಂಡಿದ್ದು, ಪ್ರತಿ ಸೆಕೆಂಡಿಗೆ 1/32,000 ಸಾಮರ್ಥ್ಯದಲ್ಲಿ ಶೂಟ್‌ ಮಾಡಬಹುದಾಗಿದೆ. 16fps ಸಾಮರ್ಥ್ಯ ವೇಗದಲ್ಲಿ ಶೂಟಿಂಗ್ ಆಯ್ಕೆಯನ್ನು ಹೊಂದಿದೆ.

ಲಭ್ಯತೆ

ಲಭ್ಯತೆ

ಸೋನಿಯ RX0 II ಪುಟ್ಟ ವಿಡಿಯೋ ರೆಕಾರ್ಡರ್‌ ಇದೇ ಏಪ್ರಿಲ್ ತಿಂಗಳಲ್ಲಿ ಯುಎಸ್‌ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ದೊರೆಯಲಿದೆ. ಈ ಸಾಧನದ ಕಿಟ್‌ VCT-SGR1 ಶೂಟಿಂಗ್ ಗ್ರಿಪ್‌ ಒಳಗೊಂಡಿರಲಿದೆ.

Best Mobiles in India

English summary
Sony's RX0 II boasts a flip screen and Eye AF on the world’s smallest 4K video cam.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X