Subscribe to Gizbot

360 ಡಿಗ್ರಿ ಕ್ಯಾಮೆರಾ ಬಿಡುಗಡೆ ಮಾಡಿದ ಶಿಯೋಮಿ: ಹೇಗಿದೆ ಕ್ಯಾಮೆರಾ, ಏನೇನಿದೆ..?

Written By:

ಚೀನಾ ಮೂಲದ ಶಿಯೋಮಿ ಭಾರತೀಯ ಎಲೆಕ್ಟ್ರಾನಿಕ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಲು ಮುಂದಾಗಿದೆ. ಆರಂಭದಲ್ಲಿ ಸ್ಮಾರ್ಟ್‌ಫೋನುಗಳನ್ನು ಮೊದಲು ಮಾರುಕಟ್ಟೆಗೆ ಪರಿಚಯಿಸಿದ ಕಂಪನಿ, ಈಗ ಏರ್‌ಪ್ಯೂರಿಫೈಯರ್, ಫಿಟ್‌ನೆಸ್ ಬ್ಯಾಂಡ್, ಸ್ಮಾರ್ಟ್‌ಶೂ ಸೇರಿದಂತೆ ಅನೇಕ ವಸ್ತುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಪಟ್ಟಿಗೆ ಮತ್ತೊಂದು ಸೇರ್ಪಡೆ 360 ಡಿಗ್ರಿ ಕ್ಯಾಮೆರಾ.

360 ಡಿಗ್ರಿ ಕ್ಯಾಮೆರಾ ಬಿಡುಗಡೆ ಮಾಡಿದ ಶಿಯೋಮಿ: ಹೇಗಿದೆ..?

ಓದಿರಿ: ಜಿಯೋದಿಂದ ಮತ್ತೊಂದು ಸೇವೆ: ಜಿಯೋ 4G ಲ್ಯಾಪ್‌ಟಾಪ್' ಶೀಘ್ರವೇ ಮಾರುಕಟ್ಟೆಗೆ

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನುಗಳನ್ನು ನೀಡುವ ಮೂಲಕ ಜನಸಾಮಾನ್ಯರ ನಂಬಿಕೆ ಗಳಿಸಿದ ಶಿಯೋಮಿ, ಸ್ಮಾರ್ಟ್‌ಹೋಮ್ ಪ್ರಾಡೆಕ್ಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸದ್ಯ ಹೆಚ್ಚು ಟ್ರೆಂಟ್ ಆಗುತ್ತಿರುವ 360 ಡಿಗ್ರಿ ವಿಡಿಯೋ ಮತ್ತು ಫೋಟೋವನ್ನು ಸೆರೆಹಿಡಿಯುವಂತಹ ಕ್ಯಾಮೆರಾವೊಮಂದನ್ನು ಸದ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದಕ್ಕೆ ಮಿ ಪನೋರೋಮಿಕ್ ಕ್ಯಾಮೆರಾ ಎಂದು ನಾಮಕರಣ ಮಾಡಿದೆ.

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಕ್ವೈರ್ ವಿನ್ಯಾಸ

ಸ್ಕ್ವೈರ್ ವಿನ್ಯಾಸ

ಮಿ ಪನೋರೋಮಿಕ್ ಕ್ಯಾಮೆರಾವೂ ಸ್ಕ್ವೈರ್ ವಿನ್ಯಾಸದಲ್ಲಿದ್ದು, ನಾವು-ನೀವು ನೋಡಿರುವ ಡಿಟಿಟಲ್ ಕ್ಯಾಮೆರಾಗಳಿಂತ ಭಿನ್ನವಾಗಿದೆ. ಈ ಕ್ಯಾಮೆರಾದಲ್ಲಿ 23.88 ಮೆಗಾ ಪಿಕ್ಸೆಲ್ ಸೆನ್ಸಾರ್ ಇದೆ. ಈ ಕ್ಯಾಮೆರಾದಲ್ಲಿ 360 ಡಿಗ್ರಿ ಪನೋರಮಾ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ.

3.5K ಗುಣಮಟ್ಟದ ವಿಡಿಯೋ:

3.5K ಗುಣಮಟ್ಟದ ವಿಡಿಯೋ:

ಮಿ ಪನೋರೋಮಿಕ್ ಕ್ಯಾಮೆರಾದಲ್ಲಿ 3.5K ಗುಣಮಟ್ಟದ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದ್ದು, ಇದಕ್ಕೆಂದೆ ಫಿಷ್ ಐ ಲೈನ್ಸ್ ಅಳವಡಿಸಲಾಗಿದೆ. ಅಲ್ಲದೇ ವಿಡಿಯೋ ಮತ್ತು ಫೋಟೋವನ್ನು ಕ್ಲಿಕಿಸಲು ಈ ಕ್ಯಾಮೆರಾದಲ್ಲಿ ವಿವಿಧ ಮೋಡ್ ಗಳನ್ನು ಸಹ ನೀಡಲಾಗಿದೆ.

ಪ್ರೀಲೊಡ್ ಐಮೇಜ್ ಎಡಿಟಿಂಗ್

ಪ್ರೀಲೊಡ್ ಐಮೇಜ್ ಎಡಿಟಿಂಗ್

ಅಲ್ಲದೇ ಈ ಕ್ಯಾಮೆರಾ ಪ್ರೀಲೊಡ್ ಐಮೇಜ್ ಎಡಿಟಿಂಗ್ ಆಪ್ ಹೊಂದಿದ್ದು, ಇದರಲ್ಲಿ 1600 mAH ತೆಗೆಯಲಾಗದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾ ಸ್ಮಾರ್ಟ್‌ಆಗಿದ್ದು, ವೈ-ಫೈ ಸಂಪರ್ಕವನ್ನು ಪಡೆದುಕೊಳ್ಳಬಹುದಾಗಿದೆ. ಈ ಕ್ಯಾಮೆರಾ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 1 ಗಂಟೆಗಳ ಕಾಲ ಚಿತ್ರೀಕರಣ ನಡೆಸಲಿದೆ ಎನ್ನಲಾಗಿದೆ.

ವಾಟರ್ ಪ್ರೂಫ್, ಡಸ್ಟ್ ಫ್ರೂಫ್:

ವಾಟರ್ ಪ್ರೂಫ್, ಡಸ್ಟ್ ಫ್ರೂಫ್:

ಈ ಕ್ಯಾಮೆರಾವೂ ವಾಟರ್ ಪ್ರೂಫ್, ಡಸ್ಟ್ ಫ್ರೂಫ್ ಆಗಿದೆ. ಹಾಗಾಗಿ ಸ್ಪಲ್ಪ ಪ್ರಮಾಣದ ನೀರು ಬಿದ್ದರೇ ಹಾಳಾಗುವ ಯಾವುದೇ ಭಯವಿಲ್ಲ, ಅಲ್ಲದೇ ಈ ಕ್ಯಾಮೆರಾದಲ್ಲಿ ಯುಎಸ್‌ಬಿ ಪೋರ್ಟ್ ನೀಡಲಾಗಿದ್ದು, ಫೈಲ್ ಟ್ರಾನ್ಸ್‌ಫರ್ ಮಾಡಲು ಮತ್ತು ಚಾರ್ಜ್ ಮಾಡಲು. ಇದರೊಂದಿಗೆ ಬ್ಲೂಟೂಟ್ ಸಹ ನೀಡಲಾಗಿದೆ. ಸದ್ಯ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಈ ಕ್ಯಾಮೆರಾ ಲಭ್ಯವಿದ್ದು, ಸುಮಾರು ರೂ. 16,000ಗಳಿಗೆ ಮಾರಾಟವಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
the Chinese electronics company is now extending its product portfolio. The company has just launched its latest Mi Panoramic camera. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot