ಕ್ಸಿಯೊಮಿ ಬಿಡುಗಡೆ ಮಾಡಿದೆ ಅಮಾಜ್‍ಫಿಟ್ ಸ್ಮಾರ್ಟ್‍ವಾಚ್ ಜಿಪಿಎಸ್, ವಾಟರ್ ರೆಸಿಸ್ಟೆನ್ಸ್ ನೊಂದಿಗೆ: ನಿಮಗೆ ಗೊತ್ತಿರಬೇಕಾದ 6 ವಿಷಯಗಳು
ಹಲವಾರು ಗಾಳಿಸುದ್ದಿ ಮತ್ತು ಮಾಹಿತಿಗಳಿಗೆ ಕಾರಣವಾದ ಕ್ಸಿಯೊಮಿ ಸ್ಮಾರ್ಟ್‍ವಾಚ್ ಈಗ ಬಿಡುಗಡೆಯಾಗಲಿದೆ. ಕ್ಸಿಯೊಮಿ ಯ ಸಬ್ ಬ್ರ್ಯಾಂಡ್ ಹುಆಮಿ ತನ್ನ ಸ್ಮಾರ್ಟ್‍ವಾಚ್ – ಅಮಾಜ್‍ಫಿಟ್ ಬಿಡುಗಡೆ ಮಾಡಿತು.

ಕಪ್ಪು ಮತ್ತು ಬಿಳುಪಲ್ಲಿ ಬರುವ ಅಮಾಜ್‍ಫಿಟ್ ಸ್ಮಾರ್ಟ್‍ವಾಚ್ ನ ಬೆಲೆ 799 ಯುಆನ್ ( ಸುಮಾರು ರೂ.8000) ಇದ್ದು, ಚೀನಾ ಮಾರುಕಟ್ಟೆಯಲ್ಲಿ ಬುಧುವಾರದಿಂದ ಲಭ್ಯವಿದೆ.
ಓದಿರಿ: ಜಿಯೋಮನಿ ವ್ಯಾಲೆಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿಲ್ಲವೇ?
1. ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್
ಹೊಸ ಫಿಟ್ನೆಸ್ ಟ್ರ್ಯಾಕರ್ ವಾಟರ್ ರೆಸೆಸ್ಟೆನ್ಸ್ ಹೊಂದಿದ್ದು ಮತ್ತು ಸ್ಮಾರ್ಟ್‍ಫೋನ್ ಮತ್ತು ಟಾಬ್ಲೆಟ್ ಗಳೊಂದಿಗೆ ಸಿಂಕ್ ಮಾಡಬಹುದಾಗಿದೆ ಕಂಪನಿಯ ಮಿ ಫಿಟ್ ಅಪ್ಲಿಕೇಷನ್‍ನೊಂದಿಗೆ.

2. ಪ್ರಪಂಚದ ಮೊದಲ ಸ್ಮಾರ್ಟ್‍ವಾಚ್ 28ಎನ್‍ಎಮ್ ಜಿಪಿಎಸ್ ಸೆನ್ಸರ್ ನೊಂದಿಗೆ
ಈ ವಾಚ್ 1.34 ಇಂಚ್ ವರ್ತುಲಾಕಾರದ ಡಿಸ್ಪ್ಲೆಯೊಂದಿಗೆ 300*300 ಪಿಕ್ಸೆಲ್ ರಿಸೊಲ್ಯುಷನ್ ಹೊಂದಿದೆ.
3. 22 ಎಮ್‍ಎಮ್ ನಷ್ಟು ಉದ್ದದ ರಿಸ್ಟ್‍ಬ್ಯಾಂಡ್ ಇದೆ.
ಸ್ಕ್ರ್ಯಾಚ್ ರೆಸಿಸ್ಟೆನ್ಸ್ ಸೆರಾಮಿಕ್ ಬೆಜೆಲ್ ನೊಂದಿಗೆ ಬರುತ್ತಿದ್ದು ಡುಯಲ್ ಕೋರ್ ಪ್ರೊಸೆಸರ್ 1.2 ಗಿಗಾ ಹಡ್ಜ್ ನದಾಗಿದೆ.

4. ನೈಜ ಹೃದಯ ಬಡಿತವನ್ನು ಮಾಪನ ಮಾಡುತ್ತದೆ
512 ಎಮ್‍ಬಿ ರ್ಯಾಮ್,4ಜಿಬಿ ರೊಮ್ ಹೊಂದಿದೆ. ಅಲಿಬಾಬಾ ದೊಂದಿಗೆ ಕಂಪನಿ ಕೈ ಜೋಡಿಸಿದೆ ಅಲಿಪೇ ಉಪಯೋಗಿಸಲು.
ಓದಿರಿ: ವಿಶ್ವದಲ್ಲೇ ಅತಿ ಕಡಿಮೆ 4ಜಿ ಡೇಟಾ ದರಗಳು: ಜಿಯೋ ವಿಶೇಷತೆ
5. ಆಂಡ್ರೊಯಿಡ್ 4.4 ಅಥವಾ ಅದಕ್ಕಿಂತ ಹೆಚ್ಚಿನದರೊಂದಿಗೆ ಹೊಂದುತ್ತದೆ
ಸ್ಮಾರ್ಟ್‍ವಾಚ್ ಬ್ಲೂಟೂತ್ 4.0 ಎಲ್‍ಇ, ವೈ-ಫೈ ಮತ್ತು ಒಪ್ಟಿಕಲ್ ಹಾರ್ಟ್ ರೇಟ್ ಮೊನಿಟರ್ ಕೂಡ ಹೊಂದಿದೆ. ಈ ವಾಚ್ ಎಕ್ಸೆಲೆರೊಮೀಟರ್, ಎಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಗೈರೊಸ್ಕೊಪ್ ಸೆನ್ಸರ್ ಕೂಡ ಸಪೊರ್ಟ್ ಮಾಡುತ್ತದೆ.

6. 11.6 ದಿನಗಳ ಬ್ಯಾಟರಿ ಬ್ಯಾಕಪ್
ಅಮಾಜ್‍ಫಿಟ್ 200ಎಮ್‍ಎಎಚ್ ಬ್ಯಾಟರಿ ಹೊಂದಿದ್ದು 35 ತಾಸುಗಳ ತನಕ ಜಿಪಿಎಸ್ ಉಪಯೋಗಿಸಬಹುದು, 5 ದಿನ ಸಾಮಾನ್ಯ ಬಳಕೆಗೆ ಮತ್ತು 11.6 ದಿನ ಕೇವಲ ಹೆಜ್ಜೆ ಮತ್ತು ಸಮಯವನ್ನು ಲೆಕ್ಕ ಹಾಕುವುದಾದರೆ.
ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








