ಮುರಿದ ಐಫೋನ್ ಹೋಮ್ ಬಟನ್ ಸರಿಮಾಡಲು 6 ಡಿಐವೈ ತಂತ್ರಗಳು

By Prateeksha
|

ನಿಮ್ಮ ಫೋನ್‍ಗೆ ಕೇವಲ ಒಂದು ಮೇನ್ ಬಟನ್ ಇದ್ದರೆ ಎಲ್ಲಾ ಕೆಲಸ ಮಾಡುತ್ತದೆ ಆದರೆ ಕೆಲಸ ಮಾಡದಿದ್ದಾಗ ತಾಳ್ಮೆಗೆಡಿಸುತ್ತದೆ. ನಿಮ್ಮ ಬಳಿ ಐಫೋನ್ 4 ಅಥವಾ 4ಎಸ್ ಇದ್ದರೆ ಅದು ಹೇಗೆಂದು ನಿಮಗೆ ಸರಿ ಗೊತ್ತಾಗುತ್ತದೆ.

ಮುರಿದ ಐಫೋನ್ ಹೋಮ್ ಬಟನ್ ಸರಿಮಾಡಲು  6 ಡಿಐವೈ ತಂತ್ರಗಳು

ಓದಿರಿ: ಯೂಟ್ಯೂಬ್‌ನಲ್ಲಿ ಎಲ್ಲಾ ವೀಡಿಯೊಗಳನ್ನು ಅಪ್‌ಲೋಡ್‌ ಮಾಡಲು ಅವಕಾಶವಿಲ್ಲ!

ಕೆಲವೊಮ್ಮೆ ಹೋಮ್ ಬಟನ್ ಸರಿಯಾಗಿ ಪ್ರತಿಕ್ರಿಸುವುದಿಲ್ಲಾ ಮತ್ತು ನಿಂತು ಹೋಗುತ್ತದೆ. ಬಹಳಷ್ಟು ಜನ ಇದಕ್ಕೆ ಧೂಳು, ತೇವ ಅಥವಾ ಮಿಸ್‍ಅಲೈನ್‍ಮೆಂಟ್ ಕಾರಣವೆಂದು ದೂರುತ್ತಾರೆ. ಅದೇನೆ ಕಾರಣವಿರಲಿ ಮುರಿದ ಹೋಮ್ ಬಟನ್ ನಿಮ್ಮ ಅನುಭವವನ್ನು ಹಾಳುಮಾಡುತ್ತದೆ.

ಓದಿರಿ: ಫೇಸ್‌ ಟೈಮ್‌, ಸ್ಕೈಪಿಗೆ ಸ್ಪರ್ಧಿಯಾಗಿ 'ಗೂಗಲ್‌ ಡ್ಯುಯೊ' ವೀಡಿಯೊ ಕರೆ ಆಪ್‌!

ಈ ಸಮಸ್ಯೆಯಿಂದ ಕಾಪಾಡಲು ಕೆಲವನ್ನು ಪ್ರಯತ್ನಿಸಬಹುದು. ನಿಮ್ಮ ಐಫೋನ್ ವಾರಂಟಿ ಮುಗಿದು ಹೋದರೆ ಈ ತಂತ್ರಗಳು ನಿಮಗೆ ಸಹಾಯ ಮಾಡಬಹುದು.

ಹೆಚ್ಚಿನ ವಿಷಯಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ನಿಮ್ಮ ಐಫೋನ್ ಹೊಂದಿಸಿ

ನಿಮ್ಮ ಐಫೋನ್ ಹೊಂದಿಸಿ

ನೀವು ಮೊದಲು ಪ್ರಯತ್ನಿಸಬೇಕಾಗಿರುವುದು ಐಫೋನ್ ನನ್ನು ಹೊಂದಿಸುವುದು. ಇದು ಸುಲಭವಾಗಿ ವೇಗವಾಗಿ ಸರಿ ಮಾಡಬಹುದಾದ ವಿಧಾನ. ಯಾವುದಾದರು ನೇಟಿವ್ ಈಫೋನ್ ಆಪ್ಸ್ ತೆರೆಯಿರಿ ಉದಾ: ವೆದರ್ ಅಥವಾ ಕ್ಲೊಕ್‍ಮತ್ತು ಸ್ಲೀಪ್ ಬಟನ್ ಒತ್ತಿ ಹಿಡಿಯಿರಿ ಸ್ಲೈಡ್ ಟು ಪವರ್ ಆಫ್ ಸ್ವೈಪ್ ಬಾರ್ ಬರುವತನಕ ನಂತರ ಬಟನ್ ನ್ನು ಬಿಡಿ. ಈಗ, ಹೋಮ್ ಬಟನ್ ಒತ್ತಿ ಹಿಡಿಯಿರಿ ಫೋನ್ ಹೋಮ್ ಸ್ಕ್ರೀನ್ ಗೆ ಬರುವ ತನಕ.

ರಿಅಲೈನ್ ಮಾಡಿ ನಿಮ್ಮ ಐಫೋನ್ ನ ಕನೆಕ್ಟರ್

ರಿಅಲೈನ್ ಮಾಡಿ ನಿಮ್ಮ ಐಫೋನ್ ನ ಕನೆಕ್ಟರ್

ನೀವು ಎಷ್ಟು ಸಮಯದಿಂದ ಐಫೋನ್ ಹೊಂದಿದ್ದೀರಿ ? ಬಹುಶಃ ಕೊಂಡ ಮೊದಲ ದಿನದಿಂದಲೂ ಕೂಡ ನೀವು ಪ್ರತಿ ದಿನ ಚಾರ್ಜ್ ಮಾಡುತ್ತಾ ಬಂದಿರಬಹುದು. ಹಾಗಿರುವಾಗ ಯಾವಾಗಾದರೊಮ್ಮೆ ತಪ್ಪಿ ಪ್ಲಗಿಂಗ್ ಮತ್ತು ಅನ್‍ಪ್ಲಗಿಂಗ್ ಮಾಡುವಾಗ ಕೆಲವು ಸಾಮಾನನ್ನು ಆಚೆ ಈಚೆ ಮಾಡಿರಬಹುದು. ಹೋಮ್ ಬಟನ್ ಸೀದಾ ಕನೆಕ್ಟರ್ ಪೊರ್ಟ್ ಮೇಲೆ ಇರುವುದರಿಂದ ಕನೆಕ್ಟರ್ ಸಾಧಾರಣವಾಗಿ ಹೋಮ್ ಬಟನ್ ನ ಮಿಸ್ ಅಲೈನ್ಮೆಂಟ್ ಗೆ ಕಾರಣವಾಗುತ್ತದೆ. ಅದಕ್ಕೇನಿಲ್ಲಾ ಕೇವಲ ಕನೆಕ್ಟರ್ ನನ್ನು ಐಫೋನ್ ನೊಳಗೆ ಹಾಕಿ ನಾಜೂಕಾಗಿ ಕೆಳಮುಖವಾಗಿ ಒತ್ತಿರಿ ಹೋಮ್ ಬಟನ್ ನನ್ನು ಬಲಯುತವಾಗಿ ಮೇಲ್ಮುಖವಾಗಿ ಮಾಡಲು.

ನಿಮ್ಮ ಐಫೋನ್ ನನ್ನು ರಿಸ್ಟೋರ್ ಮಾಡಿ

ನಿಮ್ಮ ಐಫೋನ್ ನನ್ನು ರಿಸ್ಟೋರ್ ಮಾಡಿ

ಹೋಮ್ ಬಟನ್ ಕೆಲಸ ಮಾಡುವುದನ್ನು ಸ್ಥಗಿತಗೊಳಿಸಿದಾಗ ಫೋನ್ ರಿಸ್ಟೋರ್ ಮಾಡುವುದು ಸಾಮಾನ್ಯವಾಗಿ ಉಪಯೋಗಿಸುವಂತಹ ತಂತ್ರ. ರಿಸ್ಟೊರ್ ಮಾಡುವ ಮುಂಚೆ ಐಟ್ಯೂನ್ಸ್ ನಲ್ಲಿ ನಿಮ್ಮೆಲ್ಲಾ ಡಾಟಾ ಕಾಯ್ದಿರಿಸಿ. ಆ ನಂತರ ನಿಮ್ಮ ಐಒಎಸ್ ಸೊಫ್ಟ್‍ವೇರ್ ರಿಸ್ಟೋರ್ ಮಾಡಲು ನಿಮ್ಮ ಐಫೋನ್ ನನ್ನು ಐಟ್ಯೂನ್ಸ್ ಗೆ ಕನೆಕ್ಟ್ ಮಾಡಿ ಮತ್ತು ಡಿವೈಸಸ್ ನ ಒಳಗೆ ಆಯ್ಕೆ ಮಾಡಿ. ಸಮ್ಮರಿ ಟಾಬ್ ಹುಡುಕಿರಿ ಮತ್ತು ರಿಸ್ಟೊರ್ ಒತ್ತಿರಿ.

ಹೋಮ್ ಬಟನ್ ಒರೆಸಿರಿ

ಹೋಮ್ ಬಟನ್ ಒರೆಸಿರಿ

ಬೇರೆಯದರ ಹಾಗೆ, ಐಫೋನ್ ಬಟನ್ ಕೂಡ ಧೂಳಿನಿಂದಾಗಿ ತನ್ನ ಕಾರ್ಯಕ್ಷಮತೆ ಕಳೆದುಕೊಳ್ಳುತ್ತದೆ. ನಿಮ್ಮ ಜೇಬಿನ ಬಟ್ಟೆಯ ಚೂರು ಹೋಮ್ ಬಟನ್ ನ ಸುತ್ತಲೂ ಇರುವ ಚಿಕ್ಕ ಜಾಗದಲ್ಲಿ ಕೂತಿರಬಹುದು. ಅದನ್ನು ಸರಿಯಾಗಿ ಸ್ವಚ್ಛ ಮಾಡಲು ಹತ್ತಿ ಮತ್ತು ಅಲ್ಕೊಹಾಲ್ ಅನ್ನು ಉಪಯೋಗಿಸಿ. ಕೆಲ ಹನಿ ಅಲ್ಕೊಹಾಲ್ ಅನ್ನು ನೇರವಾಗಿ ಹೋಮ್ ಬಟನ್ ಮೇಲೆ ಹಾಕಿ ಹತ್ತಿಯಿಂದ ಅದರ ಮೇಲೆ ಒತ್ತಿ ಹಿಡಿಯಿರಿ. ಸ್ವಲ್ಪ ನಿಮಿಷಗಳ ನಂತರ, ಪರೀಕ್ಷಿಸಿ ಸಮಸ್ಯೆ ಬಗೆಹರಿದಿದೆಯೆ ಎಂದು.

ಒನ್-ಸ್ಕ್ರೀನ್ ಹೋಮ್ ಬಟನ್

ಒನ್-ಸ್ಕ್ರೀನ್ ಹೋಮ್ ಬಟನ್

ಈ ಎಲ್ಲಾ ವಿಧಾನಗಳು ವಿಫಲವಾದಲ್ಲಿ ಮತ್ತು ಹೋಮ್ ಬಟನ್ ಕೆಲಸ ಮಾಡುತ್ತಿಲ್ಲ ವೆಂದಾದಲ್ಲಿ ನಿಮಗೆ ಯಾವಾಗಲು ಒನ್-ಸ್ಕ್ರೀನ್ ಹೋಮ್ ಬಟನ್ ಚಾಲ್ತಿ ಮಾಡುವ ಆಯ್ಕೆ ಇದೆ. ಹೀಗೆ ಹೋಗಿ ಸೆಟ್ಟಿಂಗ್ಸ್  ಜನರಲ್  ಆಕ್ಸೆಸೆಬಿಲಿಟಿ  ಅಸಿಸ್ಟಿವ್ ಟಚ್. ಅಸಿಸ್ಟಿವ್ ಟಚ್ ಚಾಲ್ತಿ ಮಾಡಿ ಮತ್ತು ಒಂದು ಸಣ್ಣ ವರ್ತುಲ ಸ್ಕ್ರೀನ್ ಮೇಲೆ ಬರುತ್ತದೆ. ಅಲ್ಲಿಂದ ನೀವು ವೊಲ್ಯುಮ್ ಕಂಟ್ರೊಲ್, ಸ್ಕ್ರೀನ್ ಲೊಕ್ ಮತ್ತು ಆಡ್ ಫೇವರೇಟ್ ಕೂಡ ಮಾಡಬಹುದು.

ಹೋಮ್ ಬಟನ್ ಬದಲಿಸಿ

ಹೋಮ್ ಬಟನ್ ಬದಲಿಸಿ

ಯಾರಿಗೆ ಸವಾಲು ಎದುರಿಸಲು ಇಷ್ಟವೊ ಅವರು ತಾವೇ ಸ್ವತಃ ಪ್ರಯತ್ನಿಸಿ ಐಫೋನ್ ನ ಹೋಮ್ ಬಟನ್ ಬದಲಿಸಬಹುದು. ಈ ವಿಧಾನ ತ್ರಾಸದಾಯಕ ಮತ್ತು ಕಷ್ಟಕರವಾಗಿದೆ ಹೀಗಾಗಿ ಇದನ್ನು ಕೊನೆ ಯತ್ನವಾಗಿ ಇಡುವುದು ಒಳ್ಳೆಯದು.

Best Mobiles in India

English summary
If your iPhone home button is not working fine, you can try out a slew of tricks that will help in getting the same back to work as usual. Some of these tips include recalibrating the device, realigning the home button, cleaning the dirt, etc. Take a look!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X