ಜಿಯೋ ಕುರಿತ ಪ್ರಶ್ನೆಗಳಿಗೆ ಇಲ್ಲಿದೆ ಟಾಪ್ ಉತ್ತರ
ಜಿಯೋ ಸಿಮ್ ಭಾರತದಲ್ಲಿ ಪ್ರಸ್ತುತ ಹೆಚ್ಚಿನ ಸದ್ದನ್ನು ಉಂಟುಮಾಡುತ್ತಿದೆ. ತನ್ನ ಅತ್ಯದ್ಭುತ ಆಫರ್‌ಗಳ ಮೂಲಕ ಜಿಯೋ ಸಿಮ್ ಹೆಚ್ಚಿನ ಬಳಕೆದಾರರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಸೇವೆಯು ಬರಿಯ 4ಜಿ ಫೋನ್‌ಗಳಿಗೆ ಮಾತ್ರ ಲಭ್ಯವಿದ್ದು 3ಜಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿಲ್ಲ. ವಾಯ್ಸ್ ಕಾಲ್ಸ್ ಕೂಡ ಕೇವಲ ವೋಲ್ಟ್ ಫೋನ್‌ಗಳಿಗೆ ಮಾತ್ರ ದೊರೆಯಲಿದೆ.
ಓದಿರಿ: ಆನ್‌ಲೈನ್‌ನಲ್ಲಿ ಜಿಯೋ ಸಿಮ್ ಲಭ್ಯ! ಇದು ಮೋಸ ಕೂಡ ಆಗಿರಬಹುದು
ಹೆಚ್ಚಿನ ಬಳಕೆದಾರರು ತಮ್ಮ ಸಂದೇಹಗಳನ್ನು ಕೋರಾದಲ್ಲಿ ಪ್ರಕಟಿಸುತ್ತಿದ್ದು ಅದನ್ನು ನಾವಿಲ್ಲಿ ಪ್ರಕಟಿಸುತ್ತಿದ್ದೇವೆ ಅಂತೆಯೇ ಜಿಯೋ ಕುರಿತಾದ ನಿಮ್ಮ ಕೆಲವೊಂದು ಸಂದೇಹಗಳಿಗೂ ಇಲ್ಲಿ ಉತ್ತರ ದೊರೆಯುವ ಸಾಧ್ಯತೆ ಇದೆ.
ಓದಿರಿ: ಏರ್‌ಟೆಲ್‌ನ 'ಹೊಸ ಆಫರ್' ಬರೇ 148 ಕ್ಕೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ಸ್

ಫೋನ್‌ಗಳು
ಹೆಚ್ಚಿನ ಬಳಕೆದಾರರು ಜಿಯೋ ಸಿಮ್ ಅನ್ನು ಯಾವ ಫೋನ್‌ಗಳಲ್ಲಿ ಬಳಸಬಹುದು ಎಂಬುದಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ನೀವು 4ಜಿ ಸಿಮ್ ಅನ್ನು 3ಜಿ ಫೋನ್‌ನಲ್ಲಿ ಬಳಸಲಾಗುವುದಿಲ್ಲ. ಅದಾಗ್ಯೂ ಕೆಲವೊಂದು ಟ್ರಿಕ್ ಬಳಸಿ ಸಿಮ್ ಅನ್ನು 3ಜಿ ಡಿವೈಸ್‌ನಲ್ಲಿ ಬಳಸಿಕೊಳ್ಳಬಹುದಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಯ್ಸ್ ಕಾಲ್ ಎಸ್‌ಎಮ್ಎಸ್‌ಗಾಗಿ ಜಿಯೋವನ್ನು 2ಜಿಯಲ್ಲಿ ಬಳಸಬಹುದೇ?
ಹೌದು ಈ ಪ್ರಶ್ನೆಯಲ್ಲೇ ಉತ್ತರ ಕೂಡ ಅಡಗಿದೆ. ವೋಲ್ಟ್ ಫೋನ್‌ಗಳ ಮೂಲಕ ಮಾತ್ರ ನಿಮಗೆ ಕರೆಗಳನ್ನು ಮಾಡಬಹುದಾಗಿದೆ. ಆದರೆ ನೀವು ಎಸ್‌ಎಮ್‌ಎಸ್ ಕಳುಹಿಸುವುದು, ಪಡೆಯುವುದನ್ನು 2ಜಿ ಡಿವೈಸ್‌ಗಳಲ್ಲಿ ಜಿಯೋ ಸಿಮ್ ಬಳಸಿ ಮಾಡಬಹುದಾಗಿದೆ.

ಸ್ಯಾಮ್‌ಸಂಗ್ ಮೊಬೈಲ್‌ನೊಂದಿಗೆ ಸಿಮ್ ದೊರಕಿದೆ? ಇತರ ಫೋನ್‌ಗಳಲ್ಲಿ ಸಿಮ್ ಬಳಸಬಹುದೇ?
ಹೌದು, ನೀವು ಜಿಯೋ ಸಿಮ್ 4ಜಿ ಬೆಂಬಲಿಸುವ ಎಲ್ಲಾ ಡಿವೈಸ್‌ಗಳಲ್ಲಿ ಬಳಸಿಕೊಳ್ಳಬಹುದಾಗಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋ 4ಜಿ ಸಿಮ್ ಅನ್ನು ಯಾರೆಲ್ಲಾ ಪಡೆದುಕೊಳ್ಳಬಹುದಾಗಿದೆ?
ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಸಿಮ್ ಅನ್ನು ಪಡೆದುಕೊಳ್ಳಬಹುದಾಗಿದೆ. ಅದಾಗ್ಯೂ ಸಿಮ್ ಅನ್ನು ಪಡೆದುಕೊಳ್ಳಲು ನೀವು ಬಾರ್ ಕೋಡ್ ಹೊಂದಿರಬೇಕು ಇದು ಮಾತ್ರ ಕೊಂಚ ಕೊಂಚ ಕಿರಿಕಿರಿಯದ್ದಾಗಿದೆ.

ಐಫೋನ್ 6 ನಲ್ಲಿ ಸಿಮ್ ಬಳಸಬಹುದೇ?
ಹೌದು ಜಿಯೋ ಸಿಮ್ ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಡಾಂಗಲ್‌ನಲ್ಲಿ ಜಿಯೋ ಸಿಮ್ ಅನ್ನು ಬಳಸಬಹುದೇ?
ಹೌದು ಜಿಯೋ ಸಿಮ್ ಅನ್ನು ಯಾವುದೇ ಡಾಂಗಲ್‌ನಲ್ಲಿ ಕೂಡ ಬಳಸಬಹುದಾಗಿದೆ. ನೀವು ಸಿಮ್ ಅನ್ನು ಹೇಗೆ ಪಡೆದುಕೊಂಡಿದ್ದೀರಿ ಎಂಬ ನಿಯಮಗಳನ್ನು ಇದು ಆಧರಿಸಿದೆ.

ಏರ್‌ಟೆಲ್ ಮತ್ತು ವೊಡಾಫೋನ್‌ನೊಂದಿಗೆ ಎಲ್‌ವೈಎಫ್ ಸ್ಮಾರ್ಟ್‌ಫೋನ್ ಬಳಸಬಹುದೇ?
ಹೀಗೆ ಮಾಡಲು ನಿಮಗೆ ಸಾಧ್ಯವಿಲ್ಲ. ರಿಲಾಯನ್ಸ್ ಎಲ್‌ವೈಎಫ್ ಹ್ಯಾಂಡ್‌ಸೆಟ್‌ಗಳಲ್ಲಿ ಇತರ ನೆಟ್‌ವರ್ಕ್‌ಗಳನ್ನು ನಿಮಗೆ ಬಳಸಲು ಸಾಧ್ಯವಿಲ್ಲ. ಇದು ಕ್ಯಾರಿಯರ್ ಲಾಕ್ ಆಗಿದೆ ಮತ್ತು ಜಿಯೋ ಸಿಮ್ ಕಾರ್ಡ್ ಅನ್ನು ಮಾತ್ರವೇ ನಿಮಗೆ ಬಳಸಬಹುದಾಗಿದೆ. ಎಲ್‌ವೈಎಫ್ ಸ್ಮಾರ್ಟ್‌ಫೋನ್‌ನೊಂದಿಗೆ ನೀವು ಪಡೆದುಕೊಂಡಿರುವ ಜಿಯೋ ಸಿಮ್ ಅನ್ನು ಇತರ ಡಿವೈಸ್‌ಗಳಲ್ಲಿ ಕೂಡ ನಿಮಗೆ ಬಳಸಲಾಗುವುದಿಲ್ಲ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋ ಸಿಮ್ ಕಾರ್ಡ್ ಅನ್ನು ನಾನು ಹೇಗೆ ಪಡೆದುಕೊಳ್ಳಬಹುದು?
ಈ ಪ್ರಕ್ರಿಯೆ ಹೆಚ್ಚು ಸರಳವಾದುದು. ಬಾರ್ ಕೋಡ್ ಅನ್ನು ರಚಿಸಿಕೊಳ್ಳಿ ಮತ್ತು ಸಿಮ್ ಕಾರ್ಡ್ ಅನ್ನು ಪಡೆದುಕೊಳ್ಳಲು ಹತ್ತಿರದ ರಿಲಾಯನ್ಸ್ ಸ್ಟೋರ್‌ಗೆ ಹೋಗಿ.

ವೋಲ್ಟ್ ಅಲ್ಲದ ಫೋನ್‌ಗಳಲ್ಲಿ ಜಿಯೋ ಬಳಸಿ ಕರೆಮಾಡುವುದು ಹೇಗೆ?
ಅಧಿಕೃತ ಉತ್ತರವನ್ನು ಜಿಯೋ ಇದಕ್ಕೆ ಹೊಂದಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಉಚಿತವಾಗಿ 'ಜಿಯೋ4ಜಿವಾಯ್ಸ್' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಾನ್ ವೋಲ್ಟ್ ಫೋನ್‌ಗಳಲ್ಲಿ ಕೂಡ ಜಿಯೋ ಸಿಮ್ ಕಾರ್ಡ್ ಬಳಸಿ ನಿಮಗೆ ಕರೆಗಳನ್ನು ಮಾಡಬಹುದಾಗಿದೆ.

'ವೆಲ್‌ಕಮ್ ಆಫರ್' ನಂತರ ಏನಾಗಲಿದೆ?
ಇದು ಸಂಪೂರ್ಣವಾಗಿ ನಿಮಗೆ ಬಿಟ್ಟಂತಹ ವಿಚಾರವಾಗಿದೆ. ಪ್ರಿಪೈಡ್ ಮತ್ತು ಪೋಸ್ಟ್ ಪೇಡ್ ಎರಡಕ್ಕೂ ಜಿಯೋ ಟಾರಿಫ್ ಯೊಜನೆಗಳನ್ನು ಬಿಡುಗಡೆ ಮಾಡಿದೆ. ಮತ್ತು ಇದು ಸಾಕಷ್ಟು ಕಡಿಮೆ ದರದಲ್ಲಿ ಕೂಡ ಲಭ್ಯವಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








