ಆಧಾರ್ ಕಾರ್ಡ್ ಕಳೆದಿದೆಯೇ..? ಹಾಗಿದ್ರೆ ಮಾಡಬೇಕಾದ್ದೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

Written By:

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಸರಕಾರಿ ಸೇವೆಯನ್ನು ಪಡೆಯಲು ಕಡ್ಡಾಯವಾಗಿ ಬೇಕಾಗಿದೆ. ಕೇವಲ ಸರಕಾರದ ಸೇವೆಗಳು ಮಾತ್ರವಲ್ಲದೇ ದೇಶದಲ್ಲಿ ಖಾಸಗಿ ವಲಯದಲ್ಲಿಯೂ ಆಧಾರ್ ಬಳಕೆಯನ್ನು ಕಡ್ಡಾಯ ಮಾಡಲು ಸರಕಾರವು ಚಿಂತನೆ ನಡೆಸಿದ್ದು, ಹುಟ್ಟಿದ ಮಗುವಿನಿಂದ ಹಿಡಿದು ಕೊನೆದಿನಗಳನ್ನು ಎಣಿಸುತ್ತಿರುವರರು ಸಹ ಆಧಾರ್‌ ಕಾರ್ಡ್‌ ಅನ್ನು ಕಡ್ಡಾಯವಾಗಿ ಹೊಂದಲೇ ಬೇಕಾಗಿದೆ.

ಆಧಾರ್ ಕಾರ್ಡ್ ಕಳೆದಿದೆಯೇ..? ಹಾಗಿದ್ರೆ ಮಾಡಬೇಕಾದ್ದೇನು..?

ಓದಿರಿ: ಏಜೆಂಟ್ ಸಹಾಯವಿಲ್ಲದೇ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಫುಲ್ ಡಿಟೈಲ್ಸ್

ಇದೇ 12 ಅಂಕಿಗಳ ಆಧಾರ್ ಕಾರ್ಡ್ ಕಳೆದುಹೊದರೆ ಮಾಡುವುದೇನು, ಮತ್ತೇ ಈ ಹಿಂದಿನಂತೆ ಎಲ್ಲಾ ಮಾಹಿತಿಯನ್ನು ನೀಡಿ ಆಧಾರ್ ಪಡೆದುಕೊಳ್ಳಬೇಕೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ನೀಡುವ ಸಲುವಾಗಿಯೇ ಈ ಸ್ಟೋರಿ.

ಓದಿರಿ: ಯೂಟೂಬ್‌ನಲ್ಲಿ ಹೆಚ್ಚು ವಿಡಿಯೋ ನೋಡುವವರಿಗಾಗಿ...!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧಾರ್ ಕಳೆದರೆ ಚಿಂತೆ ಬೇಡ:

ಆಧಾರ್ ಕಳೆದರೆ ಚಿಂತೆ ಬೇಡ:

ನಿಮ್ಮ ಆಧಾರ್ ಕಾರ್ಡ್ ಕಳೆದು ಹೊದರೆ ಯಾವುದೇ ರೀತಿಯಲ್ಲೂ ನೀವು ಚಿಂತಿಸ ಬೇಕಾಗಿಲ್ಲ. ಕಾರಣ ಆನ್‌ಲೈನಿನಲ್ಲಿ ನೀವು ಕೆಲವೇ ನಿಮಿಷಗಳಲ್ಲೇ ನಿಮ್ಮ ಆಧಾರ್ ಕಾರ್ಡ್‌ಅನ್ನು ಮರಳಿ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ಹಣವನ್ನು ಪಾವತಿ ಮಾಡಬೇಕಾಗಿಲ್ಲ ಮತ್ತು ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ.

ನಕಲಿ ಆಧಾರ್‌ ಕಾರ್ಡ್ ಪಡೆಯುವುದು ಹೇಗೆ..?

ನಕಲಿ ಆಧಾರ್‌ ಕಾರ್ಡ್ ಪಡೆಯುವುದು ಹೇಗೆ..?

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ ನೀವು ಚಿಂತೆ ಮಾಡಬೇಕಾಗಿಲ್ಲ ಅದಕ್ಕಾಗಿ ಬದಲಿಗೆ ಆನ್‌ಲೈನಿನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದನ್ನು ಈ ಮುಂದಿನಂತೆ ನೀವೇ ನೋಡಿರಿ.

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
ಹಂತ-01:

ಹಂತ-01:

ಮೊದಲಿಗೆ ಇಂಟರ್ನೆಟ್ ನಲ್ಲಿ ಆಧಾರ್ ವೈಬ್‌ ಸೈಟಿಗೆ ಭೇಟಿ ನೀಡಿ. (htps://resident.uidai.net.in/find-uid-eid) ಅಲ್ಲಿ ನಿಮ್ಮ ಕೆಲವು ಮಾಹಿತಿಗಳನ್ನು ನೀಡುವ ಮೂಲಕ ನಕಲಿ ಆಧಾರ್ ಕಾರ್ಡ್ ಪ್ರತಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

ಹಂತ-02:

ಹಂತ-02:

ಆಧಾರ್ ವೈಬ್ ಸೈಟ್ ಓಪನ್ ಮಾಡಿದ ನಂತರದಲ್ಲಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಇಲ್ಲವೇ ಆಧಾರ್ ಎನ್‌ರೋಲ್ ಮೆಂಟ್ ಸಂಖ್ಯೆಯನ್ನು ತುಂಬಿರಿ.

ಹಂತ-03:

ಹಂತ-03:

ನಂತರ ನಿಮ್ಮ ಪೂರ್ಣ ಹೆಸರನ್ನೂ ನಮೂದಿಸಿ, ನಂತರ ನಿಮ್ಮ ಇ-ಮೇಲ್ ಐಡಿಯನ್ನು ದಾಖಲಿಸಿ ಇದರೊಂದಿಗೆ ನೀವು ರಿಜಿಸ್ಟರ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಿರಿ.

ಹಂತ-04:

ಹಂತ-04:

ನಂತರ ಒಂದು ಗುಪ್ತ ಸಂಖ್ಯೆಯೂ ನಿಮಗೆ ಬರಲಿದೆ. ಅದಕ್ಕಾಗಿ ನೀವು ವೈಬ್ ಸೈಟಿನಲ್ಲಿ 'Get OTP' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿರಿ.

ಹಂತ-05:

ಹಂತ-05:

'Get OTP' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರದಲ್ಲಿ ನಿಮ್ಮ ಮೊಬೈಲ್‌ಗೆ ಇಲ್ಲವೇ ನಿಮ್ಮ ಇ-ಮೇಲ್ ವಿಳಾಸಕ್ಕೆ OTP ಯನ್ನು ಕಳುಹಿಸಲಾಗುವುದು. .

ಹಂತ-06:

ಹಂತ-06:

ನೀವು ಸ್ವೀಕರಿಸಿದ OTPಯನ್ನು ವೈಬ್‌ಸೈಟಿನಲ್ಲಿ ದಾಖಲಿಸಿ, ನಂತರ "Verify OTP' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

ಹಂತ-07:

ಹಂತ-07:

ಒಮ್ಮೆ ನೀವು ನಿಮ್ಮ OTP ಸರಿಯಾಗಿದ್ದಲ್ಲಿ ಇ-ಆಧಾರ್ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗುವುದು. ಪಿಡಿಎಫ್ ನಲ್ಲಿರುವ ಇ-ಆಧಾರ್ ನಿಮ್ಮ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿರಿ.

ಹಂತ-08:

ಹಂತ-08:

ಡೌನ್‌ಲೋಡ್ ಮಾಡಿದ ಇ-ಆಧಾರ್ ಅನ್ನು ಪ್ರಿಂಟ್ ಮಾಡಿಸಿಕೊಳ್ಳಿ ನಂತರ ಎಲ್ಲಿ ಆಧಾರ್ ಕೇಳಿದರು ನಿಮ್ಮ ಬಳಿ ಇರುವ ಆಧಾರ್ ಅನ್ನು ನೀಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Aadhaar Card the single identity proof, the government has made all efforts to make sure that the Aadhaar number is linked to bank accounts and tax payments to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot