ಉಚಿತ ವೈಫೈ ಬಳಸುವಾಗ ಇರಲಿ ಈ ಮುನ್ನೆಚ್ಚರಿಕೆ
ಸಾರ್ವಜನಿಕ ವೈಫೈ ಬಳಸುವಾಗ ಬಳಕೆದಾರರು ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.
ಇಂದಿನ ದಿನಗಳಲ್ಲಿ ಉಚಿತ ವೈಫೈ ಎಂಬುದು ಇಂಟರ್ನೆಟ್ ಬಳಸುವವರಿಗೆ ಒಂದು ಅತ್ಯದ್ಭುತ ಕೊಡುಗೆ ಎಂದೆನಿಸಿದೆ. ಭಾರತದಂತಹ ದೇಶದಲ್ಲಿ ಉಚಿತ ವೈಫೈ ಎಂಬುದು ಅತಿದೊಡ್ಡ ಕೊಡುಗೆ ಎಂದೇ ಆಗಿದ್ದು ಹೆಚ್ಚಿನ ದರವಿರುವ ಇಂಟರ್ನೆಟ್ ಅನ್ನು ಬಳಸಲು ಸಾಧ್ಯಾಗದೇ ಇರುವವರಿಗೆ ಇದೊಂದು ಉತ್ತಮ ವರದಾನ ಎಂದೆನಿಸಿದೆ.
ಓದಿರಿ: ಐಡಿಯಾ ಆಫರ್: ರೂ 51 ಕ್ಕೆ 1ಜಿಬಿ ಡೇಟಾ, 1 ವರ್ಷಕ್ಕೆ
ಆದರೆ ಇಲ್ಲೂ ತೊಂದರೆಗಳು ಕಟ್ಟಿಟ್ಟ ಬುತ್ತಿ ಎಂದೆನಿಸಿದ್ದು ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಇಂತಹ ವ್ಯವಸ್ಥೆಗಳನ್ನು ಬಳಸಬಹುದಾಗಿದೆ.
ಓದಿರಿ: ಎಚ್ಚರ: ಜಿಯೋದಲ್ಲಿ ಕಂಡುಬರುತ್ತಿದೆ ಹೊಸ ಹೊಸ ಸಮಸ್ಯೆಗಳು

HTTPS ಎನ್‌ಕ್ರಿಪ್ಟ್ ಆಗಿರುವ ಸೈಟ್‌ಗಳಿಗೆ ಆದ್ಯತೆ ನೀಡಿ
ಮೂಲ ಸಲಹೆ ಎಂಬಂತೆ, ನೀವು ಸಾರ್ವಜನಿಕ ವೈಫೈನಲ್ಲಿ ಸರ್ಫ್ ಮಾಡುತ್ತಿದ್ದೀರಿ ಎಂದಾದಲ್ಲಿ, HTTPS ಎನ್‌ಕ್ರಿಪ್ಟೆಡ್ ಸೈಟ್‌ಗಳಿಗೆ ಆದ್ಯತೆ ನೀಡಿ. ಇದರಿಂದ ನೀವು ಮೋಸದ ಜಾಲಕ್ಕೆ ಬೀಳುವುದನ್ನು ತಪ್ಪಿಸಬಹುದಾಗಿದೆ.

ವೈಫೈ ಹಾಟ್‌ಸ್ಪಾಟ್‌ಗಳಿಗೆ ಸಂಪರ್ಕ ಪಡೆದುಕೊಳ್ಳುವಾಗ ಎಚ್ಚರ
ಅಜ್ಞಾತ ವೈಫೈ ಹಾಟ್‌ಸ್ಪಾಟ್‌ಗಳಿಗೆ ಸಂಪರ್ಕವನ್ನು ಪಡೆದುಕೊಳ್ಳುವಾಗ ಆದಷ್ಟು ನೀವು ಹೆಚ್ಚು ಜಾಗರೂಕರಾಗಿರಬೇಕು.

ವಿಪಿಎನ್ ಆಯ್ಕೆಮಾಡಿ
ವಿಪಿಎನ್ ಅಥವಾ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಸುಭದ್ರ ಭದ್ರತೆಯನ್ನು ನಿಮಗೆ ಒದಗಿಸುತ್ತದೆ ಇದರಿಂದ ಸಾರ್ವಜನಿಕ ವೈಫೈ ಕನೆಕ್ಶನ್ ಅನ್ನು ಹ್ಯಾಕರ್‌ಗಳಿಂದ ಸಂರಕ್ಷಿಸಿಕೊಳ್ಳಬಹುದಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಳಕೆಯಲ್ಲಿಲ್ಲದಾಗ ವೈಫೈ ಆಫ್ ಮಾಡಿ
ನಿಮ್ಮ ಫೋನ್‌ನಲ್ಲಿ ವೈಫೈ ಆಕ್ಟಿವೇಟ್ ಆಗಿರುವುದು ಒಮ್ಮೊಮ್ಮೆ ತೊಂದರೆಗೆ ನಿಮ್ಮನ್ನು ಒಳಪಡಿಸಬಹುದು. ನಿಮ್ಮ ಫೋನ್ ಅನ್ನು ಹ್ಯಾಕರ್ ಸುಲಭವಾಗಿ ಪ್ರವೇಶಿಸಬಹುದಾಗಿದೆ.

ನಿಮ್ಮೆಲ್ಲಾ ಖಾತೆಗಳಿಗೆ ಬೇರೆ ಬೇರೆ ಪಾಸ್‌ವರ್ಡ್ ಇರಿಸಿಕೊಳ್ಳಿ
ಪ್ರತೀ ಖಾತೆಗೂ ಒಂದೇ ಪಾಸ್‌ವರ್ಡ್ ಅನ್ನು ಇರಿಸಿಕೊಳ್ಳುವುದು ಹೆಚ್ಚು ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಹೆಚ್ಚು ಕ್ಲಿಷ್ಟ ಮತ್ತು ಬಲವಾಗಿರುವ ಬೇರೆ ಬೇರೆ ಪಾಸ್‌ವರ್ಡ್‌ಗಳನ್ನು ನಿಮ್ಮ ಖಾತೆಗೆ ಇರಿಸಿಕೊಳ್ಳಿ.


Click it and Unblock the Notifications








