50 ರೂಪಾಯಿಗೆ 1ಜಿಬಿ ಡೇಟಾ ಜಿಯೋ ಆಫರ್
ಪ್ರಿವ್ಯೂ ಆಫರ್ ಅನ್ನು ಜನತೆಗೆ ನೀಡುತ್ತಿರುವ ಸಂಸ್ಥೆ ಬಳಕೆದಾರರನ್ನು ತನ್ನತ್ತ ಸೆಳೆಯಲು ಇದುವರೆಗೆ ಯಾರೂ ಮಾಡದೇ ಇರುವ ಅದ್ಭುತ ಆಫರ್‌ಗಳನ್ನು ರಿಲಾಯನ್ಸ್ ಜಿಯೋ ನೀಡಿದೆ. ವಿಶ್ವದಲ್ಲೇ 4ಜಿ ಡೇಟಾ ದರಗಳು ಕಡಿಮೆ ಎಂದೆನಿಸಲಿದೆ. ಜಿಯೋ ನೀಡುತ್ತಿರುವ ಡೇಟಾ ಯೋಜನೆಗಳ ವಿವರ ಮಾಹಿತಿಗಳನ್ನು ಇಲ್ಲಿ ನೀಡುತ್ತಿದ್ದು ಇದು ನಿಮ್ಮನ್ನು ವಿಸ್ಮಿತಗೊಳಿಸುವುದು ಖಂಡಿತ.
ಓದಿರಿ: ಜಿಯೋ ಸಿಮ್‌ನಲ್ಲಿ ಬಳಕೆದಾರರಿಗೆ ತಲೆನೋವಾಗಿರುವ ಸಮಸ್ಯೆಗೆ ಇಲ್ಲಿದೆ ಪರಿಹಾರ
ಇಂದಿನ ಲೇಖನದಲ್ಲಿ ಜಿಯೋ ನೀಡುತ್ತಿರುವ ಆಫರ್‌ಗಳೇನು ಎಂಬುದನ್ನು ತಿಳಿಸುತ್ತಿದ್ದು ಇದು ನಿಮ್ಮನ್ನು ವಿಸ್ಮತಗೊಳಿಸಲಿದೆ.

ಪ್ರತೀ ಎಮ್‌ಬಿಗೆ 5 ಪೈಸೆ
ಸೇವೆಯ ಕುರಿತಾ ಅತಿಮುಖ್ಯ ಘೋಷಣೆ ಇದಾಗಿದೆ. ಪ್ರತೀ ಎಮ್‌ಬಿಗೆ ದರವು 5 ಪೈಸೆಯಂತೆ ಇದ್ದು ಜಿಬಿ ಡೇಟಾಗೆ ನೀವು 50 ರೂವನ್ನು ಪಡೆದುಕೊಳ್ಳಲಿರುವಿರಿ.

ವಾಯ್ಸ್ ಅಥವಾ ಡೇಟಾಗೆ ಮಾತ್ರ ಪಾವತಿಸಿ
ಡೇಟಾ ಅಥವಾ ಕರೆಗಳಲ್ಲಿ ಜಿಯೋ ಬಳಕೆದಾರರು ಒಂದನ್ನು ಆಯ್ಕೆಮಾಡಿದರೆ ಸಾಕು. ಎರಡನ್ನೂ ಆರಿಸಬೇಕಾಗಿಲ್ಲ. ಕಂಪೆನಿಯು ಉಚಿತವಾಗಿ ವಾಯ್ಸ್ ಕರೆಗಳನ್ನು ಆಫರ್ ಮಾಡುತ್ತಿದೆ.

ರೋಮಿಂಗ್ ದರಗಳಿಲ್ಲ
ಮುಖೇಶ್ ಅಂಬಾನಿ ನಾಯಕತ್ವದ ಕಂಪೆನಿಯು ರೋಮಿಂಗ್‌ಗೆ ಯಾವುದೇ ದರಗಳನ್ನು ವಿಧಿಸುತ್ತಿಲ್ಲ ಎಲ್ಲಾ ವಾಯ್ಸ್ ಕರೆ ದರಗಳಿಗೆ ಅಂತ್ಯವನ್ನು ಹಾಡಿ ಎಂಬುದಾಗಿ ಕಂಪೆನಿ ತಿಳಿಸಿದೆ.

ಟಾರಿಫ್ ಯೋಜನೆಗಳು
ಅಧಿಕೃತ ಟಾರಿಫ್ ಯೋಜನೆಗಳು ಲೀಕ್ ಆಗಿರುವ ಯೋಜನೆಗಳಂತೆ ಇರುವುದಿಲ್ಲ, ಆದರೆ ಇವುಗಳ ದರಕಡಿಮೆ ಇದ್ದು ಇತರ ಟೆಲಿಕಾಮ್ ಸೇವೆಗಳಿಗಿಂತ ಇನ್ನಷ್ಟು ಉತ್ತಮವಾಗಿದೆ.

ಟಾರಿಫ್ ಯೋಜನೆಗಳು ವಿವರವಾಗಿದೆ
ಬೇಸಿಕ್ ಪ್ಯಾಕ್ ರೂ 149 ಕ್ಕೆ ಲಭ್ಯವಿದ್ದು, ಇದು ಉಚಿತ ವಾಯ್ಸ್ ಕಾಲ್ ಅನ್ನು ಒದಗಿಸಲಿದೆ 4ಜಿ ಡೇಟಾದ 0.3 ಜಿಬಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಜಿಯೋ ಅಪ್ಲಿಕೇಶನ್‌ಗಳಿಗೆ ಅನಿಯಮಿತ ಪ್ರವೇಶವನ್ನು ನೀವು ಪಡೆದುಕೊಳ್ಳಲಿದ್ದೀರಿ ಮತ್ತು 28 ದಿನಗಳಿಗೆ 100 ಎಸ್‌ಎಮ್‌ಎಸ್ ಅನ್ನು ನೀವು ಬಳಸಬಹುದಾಗಿದೆ

2 ಲಕ್ಷ ಹಳ್ಳಿಗಳು ಜಿಯೋ ನೆಟ್‌ವರ್ಕ್ ಅಡಿಯಲ್ಲಿ
ರಿಲಾಯನ್ಸ್ ಜಿಯೋದ 4ಜಿ ನೆಟ್‌ವರ್ಕ್ 18,000 ಕ್ಕಿಂತ ಹೆಚ್ಚಿನ ನಗರಗಳನ್ನು ಕವರ್ ಮಾಡಲಿದ್ದು ಜೊತೆಗೆ 2 ಲಕ್ಷ ಹಳ್ಳಿಗಳು ಇದರಡಿಯಲ್ಲಿ ಬರಲಿದೆ. ಅಂಬಾನಿ ಹೇಳಿರುವಂತೆ ಕಂಪೆನಿಯು 2017 ಕ್ಕೆ 90 ಶೇಕಡದಾದಷ್ಟು ಜನಸಂಖ್ಯೆಯನ್ನು ಆಕ್ರಮಿಸಕೊಳ್ಳಲಿದೆ.

ವಿಶೇಷ ವಿದ್ಯಾರ್ಥಿ ಆಫರ್
ಟೆಲಿಕಾಮ್ ಕಂಪೆನಿಯು ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ ಇಲ್ಲಿ ಇತರವುಗಳಿಗಿಂತ 25 ಶೇಕಡಾದಷ್ಟು ಹೆಚ್ಚಿನ ಡೇಟಾ ಯೋಜನೆ ದೊರೆಯಲಿದೆ.

ತ್ವರಿತ ಇ - ಕೆವೈಸಿ ಆಕ್ಟಿವೇಶನ್
ಗ್ರಾಹಕರು ಬರೇ 15 ನಿಮಿಷಗಳಲ್ಲಿ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ರಿಲಾಯನ್ಸ್ ಇ-ಕೆವೈಸಿ ಆಕ್ಟಿವೇಶನ್ ಅನ್ನು ಆರಂಭಿಸಿದ್ದು ಇದರಡಿಯಲ್ಲಿ 15 ನಿಮಿಷಗಳಲ್ಲಿ ಸಿಮ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

ಭವಿಷ್ಯ ಸಿದ್ಧ
ಇನ್ನಷ್ಟು ಡೇಟಾಗೆ ಬೆಂಬಲವನ್ನು ಒದಗಿಸುವಂತೆ ಭವಿಷ್ಯದ ಯೋಜನೆಗಳಿಗೆ ಅನುಗುಣವಾಗಿ ಸಿಮ್ ಅನ್ನು ಸಿದ್ಧಪಡಿಸಲಾಗಿದೆ ಮುಂದಿನ 5ಜಿ, 6ಜಿ ತಂತ್ರಜ್ಞಾನಕ್ಕೂ ಸಿಮ್ ಬೆಂಬಲವನ್ನು ನೀಡಲಿದೆ ಎಂಬುದು ಮುಕೇಶ್ ಅಂಬಾನಿ ಮಾತಾಗಿದೆ.

ಮುಂಬೈ ಮತ್ತು ದೆಹಲಿಯಲ್ಲಿ ಆರಂಭ
ಸೇವೆಯು ಎರಡು ನಗರಗಳಲ್ಲಿ ಮಾತ್ರ ಲಭ್ಯವಿದೆ. ಸಪ್ಟೆಂಬರ್ 5 ರಿಂದ ಈ ಮಹಾನಗರಗಳಲ್ಲಿ ಸೇವೆಯನ್ನು ಆರಂಭಿಸಲಿರುವ ಜಿಯೋ ಮುಂಬರುವ ವಾರಗಳಲ್ಲಿ ಜಿಯೋ ಆಫರ್ ಇತರ ನಗರಗಳಿಗೆ ಆಗಮಿಸಲಿದೆ ಎಂಬುದಾಗಿ ಅಂಬಾನಿ ತಿಳಿಸಿದ್ದಾರೆ.


Click it and Unblock the Notifications








