ಹೆಚ್ಚು ಬ್ಯಾಟರಿ ಬಾಳಿಕೆಯುಳ್ಳ ಲ್ಯಾಪ್‌ಟಾಪ್ಸ್ ಖರೀದಿಸಲು ಮರೆಯದಿರಿ

By Shwetha
|

ಇಂದಿನ ಸಂವಹನ ಯುಗದಲ್ಲಿ ನಮ್ಮ ನಿಯಮಿತ ಕೆಲಸಗಳಿಗಾಗಿ ಲ್ಯಾಪ್‌ಟಾಪ್ ಹೆಚ್ಚು ಪ್ರಯೋಜನಕಾರಿಯಾದುದು. ನಮ್ಮ ಸ್ಮಾರ್ಟ್‌ಫೋನ್‌ನಂತೆಯೇ ಬಹಳಷ್ಟು ಕೆಲಸಗಳನ್ನು ಮಾಡುವ ಲ್ಯಾಪ್‌ಟಾಪ್‌ಗಳು ದೈನಂದಿನ ಕೆಲಸದ ಹೊರೆಯನ್ನು ಇಳಿಸುವಲ್ಲಿ ಸಹಾಯಕವಾಗಲಿದೆ.

ಓದಿರಿ: 50 ರೂಪಾಯಿಗೆ 1ಜಿಬಿ ಡೇಟಾ ಜಿಯೋ ಆಫರ್

ತಾಂತ್ರಿಕ ವಿಶೇಷತೆಗಳಾದ ಪ್ರೊಸೆಸರ್, RAM ಮತ್ತು ಸಂಗ್ರಹಣಾ ಸಾಮರ್ಥ್ಯಗಳು ಹೆಚ್ಚು ಮುಖ್ಯವಾಗಿದ್ದು, ಲ್ಯಾಪ್‌ಟಾಪ್ ಖರೀದಿ ಮಾಡುವಾಗ ಹೆಚ್ಚು ಗಮನ ಹರಿಸಬೇಕಾಗಿರುವುದು ಅದರ ಬ್ಯಾಟರಿಗಾಗಿದೆ. ಲ್ಯಾಪ್‌ಟಾಪ್‌ನ ಉತ್ತಮ ಬ್ಯಾಟರಿಯು ಪೋರ್ಟೇಬಲ್ ವರ್ಕ್‌ಸ್ಟೇಶನ್‌ನಂತೆ ಕೆಲಸ ಮಾಡುತ್ತದೆ.

ಓದಿರಿ: ರಿಲಾಯನ್ಸ್ ಜಿಯೋ e-KYC ಆಕ್ಟಿವೇಶನ್: ಸಿಮ್ 15 ನಿಮಿಷದಲ್ಲಿ ಆಕ್ಟಿವೇಟ್‌ ಆಗುತ್ತದೆ!

ನೀವು ಲ್ಯಾಪ್‌ಟಾಪ್ ಅನ್ನು ಖರೀದಿ ಮಾಡಬೇಕೆನ್ನುವ ಬಯಕೆಯನ್ನು ಹೊಂದಿದ್ದೀರಿ ಎಂದಾದಲ್ಲಿ ಇಲ್ಲಿದೆ ಉತ್ತಮ ಬ್ಯಾಟರಿಯುಳ್ಳ ಲ್ಯಾಪ್‌ಟಾಪ್‌ಗಳ ವಿವರ.

ಲೆನೊವೊ ಥಿಂಕ್‌ಪ್ಯಾಡ್ X260 - 21 ಗಂಟೆಗಳು

ಲೆನೊವೊ ಥಿಂಕ್‌ಪ್ಯಾಡ್ X260 - 21 ಗಂಟೆಗಳು

ಬೆಲೆ ರೂ: 1,07,000

ಇದು ಬಾಹ್ಯ ಮತ್ತು ಆಂತರಿಕ ಬ್ಯಾಟರಿ ಸಾಮರ್ಥ್ಯದೊಂದಿಗೆ ಬಂದಿದ್ದು ಇದು 21 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ಬಳಕೆದಾರರಿಗೆ ನೀಡಲಿದೆ. ಇದು 6 ನೇ ಜೆನ್ ಇಂಟೆಲ್ ಕೋರ್ ಐ7 ಪ್ರೊಸೆಸರ್, 8ಜಿಬಿ RAM ಮತ್ತು 512 ಜಿಬಿ ಎಸ್‌ಎಸ್‌ಡಿ ಸ್ಟೋರೇಜ್ ಅನ್ನು ಪಡೆದುಕೊಂಡು ಬಂದಿದೆ.

ಆಪಲ್ ಮ್ಯಾಕ್‌ಬುಕ್ - 11 ಗಂಟೆಗಳು

ಆಪಲ್ ಮ್ಯಾಕ್‌ಬುಕ್ - 11 ಗಂಟೆಗಳು

ಇದು 12 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್ ರೆಟೀನಾ ಡಿಸ್‌ಪ್ಲೇಯನ್ನು ಪಡೆದುಕೊಂಡು ಬಂದಿದ್ದು 2304x1440 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು ಅತ್ಯಾಧುನಿಕ ಇಂಟೆಲ್ ಕೋರ್ m3/m5 ಪ್ರೊಸೆಸರ್‌ನೊಂದಿಗೆ ಬಂದಿದ್ದು, 8ಜಿಬಿ RAM ಅನ್ನು ಒಳಗೊಂಡಿದೆ. ಎಸ್‌ಎಸ್‌ಡಿ ಸ್ಟೋರೇಜ್ 256ಜಿಬಿ/512ಜಿಬಿ ಯಾಗಿದೆ.

ಎಚ್‌ಪಿ ಸ್ಪ್ರೆಕ್ಟ್ರೆ - 9 ಗಂಟೆಗಳು

ಎಚ್‌ಪಿ ಸ್ಪ್ರೆಕ್ಟ್ರೆ - 9 ಗಂಟೆಗಳು

ಬೆಲೆ ರೂ 1,04,990 ರಿಂದ ಆರಂಭ

ವಿಶ್ವದಲ್ಲೇ ಹೆಚ್ಚು ತೆಳು ಲ್ಯಾಪ್‌ಟಾಪ್ ಎಂದೇ ಖ್ಯಾತಿಗೊಂಡಿರುವ ಈ ಲ್ಯಾಪ್‌ಟಾಪ್ ವಿಂಡೋಸ್ 10 ಚಾಲಿತ ಲ್ಯಾಪ್‌ಟಾಪ್‌ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಕಂಪೆನಿಯ ಪ್ರಕಾರ ಬ್ಯಾಟರಿ ಲೈಫ್ 9 ಗಂಟೆಯಾಗಿದೆ.

ಡೆಲ್ XPS 13, 18 ಗಂಟೆಗಳು

ಡೆಲ್ XPS 13, 18 ಗಂಟೆಗಳು

ಬೆಲೆ ಆರಂಭ ರೂ 95,990

ಡೆಲ್‌ನ XPS 13 ಲ್ಯಾಪ್‌ಟಾಪ್ ಇನ್‌ಫಿನಿಟಿ ಎಡ್ಜ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಬೇಜಲ್ ರಹಿತವಾಗಿದೆ. XPS 13 ಇದು ಹೆಚ್ಚು ಕಡಿಮೆ 18 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತಿದೆ. ವಿಶೇಷತೆಗಳನ್ನು ನೋಡಹೊರಟರೆ, ಡೆಲ್ XPS 13 ಆರನೇ ಜನರೇಶನ್ ಇಂಟೆಲ್ ಕೋರ್ i5/i7 ಪ್ರೊಸೆಸರ್‌ನೊಂದಿಗೆ ಬಂದಿದ್ದು 4ಜಿಬಿ/8ಜಿಬಿ RAM ಅನ್ನು ಒಳಗೊಂಡಿದೆ ಹಾಗೂ 128ಜಿಬಿ/256ಜಿಬಿ ಸ್ಟೋರೇಜ್ ಅನ್ನು ಪಡೆದುಕೊಂಡಿದೆ.

ಅಸೂಸ್ ಜೆನ್‌ಬುಕ್ UX305LA - 12 ಗಂಟೆಗಳು

ಅಸೂಸ್ ಜೆನ್‌ಬುಕ್ UX305LA - 12 ಗಂಟೆಗಳು

ಜೆನ್‌ಬುಕ್ UX305LA ಉತ್ತಮ ನೋಟವನ್ನು ಹೊಂದಿರುವ ನೋಟ್‌ಬುಕ್ ಪಿಸಿ ಎಂಬುದಾಗಿ ಹೆಸರು ಗಳಿಸಿದ್ದು ತೈವಾನ್‌ನ ಟೆಕ್ ದೈತ್ಯನ ನಿರ್ಮಾಣವಾಗಿದೆ, 1.49 ಸೆಮೀ ದಪ್ಪವನ್ನು ಇದು ಪಡೆದುಕೊಂಡಿದ್ದು 1.3 ಕೆಜಿ ತೂಕವನ್ನು ಹೊಂದಿದೆ. ಇದು 12 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಲ್ಯಾಪ್‌ಬುಕ್ L1161

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಲ್ಯಾಪ್‌ಬುಕ್ L1161

ಬೆಲೆ ರೂ 10,499

ಮೈಕ್ರೋಮ್ಯಾಕ್ಸ್ ಇತ್ತೀಚೆಗೆ ಕ್ಯಾನ್‌ವಾಸ್ ಲ್ಯಾಪ್‌ಬುಕ್ ಲ್ಯಾಪ್‌ಟಾಪ್ ಅನ್ನು ದೇಶದಲ್ಲಿ ಲಾಂಚ್ ಮಾಡಿದೆ. 11.6 ಇಂಚಿನ ಲ್ಯಾಪ್‌ಟಾಪ್ ಇದಾಗಿದ್ದು ಬ್ಯಾಟರಿ ಲೈಫ್ 11 ಗಂಟೆಗಳದ್ದಾಗಿದೆ ಇದರ ಡಿಸ್‌ಪ್ಲೇ ರೆಸಲ್ಯೂಶನ್ 1366x768 ಪಿಕ್ಸೆಲ್‌ಗಳಾಗಿವೆ. ಇದು 1.83GHZ ಇಂಟೆಲ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು 2ಜಿಬಿ RAM ಅನ್ನು ಒಳಗೊಂಡಿದೆ.

ಅಸೂಸ್ ಇಬುಕ್ X205TA - 12 ಗಂಟೆಗಳು

ಅಸೂಸ್ ಇಬುಕ್ X205TA - 12 ಗಂಟೆಗಳು

ಬೆಲೆ ರೂ: 15,990

ಸ್ಕ್ರೀನ್ ಗಾತ್ರ 11.6 ಇಂಚಿನದ್ದಾಗಿದ್ದು 1366x768 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ, ಈ ಅಸೂಸ್ ಇಬುಕ್ ಹಗುರವಾಗಿದ್ದು ಪೋರ್ಟೇಬಲ್ ಆಗಿದೆ. ಇದರ ಬ್ಯಾಟರಿ ಲೈಫ್ 12 ಗಂಟೆಗಳಾಗಿದೆ. ಇಂಟೆಲ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು 2ಜಿಬಿ RAM ಇದರಲ್ಲಿದೆ. 32 ಜಿಬಿ EMMC ಸ್ಟೋರೇಜ್ ಅನ್ನು ಹೊಂದಿದೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ.

Most Read Articles
Best Mobiles in India

English summary
So if you’re planning on buying a laptop that has great battery life, here are some that you should definitely take a look at. These include everything from entry-level netbooks to ultra-powerful flagship notebook computers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more