ವಾಟ್ಸಾಪ್‌ನಲ್ಲಿ ಸ್ಕ್ಯಾಮ್‌ ಮೆಸೇಜ್‌ ಪತ್ತೆ ಮಾಡಲು ಹೀಗೆ ಮಾಡಿ..! 5 ಸಲಹೆಗಳು

By Suneel
|

ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಾಪ್ ಈಗಾಗಲೇ ಹಲವು ಸ್ಕ್ಯಾಮ್ ಮೆಸೇಜ್‌ಗಳಿಂದ ಕೂಡಿದೆ. ವಂಚನೆ ಮೆಸೇಜ್‌ಗಳು ವಾಟ್ಸಾಪ್‌ನಲ್ಲಿ ಅನ್‌ಲಿಮಿಟೆಡ್ ಡೇಟಾ, ಉಚಿತ ರೀಚಾರ್ಜ್‌ ಮತ್ತು 500, 1000 ರೂ ನೋಟುಗಳ ಚಲಾವಣೆ ರದ್ದು ಕುರಿತು ಇರಬಹುದು. ಎಲ್ಲಾ ಸ್ನೇಹಿತರು ಸಹ ವಾಟ್ಸಾಪ್‌ ಅನ್ನು ತಪ್ಪದೇ ದಿನನಿತ್ಯ ಬಳಸುತ್ತಾರೆ. ಒಂದಲ್ಲಾ ಒಂದು ಸಮಯದಲ್ಲಿ ಇಂತಹ ಸ್ಕ್ಯಾಮ್‌ ಮೆಸೇಜ್‌ಗಳನ್ನು ಪಡೆಯುತ್ತಲೇ ಇರುತ್ತಾರೆ.

ಅಂದಹಾಗೆ ವಾಟ್ಸಾಪ್‌ ಬಳಕೆದಾರರು ಸ್ಕ್ಯಾಮ್‌ ಮೆಸೇಜ್‌ಗಳನ್ನು ಪಡೆಯುವುದು ಮತ್ತು ಹಲವು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ತಮ್ಮ ವೈಯಕ್ತಿಕ ಡೇಟಾವನ್ನು ಗೊತ್ತಿಲ್ಲದೇ ವಂಚಕರಿಗೆ ಶೇರ್‌ ಮಾಡುತ್ತಿರುವುದು ಅವರಿಗೆ ತಿಳಿದೇ ತಿಳಿಯದೇ ಆಗುತ್ತಿರುವ ಚಟುವಟಿಕೆ ಆಗಿದೆ. ಇತ್ತ ಫೇಕ್‌ ಮೆಸೇಜ್‌ಗಳನ್ನು ಪತ್ತೆ ಹಚ್ಚುವುದು ಹೇಗೆ ಎಂದು ಸಹ ತಿಳಿದಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಫೇಕ್ ಮೆಸೇಜ್‌ ಮತ್ತು ವಂಚಕರ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ವಾಟ್ಸಾಪ್‌ ಬಳಕೆದಾರರು ಹೇಗೆ ಪತ್ತೆಹಚ್ಚಬಹುದು ಎಂದು ತಿಳಿಸುತ್ತಿದ್ದೇವೆ. ಹೇಗೆ ಎಂದು ಈ ಕೇಳಗಿನ ಮಾಹಿತಿ ಓದಿ ತಿಳಿಯಿರಿ.

ಬಿಎಸ್‌ಎನ್‌ಎಲ್‌ನ 'ಉಚಿತ 4G ಡೇಟಾ, ವಾಯ್ಸ್ ಕರೆ' ಆಫರ್ ವಾಟ್ಸಾಪ್ ವಂಚನೆ: ಎಚ್ಚರ?

ಉಚಿತ ಮತ್ತು ಅನ್‌ಲಿಮಿಟೆಡ್ ಸಾಮಾನ್ಯವಾಗಿ ಫೇಕ್‌

ಉಚಿತ ಮತ್ತು ಅನ್‌ಲಿಮಿಟೆಡ್ ಸಾಮಾನ್ಯವಾಗಿ ಫೇಕ್‌

ಅಂದಹಾಗೆ ಸಾಮಾನ್ಯವಾಗಿ ಹೆಚ್ಚಿನ ಫೇಕ್‌ ಮೆಸೇಜ್‌ಗಳು ಉಚಿತ ಮತ್ತು ಅನ್‌ಲಿಮಿಟೆಡ್ ಎಂಬ ಸೇವೆ ಕುರಿತು ಇರುತ್ತವೆ. ಉದಾಹರಣೆಗೆ ಬಿಎಸ್‌ಎನ್‌ಎಲ್‌ ಮತ್ತು ಏರ್‌ಟೆಲ್‌ 4G ಅನ್‌ಲಿಮಿಟೆಡ್ ಡೇಟಾ, ಉಚಿತ ವಾಯ್ಸ್ ಕರೆ ಆಫರ್‌ಗಳನ್ನು ನೀಡುತ್ತಿವೆ ಎಂದು ಫೇಕ್‌ ಮೆಸೇಜ್‌ಗಳನ್ನು ಹರಿಯಬಿಡಲಾಗಿತ್ತು. ಇಂತಹ ಮೆಸೇಜ್‌ಗಳ ಮೇಲೆ ಕ್ಲಿಕ್ ಮಾಡದಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಪೆಲ್ಲಿಂಗ್ ದೋಷಗಳನ್ನು ಪರಿಶೀಲಿಸಿ

ಸ್ಪೆಲ್ಲಿಂಗ್ ದೋಷಗಳನ್ನು ಪರಿಶೀಲಿಸಿ

ಅಧಿಕೃತ ನ್ಯೂಸ್‌ ಮೆಸೇಜ್‌ಗಳು ಯಾವುದೇ ಅಕ್ಷರ ದೋಷ ಹೊಂದಿರುವುದಿಲ್ಲ. ಆದರೆ ವಾಟ್ಸಾಪ್‌ನಲ್ಲಿ ಹೆಚ್ಚು ಫಾರ್ವರ್ಡ್ ಮಾಡಲಾದ ಫೇಕ್‌ ಮೆಸೇಜ್‌ಗಳು ಹೆಚ್ಚು ಅಕ್ಷರ ದೋಷಗಳು, ಸ್ಪೆಲ್ಲಿಂಗ್‌ ತಪ್ಪುಗಳನ್ನು ಹೊಂದಿರುತ್ತವೆ. ಆದ್ದರಿಂದ ಎಚ್ಚರ ವಹಿಸಿ.

ಲಿಂಕ್‌ ಹೊಂದಿದೆಯೇ?

ಲಿಂಕ್‌ ಹೊಂದಿದೆಯೇ?

ಅಧಿಕೃತವಾಗಿ ಪ್ರಕಟಿಸಲಾದ ಮೆಸೇಜ್ ಸಾಮಾನ್ಯವಾಗಿ ಲಿಂಕ್‌ ಹೊಂದಿರುವುದಿಲ್ಲ. ಆದರೆ ಫೇಕ್‌ ಮೆಸೇಜ್‌ಗಳು ಲಿಂಕ್‌ ಅನ್ನು ಹೊಂದಿರುತ್ತವೆ. ಉದಾಹರಣೆ ಇತ್ತೀಚೆಗೆ ಬಿಎಸ್‌ಎನ್‌ಎಲ್‌ ಕುರಿತ ಅನ್‌ಲಿಮಿಟೆಡ್ ಡೇಟಾ ಮತ್ತು ವಾಯ್ಸ್ ಕರೆ ಕುರಿತ ಫೇಕ್‌ ಮೆಸೇಜ್‌ http://www.bsni.in/ ಲಿಂಕ್‌ ಅನ್ನು ಹೊಂದಿದ್ದು. ಈ ಯುಆರ್‌ಎಲ್‌ ಗಮನಿಸಿ.

ಇಂತಹ ತಪ್ಪು ಯುಆರ್‌ಎಲ್‌ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರಿ ಹಾಗೂ ಫಾರ್ವರ್ಡ್‌ ಸಹ ಮಾಡದಿರಿ.

ಅಧಿಕೃತ ಮಾಹಿತಿಗಳಿಂದ ಖಚಿತ ಪಡಿಸಿಕೊಳ್ಳಿ

ಅಧಿಕೃತ ಮಾಹಿತಿಗಳಿಂದ ಖಚಿತ ಪಡಿಸಿಕೊಳ್ಳಿ

ವಾಟ್ಸಾಪ್‌ನಲ್ಲಿ ಬಂದ ಅನ್‌ಲಿಮಿಟೆಡ್‌ ಮತ್ತು ಉಚಿತ ಸೇವೆಗಳ ಮೆಸೇಜ್‌ಗಳನ್ನು ನಂಬುವ ಮೊದಲು ಟೆಲಿಕಾಂ ಆಪರೇಟರ್‌ಗಳಿಂದ ಖಚಿತಪಡೆದುಕೊಳ್ಳಿ. ಅಲ್ಲದೇ ಮಾಹಿತಿ ಲಿಂಕ್ ಅಧಿಕೃತ ವೆಬ್‌ಸೈಟ್‌ಗಳದ್ದೇ ಎಂಬುದನ್ನು ತಿಳಿಯಿರಿ.

ಈ ರೀತಿಯ ಮೆಸೇಜ್‌ಗಳನ್ನು ತಪ್ಪಿಸಿ

ಈ ರೀತಿಯ ಮೆಸೇಜ್‌ಗಳನ್ನು ತಪ್ಪಿಸಿ

ವಾಟ್ಸಾಪ್ ಮೆಸೇಜ್‌ಗಳು ಉಚಿತ ರೀಚಾರ್ಜ್‌, ಅನ್‌ಲಿಮಿಟೆಡ್, ಹಣ ಬಹುಮಾನ ಬಂದಿರುವ ಬಗ್ಗೆ ಭರವಸೆ ನೀಡಿ, ಮೆಸೇಜ್‌ ಅನ್ನು 10 ಜನರಿಗೆ ಫಾರ್ವರ್ಡ್ ಮಾಡಿ ಎಂದು ಹೇಳುತ್ತವೆ. ಆದ್ದರಿಂದ ಮೆಸೇಜ್‌ಗಳನ್ನು ಓದುವ ಬದಲು ವಾಟ್ಸಾಪ್ ಶಟ್‌ಡೌನ್‌ ಮಾಡಿ, ಮೆಸೇಜ್‌ ಕಡೆಗಣಿಸಿ ಬಿಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Beware of Scammers! 5 Quick Tips to Spot a WhatsApp Scam Message. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X