ಜಿಯೋದಿಂದ ಮತ್ತೊಂದು ಸೇವೆ: ಜಿಯೋ 4G ಲ್ಯಾಪ್‌ಟಾಪ್' ಶೀಘ್ರವೇ ಮಾರುಕಟ್ಟೆಗೆ

Written By:

ಜಿಯೋ 4G ಸೇವೆಯನ್ನು ಆರಂಭಿಸಿ ದೇಶಿಯ ಟಿಲಿಕಾಂ ವಲಯದಲ್ಲಿ ಭಾರೀ ಬದಲಾವಣೆಯ ಗಾಳಿ ಎಬ್ಬಿಸಿದ ರಿಲಯನ್ಸ್, ಜಿಯೋ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ, ಇದರ ಬೆನ್ನ ಹಿಂದೆಯೇ ಜಿಯೋ ಬ್ರಾಡ್‌ಬ್ಯಾಂಡ್ ಸೇವೆಯನ್ನು ಆರಂಭಿಸಲಿದ್ದು, ಜಿಯೋ ಡಿಟಿಹೆಚ್ ಸೇವೆ ಇನ್ನು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಜಿಯೋ 4G ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಜಿಯೋ ಡಿಟಿಹೆಚ್ ನಂತರ ಬರುತ್ತಿದೆ 'ಜಿಯೋ 4G ಲ್ಯಾಪ್‌ಟಾಪ್

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!

ಜಿಯೋ ಸಿಮ್ ಬಳಕೆ ಮಾಡಬಹುದಾದ 4G VoLTE ಸ್ಮಾರ್ಟ್‌ಫೋನುಗಳನ್ನು LYF ಹೆಸರಿನಲ್ಲಿ ಕಡಿಮೆ ಬೆಲೆ ಬಿಡುಗಡೆ ಮಾಡಿದ ರಿಲಯನ್ಸ್, ಜಿಯೋ ವೈ-ಫೈ ಡಿವೈಸ್‌ಗಳನ್ನು ಹೊರತಂದಿತ್ತು. ಅಲ್ಲದೇ ಜಿಯೋ ಸಿಮ್ ಸಪೋರ್ಟ್ ಮಾಡುವ 4G ಫೀಚರ್ ಪೋನನ್ನು ಮಾರುಕಟ್ಟೆಗೆ ಬಿಡುವ ತಯಾರಿಯಲ್ಲಿದೆ, ಹಾಗೆಯೇ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ 4G ಲ್ಯಾಪ್‌ಟಾಪ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ.

ಓದಿರಿ: ಜಿಯೋ ಪ್ರೈಮ್ ಬಳಕೆದಾರರಿಗೆ ಟ್ರಾಯ್ ನೀಡಿದೆ ಸಿಹಿ ಸುದ್ದಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೀಘ್ರವೆ ಬರಲಿದೆ ಜಿಯೋ 4G ಲ್ಯಾಪ್‌ಟಾಪ್ :

ಶೀಘ್ರವೆ ಬರಲಿದೆ ಜಿಯೋ 4G ಲ್ಯಾಪ್‌ಟಾಪ್ :

ಈಗಾಗಲೇ ರಿಲಯನ್ಸ್ 4G ಲ್ಯಾಪ್‌ಟಾಪ್ ತಯಾರಿಕೆ ಆರಂಭಿಸದೆ ಎನ್ನಲಾಗಿದ್ದು, ಜಿಯೋ ಬಿಡುಗಡೆ ಮಾಡಲಿರುವ ಈ ಲಾಪ್‌ಟಾಪ್‌ಗಳಲ್ಲಿ ಸಿಮ್ ಸ್ಲಾಟ್ ಇರಲಿದೆ. ಇದರಲ್ಲಿ ಜಿಯೋ 4G ಸಿಮ್ ಹಾಕಬಹುದಾಗಿದೆ. ಸ್ಮಾರ್ಟ್‌ಫೋನ್ ಮಾದರಿಯಲ್ಲೇ ಇಲ್ಲಿಯೂ ಕರೆ ಸ್ವೀಕರಿಸಬಹುದಾಗಿದ್ದು, ಡೇಟಾ ಬಳಕೆ ಮಾಡಬಹುದಾಗಿದೆ.

ವಿಂಡೋಸ್ 10 OS:

ವಿಂಡೋಸ್ 10 OS:

ಜಿಯೋ ಅಭಿವೃದ್ಧಿಪಡಿಸುತ್ತಿರುವ ಜಿಯೋ 4G ಲಾಪ್‌ಟಾಪ್‌ನಲ್ಲಿ ವಿಂಡೋಸ್ 10 OS ಇರಲಿದೆ ಎನ್ನಲಾಗಿದ್ದು, ಈಗಾಗಲೇ ಟೆಸ್ಟಿಂಗ್ ನಲ್ಲಿ ಬಳಸುತ್ತಿರುವ ಲಾಪ್‌ಟಾಪ್‌ಗಳಲ್ಲಿ ವಿಂಡೋಸ್ 10 OS ಇದ್ದು, ಫೈನಲ್ ಮಾರುಕಟ್ಟೆಗೆ ಬರುವ ಲಾಪ್‌ಟಾಪ್‌ನಲ್ಲಿ ಇದು ಬದಲಾಗುವ ಸಾಧ್ಯತೆಯೂ ಇದೇ ಎನ್ನಲಾಗಿದೆ. ಕೋರ್ಮ್ OS ಸಹ ಬಳಸು ಸಾಧ್ಯತೆ ಸಹ ಇದೆ.

ಆಂಡ್ರಾಯ್ಡ್‌ ಆಪ್ ಸಫೋರ್ಟ್‌:

ಆಂಡ್ರಾಯ್ಡ್‌ ಆಪ್ ಸಫೋರ್ಟ್‌:

ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ ಆಂಡ್ರಾಯ್ಡ್ ಆಪ್‌ಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಲಿದ್ದು, ಇದು ಆಪರೇಟಿಂಗ್ ಸಿಸ್ಟಮ್ ಬಳಕೆಯನ್ನು ಸಾಕಷ್ಟು ಸುಲಭಗೊಳಿಸಲಿದೆ ಎನ್ನಲಾಗಿದೆ.

13.3 ಇಂಚಿನ Full HD ಡಿಸ್‌ಪ್ಲೇ:

13.3 ಇಂಚಿನ Full HD ಡಿಸ್‌ಪ್ಲೇ:

ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ 13.3 ಇಂಚಿನ Full HD ಡಿಸ್‌ಪ್ಲೇ ಅಳವಡಿಸಲಾಗಿದ್ದು, 16:9 ಮಾದರಿಯಲ್ಲಿ 1920 x 1080 p ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದೆ. ವಿಡಿಯೋ ಕಾಲಿಂಗ್ ಮಾಡುವ ಸಲುವಾಗಿ HD ಕ್ಯಾಮೆರಾವನ್ನು ಈ ಲಾಪ್‌ಟಾಪ್‌ನಲ್ಲಿ ಅಳವಡಿಸಲಾಗಿದೆ.

ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ 4GB RAM:

ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ 4GB RAM:

ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ ವೇಗದ ಕಾರ್ಯಚರಣೆಗೆ 4GB RAM ಅಳವಡಿಸಲಾಗಿದೆ. ಇನ್‌ಟೆಲ್ ಪೆನ್‌ಟಿಮ್ ಕ್ವಾಡ್ ಕೋರ್ ಪ್ರೋಸೆಸರ್ ಇದೆ. 64 GB ಇಂಟರ್‌ನಲ್ ಮೆಮೊರಿ ಹೊಂದಿದ್ದು, ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಜಿಯೋ 4G ಲ್ಯಾಪ್‌ಟಾಪ್‌ನ ಇತರೆ ವಿಶೇಷತೆಗಳು:

ಜಿಯೋ 4G ಲ್ಯಾಪ್‌ಟಾಪ್‌ನ ಇತರೆ ವಿಶೇಷತೆಗಳು:

4G LTE ಸಪೋರ್ಟ್‌ ಮಾಡುವ ಜಿಯೋ 4G ಲಾಪ್‌ಟಾಪ್‌ಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಾಟ್‌ಟಾಪ್‌ಗಳಿಗಿಂತ ಕೊಂಚ ಭಿನ್ನವಾಗಿರಲಿದ್ದು, ಬ್ಲೂಟೂಟ್ 4.0, ಎರಡು USB 3.0 ಪೋರ್ಟ್‌ಗಳು, ಮೈಕ್ರೋ HDMI ಪೋರ್ಟ್‌ಗಳು, ಹಾಗೂ ಮೈಕ್ರೋ SD ಕಾರ್ಡ್ ಹಾಕುವ ಸ್ಲಾಟ್ ಗಳನ್ನು ಹೊಂದಿರಲಿದೆ.

 ಶೀಘ್ರವೇ ಮಾರುಕಟ್ಟೆಗೆ, ಬೆಲೆಯೂ ಕಡಿಮೆ:

ಶೀಘ್ರವೇ ಮಾರುಕಟ್ಟೆಗೆ, ಬೆಲೆಯೂ ಕಡಿಮೆ:

ಜಿಯೋ ಸಿದ್ಧ ಪಡಿಸುತ್ತಿರುವ ಲಾಪ್‌ಟಾಪ್‌ಗಳು ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಈ ಮೂಕಲ ಲಾಪ್‌ಟಾಪ್ ಇತಿಹಾಸದಲ್ಲೂ ಹೊಸದೊಂದು ಕ್ರಾಂತಿ ಮಾಡಲಿದೆ. ಈ ಲಾಪ್‌ಟಾಪ್‌ಗಳ ಬೆಲೆಯೂ ಕಡಿಮೆ ಇರಲಿದ್ದು, ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
launch of Jio 4G service, its parent company Reliance also launched the LYF smartphone brand to sell the affordable 4G VoLTE smartphones that work with the Jio 4G SIM. Reliance working on a Jio 4G Laptop to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot