Subscribe to Gizbot

ಫೇಸ್‌ ಟೈಮ್‌, ಸ್ಕೈಪಿಗೆ ಸ್ಪರ್ಧಿಯಾಗಿ 'ಗೂಗಲ್‌ ಡ್ಯುಯೊ' ವೀಡಿಯೊ ಕರೆ ಆಪ್‌!

Written By:

ಟೆಕ್‌ ದೈತ್ಯ ಗೂಗಲ್‌ ತನ್ನದೇ ಆದ ವೀಡಿಯೊ ಕರೆ ಅಪ್ಲಿಕೇಶನ್‌ ಅನ್ನು ಲಾಂಚ್‌ ಮಾಡಿದೆ. ಈಗಾಗಲೇ ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗಾಗಿ ಇರುವ ಆಪಲ್‌ನ ಫೇಸ್‌ ಟೈಮ್‌ ಮತ್ತು ಸ್ಕೈಪಿ ವೀಡಿಯೊ ಕಾಲಿಂಗ್‌ ಆಪ್‌ಗಳಿಗೆ ಗೂಗಲ್‌ ಪ್ರತಿಸ್ಪರ್ಧಿಯಾಗಿ ತನ್ನ ಅತ್ಯಾಧುನಿಕ ವೀಡಿಯೊ ಕರೆ ಆಪ್‌ ಬಿಡುಗಡೆ ಮಾಡಿದೆ.

ಗೂಗಲ್‌ ಬಿಡುಗಡೆ ಮಾಡಿರುವ ವೀಡಿಯೊ ಕರೆ ಆಪ್‌ ಯಾವುದೇ ಮಂದಗತಿಯ ನೆಟ್‌ವರ್ಕ್‌ನಲ್ಲೂ ಸಹ ವೇಗವಾದ ಸಂಪರ್ಕ ಕಲ್ಪಿಸುತ್ತದೆ. ಅಂದಹಾಗೆ ಆಪ್‌ ಹೆಸರು ಏನು, ಡೌನ್‌ಲೋಡ್‌ ಮಾಡಿಕೊಳ್ಳುವುದು ಎಲ್ಲಿ, ವಿಶೇಷ ಫೀಚರ್‌ಗಳು ಯಾವುವು ಎಂಬ ವಿಶೇಷ ಮಾಹಿತಿಗಾಗಿ ಲೇಖನದ ಸ್ಲೈಡರ್‌ಗಳನ್ನು ಓದಿರಿ.

ಆಂಡ್ರಾಯ್ಡ್‌ ಫೋನ್‌ ಅನ್‌ಲಾಕ್‌ ಮಾಡಿ ಹಣಗಳಿಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಡ್ಯುಯೊ

ಗೂಗಲ್‌ ಡ್ಯುಯೊ

ಟೆಕ್‌ ದೈತ್ಯ ಗೂಗಲ್‌ ತನ್ನದೇ ಆದ ವೀಡಿಯೊ ಕರೆ ಅಪ್ಲಿಕೇಶನ್‌ ಅನ್ನು ಲಾಂಚ್‌ ಮಾಡಿದೆ. ಗೂಗಲ್‌ನ ಹೊಸ ವೀಡಿಯೊ ಕರೆ ಆಪ್‌ ಹೆಸರು ' ಗೂಗಲ್‌ ಡ್ಯುಯೊ'.
ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಗೂಗಲ್‌ ಡ್ಯುಯೊ

ಗೂಗಲ್‌ ಡ್ಯುಯೊ

'ಗೂಗಲ್‌ ಡ್ಯುಯೊ' ವೀಡಿಯೊ ಕರೆ ಆಪ್‌ ಆಂಡ್ರಾಯ್ಡ್ ಮತ್ತು ಐಓಎಸ್‌ ಎರಡು ವೇದಿಕೆಗಳಿಗೂ ಲಭ್ಯವಿದೆ. ಈಗಾಗಲೇ ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗಾಗಿ ಇರುವ ಫೇಸ್‌ ಟೈಮ್‌ ಮತ್ತು ಸ್ಕೈಪಿ ವೀಡಿಯೊ ಕಾಲಿಂಗ್‌ ಆಪ್‌ಗಳಿಗೆ 'ಗೂಗಲ್‌ ಡ್ಯುಯೊ' ಪ್ರತಿಸ್ಪರ್ಧಿಯಾಗಲಿದೆ.

ವೀಡಿಯೊ ಕರೆ ಆಪ್

ವೀಡಿಯೊ ಕರೆ ಆಪ್

ವೀಡಿಯೊ ಕರೆ ಆಪ್‌ ಅನ್ನು ಬಿಡುಗಡೆ ಮಾಡುವ ಬಗ್ಗೆ ಗೂಗಲ್‌ 3 ತಿಂಗಳ ಹಿಂದೆಯೇ I/O ಡೆವಲಪರ್‌ ಕಾನ್ಫರೆನ್ಸ್‌ನಲ್ಲಿ ಮಾಹಿತಿ ನೀಡಿತ್ತು.

ವೀಡಿಯೊ ಕರೆ

ವೀಡಿಯೊ ಕರೆ

"ವೀಡಿಯೊ ಕರೆಯಲ್ಲಿ ಉತ್ತಮ ಫೀಚರ್‌ಗಳನ್ನು ಸರಳವಾಗಿ ನೀಡಿದ್ದು, ಭಾರತದಲ್ಲಿ ನೆಟ್‌ವರ್ಕ್‌ ಪರಿಸ್ಥಿತಿಗೆ ತಕ್ಕಂತೆ ಹೊಂದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ವೀಡಿಯೊ ಕರೆಯನ್ನು ಹೆಚ್ಚು ಸುಗಮವಾಗಿ ಮತ್ತು ವೈಯಕ್ತಿಕವಾಗಿ ಅನುಭವ ಪಡೆಯಬಹುದು" ಎಂದು ಗೂಗಲ್‌ ಗ್ರೂಪ್‌ ಪ್ರಾಡಕ್ಟ್‌ ಮ್ಯಾನೇಜರ್‌ 'ಅಮಿತ್‌ ಫುಲೆ' ಹೇಳಿದ್ದಾರೆ.

ಎಂಡ್‌ ಟು ಎಂಡ್‌ ಗೂಢಲಿಪೀಕರಣ

ಎಂಡ್‌ ಟು ಎಂಡ್‌ ಗೂಢಲಿಪೀಕರಣ

ಗೂಗಲ್‌ ಆಂಡ್ರಾಯ್ಡ್‌ ಮತ್ತು ಐಓಎಸ್‌ಗಳಿಗಾಗಿ ಬಿಡುಗಡೆ ಮಾಡಿರುವ 'ಗೂಗಲ್‌ ಡ್ಯುಯೊ' ಆಪ್‌ ಕೆಲವೇ ದಿನಗಳಲ್ಲಿ ಪ್ರಪಂಚದಾದ್ಯಂತ ಲೈವ್ ಆಗಲಿದೆ. ವೈಯಕ್ತಿಕ ಮತ್ತು ಭದ್ರತೆಗಾಗಿ ಡ್ಯುಯೊ ಕರೆಗಳು ಎಂಡ್‌ ಟು ಎಂಡ್‌ ಗೂಢಲಿಪೀಕರಣ ವೈಶಿಷ್ಟ ಹೊಂದಿದೆ.

ಗೂಗಲ್‌ ಡ್ಯುಯೊ ಫೀಚರ್

ಗೂಗಲ್‌ ಡ್ಯುಯೊ ಫೀಚರ್

ಗೂಗಲ್‌ ಡ್ಯುಯೊ ಬಳಸಲು ಯಾವುದೇ ಯೂಸರ್‌ ನೇಮ್‌ ಮತ್ತು ಖಾತೆ ತೆರೆಯುವ ಅಗತ್ಯವಿಲ್ಲ. ನೇರವಾಗಿ ಗೂಗಲ್‌ ಡ್ಯುಯೊ ಆಕ್ಸೆಸ್‌ಗೆ ಕೇವಲ ಮೊಬೈಲ್ ನಂಬರ್‌ ಅಗತ್ಯ.

 Knock Knock ಫೀಚರ್‌

Knock Knock ಫೀಚರ್‌

'ಗೂಗಲ್‌ ಡ್ಯುಯೊ'ದಲ್ಲಿ ವಿಶೇಷ ಫೀಚರ್ ಒಂದನ್ನು ಪರಿಚಯಿಸಿದ್ದು, ಈ ಫೀಚರ್‌ ಮೂಲಕ ಕರೆ ಮಾಡಿದವರ ಕರೆ ಸ್ವೀಕರಿಸುವ ಮುನ್ನ ಅವರ ಲೈವ್‌ ವೀಡಿಯೊವನ್ನು ನೋಡಬಹುದಾಗಿದೆ. ಇದು ಕರೆ ಸ್ವೀಕರಿಸುವ ಮುನ್ನ ಅವರನ್ನು ಸಂಪರ್ಕಿಸುವ ಉತ್ತಮ ಫೀಚರ್‌ ಆಗಿದೆ. ಅಲ್ಲದೇ ಡ್ಯುಯೊ ಕಡಿಮೆ ವೇಗದ ನೆಟ್‌ವರ್ಕ್‌ನಲ್ಲಿ ವೇಗವಾಗಿ ಸಂಪರ್ಕ ಕಲ್ಪಿಸುತ್ತದೆ.

rn

ವೈಫೈ ಮತ್ತು ಸೆಲ್ಯುಲಾರ್‌ ಡಾಟಾ

ಬ್ಯಾಂಡ್‌ವಿಡ್ತ್‌ ಕಡಿಮೆ ಇದ್ದಾಗ ರೆಸಲ್ಯೂಶನ್‌ ಕಡಿಮೆಗೊಳಿಸಿ ಕರೆಯನ್ನು ದೀರ್ಘಕಾಲ ಮಾಡಲು ಫೀಚರ್‌ ಹೊಂದಿದೆ. ಕರೆ ಕಟ್‌ ಮಾಡದೆ ವೈಪೈ ನೆಟ್‌ವರ್ಕ್‌ ಮತ್ತು ಸೆಲ್ಯುಲಾರ್‌ ಡಾಟಾಗಳಿಗೆ ಸ್ವಿಚ್‌ ಆನ್‌ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Tech giant Google has launched its video calling app, Google Duo, for Android and iOS users, which will compete with apps like FaceTime and Skype.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot