Home
Deal of the day

ಯಾರು ಕೊಡಲ್ಲ! 6,520 ಬೆಲೆ ಇಳಿಕೆ.. ಜೊತೆಗೆ 1,000 ಡಿಸ್ಕೌಂಟ್.. ಜಬರ್ದಸ್ತ್ ಫೀಚರ್ಸ್.. ಯಾವ ಫೋನ್?

ಐಕ್ಯೂ ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿ ನೀಡಿದೆ. ಕಂಪನಿಯ ಗೇಮಿಂಗ್ ಫೋನಿನ ಖರೀದಿ ಮೇಲೆ ಬೊಂಬಾಟ್ ಆಫರ್ ಲಭ್ಯವಿದೆ. ಹೌದು, ಐಕ್ಯೂ Z9S ಪ್ರೊ 5G (iQOO Z9s Pro 5G) ಮೊಬೈಲ್ ಬರೋಬ್ಬರಿ 6,520 ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ನೀವು 25,000 ರೂ.ಗಳ ಬಜೆಟ್‌ನಲ್ಲಿ ಹೊಸ ಮೊಬೈಲ್ ಖರೀದಿಸಲು ಬಯಸಿದರೆ, ಈ ಆಫರ್ ಕಳೆದುಕೊಳ್ಳಬೇಡಿ. ಬನ್ನಿ, ಈ ಫೋನಿನ ಮೂಲ ಬೆಲೆ, ರಿಯಾಯಿತಿ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಐಕ್ಯೂ Z9S ಪ್ರೊ 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಜೊತೆಗೆ 12GB RAM, 5500mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

iQOO Z9s Pro ಫೋನಿನ ಬೆಲೆ ಕುಸಿತ! 6,520 ರಿಯಾಯಿತಿ.. ವಿಶೇಷತೆಗಳೇನು?

ಐಕ್ಯೂ Z9S ಪ್ರೊ 5G ಬೆಲೆ ಮತ್ತು ಆಫರ್

ಐಕ್ಯೂ Z9S ಪ್ರೊ 5G ಫೋನಿನ ಖರೀದಿ ಮೇಲೆ ಫ್ಲಿಪ್‌ಕಾರ್ಟ್ ಸೈಟ್‌ನಲ್ಲಿ ಶೇ.22 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಫೋನಿನ 8GB RAM + 128 GB ಸ್ಟೋರೇಜ್ ಆಯ್ಕೆಯು 29,999 ರೂ.ಗೆ ಬಿಡುಗಡೆಯಾಗಿತ್ತು. ಪ್ರಸ್ತುತ, ನೀವು 23,380 ರೂ. ಬೆಲೆಯಲ್ಲಿ ಖರೀದಿಸಬಹುದು. ಇದಲ್ಲದೆ, ಶೇ.5% ಕ್ಯಾಶ್‌ಬ್ಯಾಕ್ ಮತ್ತು 1,000 ರೂ. (ಶೇ.10) ಬ್ಯಾಂಕ್‌ ಡಿಸ್ಕೌಂಟ್ ಸಹ ಲಭ್ಯವಿದೆ. ಇದು ಫ್ಲಾಂಬೊಯಂಟ್ ಆರೆಂಜ್ ಮತ್ತು ಲಕ್ಸ್ ಮಾರ್ಬಲ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಈ ಸುದ್ದಿ ಓದಿದ್ದೀರಾ?: ಸುಂಟರಗಾಳಿಯಂತೆ ಎಂಟ್ರಿ ಕೊಟ್ಟಿದೆ iQOO 13 ಫೋನ್‌; 6000mAh ಬ್ಯಾಟರಿ!

ಐಕ್ಯೂ Z9S ಪ್ರೊ 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ Z9S ಪ್ರೊ 5G ಸ್ಮಾರ್ಟ್‌ಫೋನ್ 6.77 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ 3D ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2,392 x 1,080 ಪಿಕ್ಸೆಲ್ ರೆಸಲ್ಯೂಶನ್‌ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 120Hz ರಿಫ್ರೆಶ್ ದರ ಮತ್ತು 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

ಕ್ವಾಲ್ಕಾಮ್‌ ಪ್ರೊಸೆಸರ್

ಐಕ್ಯೂ Z9S ಪ್ರೊ 5G ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್‌ ಹೊಂದಿದೆ. ಈ ಪ್ರೊಸೆಸರ್‌ ಅನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಇದು ಆಂಡ್ರಾಯ್ಡ್ 14 ಆಧಾರಿತ FunTouch ಆಪರೇಟಿಂಗ್ ಸಿಸ್ಟಮ್‌ ಜೊತೆಗೆ ಕೆಲಸ ಮಾಡುತ್ತದೆ.

ಎರಡು ಅದ್ಭುತ ಕ್ಯಾಮೆರಾಗಳು

ಐಕ್ಯೂ Z9s ಪ್ರೊ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು OIS ಮತ್ತು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಕ್ಯಾಮೆರಾ ಲಭ್ಯವಿದೆ.

ಅದ್ಭುತ ಬ್ಯಾಟರಿ ಬ್ಯಾಕಪ್

ಐಕ್ಯೂ Z9S ಪ್ರೊ 5G ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಹಾಗೆಯೇ 7.5W ರಿವರ್ಸ್ ಚಾರ್ಜಿಂಗ್ ಸಹ ನೀಡಲಾಗಿದೆ.

Best Mobiles in India

English summary
iQOO Z9s Pro 5G available with Rs 6520 discount on in Flipkart: check new Price, offers and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+