32 ಗಂಟೆ ಬ್ಯಾಟರಿ ಸಾಮರ್ಥ್ಯದ ಡೆಲ್ ಲ್ಯಾಪ್ಟಾಪ್ !

Posted By: Varun
32 ಗಂಟೆ ಬ್ಯಾಟರಿ ಸಾಮರ್ಥ್ಯದ ಡೆಲ್ ಲ್ಯಾಪ್ಟಾಪ್ !

ಲ್ಯಾಪ್ ಟಾಪ್ ಹಾಗು PC ಗಳ ಉತ್ಪಾದನೆಯಲ್ಲಿ ಅಗ್ರಜನಾಗಿರುವ ಅಮೆರಿಕಾದ ಡೆಲ್ ಕಂಪ್ಯೂಟರ್ಸ್, ಟ್ಯಾಬ್ಲೆಟ್ ಗಳ ಭರಾಟೆಯ ನಡುವೆಯೂ ಹೊಸ ಹೊಸ ಲ್ಯಾಪ್ಟಾಪುಗಳನ್ನು ಬಿಡುಗಡೆ ಮಾಡುತ್ತಿದ್ದು, ಸಾಮಾನ್ಯವಾಗಿ ಲ್ಯಾಪ್ಟಾಪ್ ಗಳಿಗೆ ಇರುವ ಬಹುಮುಖ್ಯ ಸಮಸ್ಯೆಯಾದ ಕಡಿಮೆ ಬ್ಯಾಟರಿ ಸಾಮರ್ಥ್ಯದ ತೊಂದರೆಯನ್ನು ಗಮನದಲ್ಲಿ ಇಟ್ಟುಕೊಂಡು, ಈಗ ಲ್ಯಾಟಿಟ್ಯೂಡ್ E6430 ಹೆಸರಿನ 32.7 ಗಂಟೆ ಸತತವಾಗಿ ಕೆಲಸ ಮಾಡುವ ಬ್ಯಾಟರಿ ಇರುವ ಲ್ಯಾಪ್ಟಾಪ್ ಒಂದನ್ನು ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದೆ.

ಆಪಲ್ ನ ಮ್ಯಾಕ್ ಬುಕ್ ಪ್ರೊ ಲ್ಯಾಪ್ಟಾಪ್ ಗಳಿಗಿಂತ 4 ಪಟ್ಟು ಹೆಚ್ಚು ಬ್ಯಾಕ್ ಅಪ ಇರುವ ಈ ಲ್ಯಾಪ್ಟಾಪ್ ನ ಬ್ಯಾಟರಿ, ಒಮ್ಮೆ ಪೂರಾ ಚಾರ್ಜ್ ಮಾಡಿದರೆ ಸಾಕು, 32.7 ಗಂಟೆ ಕೆಲಸ ಮಾಡುತ್ತೆ.

ಡೆಲ್ ಈ ರೀತಿಯ ಬ್ಯಾಟರಿ ಹೊರತರಲು 9 ಸೆಲ್ ಗಳನ್ನು ಉಪಯೋಗಿಸಿದ್ದು, ಲ್ಯಾಟಿ ಟ್ಯೂಡ್ E6430 ನಲ್ಲಿ ಇರುವ ಐವಿ ಬ್ರಿಡ್ಜ್ ಪ್ರೋಸೆಸರ್ ಕೂಡ ಈ ರೀತಿಯ ಬ್ಯಾಟರಿ ಸಾಮರ್ಥ್ಯ ಹೆಚ್ಚಲು ಕಾರಣವಾಗಿದೆ ಎಂದು ಡೆಲ್ ಹೇಳಿಕೊಂಡಿದೆ.

ಬ್ಯುಸಿನೆಸ್ ಮಾಡುವವರಿಗೆ ಹೇಳಿ ಮಾಡಿಸಿದಂಥ ಈ ಲ್ಯಾಪ್ಟಾಪ್, 14 ಇಂಚ್ ಸ್ಕ್ರೀನ್ ಹಿಂದಿದ್ದು, ಬ್ಯಾಟರಿ ಚಾರ್ಜ್ ಗೆ ಇಟ್ಟು ಕೆಲಸ ಮಾಡತೊಡಗಿದ್ದರೆ, ಖರ್ಚಾದ ಪವರ್ ನ 80 % ನಷ್ಟನ್ನ ಒಂದು ಗಂಟೆಯೊಳಗೆ ರಿಕವರ್ ಮಾಡುವ ಸಾಮರ್ಥ್ಯವಿದೆ.

ಈ ಲ್ಯಾಪ್ಟಾಪ್ ನ ಪೂರ್ಣಪ್ರಮಾಣದ ಸ್ಪೆಸಿಫಿಕೇಶನ್ ಗಳು ಹಾಗು ಬೆಲೆಸದ್ಯಕ್ಕೆ ಲಭ್ಯವಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot