ಐಡಿಯಾ ಆಫರ್: ರೂ 51 ಕ್ಕೆ 1ಜಿಬಿ ಡೇಟಾ, 1 ವರ್ಷಕ್ಕೆ

By Shwetha
|

ಜಿಯೋದ ಅನ್‌ಲಿಮಿಟೆಡ್ ಪ್ಲಾನ್‌ಗೆ ಸರಿಯಾಗಿ ಬಿಸಿ ಮುಟ್ಟಿಸಬೇಕೆಂದು ಇತರ ಟೆಲಿಕಾಮ್ ಸಂಸ್ಥೆಗಳು ಪ್ರಸ್ತುತಪಡಿಸುತ್ತಿರುವ ಪ್ಲಾನ್‌ಗಳನ್ನು ನೀವು ಅರಿತುಕೊಂಡಿದ್ದೀರಿ? ಇನ್ನಷ್ಟು ಆಕರ್ಷಕ ಮತ್ತು ಜಿಯೋವನ್ನು ಹಿಂದಿಕ್ಕುವಂತಹ ಯೋಜನೆಗಳನ್ನೇ ಇತರ ಟೆಲಿಕಾಮ್ ಸಂಸ್ಥೆಗಳು ಈಗ ಹೊರಬಿಡುತ್ತಿದ್ದು ನಿಜಕ್ಕೂ ಬಳಕೆದಾರರು ಹೊಸ ಆಫರ್‌ಗಳ ಪ್ರಯೋಜನವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ.

ಓದಿರಿ: ಎಚ್ಚರ: ಜಿಯೋದಲ್ಲಿ ಕಂಡುಬರುತ್ತಿದೆ ಹೊಸ ಹೊಸ ಸಮಸ್ಯೆಗಳು

ಇತರ ಟೆಲಿಕಾಮ್ ಸಂಸ್ಥೆಗಳಂತೆ ಐಡಿಯಾ ಕೂಡ ಹಲವಾರು ವಿಶೇಷ ಎಂಟ್ರಿ ಲೆವೆಲ್ ಟಾರಿಫ್ ಪ್ಲಾನ್‌ಗಳೊಂದಿಗೆ ಬಂದಿದ್ದು ತನ್ನ ಹೋಸ ಯೋಜನೆಯೊಂದನ್ನು ಈಗ ತಾನೇ ಪ್ರಸ್ತುತಪಡಿಸಿದೆ. ರೂ 51 ಕ್ಕೆ 1ಜಿಬಿ ಡೇಟಾವನ್ನು ಒಂದು ವರ್ಷಗಳ ಕಾಲ ಕಂಪೆನಿ ನೀಡಲಿದೆ. ಹಾಗಿದ್ದರೆ ಈ ಪ್ಲಾನ್ ಅನ್ನು ನಿಮ್ಮದಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ಈ ಕೆಳಗಿನ ಅಂಶಗಳ ಮೂಲಕ ಅರಿತುಕೊಳ್ಳೋಣ.

ಓದಿರಿ: ನಿಮ್ಮ ಏರ್‌ಟೆಲ್ ಇಂಟರ್ನೆಟ್ ಪ್ಲಾನ್‌ಗೆ ಹೆಚ್ಚುವರಿ 250 ಎಮ್‌ಬಿ ಪಡೆದುಕೊಳ್ಳುವುದು ಹೇಗೆ?

ಹಂತ: 1

ಹಂತ: 1

ರೂ 1,499 ಕ್ಕೆ ಐಡಿಯಾ ಸಂಖ್ಯೆಯನ್ನು ರಿಚಾರ್ಜ್ ಮಾಡಿಕೊಳ್ಳಿ
ಈ ಆಫರ್ ಅನ್ನು ಪಡೆದುಕೊಳ್ಳಲು, ಐಡಿಯಾ ಬಳಕೆದಾರರು ರೂ 1,499 ಕ್ಕೆ ತಮ್ಮ ಸಂಖ್ಯೆಗಳನ್ನು ರಿಚಾರ್ಜ್ ಮಾಡಿಕೊಳ್ಳಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 2

ಹಂತ: 2

6 ಜಿಬಿ ಡೇಟಾ ತ್ವರಿತವಾಗಿ ನಿಮ್ಮ ಖಾತೆಗೆ ಸೇರುತ್ತದೆ
ನಿಮ್ಮ ಐಡಿಯಾ ಸಂಖ್ಯೆಯನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ರಿಚಾರ್ಜ್ ಮಾಡಿಕೊಂಡೊಡನೆ, ನಿಮ್ಮ ಸಂಖ್ಯೆಗೆ 6ಜಿಬಿ 4ಜಿ ಡೇಟಾ ಕ್ರೆಡಿಟ್ ಆಗುತ್ತದೆ. ಇದು 1 ವರ್ಷಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ. ವೊಡಾಫೋನ್ ಇದೇ ಆಫರ್ ಅನ್ನು 28 ದಿನಗಳಿಗೆ ಮಾತ್ರ ನೀಡುತ್ತಿದೆ.

ಹಂತ: 3

ಹಂತ: 3

ರೂ 51/ತಿಂಗಳಿಗೆ 1ಜಿಬಿ ಡೇಟಾ ದೊರೆಯಲಿದೆ
ಈ ರಿಚಾರ್ಜ್ ಅನ್ನು ಮಾಡಿಕೊಂಡ ನಂತರ, ಐಡಿಯಾ ಬಳಕೆದಾರರು ತಮ್ಮ ಸಂಖ್ಯೆಗೆ ರೂ 51 ರ ರಿಚಾರ್ಜ್ ಅನ್ನು ಮಾಡಿಕೊಳ್ಳಬಹುದಾಗಿದೆ. 1ಜಿಬಿ ಡೇಟಾವನ್ನು 1 ತಿಂಗಳುಗಳ ಕಾಲ ಪಡೆದುಕೊಳ್ಳಬಹುದಾಗಿದೆ.

ರಾಜ್ಯದಿಂದ ರಾಜ್ಯಕ್ಕೆ ಆಫರ್ ಬೆಲೆ ಭಿನ್ನವಾಗಿರುತ್ತದೆ

ರಾಜ್ಯದಿಂದ ರಾಜ್ಯಕ್ಕೆ ಆಫರ್ ಬೆಲೆ ಭಿನ್ನವಾಗಿರುತ್ತದೆ

ತಮಿಳು ನಾಡು, ಚೆನ್ನೈ, ಪಂಜಾಬ್, ಒಡಿಶ್ಶಾ, ಮಹಾರಾಷ್ಟ್ರ ಮತ್ತು ಗೋವಾ, ಕೇರಳ ಮತ್ತು ಹರ್ಯಾಣಾದಲ್ಲಿರುವ ಐಡಿಯಾ ಬಳಕೆದಾರರು ಅನ್‌ಫ್ರಂಟ್ ಕೋಸ್ಟ್ ಅನ್ನು ರಿಚಾರ್ಜ್ ಮಾಡಿಕೊಂಡು ನಂತರ ರೂ 51 ರ ಡೇಟಾ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ.

ಆಫರ್ ಅನ್ನು ಪಡೆದುಕೊಳ್ಳುವ ಮೊದಲು ಮುಖ್ಯ ಅಂಶಗಳು

ಆಫರ್ ಅನ್ನು ಪಡೆದುಕೊಳ್ಳುವ ಮೊದಲು ಮುಖ್ಯ ಅಂಶಗಳು

ಪ್ರಿಪೈಡ್ ಬಳಕೆದಾರರಿಗೆ ಮಾತ್ರ ಆಫರ್ ಲಭ್ಯವಾಗಿರುತ್ತದೆ
ಕಾರ್ಯನಿರ್ವಹಿಸುತ್ತಿರುವ ಐಡಿಯಾ ಸಂಖ್ಯೆಗೆ ಮಾತ್ರ ಪ್ಲಾನ್ ಕಾರ್ಯನಿರ್ವಹಿಸುತ್ತದೆ
ಅನ್‌ಫ್ರಂಟ್ ದರ ರೂ 1,499 ಅನ್ನು ಪಾವತಿ ಮಾಡದ ಹೊರತು ಪ್ಯಾಕ್ ಕಾರ್ಯನಿರ್ವಹಿಸುವುದಿಲ್ಲ
ಐಡಿಯಾ ಸೆಲ್ಯುಲಾರ್ ವೆಬ್‌ಸೈಟ್‌ಗೆ ಹೋಗಿ ಪರಿಶೀಲಿಸಿ ಮತ್ತು ದೃಢೀಕರಿಸಬೇಕು

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Check out how you can get the plan activated on your Idea number after getting to know more about the offer from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X