ಬರುತ್ತಿದೆ ಸ್ಮಾರ್ಟ್ ಕನ್ನಡಕ: ಇದರಲ್ಲಿ ನೀವು ಏನುಬೇಕಾದರು ನೋಡಬಹುದು...!!
ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಈ ಕನ್ನಡವನ್ನು ತೊಡುವವರಿಗೆ ಉತ್ತಮ ಅನುಭವನ್ನು ನೀಡಲಿದೆ.
ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿರುವ ಹಿನ್ನಲೆಯಲ್ಲಿ ಪ್ರತಿ ವಸ್ತುಗಳ ಸ್ಮಾರ್ಟ್ ಆಗುವ ಮೂಲಕ ತಮ್ಮ ಬಳಕೆಯನ್ನು ಹೆಚ್ಚು ಮಾಡಿಕೊಳ್ಳುತ್ತಿವೆ. ಸದ್ಯ ಇದೇ ಹಾದಿಯಲ್ಲಿ ಸಾಗಿದೆ ಸ್ಮಾರ್ಟ್ ಕನ್ನಡಗಳು. ಇವು ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಈ ಕನ್ನಡವನ್ನು ತೊಡುವವರಿಗೆ ಉತ್ತಮ ಅನುಭವನ್ನು ನೀಡಲಿದೆ.

ಓದಿರಿ: ಆಧಾರ್ ಕಾರ್ಡ್ ಕಳೆದ ಹೋದರೆ ಮಾಡಬೇಕಾದ್ದೇನು..?
ಈ ಹೊಸ ಸ್ಮಾರ್ಟ್ ಕನ್ನಡಕಗಳು ಮಾನವನ ಕಣ್ಣುಗಳೆಂತೆ ಕಾರ್ಯನಿರ್ವಹಿಸಲಿದೆ. ಹೇಗೆ ನಮ್ಮ ಕಣ್ಣುಗಳು ನಮಗೆ ಬೇಕಾದನ್ನು ನೋಡುವಂತೆ ಈ ಕನ್ನಡವನ್ನ ಹಾಕಿಕೊಂಡರೆ ಅದು ಸಹ ನಮಗೆ ಬೇಕಾದನ್ನು ಮಾತ್ರವೇ ಜೂಮ್ ಮಾಡಿ ತೋರಿಸಲಿದೆ. ಅಲ್ಲದೇ ಅದೇ ಫೋಕಸ್ ಅನ್ನು ನಿಯಂತ್ರಿಸಿಕೊಳ್ಳಲಿದೆ.
ಅಲ್ಲದೇ ಇದು ವಿವಿಧ ವಯಸ್ಸಿನ ನಮ್ಮ ಕಣ್ಣಿಗೆ ಬೇಕಾದ ರೀತಿಯಲ್ಲಿ ಆಡ್ಜೆಸ್ಟ್ ಮಾಡಿಕೊಳ್ಳಲು ಸಹಾಯಕಾರಿಯಾಗಿದೆ. ಅಲ್ಲದೇ ಇದು ವಿವಿಧ ದೂರಗಳನ್ನು ಅಳತೆ ಮಾಡಿ ಪೋಕಸ್ ಮಾಡಲಿದೆ ಇದಕ್ಕಾಗಿಐಏ ಇದರಲ್ಲಿ ವಿವಿಧ ಲೈನ್ಸ್ ಗಳನ್ನು ಅಳವಡಿಸಲಾಗಿದೆ ಎನ್ನಲಾಗಿದೆ.

ಓದಿರಿ: ಪ್ರಧಾನಿ ಮೋದಿಯಿಂದ ಡೇಟಾ ಕೊಡುಗೆ: ಕಿರಾಣಿ ಅಂಗಡಿಗಳಲ್ಲಿ 10 ರೂ.ಗೆ ಅನ್‌ಲಿಮಿಟೆಡ್ ವೈ-ಫೈ ಡೇಟಾ
ಈ ಕನ್ನಡಕದಲ್ಲಿ ವಿವಿಧ ಲೈನ್ಸ್ ಗಳ ಮಧ್ಯದಲ್ಲಿ ಲಿಕ್ವಿಡ್ ಒಂದನ್ನು ಅಳವಡಿಸಲಾಗಿದೆ. ಒದು ಎರಡಕ್ಕೂ ಹೆಚ್ಚು ಲೈನ್ಸ್‌ಗಳನ್ನು ಒಟ್ಟಗಿ ಹಿಡಿದುಕೊಳ್ಳಲು ಸಹಾಯಕಾರಿಯಾಗಿದೆ ಎಂದು ಹೇಳಬಹುದಾಗಿದೆ.

ಈ ಲೈನ್ಸ್‌ಗಳನ್ನು ಎಲೆಕ್ಟ್ರಾನಿಕ್ ಫ್ರೈಮ್ ಮೇಲೆ ಅಳವಡಿಸಲಾಗಿದೆ. ಇದು ವಿವಿಧ ಲೈನ್ಸ್‌ಗಳ ನಡುವೆ ಸಮನ್ವಯ ಸಾಧಿಸಲು ಈ ಎಲೆಕ್ಟ್ರಾನಿಕ್ ಫ್ರೈಮ್ ಸಹಾಯ ಮಾಡಲಿದೆ. ಈ ಸ್ಮಾರ್ಡ್ ಕನ್ನಡವನ್ನು ಮೊಬೈಲ್ ಆಪ್ ಮೂಲಕ ಸಂಪರ್ಕಿಸಬಹುದಾಗಿದೆ.


Click it and Unblock the Notifications








