ಫೇಸ್‌ಬುಕ್ ನ್ಯೂಸ್‌ ಫೀಡ್‌ ಕಸ್ಟಮೈಜ್‌ಗಾಗಿ ಈ 5 ಸ್ಟೆಪ್‌ಗಳನ್ನು ಫಾಲೋ ಮಾಡಿ

By Suneel
|

ಫೇಸ್‌ಬುಕ್ ಓಪನ್‌ ಮಾಡಿ ಹಾಗೆ ಸ್ಕ್ರಾಲ್‌ ಡೌನ್‌ ಮಾಡುತ್ತಾ ಹೋದಂತೆ ಅತ್ಯಧಿಕ ಸಂಖ್ಯೆಯ ಬೇಡದ , ಬೇಕಾದ ಎಲ್ಲಾ ಪೋಸ್ಟ್‌ಗಳು ಮಿಶ್ರವಾಗಿ ಕಾಣಿಸಿಕೊಳ್ಳುತ್ತವೆ. ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳಿಗೆ ಅಂತ್ಯವೇ ಇಲ್ಲ. ಆದ್ದರಿಂದ ನ್ಯೂಸ್‌ ಫೀಡ್‌ ಪಡೆಯುವಾಗ ಸ್ಟುಪಿಡ್ ಥಿಂಗ್‌ಗಳು, ಯಾರ್ಯಾರೋ ಪೋಸ್ಟ್‌ ಮಾಡಿದ ಅನಗತ್ಯ ಪೋಸ್ಟ್‌ಗಳು ಅಮೂಲ್ಯವಾದ ಸಮಯವನ್ನು ತಿಂದಿಬಿಡುತ್ತವೆ. ಕೆಲವೊಮ್ಮೆ ಈ ರೀತಿಯ ಕಾರಣಗಳಿಂದ ಫೇಸ್‌ಬುಕ್‌ಗೆ ಸಮಯ ಮೀಸಲಿಡುವುದು ಅನುಕೂಲಕ್ಕಿಂತ ಕಿರಿಕಿರಿಯೇ ಹೆಚ್ಚು.

ಫೇಸ್‌ಬುಕ್ ನ್ಯೂಸ್‌ ಫೀಡ್‌ ಕಸ್ಟಮೈಜ್‌ಗಾಗಿ ಈ 5 ಸ್ಟೆಪ್‌ಗಳನ್ನು ಫಾಲೋ ಮಾಡಿ

ಫೇಸ್‌ಬುಕ್‌ ಬಳಕೆದಾರರು, ಮೇಲೆ ಹೇಳಿದ ಕಾರಣಗಳಿಂದ ನೋಡುವುದಾದರೆ, ಕಿರಿಕಿರಿ ಬೇಡವಾದರೆ, ಪ್ರತಿ ನ್ಯೂಸ್‌ ಪಡೆಯಲು ಅದರದ್ದೇ ಆದ ಪೇಜ್‌ ಅನ್ನು ಪ್ರತ್ಯೇಕವಾಗಿ ತೆಗೆದು ನೋಡಬೇಕಾಗುತ್ತದೆ. ಆದರೆ ಅಷ್ಟೊಂದು ಕಷ್ಟ ಪಡುವ ಅಗತ್ಯವೂ ಇಲ್ಲ. ಯಾಕಂದ್ರೆ ಫೇಸ್‌ಬುಕ್‌ನಲ್ಲೇ ಹಲವು ಕುತೂಹಲಕಾರಿ ಬದಲಾವಣೆ ಮಾಡುವ ಸೆಟ್ಟಿಂಗ್‌ಗಳು ಇವೆ.

'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

ಫೇಸ್‌ಬುಕ್‌ನಲ್ಲಿ ಸಂಪೂರ್ಣ ನ್ಯೂಸ್ ಫೀಡ್‌ ಅನ್ನು ಕಸ್ಟಮೈಜ್‌ ಮಾಡಬೇಕೆ, ಹಾಗಿದ್ರೆ ಈ ಕೆಳಗಿನ ಕೆಲವು ಸುಲಭ ಸ್ಟೆಪ್ಸ್‌ಗಳನ್ನು ಫಾಲೋ ಮಾಡಿ. ಜಸ್ಟ್ ನೆಕ್ಸ್ಟ್ ಟೈಮ್‌ ನಿಮ್ಮ ಫೇಸ್‌ಬುಕ್‌ಗೆ ಲಾಗಿನ್‌ ಆದ ವೇಳೆ ಈ ಕೆಳಗಿನ ಕಸ್ಟಮೈಜ್‌ ಮಾಡಿ.

ಸೆಟ್ಟಿಂಗ್ ಬದಲಾವಣೆ

ಸೆಟ್ಟಿಂಗ್ ಬದಲಾವಣೆ

ಫೇಸ್‌ಬುಕ್‌ಗೆ ಲಾಗಿನ್ ಆಗಿ, ಸೆಟ್ಟಿಂಗ್‌ಗೆ ಹೋಗುವ ಡೌನ್‌ ಆರೋ ಮೆನು ಮೇಲೆ ಕ್ಲಿಕ್ ಮಾಡಿ. ಅಲ್ಲಿ 'News Feed Preferences' ಸೆಕ್ಷನ್ ನಾವಿಗೇಟ್ ಮಾಡಿ. ನಂತರ ಈ ಕೆಳಗಿನ ನಾಲ್ಕು ಆಯ್ಕೆಗಳು ಪ್ರದರ್ಶನವಾಗುತ್ತವೆ.
- Prioritize who to see first
- Unfollow people to hide their posts
- Reconnect with people you've unfollowed
- Discover Pages that match your interests

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊದಲು ನೋಡಲು ಬಯಸುವ ಆದ್ಯತೆ ನೀಡಿ(Prioritize who to see first)

ಮೊದಲು ನೋಡಲು ಬಯಸುವ ಆದ್ಯತೆ ನೀಡಿ(Prioritize who to see first)

'Prioritize who to see first' ಈ ಆಪ್ಶನ್‌ ಕ್ಲಿಕ್‌ ಮಾಡುವುದರಿಂದ ಮೊದಲಿಗೆ ನೀವು ಲೈಕ್‌ ಮಾಡಿದ ಪೇಜ್‌ಗಳು /ಫಾಲೋ ಮಾಡುತ್ತಿರುವ ಮತ್ತು ಎಲ್ಲಾ ನಿಮ್ಮ ಲೀಸ್ಟ್‌ನಲ್ಲಿರುವ ಸ್ನೇಹಿತರ ಪೇಜ್‌ಗಳನ್ನು ಪಡೆಯಬಹುದು.

ಅನ್‌ಫಾಲೋ ಮಾಡಿದವರ ಪೋಸ್ಟ್‌ಗಳ ಹೈಡ್ (Unfollow people to hide their posts)

ಅನ್‌ಫಾಲೋ ಮಾಡಿದವರ ಪೋಸ್ಟ್‌ಗಳ ಹೈಡ್ (Unfollow people to hide their posts)

' Unfollow people to hide their posts' ಈ ಆಪ್ಶನ್ ಕ್ಲಿಕ್ ಮಾಡಿದಲ್ಲಿ ಅನ್‌ಫಾಲೋ ಮಾಡಿದ ಜನರು ಮತ್ತು ಪೇಜ್‌ಗಳೊಂದಿಗೆ ಮತ್ತೆ ಸಂಪರ್ಕಪಡೆಯಬಹುದು. ಈ ಆಪ್ಶನ್‌ ಕ್ಲಿಕ್‌ ಮಾಡಿ ಅನ್‌ಫಾಲೋ ಮಾಡಿರುವ ಜನರು ಅಥವಾ ಪೇಜ್‌ಗಳನ್ನು ಪುನಃ ಫಾಲೋ ಮಾಡಬಹುದು. ನಂತರ ಅಪ್‌ಡೇಟ್‌ಗಳನ್ನು ಪುನಃ ಪಡೆಯಬಹುದು.

ನಿಮ್ಮ ಆಸಕ್ತಿಗೆ ತಕ್ಕ ಪೇಜ್‌ಗಳ ಪತ್ತೆ

ನಿಮ್ಮ ಆಸಕ್ತಿಗೆ ತಕ್ಕ ಪೇಜ್‌ಗಳ ಪತ್ತೆ

'Discover Pages that match your interests' ಆಪ್ಶನ್‌ ಕ್ಲಿಕ್ ಮಾಡಿದರೆ ನಿಮ್ಮ ಆಸಕ್ತಿಗೆ ತಕ್ಕಂತ ಪೇಜ್‌ಗಳನ್ನು ಪತ್ತೆ ಹಚ್ಚಿ ಸಲಹೆ ನೀಡುತ್ತದೆ. ಅಲ್ಲದೇ ಪ್ರತಿ ಪೇಜ್‌ ಐಕಾನ್ ನಿಮ್ಮ ಯಾವ ಸ್ನೇಹಿತರು ಈ ಪೇಜ್‌ ಲೈಕ್‌ ಮಾಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ಒಮ್ಮೆ ಆ ಪೇಜ್‌ಗಳನ್ನು ಲೈಕ್‌ ಮಾಡಿದ್ದಲ್ಲಿ ಅವರ ಪೋಸ್ಟ್‌ಗಳನ್ನು ನೋಡಬಹುದು.

ಇತರೆ ಆಪ್ಶನ್‌ಗಳು

ಇತರೆ ಆಪ್ಶನ್‌ಗಳು

'More Options' ಕ್ಲಿಕ್ ಮಾಡುವುದರಿಂದ ನ್ಯೂಸ್‌ ಫೀಡ್‌ನಲ್ಲಿ ಯಾವ ಆಪ್‌ಗಳು ಪ್ರದರ್ಶನವಾಗಬೇಕು, ಯಾವ ಆಪ್ಶನ್‌ಗಳು ಪ್ರದರ್ಶನವಾಗಬಾರದು ಎಂದು ಆಯ್ಕೆ ಮಾಡಬಹುದು.

ಅಂದಹಾಗೆ ಮೊಬೈಲ್‌ನಲ್ಲಿ ಫೇಸ್‌ಬುಕ್‌ ಬಳಸುವವರು ಸಹ ಇದೇ ಸ್ಟೆಪ್‌ಗಳನ್ನು ಫಾಲೋ ಮಾಡಿದರಾಯಿತು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
5 Ways to Customize Your Facebook News Feed Like a Boss. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X