Subscribe to Gizbot

ಪ್ರಧಾನಿ ಮೋದಿಯಿಂದ ಡೇಟಾ ಕೊಡುಗೆ: ಕಿರಾಣಿ ಅಂಗಡಿಗಳಲ್ಲಿ 10 ರೂ.ಗೆ ಅನ್‌ಲಿಮಿಟೆಡ್ ವೈ-ಫೈ ಡೇಟಾ

Written By:

ಡಿಜಿಟಲ್ ಇಂಡಿಯಾ ನಿರ್ಮಾಣಕ್ಕೆ ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ಸೇವೆಯನ್ನು ಓದಗಿಸುವ ಸಲುವಾಗಿ ಸಣ್ಣ ನಗರಗಳು ಮತ್ತು ಗ್ರಾಮೀಣ ಭಾಗದಲ್ಲಿ ವೈ-ಫೈ ಜೋನ್ ನಿರ್ಮಿಸಲು ಮುಂದಾಗಿದ್ದಾರೆ. ಸಣ್ಣ ಪುಟ್ಟ ವರ್ತಕರು ಮತ್ತು ಉದ್ಯಮಿಗಳಿಗೆ ಇದಕ್ಕಾಗಿ ಅವಕಾಶ ನೀಡಲು ಮುಂದಾಗಿದ್ದಾರೆ.

ಕಿರಾಣಿ ಅಂಗಡಿಗಳಲ್ಲಿ 10 ರೂ.ಗೆ ಅನ್‌ಲಿಮಿಟೆಡ್ ವೈ-ಫೈ ಡೇಟಾ

ಓದಿರಿ: ವಾಟ್ಸ್ಆಪ್ ಗ್ರೂಪ್ ಆಡ್ಮಿನ್‌ಗಳೇ ಎಚ್ಚರ: ನೀವು ಜೈಲು ಸೇರಬೇಕಾದಿತು..!!!

ದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ವೇಗದ ಗುಣಮಟ್ಟದ ಇಂಟರ್ನೆಟ್ ಸೇವೆಯನ್ನು ನೀಡಲು ಟ್ರಾಯ್ ಮುಂದಾಗಿದೆ. ಈ ಮೂಲಕ ಬ್ರಾಡ್‌ ಬ್ಯಾಂಡ್ ಸೇವೆಯನ್ನು ನೀಡುತ್ತಿರುವ ಕಂಪನಿಗಳು ಮತ್ತು ಟೆಲಿಕಾಂ ಕಂಪನಿಗಳ ಏಕಸ್ವಾಮ್ಯತೆಯನ್ನು ತೊಡೆದು ಹಾಕಲು ಈ ಪ್ರಯತ್ನವನ್ನು ಮಾಡಲಾಗಿದೆ.

ಓದಿರಿ: ಆಧಾರ್ ಕಾರ್ಡ್ ಕಳೆದ ಹೋದರೆ ಮಾಡಬೇಕಾದ್ದೇನು..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
STD ಕಾಲ್ ಬೂತ್ ಮಾದರಿಯಲ್ಲಿ PDO

STD ಕಾಲ್ ಬೂತ್ ಮಾದರಿಯಲ್ಲಿ PDO

90ರ ದಶಕದಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದ STD ಬೂತ್ ಮಾದರಿಯಲ್ಲೇ PDO ಪಬ್ಲಿಕ್ ಡೇಟಾ ಆಫೀಸ್ ಆರಂಭಿಸಲು ಟೆಲಕಾಂ ಇಲಾಖೆ ಚಿಂತನೆ ನಡೆಸಿದ್ದು, ಈ PDOಗಳು ವೈ-ಫೈ ಡೇಟಾ ಹಾಟ್ ಸ್ಪಾಟ್ ಗಳನ್ನು ಹೊಂದಿರಲಿದ್ದು ಕಡಿಮೆಗೆ ಬೆಲೆಗೆ ವೈ-ಫೈ ಡೇಟಾ ಮಾರಾಟ ಮಾಡಲಿವೆ.

PDO ಆರಂಭಕ್ಕೆ 50,000 ಸಾಕು:

PDO ಆರಂಭಕ್ಕೆ 50,000 ಸಾಕು:

PDO ಪಬ್ಲಿಕ್ ಡೇಟಾ ಆಫೀಸ್ ಆರಂಭಿಸಲು ಕೇವಲ 50 ಸಾವಿರ ರೂ.ಗಳು ಸಾಕಾಗಲಿದ್ದು, ಇದು ಸಣ್ಣ ವರ್ತಕರಿಗೆ ಬಂಡವಾಳ ಹೂಡಲು ಸಹಾಯಕವಾಗಲಿದೆ. ಅಲ್ಲದೇ ಹೊಸದಾಗಿ ಉದ್ಯಮ ಆರಂಭಿಸ ಬೇಕು ಸಣ್ಣ ಪ್ರಮಾಣದಲ್ಲಿ ಎನ್ನವವರಿಗೆ ಇದು ಉಪಯೋಗಕಾರಿಯಾಗಲಿದೆ.

ವೈ-ಫೈ ಆಕ್ಸಿಸ್ ಪಾಯಿಂಟ್:

ವೈ-ಫೈ ಆಕ್ಸಿಸ್ ಪಾಯಿಂಟ್:

PDO ಪಬ್ಲಿಕ್ ಡೇಟಾ ಆಫೀಸ್ ನಲ್ಲಿ ವೈ-ಫೈ ಆಕ್ಸಿಸ್ ಪಾಯಿಂಟ್ ಇಡಲಾಗುವುದು. ಇದರಲ್ಲಿ e-KYC, OTP ಕಳುಹಿಸುವ ಸಾಧನ, ಡೇಟಾ ವೂಚರ್ ಮ್ಯಾನೆಜ್ ಮೆಂಟ್ ಮೆಕಾನಿಜಂ ಮತ್ತು ಬಿಲಿಂಗ್ ಸಿಸ್ಟಮ್ ಇರಲಿದೆ.

10 ರೂ,ಗೆ ವೈ-ಫೈ ಡೇಟಾ:

10 ರೂ,ಗೆ ವೈ-ಫೈ ಡೇಟಾ:

ಜಿಯೋ ಡೇಟಾ ಆಫರ್‌ಗೆ ಬೆಚ್ಚಿ ಬಿದ್ದಿದ ಜನರಿಗೆ ಈ ಕೊಡುಗೆ ಹುಚ್ಚು ಹಿಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. PDOಗಳಲ್ಲಿ ದೊರೆಯುವ ಡೇಟಾ ಕೇವಲ 10 ರೂಗೆ ದೊರೆಯಲಿದ್ದು. ಇದು ಇಂಟರ್‌ನೆಟ್ ಬಳಕೆದಾರರಿಗೆ ಹೆಚ್ಚಿನ ಸ್ವಾತಂತ್ರವನ್ನು ಮಾಡಿಕೊಡಲಿದೆ.

 ಈಗಾಗಲೇ ವೈ-ಫೈ ಆಕ್ಸಿಸ್ ಪಾಯಿಂಟ್ ನಿರ್ಮಾಣಕ್ಕೆ ಚಾಲನೆ:

ಈಗಾಗಲೇ ವೈ-ಫೈ ಆಕ್ಸಿಸ್ ಪಾಯಿಂಟ್ ನಿರ್ಮಾಣಕ್ಕೆ ಚಾಲನೆ:

ಈಗಾಗಲೇ PDO ಪಬ್ಲಿಕ್ ಡೇಟಾ ಆಫೀಸ್ ನಿರ್ಮಾಣಕ್ಕೆ ಅಗತ್ಯವಿರುವ ವೈ-ಫೈ ಆಕ್ಸಿಸ್ ಪಾಯಿಂಟ್ ತಯಾರಿಸಲು ಹಲವರು ಕಂಪನಿಗಳು ಮುಂದೆ ಬಂದಿದ್ದು, ಶೀಘ್ರವೇ ಇದು ಬಳಕೆಗೆ ಮುಕ್ತವಾಗಲಿದೆ.

ಸ್ಕಿಲ್ ಇಂಡಿಯಾಕ್ಕೆ ಕೊಡುಗೆ:

ಸ್ಕಿಲ್ ಇಂಡಿಯಾಕ್ಕೆ ಕೊಡುಗೆ:

ಈ ಹೊಸ ಯೋಜನೆಯೂ ಸ್ಕಿಲ್ ಇಂಡಿಯಾ ದೊಂದಿಗೆ ಸೇರಿಕೊಂಡು ಡಿಜಿಟಲ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಯೋಜನೆಯ ಸಹಾಕಾರಕ್ಕೆ ಮುಂದಾಗಲಿವೆ. ಸ್ಕಿಲ್ ಇಂಡಿಯಾ ಯೋಜನೆಯಲ್ಲಿ ತರಬೇತಿ ಪಡೆದ ಯುವಕರಿಗೆ ಹೆಚ್ಚಿನ ಆಧ್ಯತೆ ದೊರೆಯಲಿದೆ.

 ಮುದ್ರಾ ಯೋಜನೆಯೂ ತಳುಕು:

ಮುದ್ರಾ ಯೋಜನೆಯೂ ತಳುಕು:

ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಮುದ್ರಾ ಯೋಜನೆಯೂ ಈ ಯೋಜನೆಯೊಂದಿಗೆ ಸೇರಿಕೊಳ್ಳಲಿದ್ದು, PDO ತೆರೆಯಲು ಈ ಯೋಜನೆಯ ಮೂಲಕ ಸಾಲ ಸೌಲಭ್ಯವನ್ನು ಓದಗಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಹೊಸ ಉದ್ಯೋಗ ಸೃಷ್ಟಿ:

ಹೊಸ ಉದ್ಯೋಗ ಸೃಷ್ಟಿ:

ಈ ಹೊಸ ವೈ-ಫೈ ಆಕ್ಸಿಸ್ ಪಾಯಿಂಟ್ ಗಳ ನಿರ್ಮಾಣದಿಂದಾಗಿ ಹೊಸ ಉದ್ಯೋಗ ಅವಕಾಶಗಳ ಸೃಷ್ಟಿಯಾಗಲಿದೆ. ಇದರಿಂದ ಯುವ ಜನತೆಯೂ ಕೈ ತುಂಬ ದುಡಿಯುವ ಅವಕಾಶಗಳು ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Centre for Development of Telematics (C-DoT) in India has developed a low-cost Public Data Office (PDO) to help meet end to end connectivity solutions in the country. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot