Subscribe to Gizbot

ಆಕಾಶ್‌ 2 ಯುಬಿಸ್ಲೇಟ್‌ 7ಸಿಐ Vs ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಆಲ್ಫಾ

Posted By: Vijeth

ಆಕಾಶ್‌ 2 ಯುಬಿಸ್ಲೇಟ್‌ 7ಸಿಐ Vs ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಆಲ್ಫಾ

ಭಾರತೀಯ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್‌ ಹಾಗೂ ಆಪಲ್‌ನಂತಹ ದಿಗ್ಗಜ ಸಂಸ್ಥೆಗಳು ತಮ್ಮ ಪ್ರಾಬಲ್ಯ ಸಾಧಿಸಿವೆಯಾದರೂ, ಸ್ಥಳೀಯ ಹಾಗೂ ಇತರೆ ಟ್ಯಾಬ್ಲೆಟ್‌ ತಯಾರಕರುಗಳೂ ಕೂಡಾ ಬೆಲೆ ಕುರಿತು ಆಲೋಚಿಸುವ ಭಾರತೀಯ ಗ್ರಾಹಕರುಗಳಿಗಾಗಿ ಕಡಿಮೆ ದರದಲ್ಲಿನ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಈ ಮೂಲಕ ಜಾಗತಿಕ ದಿಗ್ಗಜ ತಯಾರಿಕಾ ಸಂಸ್ಥೆಗಳಿಗೆ ಪ್ರಬಲ ಪೈಪೋಟಿ ನೀಡುತ್ತಿವೆ.

ಅಂದಹಾಗೆ ಭಾರತೀಯ ಟ್ಯಾಬ್ಲೆಟ್‌ ಮಾರುಕಟ್ಟೆಗೆ ಇದೀಗ ತಾನೆ ಭಾರತ ಸರ್ಕಾರವು ಬ್ರಿಟನ್‌ ಮೂಲದ ಡೇಟಾವಿಂಡ್‌ ಸಂಸ್ಥೆಯೊಂದಿಗೆ ಕೈಜೋಡಿಸಿವಿದ್ಯಾರ್ಥಿಗಳಿಗಾಗಿ ನೂತನ ಆಕಾಶ್‌ 2 ಟ್ಯಾಬ್ಲೆಟ್‌ ಅನ್ನು ಶೇ.50 ರಷ್ಟು ರಿಯಾಯಿತಿಯೊಂದಿಗೆ ರೂ. 1,130 ದರದಲ್ಲಿ ಬಿಡುಗಡೆ ಮಾಡಿದೆ. ಅಂದಹಾಗೆ ಆಕಾಶ್‌ 2 ಟ್ಯಾಬ್ಲೆಟ್‌ ಖರೀದಿಸಲು ಬಯಸುವ ಸಾಮಾನ್ಯ ಗ್ರಾಹಕರುಗಳಿಗಾಗಿ ಡೇಟಾವಿಂಡ್‌ ಸಂಸ್ಥೆಯು ತನ್ನಯ ಅಧಿಕೃತ ವೆಬ್‌ಸೈಟ್‌ ಮೂಲಕ ಯುಬಿಸ್ಲೇಟ್‌ 7ಸಿಐ ಹೆಸರಿನಲ್ಲಿ ರೂ.4,499 ದರದಲ್ಲಿ ನೀಡುತ್ತಿದೆ.

ಬಜೆಟ್‌ ಟ್ಯಾಬ್ಲೆಟ್‌ ಮಾರುಕಟ್ಟೆಗೆ ಇದೀಗತಾನೆ ಕಾಲಿರಿಸಿರುವ ಆಕಾಶ್‌ 2 ಟ್ಯಾಬ್ಲೆಟ್‌ಗೆ ಪ್ರಬಲ ಪೈಪೋಟಿ ನೀಡಬಲ್ಲ ಟ್ಯಾಬ್ಲೆಟ್‌ ಎಂದೇ ಗುರ್ತಿಸಿಕೊಂಡಿರುವ ಮೈಕ್ರೋಮ್ಯಾಕ್ಸ್‌ನ ನೂತನ ಫನ್‌ಬುಕ್‌ ಆಲ್ಫಾ ಮಾರುಕಟ್ಟೆಯಲ್ಲಿ ರೂ.5,999 ರೂದರದಲ್ಲಿ ಲಭ್ಯವಿದ್ದು ಆಕಾಶ್‌ 2 ಗೆ ಸರಿಸಾಟಿಯಾದ ಎಲ್ಲಾಫೀಚರ್ಸ್‌ಗಳಿಂದ ಕೂಡಿದೆ.

ಅಂದಹಾಗೆ ನೀವೂ ಕೂಡಾ ಇದೀಗತಾನೆ ಬಿಡುಗಡೆಯಾದ ಆಕಾಶ್‌ 2 ಟ್ಯಾಬ್ಲೆಟ್‌ ಖರೀದಿಸುವುದೋ ಅಥವಾ ಇತರೆ ಟ್ಯಾಬ್ಲೆಟ್‌ಗಳ ಮೊರೆ ಹೋಗುವುದೋ ಎಂದು ಆಲೋಚನೆಯಲ್ಲಿದ್ದಲ್ಲಿ, ಖರೀದಿಗು ಮುನ್ನ ಗಿಜ್ಬಾಟ್‌ ತಂದಿರುವ ಆಕಾಶ್‌ 2 ಹಾಗೂ ಫನ್‌ಬುಕ್‌ ಆಲ್ಫಾ ನಡುವಿನ ಹೋಲಿಕೆಯನ್ನು ಒಮ್ಮೆ ಓದಿ ನೋಡಿ. ನಂತರ ಯಾವ ಟ್ಯಾಬ್ಲೆಟ್‌ ಖರೀದಿಗೆ ಮುಂದಾಗಬೇಕೆಂಬುದನ್ನು ನೀವೇ ನಿರ್ಧರಿಸಿ.

ದರ್ಶಕ: ಎರಡೂ ಟ್ಯಾಬ್ಲೆಟ್‌ಗಳ ಮಾಹಿತಿಗಳನ್ನು ಸಂಸ್ಥೆಗಳು ಬಹಿರಂಗ ಪಡಿಸಿಲ್ಲ ಆದರೆ ವರದಿಗಳ ಪ್ರಕಾರ ಎರಡೂ ಟ್ಯಾಭ್ಲೆಟ್‌ಗಳಲ್ಲಿ 7 ಇಂಚಿನ ಟಚ್‌ಸ್ಕ್ರೀನ್‌ ದರ್ಶಕ ಹಾಗೂ 800 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ನಿಂದ ಕೂಡಿದೆ.

ಪ್ರೊಸೆಸರ್‌: ಈ ವಿಚಾರದಲ್ಲಿ ಆಲ್ಫಾ ಟ್ಯಾಬ್ಲೆಟ್‌ ಸಿಂಗಲ್‌ ಕೋರ್‌ 1 GHz ಪ್ರೊಸೆಸರ್‌ನೊಂದಿಗೆ ಮೇಲ್‌ 400 ಜಿಪಿಯು ಹೊಂದಿದೆ. ಮತ್ತೊಂದೆಡೆ ಆಕಾಶ್‌ 2 ನಲ್ಲಿ ಕೊಂಚ ಉತ್ತಮವಾದ ಅಂದರೆ ಡ್ಯುಯೆಲ್‌ ಕೋರ್‌ ಪ್ರೊಸೆಸರ್‌ ನೊಂದಿಗೆ ಕಾರ್ಟೆಕ್ಸ್‌ ಎ9 ಪ್ರೊಸೆಸರ್‌ ಹೊಂದಿದ್ದು 1Ghz ಕ್ಲಾಕ್‌ ಸ್ಪೀಡ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಬಜೆಟ್‌ ಟ್ಯಾಬ್ಲೆಟ್‌ಗಳಾದ್ದಾರಿಂದ ಆಕಾಶ್‌ 2 ಹಾಗೂ ಫನ್‌ಬುಕ್‌ ಆಲ್ಫಾ ಎರಡರಲಲ್ಲಿಯೂ ಆಂಡ್ರಾಯ್ಡ್‌ 4.0.3 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ: ಎರಡೂ ಟ್ಯಾಬ್ಲೆಟ್‌ಗಳಲ್ಲಿ ವಿಡಿಯೋ ಕರೆಗಾಗಿ ಮುಂಬದಿಯ ವಿಜಿಎ ಕ್ಯಾಮೆರಾ ನೀಡಲಾಗಿದ್ದು ಹಿಂಬದಿಯ ಕ್ಯಾಮೆರಾ ಸೌಲಭ್ಯ ಇಲ್ಲವಾಗಿದೆ.

ಮೆಮೊರಿ: ಈ ವಿಚಾರದಲ್ಲಿಯೂ ಕೂಡಾ ಎರಡೂ ಟ್ಯಾಬ್ಲೆಟ್‌ಗಳಲ್ಲಿ 512ಎಂಬಿ RAM ನೀಡಲಾಗಿದ್ದು ಮೈಕ್ರೋ ಎಸ್‌ಡಿಕಾರ್ಡ್‌ ಸ್ಲಾಟ್‌ ಮೂಲಕ 32ಜಿಬಿ ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ. ಇದಲ್ಲದೆ ಎರಡೂ ಟ್ಯಾಬ್ಲೆಟ್‌ಗಳಲ್ಲಿ 4ಜಿಬಿ ಆಂತರಿಕ ಸ್ಟೋರೇಜ್‌ ನೀಡಲಾಗಿದೆ.

ಕನೆಕ್ಟಿವಿಟಿ: ಆಕಾಶ್‌ 2 ಹಾಗೂ ಫನ್‌ಬುಕ್‌ ಆಲ್ಫಾದಲ್ಲಿ ವೈ-ಫೈ, ಡಾಂಗಲ್‌ ಮೂಲಕ 3ಜಿ, ಬ್ಲೂಟೂತ್‌ ಹಾಗೂ ಮೈಕ್ರೋ ಯುಎಸ್‌ಬಿ 2.0 ಪೋರ್ಟ್‌ ನೀಡಲಾಗಿದೆ.

ಬ್ಯಾಟರಿ: ಬ್ಯಾಡರಿ ಬ್ಯಾಕಪ್‌ ಕುರಿತಾಗಿ ಆಲೋಚಿಸುವುದಾದರೆ ಫನ್‌ಬುಕ್‌ ಆಲ್ಫಾ ಟ್ದಯಾಬ್ಲೆಟ್‌ನಲ್ಲಿ 2,800 mAh ಸಾಮರ್ತ್ಯದ ಬ್ಯಾಟರಿ ನೀಡಲಾಗಿದೆ, ಹಾಗೂ ಮತ್ತೊಂದೆಡೆ ಆಕಾಶ್‌ 2 ನಲ್ಲಿ ಕೊಂಚ ಅಧಿಕ ಸಾಮರ್ತ್ಯದ 3,000 mAh ಲಿ-ಇಯಾನ್‌ ಬ್ಯಾಟರಿ ನೀಡಲಾಗಿದ್ದು 3 ಗಂಟೆಗಳ ಬ್ಯಾಕಪ್‌ ನೀಡಬಲ್ಲದ್ದಾಗಿದೆ.

Read In English...

6,000 ರೂ. ದರದಲ್ಲಿನ ಟಾಪ್‌ 5 ಆಂಡ್ರಾಯ್ಡ್‌ ಟ್ಯಾಬ್ಲೆಟ್‌

4,000 ರೂ.ದರದಲ್ಲಿನ ಟಾಪ್‌ 5 ಆಂಡ್ರಾಯ್ಡ್‌ ಟ್ಯಾಬ್ಲೆಟ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot