Home
ಕಂಪ್ಯೂಟರ್‌‌

ರಿಲಾಯನ್ಸ್ ಜಿಯೋ 4G ಇಂಟರ್ನೆಟ್ ಅನ್ನು ಪಿಸಿ/ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಹೇಗೆ?

By Suneel

ಎಲ್ಲೆಲ್ಲೂ ರಿಲಾಯನ್ಸ್ ಜಿಯೋ ಮಯವಾಗಿದೆ. ಈಗಾಗಲೇ ಖಾಯಂ ಆಗಿ ಬಳಸುತ್ತಿರೋ ಸಿಮ್ ಕಿತ್ತಿ ಎಸೆದರು ಪರವಾಗಿಲ್ಲಾ, ಜಿಯೋ ಸಿಮ್ ಖರೀದಿಸಿ ಉಚಿತ ಇಂಟರ್ನೆಟ್ ಬಳಸಲೇಬೇಕು ಎಂದು 4G LTE ಸರ್ಪೋಟೆಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ತೀರ್ಮಾನಿಸಿದ್ದಾರೆ. ಈಗಾಗಲೇ ಹಲವರು ಬಳಸುತ್ತಿದ್ದಾರೆ ಸಹ.

ರಿಲಾಯನ್ಸ್ ಜಿಯೋ 4G ಇಂಟರ್ನೆಟ್ ಅನ್ನು ಪಿಸಿ/ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಹೇಗೆ?

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್: ಎಲೆಕ್ಟ್ರಾನಿಕ್‌ ಗ್ಯಾಜೆಟ್ ಖರೀದಿ ಮೇಲೆ ಶೇ.70 ರಿಯಾಯಿತಿ

ರಿಲಾಯನ್ಸ್ ಜಿಯೋ ಸೇವೆ ಈಗಾಗಲೇ 1.5 ಶತಕೋಟಿ ಗ್ರಾಹಕರನ್ನು ತಲುಪಿದೆ. ಮುಕೇಶ್‌ ಅಂಬಾನಿ'ರವರ ಕಂಪನಿ 'ವೆಲ್ಕಮ್‌ ಆಫರ್‌' ಯೋಜನೆಯಲ್ಲಿ ಎಲ್ಲಾ ಗ್ರಾಹಕರಿಗೆ ಡಿಸೆಂಬರ್‌ 31, 2016 ರವರೆಗೆ ಉಚಿತ ಸೇವೆ ನೀಡುವುದಾಗಿ ಹೇಳಿದ್ದರು. ಈ ಉತ್ತಮ ಆಫರ್‌ಗಳನ್ನು ಪಡೆಯಲು ಸಿಮ್‌ಗಾಗಿ ಮುಗಿಬೀಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಇತರರ ವಾಟ್ಸಾಪ್‌ನಲ್ಲಿ, ನಿಮ್ಮನ್ನು ನೀವೇ ಅನ್‌ಬ್ಲಾಕ್‌ ಮಾಡುವುದು ಹೇಗೆ?

ಅಂದಹಾಗೆ ಗಿಜ್‌ಬಾಟ್ ಹಲವು ಜಿಯೋ ಗ್ರಾಹಕರಿಂದ ಜಿಯೋ 4G ಇಂಟರ್ನೆಟ್‌ ಅನ್ನು ಪಿಸಿ/ಲ್ಯಾಪ್‌ಟಾಪ್‌ನಲ್ಲಿ ಬಳಸುವುದು ಹೇಗೆ ಎಂಬ ಪ್ರಶ್ನೆಗಳನ್ನು ಸ್ವೀಕರಿಸಿತ್ತು. ಆದ್ದರಿಂದ ಇಂದಿನ ಲೇಖನದಲ್ಲಿ ಜಿಯೋ ಇಂಟರ್ನೆಟ್ ಅನ್ನು ಪಿಸಿ/ಲ್ಯಾಪ್‌ಟಾಪ್‌ನಲ್ಲಿ ಬಳಸಬಹುದಾದ ಸರಳ ಮಾರ್ಗಗಳನ್ನು ತಿಳಿಸುತ್ತಿದ್ದೇವೆ. ನೀವು ಜಿಯೋ ಗ್ರಾಹಕರಾಗಿದ್ದಲ್ಲಿ, ಈ ಲೇಖನ ಓದಲೇಬೇಕು.

ರಿಲಾಯನ್ಸ್ ಜಿಯೋ 4G ಇಂಟರ್ನೆಟ್ ಅನ್ನು ಪಿಸಿ/ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಹೇಗೆ?

ವಿಧಾನ 1: ಹಾಟ್‌ಸ್ಪಾಟ್‌ ಬಳಸಿ
ವೈಫೈ ಸಪೋರ್ಟ್ ಮಾಡುವ ಕಂಪ್ಯೂಟರ್‌ ಇದ್ದಲ್ಲಿ, ಸುಲಭ ವಿಧಾನದಿಂದ ಜಿಯೋ ಇಂಟರ್ನೆಟ್ ಬಳಸಬಹುದು. ಆಂಡ್ರಾಯ್ಡ್/ ಐಓಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಹಾಟ್‌ಸ್ಪಾಟ್‌ ಆನ್‌ ಮಾಡಿ, ಜಿಯೋ 4G ಇಂಟರ್ನೆಟ್ ಬಳಸಲು ಆರಂಭಿಸಿ. ಕೆಲವು ಪಿಸಿ'ಗಳು ವೈಫೈ ಸಪೋರ್ಟ್ ಮಾಡುವುದಿಲ್ಲ. ಲ್ಯಾಪ್‌ಟಾಪ್‌ ಬಳಕೆದಾರರಿಗೆ ಈ ವಿಧಾನ ಹೆಚ್ಚಿನ ರೀತಿಯಲ್ಲಿ ಸಹಾಯಕವಾಗಿದೆ.

ರಿಲಾಯನ್ಸ್ ಜಿಯೋ 4G ಇಂಟರ್ನೆಟ್ ಅನ್ನು ಪಿಸಿ/ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಹೇಗೆ?

ವಿಧಾನ 2: USB ಟೆಥೆರಿಂಗ್
ಪಿಸಿ/ಲ್ಯಾಪ್‌ಟಾಪ್‌ಗಳಲ್ಲಿ ರಿಲಾಯನ್ಸ್ ಜಿಯೋ 4G ಇಂಟರ್ನೆಟ್ ಬಳಸಲು USB ಟೆಥೆರಿಂಗ್ ವಿಧಾನವು ಸಹ ಸಹಾಯವಾಗುತ್ತದೆ. ಈ ಫೀಚರ್‌ ಪ್ರತಿಯೊಂದು ಸ್ಮಾರ್ಟ್‌ಫೋನಲ್ಲಿಯೂ ಇರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ USB ಟೆಥೆರಿಂಗ್ ಎನೇಬಲ್‌ ಮಾಡಿ, ನಿಮ್ಮ ಪಿಸಿ/ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿ.

Settings > More > Tethering and portable hotspots ಅನ್ನು ಡಿವೈಸ್‌ನಲ್ಲಿ ಕ್ಲಿಕ್ ಮಾಡಿ.

ರಿಲಾಯನ್ಸ್ ಜಿಯೋ 4G ಇಂಟರ್ನೆಟ್ ಅನ್ನು ಪಿಸಿ/ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಹೇಗೆ?

ವಿಧಾನ 3: ಡಾಂಗಲ್ ಬಳಸಿ
ಜಿಯೋ 4G ಇಂಟರ್ನೆಟ್ ಬಳಸಲು ಇರುವ ಇನ್ನೊಂದು ವಿಧಾನ ಎಂದರೆ ಡಾಂಗಲ್‌ ಬಳಸುವುದು. ನಿಮ್ಮ ಜಿಯೋ ಸಿಮ್ ಕಾರ್ಡ್‌ ಅನ್ನು ಡಾಂಗಲ್‌ಗೆ ಇನ್‌ಸರ್ಟ್‌ ಮಾಡಿ, ಪಿಸಿ/ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿ. ಈ ಟ್ರಿಕ್ಸ್ ಪಿಸಿ ಮತ್ತು ಲ್ಯಾಪ್‌ಟಾಪ್‌ ಎರಡಕ್ಕೂ ವರ್ಕ್‌ ಆಗುತ್ತದೆ.

Best Mobiles in India

English summary
How to Use Reliance Jio 4G Internet in Your PC and Laptop. To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+