Subscribe to Gizbot

ಭಾರತದ ಟಾಪ್ 5 ಟ್ಯಾಬ್ಲೆಟ್ಟುಗಳು

Posted By: Super
ಭಾರತದ ಟಾಪ್ 5 ಟ್ಯಾಬ್ಲೆಟ್ಟುಗಳು
ಲೆಕ್ಕವಿಲ್ಲದಷ್ಟು ಟ್ಯಾಬ್ಲೆಟ್ ಗಳು ಭಾರತದಲ್ಲಿ ಬಿಡುಗಡೆಯಾಗಿ ಒಂದು ಥರ ಮೀನಿನ ಮಾರುಕಟ್ಟೆ ಆಗಿಬಿಟ್ಟಿದೆ. ಯಾವುದು ತೆಗೆದುಕೊಳ್ಳಬೇಕು ಯಾವುದು ತೆಗೆದುಕೊಳ್ಳಬಾರದು ಅಂತಾ ಗ್ರಾಹಕನಿಗೆ ಗಲಿಬಿಲಿಯಾಗುತ್ತದೆ.

ಹೈ ಎಂಡ್ ನ ಆಪಲ್ ಐಪ್ಯಾಡ್ ನಿಂದ ಹಿಡಿದು, ಇನ್ನೂ ಬಿಡಗಡೆಯಾಗದಿರುವ ಸರಕಾರದ ಅತೀ ಅಗ್ಗದ ಟ್ಯಾಬ್ಲೆಟ್- ಆಕಾಶ್ 2 ವರೆಗೂ ಥರಾವರಿ ಟ್ಯಾಬ್ಲೆಟ್ ಗಳಲ್ಲಿ ಫೀಚರ್ ಹಾಗು ಕೊಟ್ಟ ಹಣಕ್ಕೆ ಗುಣಮಟ್ಟದ ಟ್ಯಾಬ್ಲೆಟ್ ಕೊಡುತ್ತೋ ಇಲ್ಲವೋ ಎಂದು ನೋಡಿಕೊಂಡು ಭಾರತದಲ್ಲಿ ಸಿಗುವ ಟಾಪ್ 5 ಉತ್ತಮ ಟ್ಯಾಬ್ಲೆಟ್ ಗಳ ಪಟ್ಟಿಯನ್ನು ನಿಮಗಾಗಿ ಕೊಡುತ್ತಿದ್ದೇವೆ. ಇಲ್ಲಿದೆ ನೋಡಿ:

1) ಆಪಲ್ ನ್ಯೂ ಐಪ್ಯಾಡ್ (16 GB)

ಟ್ಯಾಬ್ಲೆಟ್ ಅನ್ನು ಜನರ ಬಳಕೆಗೆ ಮೊದಲು ಬಿಡುಗಡೆ ಮಾಡಿದ್ದೇ ಆಪಲ್. ಹೀಗಾಗಿ ಶೇ. 61 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಅದು ಈ ವರ್ಷ ಬಿಡುಗಡೆ ಮಾಡಿದ 3ನೆ ಆವೃತ್ತಿಯ ಐಪ್ಯಾಡ್ ತನ್ನ ವಿಶಿಷ್ಟ ಫೀಚರುಗಳನ್ನು ಹೊಂದಿದ್ದು, ಈ ಪಟ್ಟಿಯಲ್ಲಿ ಅದಕ್ಕೆ ಮೊದಲ ಸ್ಥಾನ.

ಅದರ ವಿಶೇಷತೆಗಳು ಏನು, ಯಾಕೆ ಅಷ್ಟು ಖ್ಯಾತಿ ಎಂದು ತಿಳಿದುಕೊಳ್ಳಲು ಇಲ್ಲಿ ನೋಡಿ.

 

2) ಬ್ಲ್ಯಾಕ್ ಬೆರಿ ಪ್ಲೇಬುಕ್ (64 GB)

ಒಂದು ಕಾಲದಲ್ಲಿ ಸ್ಮಾರ್ಟ್ ಫೋನ್ ವಿಭಾಗದ ರಾಜ ಎನಿಸಿದ್ದ ಕೆನಡಾದ RIM (ರಿಸರ್ಚ್ ಇನ್ ಮೋಷನ್) ನ ಉತ್ಪನ್ನವಾದ ಬ್ಲ್ಯಾಕ್ ಬೆರಿ ಪ್ಲೇಬುಕ್ ಉತ್ತಮ ಫೀಚರುಗಳನ್ನು ಹೊಂದಿದ್ದು ಒಳ್ಳೆಯ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದರ ಫೀಚರುಗಳು ಇಲ್ಲಿವೆ:

 • 7 ಇಂಚಿನ LCD ಕೆಪಾಸಿಟಿವ್ ಟಚ್ ಸ್ಕ್ರೀನ್

 • 1024 x 600 ಪಿಕ್ಸೆಲ್ ರೆಸಲ್ಯೂಶನ್

 • ಫೋರ್ ಪಾಯಿಂಟ್, ಮಲ್ಟಿ ಟಚ್ ಸ್ಕ್ರೀನ್

 • QNX ಆಪರೇಟಿಂಗ್ ಸಿಸ್ಟಮ್

 • ಕಾರ್ಟೆಕ್ಸ್ A9 ಡ್ಯುಯಲ್ ಕೋರ್ ಪ್ರೋಸೆಸರ್

 • ಪವರ್VR SGX540 ಗ್ರಾಫಿಕ್ಸ್ ಕಾರ್ಡ್

 • 1 GB ರಾಮ್

 • 5 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾ

 • ವೀಡಿಯೋ ಚಾಟ್ ಮಾಡಬಹುದಾದ 3 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮರಾ

 • MPEG ಫಾರ್ಮಾಟ್ ನಲ್ಲಿ ಚಿತ್ರಿಸಬಹುದಾದ HD 1080p ವಿಡಿಯೋ ರೆಕಾರ್ಡಿಂಗ್

 • 64 GB ಆಂತರಿಕ ಮೆಮೊರಿ

 • ಈ ಟ್ಯಾಬ್ಲೆಟ್ ನ ಬೆಲೆ 18 ಸಾವಿರ ರೂಪಾಯಿ.

 

3) ಅಸುಸ್ ಟ್ರಾನ್ಸ್ಫಾರ್ಮರ್ ಪ್ರೈಮ್

ಲ್ಯಾಪ್ಟಾಪ್ ರೀತಿ ಬಳಸಬಹುದಾದ ಅಸುಸ್ ನ ಟ್ರಾನ್ಸ್ಫಾರ್ಮರ್ ಪ್ರೈಮ್ ಕೀ ಬೋರ್ಡ್ ಅನ್ನು ಸ್ಕ್ರೀನ್ ಗೆ ಜೋಡಿಸಬಹುದಾದ ಡಾಕಿಂಗ್ ಸೌಲಭ್ಯ ಹೊಂದಿದ್ದು, ಡಬಲ್ ಆದ ಬ್ಯಾಟರಿ ಸಾಮರ್ಥ್ಯದ ಈ ಟ್ಯಾಬ್ಲೆಟ್ ನ ಮತ್ತಷ್ಟು ಫೀಚರುಗಳು ಈ ರೀತಿ ಇವೆ:

 • 10.1 ಇಂಚ್ ಸೂಪರ್ IPS ಕೆಪಾಸಿಟಿವ್ ಟಚ್ ಸ್ಕ್ರೀನ್

 • ಟೆನ್ ಪಾಯಿಂಟ್ ಮಲ್ಟಿ ಟಚ್ ಸ್ಕ್ರೀನ್

 • ತರಚು ನಿರೋಧಕ ಗೊರಿಲ್ಲಾ ಗ್ಲಾಸ್

 • ಆಂಡ್ರಾಯ್ಡ್ 3.2 ಆಪರೇಟಿಂಗ್ ಸಿಸ್ಟಮ್ (ಆಂಡ್ರಾಯ್ಡ್ 4.0 ಗೆ ಅಪ್ಗ್ರೇಡ್ ಮಾಡಬಹುದು)

 • Nvidia ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್

 • 1GB ರಾಮ್

 • 8 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರಾ (ಫ್ಲಾಶ್ ಜೊತೆ )

 • 1.2 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾ

 • ವೈಫೈ, HDMI ಪೋರ್ಟ್, ಮೈಕ್ರೋ SD ಕಾರ್ಡ್ ರೀಡರ್ ಮತ್ತು ಆಡಿಯೊ ಜ್ಯಾಕ್

 • ಜಿ-ಸೆನ್ಸರ್, ಲೈಟ್ ಸೆನ್ಸರ್, ಗೈರೊಸ್ಕೋಪ್ ಮತ್ತು ಇ-ದಿಕ್ಸೂಚಿ

 • ಇದರ ಬೆಲೆ 50 ಸಾವಿರ ರೂಪಾಯಿ.

 

4) ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2 (310)

ಆಂಡ್ರಾಯ್ಡ್ 4.0 ತಂತ್ರಾಂಶವಿರುವ ಟ್ಯಾಬ್ಲೆಟ್ ಗಳಲ್ಲೇ ಸುಂದರವಾದ ಹಾಗು ಮೌಲ್ಯಯುತವಾದ ಟ್ಯಾಬ್ಲೆಟ್ ಇದಾಗಿದ್ದು, ಬಿಡುಗಡೆಯಾದ ಎರಡೇ ತಿಂಗಳಲ್ಲಿ ಖ್ಯಾತಿ ಗಳಿಸಿದೆ.

ಇದರಲ್ಲಿ ಏನೇನಿದೆ ತಿಳಿದುಕೊಳ್ಳಲು ಇಲ್ಲಿ ನೋಡಿ.

 

5) ಐಬೆರಿ Auxus AX02  

ಭಾರತೀಯ ಕಂಪನಿಯಾದ ಐಬೆರಿ ಲೇಟಾಗಿ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಂದರೂ, ಕಡಿಮೆ ಸಮಯದಲ್ಲಿ ಸಾಕಷ್ಟು ಹೆಸರು ಗಳಿಸಿದೆ. ಆಂಡ್ರಾಯ್ಡ್ 4.0 ತಂತ್ರಾಂಶವಿರುವ ಇದರ ಫೀಚರುಗಳು ಇಲ್ಲಿವೆ:

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot