ರಿಲಾಯನ್ಸ್ ಜಿಯೋ e-KYC ಆಕ್ಟಿವೇಶನ್: ಸಿಮ್ 15 ನಿಮಿಷದಲ್ಲಿ ಆಕ್ಟಿವೇಟ್‌ ಆಗುತ್ತದೆ!

By Suneel
|

ರಿಲಾಯನ್ಸ್ ಜಿಯೋ ಈಗ ಅಧಿಕೃತವಾಗಿ ಪ್ರಕಟಣೆಗೊಂಡಿದೆ. ಕಂಪನಿ ಮಾಲೀಕರಾದ ಮುಕೇಶ್‌ ಅಂಬಾನಿಯವರು ರಿಲಾಯನ್ಸ್ ಜಿಯೋ ಸೇವೆ ಮತ್ತು ಆಫರ್‌ಗಳ ಬಗ್ಗೆ ಅಧಿಕೃತ ಬಿಡುಗಡೆ ಸಂದರ್ಭದಲ್ಲಿ ಪ್ರಕಟಣೆ ನೀಡಿದ್ದಾರೆ.

ರಿಲಾಯನ್ಸ್ ಜಿಯೋ ಟ್ಯಾರಿಫ್‌ ಪ್ಲಾನ್‌ಗಳು ಊಬರ್‌ ಸೇವೆಯಷ್ಟೇ ಕಡಿಮೆಯಾಗಿದ್ದುಕ, ರೂ.149 ರಿಂದ ರೂ.4,999 ರವರೆಗೂ ಸಹ ಇದೆ. ಕಂಪನಿಯ ಪ್ರಿವೀವ್‌ ಆಫರ್ ಪ್ರಚಾರ ಹೆಚ್ಚಿನ ಅನುಕೂಲಕರವಾಗಿಯೇ ಇವೆ.

ರಿಲಾಯನ್ಸ್ ಜಿಯೋ ಅಧಿಕೃತ ಬಿಡುಗಡೆಯ ಜೊತೆಗೆ e-KYC ಆಕ್ಟಿವೇಶನ್‌ ಸೇವೆ ಮತ್ತು ಡಿಸೆಂಬರ್‌ 2017 ರ ವರೆಗೆ ಅನ್‌ಲಿಮಿಟೆಡ್‌ ಜಿಯೋ ಆಪ್‌ ಆಕ್ಸೆಸ್ ಸೇವೆಯನ್ನು ಸಹ ಲಾಂಚ್‌ ಮಾಡಿದೆ. ಅಂದಹಾಗೆ e-KYC( KYC-Know Your Coustomer) ಆಕ್ಟಿವೇಶನ್‌ನ ಒಂದು ಉತ್ತಮ ಫೀಚರ್ ಎಂದರೆ ಜಿಯೋ ಸಿಮ್ ಆಕ್ಟಿವೇಟ್‌ ಮಾಡಲು ಕೇವಲ 15 ನಿಮಿಷಗಳು ಸಾಕು. ಅದು ಹೇಗೆ ಎಂದು ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡುವುದು ಹೇಗೆ?

 e-KYC ಆಕ್ಟಿವೇಶನ್‌ ಎಂದರೆ ಏನು?

e-KYC ಆಕ್ಟಿವೇಶನ್‌ ಎಂದರೆ ಏನು?

e-KYC ಆಕ್ಟಿವೇಶನ್‌ ಎಂದರೆ ಏನು ಎಂಬುದು ಮೊದಲು ಎಲ್ಲರ ತಲೆಯಲ್ಲಿ ಬರುವ ಪ್ರಶ್ನೆ. e-KYC ಆಕ್ಟಿವೇಶನ್‌ ಕೇವಲ 15 ನಿಮಿಷಗಳಲ್ಲಿ ನಿಮ್ಮ ಸಿಮ್‌ ಕಾರ್ಡ್‌ ಅನ್ನು ಸ್ಟೋರ್‌ ಬಳಿಯಲ್ಲೇ ಆಕ್ಟಿವೇಶನ್ ಮಾಡುತ್ತದೆ.ಆಧಾರ್‌ ಕಾರ್ಡ್‌ನ ಎಲೆಕ್ಟ್ರಾನಿಕ್‌ ಪರಿಶೀಲನೆ ಪ್ರಕ್ರಿಯೆಯನ್ನು e-KYC ಎಂದು ಕರೆಯಲಾಗುತ್ತದೆ.

e-KYC ಆಕ್ಟಿವೇಶನ್‌ಗಾಗಿ ಬೇಕಾದ ಡಾಕ್ಯುಮೆಂಟ್‌ಗಳು

e-KYC ಆಕ್ಟಿವೇಶನ್‌ಗಾಗಿ ಬೇಕಾದ ಡಾಕ್ಯುಮೆಂಟ್‌ಗಳು

e-KYC ಆಕ್ಟಿವೇಶನ್‌ಗೆ ನಿಮ್ಮ ಆಧಾರ್‌ ಕಾರ್ಡ್ ಮತ್ತು ಅದರ ಜೊತೆಗೆ ಒಂದು ಪಾರ್ಸ್‌ಪೋರ್ಟ್‌ ಅಳತೆಯ ಫೋಟೋಗ್ರಾಫ್‌ ಅಗತ್ಯ.

 15 ನಿಮಿಷಗಳಲ್ಲಿ ಜಿಯೋ ಸಿಮ್‌ ಆಕ್ಟಿವೇಟ್‌ ಹೇಗೆ?

15 ನಿಮಿಷಗಳಲ್ಲಿ ಜಿಯೋ ಸಿಮ್‌ ಆಕ್ಟಿವೇಟ್‌ ಹೇಗೆ?

ಅಂದಹಾಗೆ ಈ ಸೇವೆ ಪ್ರಸ್ತುತದಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಲಭ್ಯ. ಶೀಘ್ರದಲ್ಲಿ ಬೆಂಗಳೂರು ಮತ್ತು ಇತರೆ ಸಿಟಿಗಳಲ್ಲೂ e-KYC ಸೇವೆ ಸಿಗಲಿದೆ. ಆಧಾರ್‌ ಕಾರ್ಡ್‌ ಅನ್ನು ಹತ್ತಿರದ ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ಗೆ ತೆಗೆದುಕೊಂಡು ಹೋಗಿ. e-KYC ಆಕ್ಟಿವೇಶನ್ ಪ್ರಕ್ರಿಯೆ ಆರಂಭವಾಗುವುದು ಸೆಪ್ಟೆಂಬರ್ 5 ರಿಂದ.

 ಶೀಘ್ರದಲ್ಲಿ ಆಕ್ಟಿವೇಶನ್!

ಶೀಘ್ರದಲ್ಲಿ ಆಕ್ಟಿವೇಶನ್!

ಯಾರು ಆಧಾರ್‌ ಕಾರ್ಡ್ ನೀಡಿ ರಿಲಾಯನ್ಸ್ ಜಿಯೋ ಸಿಮ್‌ ಅನ್ನು ಖರೀದಿಸುತ್ತಾರೋ ಅವರು ತಮ್ಮ ಸಿಮ್‌ ಕಾರ್ಡ್‌ ಅನ್ನು ಕೇವಲ 15 ನಿಮಿಷಗಳಲ್ಲಿ ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ನಲ್ಲಿಯೇ ಆಕ್ಟಿವೇಶನ್‌ ಮಾಡಿಕೊಳ್ಳಬಹುದು ಎಂದು ಅಂಬಾನಿ ಹೇಳಿದ್ದಾರೆ.

 e-KYC ಆಕ್ಟಿವೇಶನ್‌ ಎಂದರೆ ಏನು?

e-KYC ಆಕ್ಟಿವೇಶನ್‌ ಎಂದರೆ ಏನು?

'ಹಲವು ಗ್ರಾಹಕರು ಜಿಯೋ ಸಿಮ್‌ ಆಕ್ಟಿವೇಶನ್‌ ಆಗಲು 24 ಗಂಟೆಗಳ ಕಾಲಾವಧಿ ತೆಗೆದುಕೊಳ್ಳುವುದರಿಂದ ನಿರಾಶೆ ವ್ಯಕ್ತ ಪಡಿಸಿದ್ದಾರೆ' ಎಂದು ಮುಕೇಶ್‌ ಅಂಬಾನಿ ಅಭಿಪ್ರಾಯಪಟ್ಟಿದ್ದು, e-KYC ಆಕ್ಟಿವೇಶನ್‌ ಹೊಸ ವಿಧಾನವಾಗಿದೆ.

 e-KYC ಆರಂಭಿಸಿದ್ದು ಯಾರು?

e-KYC ಆರಂಭಿಸಿದ್ದು ಯಾರು?

ರಿಲಾಯನ್ಸ್ ಜಿಯೋ ಪ್ರಿವೀವ್‌ ಆಫರ್‌ಗೆ ಪ್ರತಿಸ್ಪರ್ಧಿಯಾಗಿ ಏರ್‌ಟೆಲ್‌ ಮತ್ತು ವೊಡಾಫೋನ್‌ e-KYC ಆಕ್ಟಿವೇಶನ್‌ ಅನ್ನು ಆರಂಭಿಸಿದವು. ಈಗ ಈ ವಿಧಾನವನ್ನೇ ರಿಲಾಯನ್ಸ್ ಫಾಲೋ ಮಾಡುತ್ತಿದೆ.

ಸೂಚನೆ

ಸೂಚನೆ

e-KYC ಆಕ್ಟಿವೇಶನ್ ಪ್ರಕ್ರಿಯೆ ಪ್ರಸ್ತುತದಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರದಲ್ಲಿ ಇತರೆ ಸಿಟಿಗಳಿಗೂ ದೊರೆಯಲಿದೆ.

Best Mobiles in India

Read more about:
English summary
Reliance Jio e-KYC Activation: Follow These Simple Steps to Activate Your SIM in 15 Minutes. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X