ಆನ್‌ಲೈನ್‌ನಲ್ಲಿ ಜಿಯೋ ಸಿಮ್ ಲಭ್ಯ! ಇದು ಮೋಸ ಕೂಡ ಆಗಿರಬಹುದು

By Shwetha
|

ರಿಲಾಯನ್ಸ್ ಜಿಯೋ ಸದ್ಯ ಭಾರತದಲ್ಲಿ ಹೆಚ್ಚಿನ ಸುದ್ದಿಯನ್ನು ಮಾಡುತ್ತಿದ್ದು ಇತರ ಟೆಲಿಕಾಮ್ ಕಂಪೆನಿಗಳಿಗೆ ತನ್ನ ಆಕರ್ಷಕ ಯೋಜನೆಗಳ ಮೂಲಕ ಭರ್ಜರಿ ಪೈಪೋಟಿಯನ್ನು ನೀಡುತ್ತಿದೆ

ಓದಿರಿ: ಏರ್‌ಟೆಲ್‌ನ 'ಹೊಸ ಆಫರ್' ಬರೇ 148 ಕ್ಕೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ಸ್

ಜಿಯೋ ಸಿಮ್‌ಗೆ ಈಗ ಭರ್ಜರಿ ಬೇಡಿಕೆ ಇದ್ದು ಇದು ನೀಡುತ್ತಿರುವ ಉಚಿತ ಆಫರ್‌ಗಳನ್ನು ತಮ್ಮದಾಗಿಸಿಕೊಳ್ಳುವ ಕಾತರದಲ್ಲಿ ಬಳಕೆದಾರರಿದ್ದಾರೆ. ಆದರೆ ನಿಮಗೆ ಸಿಮ್ ದೊರಕಬೇಕು ಎಂದಾದಲ್ಲಿ ನೀವು ಉದ್ದದ ಸಾಲಿನಲ್ಲಿ ನಿಲ್ಲಲೇಬೇಕು. ಆದರೆ ಕ್ಯೂನಲ್ಲಿ ನಿಲ್ಲದೆ ಪರ್ಯಾಯ ವಿಧಾನದಲ್ಲಿ ನಿಮಗೆ ಸಿಮ್ ಅನ್ನು ಪಡೆದುಕೊಳ್ಳಬಹುದಾಗಿದೆ ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿದ್ದೇವೆ.

ಓದಿರಿ: ಬಿಎಸ್‌ಎನ್‌ಎಲ್ 'ಫ್ರೀಡಮ್ ಪ್ಲಾನ್' ರೂ 136 ಕ್ಕೆ ಉಚಿತ ಡೇಟಾ, ಕರೆ

ಜಿಯೋ ಸಿಮ್ ಹೋಮ್ ಡೆಲಿವರಿ

ಜಿಯೋ ಸಿಮ್ ಹೋಮ್ ಡೆಲಿವರಿ

ಮನೆಗೆ ಸಿಮ್ ಅನ್ನು ತಂದುಕೊಡುವ ವ್ಯವಸ್ಥೆ ಇದ್ದು ಇದರ ಮೂಲಕ ಕ್ಯೂನಲ್ಲಿ ನಿಲ್ಲುವುದನ್ನು ನಿಮಗೆ ತಪ್ಪಿಸಿಕೊಳ್ಳಬಹುದಾಗಿದೆ. ಈಗ ಆನ್‌ಲೈನ್‌ನಲ್ಲಿ ಕೂಡ ಜಿಯೋ ಸಿಮ್ ದೊರೆಯಲಿದೆ.

ರೂ 199 ಅನ್ನು ಪಾವತಿಸಿ

ರೂ 199 ಅನ್ನು ಪಾವತಿಸಿ

http://aonebiz.in/ ವೆಬ್‌ಸೈಟ್ ಆನ್‌ಲೈನ್‌ನಲ್ಲಿ ಉಚಿತವಾಗಿ ಸಿಮ್ ಅನ್ನು ಮಾರಾಟ ಮಾಡುತ್ತಿದ್ದು ಉತ್ಪನ್ನದ ಡೆಲಿವರಿಗಾಗಿ ಮಾತ್ರ ನೀವು ಪಾವತಿಸಿದರೆ ಸಾಕು. ಡೆಲಿವರಿ ಬೆಲೆ ರೂ 199 ಆಗಿದ್ದು ಇದು ನಿಮ್ಮ ಸಮಯವನ್ನು ಉಳಿತಾಯ ಮಾಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರಳ ವಿಧಾನ

ಸರಳ ವಿಧಾನ

ನಿಮ್ಮ ಹೆಸರು, ಫೋನ್ ಸಂಖ್ಯೆ, ಇಮೇಲ್ಐಡಿ ಮತ್ತು ಡೆಲಿವರಿ ವಿಳಾಸವುಳ್ಳ ದಾಖಲೆಗಳನ್ನು ಭರ್ತಿ ಮಾಡಿದರೆ ಸಾಕು. ನಿಮ್ಮ ಮನೆಬಾಗಿಲಿಗೆ ಸಿಮ್ ದೊರೆಯಲಿದೆ.

ಅಗತ್ಯ ಮಾಹಿತಿಗಳನ್ನು ಸಲ್ಲಿಸಿ

ಅಗತ್ಯ ಮಾಹಿತಿಗಳನ್ನು ಸಲ್ಲಿಸಿ

ಜಿಯೋ ಸಿಮ್‌ನ ಡೆಲಿವರಿ ಸಮಯದಲ್ಲಿ ನಿಮ್ಮ ದಾಖಲೆಗಳನ್ನು ನೀವು ಸಲ್ಲಿಸಬೇಕು. ವಿಳಾಸ ಮಾಹಿತಿ ಹಾಗೂ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ನೀಡಬೇಕು. ವೆಬ್‌ಸೈಟ್ ಪ್ರಕಾರ, 7 ರಿಂದ 10 ದಿನಗಳ ವ್ಯವಹಾರ ದಿನಗಳೊಳಗಾಗಿ ಸಿಮ್ ದೊರೆಯುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋ ಡಾಂಗಲ್ ಕೂಡ ಲಭ್ಯ

ಜಿಯೋ ಡಾಂಗಲ್ ಕೂಡ ಲಭ್ಯ

ರೂ 1,999 ಕ್ಕೆ ಹೋಮ್ ಡೆಲಿವರಿಯಲ್ಲಿ ನಿಮಗೆ ಜಿಯೋ ಡಾಂಗಲ್ ಕೂಡ ಲಭಿಸಲಿದೆ. ಜಿಯೋ ವೈಫೈ ಡಾಂಗಲ್ ಬೆಲೆ ರೂ 2,199 ಆಗಿದ್ದು ಜಿಯೋ ಸಿಮ್‌ನೊಂದಿಗೆ ಇದು ನಿಮಗೆ ಲಭ್ಯ.

ಸಮಸ್ಯೆ

ಸಮಸ್ಯೆ

ಅದಾಗ್ಯೂ ಇಲ್ಲೊಂದು ಸಮಸ್ಯೆಯಿದೆ. ಪೇಯುಮನಿ ಮೂಲಕ ನೀವು ಮುಂಗಡ ಪಾವತಿಯನ್ನು ಮಾಡಬೇಕಾಗುತ್ತದೆ. ಆದರೆ ಈ ವೆಬ್‌ಸೈಟ್ ಮೋಸದ್ದೂ ಆಗಿರಬಹುದು ಎಂಬುದನ್ನು ನಾವು ಅಲ್ಲಗೆಳೆಯುವಂತೆಯೂ ಇಲ್ಲ. ಸರ್ವೀಸ್ ಪ್ರೊವೈಡರ್ ಈ ಕುರಿತು ಖುದ್ದಾಗಿ ಮಾಹಿತಿಯನ್ನು ಪ್ರಕಟಿಸದ ಹೊರತು ಆನ್‌ಲೈನ್‌ನಿಂದ ಸಿಮ್ ಖರೀದಿ ಮಾಡುವಾಗ ನೀವು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
There is an alternative to get the Reliance Jio 4G SIM. Check out the details from below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X