Subscribe to Gizbot

ಮುಂದಿನ ಜನವರಿಗೆ ಬಿಡುಗಡೆಯಾಗಲಿದೆ ಆಕಾಶ್‌ 4 ಟ್ಯಾಬ್ಲೆಟ್‌

Written By:

ಆಕಾಶ್ ಸರಣಿಯ ನಾಲ್ಕನೇಯ ತಲೆಮಾರಿನ ಟ್ಯಾಬ್ಲೆಟ್‌‌ನ್ನು ಮುಂದಿನ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಟೆಲಿಕಾಂ ಸಚಿವ ಕಪಿಲ್ ಪ್ರಕಟಿಸಿ‌ದ್ದಾರೆ.

ಆದರೆ ಈ ಟ್ಯಾಬ್ಲೆಟ್‌ನ ವಿಶೇಷತೆ ಬಗ್ಗೆ ಗುಟ್ಟು ಬಿಡದ ಸಿಬಲ್‌‌, ಈ ಟ್ಯಾಬ್ಲೆಟ್‌ 4ಜಿ, ವೀಡಿಯೋ ಕಾಲಿಂಗ್‌,4GB ಆಂತರಿಕ ಮೆಮೋರಿಯೊಂದಿಗೆ ಬರಲಿದೆ ಎಂದು ಹೇಳಿದ್ದಾರೆ.

ವಿಶ್ವದ 12 ಕಂಪೆನಿಗಳು ಆಕಾಶ್‌ ಟ್ಯಾಬ್ಲೆಟ್‌‌ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಈ ಟ್ಯಾಬ್ಲೆಟ್‌ನ್ನು ವಿದ್ಯಾರ್ಥಿ‌‌ಗಳಿಗೆ 49.98 ಡಾಲರ್‌ಗೆ(2,276 ರೂಪಾಯಿ) ವಿತರಿಸಲಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ಜನವರಿಗೆ ಬಿಡುಗಡೆಯಾಗಲಿದೆ ಆಕಾಶ್‌ 4 ಟ್ಯಾಬ್ಲೆಟ್‌

ಕಳೆದ ತಿಂಗಳು ಸರ್ಕಾರ ಈ ನಾಲ್ಕನೇಯ ತಲೆಮಾರಿನ ಟ್ಯಾಬ್ಲೆಟ್‌ ವಿಶೇಷತೆಯನ್ನು ಪ್ರಕಟಿಸಿತ್ತು. ಆದರೆ ಈ ವಿಶೇಷತೆ ಅಂತಿಮವಲ್ಲ.ತಜ್ಞರಲ್ಲಿ ಚರ್ಚೆ‌ಗೊಳಿಸಿದ ಬಳಿಕ ಅಂತಿಮವಾಗಿ ಟ್ಯಾಬ್ಲೆಟ್‌ನ್ನು ಅಭಿವೃದ್ಧಿ ಪಡಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ಈ ಟ್ಯಾಬ್ಲೆಟ್‌ನಲ್ಲಿ ಏನೇನಿದೆ ಎನ್ನುವುದಕ್ಕೆ ಇಲ್ಲಿ ಈ ಟ್ಯಾಬ್ಲೆಟ್‌ನ ವಿಶೇಷತೆಯನ್ನು ನೀಡಲಾಗಿದೆ.

ಆಕಾಶ್‌- 4 ಟ್ಯಾಬ್ಲೆಟ್‌ 
ವಿಶೇಷತೆ:

7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(800 x 480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.1 ಜೆಲ್ಲಿ ಬೀನ್‌ ಓಎಸ್‌
1GHz ARM ಕ್ವಾರ್ಟೆಕ್ಸ್‌ ಎ8 ಪ್ರೊಸೆಸರ್
1GB RAM
4GB ಆಂತರಿಕ ಮೆಮೋರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ ಕನೆಕ್ಟ್‌ವಿಟಿ,ಬ್ಲೂಟೂತ್‌,ಯುಎಸ್‌ಬಿ
3,000 mAh ಲಿಯಾನ್‌ ಬ್ಯಾಟರಿ

ಇದನ್ನೂ ಓದಿ: ಆರಂಭದ ಟ್ಯಾಬ್ಲೆಟ್‌ಗಳು ಹೇಗಿತ್ತು?ಯಾವ ವರ್ಷ ಯಾವ ರೀತಿಯ ಟ್ಯಾಬ್ಲೆಟ್‌ ಬಂತು?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot