Just In
- 8 hrs ago
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 11 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 11 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- 13 hrs ago
Oppo Reno 8T 5G : ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
Don't Miss
- Sports
ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ: ಮೊದಲನೇ ಪಂದ್ಯದಲ್ಲಿ ಅಂಬಾನಿ-ಅದಾನಿ ತಂಡಗಳ ಮುಖಾಮುಖಿ
- Movies
Katheyondu Shuruvagide: ಕೋಪ ಮರೆತು ಬಹದ್ದೂರ್ ವಂಶದ ಮರ್ಯಾದೆ ಉಳಿಸುತ್ತಾಳಾ ಕೃತಿ..?
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಎಸ್‌ಎನ್‌ಎಲ್‌ನ 'ಉಚಿತ 4G ಡೇಟಾ, ವಾಯ್ಸ್ ಕರೆ' ಆಫರ್ ವಾಟ್ಸಾಪ್ ವಂಚನೆ: ಎಚ್ಚರ?
ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್, ಆಫ್‌ಲೈನ್ ಮೆಸೇಜ್, ಹೀಗೆ ಹಲವು ಸಾಮಾಜಿಕ ತಾಣಗಳು ಮತ್ತು ಮೆಸೇಜ್ ಆಪ್‌ಗಳಲ್ಲಿ ಫೇಕ್ ನ್ಯೂಸ್ ಬರುವುದು ಇದೇ ಹೊಸದೇನಲ್ಲ. ಆದರೂ ವಾಟ್ಸಾಪ್ ಬಳಕೆದಾರರು ಬಹುಬೇಗ ಎಚ್ಚೆತ್ತುಕೊಳ್ಳುವುದು ತೀರ ಕಡಿಮೆ. ಯಾಕ್ ಈ ಮಾಹಿತಿ ಹೇಳ್ತಿದ್ದೀವಿ ಅಂತ ಕನ್‌ಫ್ಯೂಸ್ ಆಗ್‌ಬೇಡಿ. ಬಹುದೊಡ್ಡ ಕಾರಣವೊಂದಿದೆ.

ಅಂದಹಾಗೆ ಇತ್ತೀಚೆಗೆ ವಾಟ್ಸಾಪ್‌ನಲ್ಲಿ "ಬಿಎಸ್‌ಎನ್‌ಎಲ್ ಉಚಿತ 4G ಅನ್‌ಲಿಮಿಟೆಡ್ ಡೇಟಾ ಮತ್ತು ವಾಯ್ಸ್ ಕರೆ ಆಫರ್ ಅನ್ನು 1 ವರ್ಷದ ಅವಧಿ ವರೆಗೆ ನೀಡುತ್ತಿದೆ" ಎಂಬ ಮೆಸೇಜ್ ಹರಿದಾಡುತ್ತಿದೆ. ಈ ಮೆಸೇಜ್ ಕಂಪ್ಲೀಟ್ ದೊಡ್ಡ ವಂಚನೆ ಆಗಿದೆ. ಎಚ್ಚರ. ವಾಟ್ಸಾಪ್ ಬಳಕೆದಾರರು ಈ ಮೆಸೇಜ್ ಅನ್ನು ಸ್ವೀಕರಿಸಿದ್ದಲ್ಲಿ ಮೆಸೇಜ್ ಮೇಲೆ ಕ್ಲಿಕ್ ಮಾಡದಿರಿ ಮತ್ತು ಇತರರಿಗೆ ಶೇರ್ ಮಾಡದಿರಿ. ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಬಿಎಸ್‌ಎನ್ಎಲ್ ಮೆಸೇಜ್ ಕುರಿತ ಅಚ್ಚರಿ ಮಾಹಿತಿಯನ್ನು ಕೆಳಗೆ ಓದಿರಿ.
ಎಚ್ಚರ..! ವಾಟ್ಸಾಪ್ ಲಕ್ಕಿ ವೀಲ್, ವೀಡಿಯೊ ಕರೆ ಆಹ್ವಾನಗಳು ಬಹುದೊಡ್ಡ ವಂಚನೆǃ

ಬಹುದೊಡ್ಡ ಸ್ಕ್ಯಾಮ್
"ಬಿಎಸ್‌ಎನ್‌ಎಲ್ ಉಚಿತ 4G ಅನ್‌ಲಿಮಿಟೆಡ್ ಡೇಟಾ ಮತ್ತು ವಾಯ್ಸ್ ಕರೆ ಆಫರ್ ಅನ್ನು 1 ವರ್ಷದ ಅವಧಿ ವರೆಗೆ ನೀಡುತ್ತಿದೆ" ಎಂಬುದು ಬಹುದೊಡ್ಡ ವಂಚನೆಯ ಮೆಸೇಜ್. ಈ ಲೇಖನ ಓದುತ್ತಿರುವವರು ಏನಾದರೂ ಇಂತಹ ಮೆಸೇಜ್ ಸ್ವೀಕರಿಸಿದ್ದಲ್ಲಿ ಮೊದಲು ಡಿಲೀಟ್ ಮಾಡಿ. ಮೆಸೇಜ್ ಕ್ಲಿಕ್ ಮಾಡಿ ಓಪನ್ ಮಾಡಬೇಡಿ ಹಾಗೂ ಇತರರಿಗೆ ಶೇರ್ ಅಂತು ಮಾಡಲೇಬೇಡಿ. ವಂಚಕರು ಈ ಮೆಸೇಜ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಕದಿಯುವುದಲ್ಲದೇ, ಹಣವನ್ನು ಗಳಿಸುತ್ತಿದ್ದಾರೆ.
ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೆಸೇಜ್ ಹೀಗಿದೆ ನೋಡಿ...!
ಮೇಲಿನ ಇಮೇಜ್ ನೋಡಿ. ಟಾಪ್ ಟೆಲಿಕಾಂ ಪ್ಲೇಯರ್ ಆದ ಬಿಎಸ್‌ಎನ್‌ಎಲ್ ಅನ್‌ಲಿಮಿಟೆಡ್ 4G ಡೇಟಾ ಮತ್ತು ವಾಯ್ಸ್ ಕರೆ ಆಫರ್ ನೀಡುತ್ತಿದೆ. ಈ ಆಫರ್ ಪಡೆಯಲು ಆನ್‌ಲೈನ್‌ನಲ್ಲಿ ಅಪ್ಲೇ ಮಾಡಬೇಕು ಮತ್ತು ಜಿಯೋ ರೀತಿಯಲ್ಲಿ ಬಾರ್‌ಕೋಡ್ ಜೆನೆರೇಟ್ ಮಾಡಬೇಕು ಎಂದು ಹೇಳಲಾಗಿರುತ್ತದೆ. ಅಲ್ಲದೇ ಯಾರು ಬೇಕಾದರೂ ಉಚಿತ ಸಿಮ್ ಅನ್ನು 10Mbps ವೇಗದಲ್ಲಿ 4G ಜೊತೆಗೆ, ಉಚಿತ ವಾಯ್ಸ್ ಕರೆ ಮತ್ತು ಎಸ್‌ಎಂಎಸ್ ಆಫರ್‌ನೊಂದಿಗೆ ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಬಿಎಸ್‌ಎನ್‌ಎಲ್ 4G ಎಕ್ಸ್‌ಪ್ರೆಸ್ ಸಿಮ್ ಪಡೆಯಬಹುದು ಎಂದು ಹೇಳಲಾಗಿದೆ. ಇದೊಂದು ವಂಚಕರ ಜಾಲವಾಗಿದ್ದು ಮೆಸೇಜ್ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಬಿಎಸ್‌ಎನ್‌ಎಲ್ ಅಧಿಕೃತ ವೆಬ್‌ಸೈಟ್ ಬದಲಾಗಿ bsni.co ಎಂಬ ವೆಬ್‌ಸೈಟ್‌ಗೆ ನಿಮ್ಮನ್ನು ಕರೆದೊಯ್ಯುತ್ತದೆ. ಯುಆರ್‌ಎಲ್ ಗಮನಿಸಿ.

ಬ್ರೌಸರ್ ಯುಆರ್‌ಎಲ್ ಗಮನಿಸಿ
ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ‘http://bsni.co/sim/ ಎಂಬಲ್ಲಿಗೆ ಕರೆದೊಯ್ಯುತ್ತದೆ. ಆ ಪೇಜ್‌ನಲ್ಲಿ 4G ಎಕ್ಸ್‌ಪ್ರೆಸ್ ಸಿಮ್ ಬಗ್ಗೆ ಜಾಹಿರಾತು ಇರುತ್ತದೆ. ಪೇಜ್‌ನಲ್ಲಿ ನಿಮ್ಮ ಹೆಸರು ವಿಳಾಸ, ಫೋನ್ ನಂಬರ್ ಮತ್ತು ಇತರೆ ಮಾಹಿತಿಯನ್ನು ಕೇಳಲಾಗುತ್ತದೆ. ಮಾಹಿತಿ ನೀಡಿದ ನಂತರ ಬಾರ್‌ಕೋಡ್ ಜೆನೆರೇಟ್ ಮಾಡಬೇಕು ಎಂದು ಹೇಳಲಾಗುತ್ತದೆ. ಬಾರ್‌ಕೋಡ್ ಜೆನೆರೇಟ್ ಮಾಡಲು ನಿಮ್ಮ ಇತರೆ 10 ಸ್ನೇಹಿತರರಿಗೆ ಆಹ್ವಾನ ಮಾಡಲು ತಿಳಿಸುತ್ತದೆ. ನಂತರ ವೆರಿಫೈ ಮಾಡಲು ಇನ್ನೊಂದು ಆಪ್ ಅನ್ನು ಇನ್‌ಸ್ಟಾಲ್ ಮಾಡಲು ತಿಳಿಸುತ್ತದೆ. ಜೊತೆಗೆ ವೆಬ್‌ಸೈಟ್ ವೆರಿಫೈ ಮಾಡಲು 12 ಗಂಟೆಗಳು ಕನಿಷ್ಟ ಸಮಯ ಬೇಕು ಆದ್ದರಿಂದ 3 ದಿನಗಳ ಕಾಲ ಆಪ್ ಅನ್‌ಇನ್‌ಸ್ಟಾಲ್ ಮಾಡದಿರಿ ಎನ್ನಲಾಗುತ್ತದೆ. ಗೂಗಲ್ ಪ್ಲೇ ಸ್ಟೋರ್‌ಗೆ ಆಪ್ ಲಿಂಕ್ ಕರೆದೊಯ್ಯುತ್ತದೆ ಆದರೂ ಕೊನೆಗೆ ಪ್ರಯೋಜವಿಲ್ಲ ಎಂದು ತಿಳಿಯಲಾಗುತ್ತದೆ.

ಈ ಮೆಸೇಜ್‌ನಿಂದ ವಂಚಕರಿಗೇನು ಉಪಯೋಗ?
ಅಂದಹಾಗೆ ವಂಚಕರು ಸಂಗ್ರಹಿಸಿದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ, ಸೇಲ್ಸ್ ಕಂಪನಿಗಳಿಗೆ ಮಾರಾಟ ಮಾಡುತ್ತಾರೆ. ಈ ವೆಬ್‌ಸೈಟ್ ಅನ್ನು ವಂಚಕರು ಸುಂದರವಾಗೇ ವಿನ್ಯಾಸಗೊಳಿಸಿರುತ್ತಾರೆ. ಇದರಿಂದ ಜಾಹಿರಾತು ಸಹ ಅವರಿಗೆ ಬರುತ್ತದೆ. ಯಾವುದಕ್ಕೂ ಈ ರೀತಿಯ ಮೆಸೇಜ್‌ಗಳ ಮೇಲೆ ಕ್ಲಿಕ್ ಮಾಡಿದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.

ಇತ್ತೀಚೆಗೆ ಹೀಗೆ ನಡೆದಿತ್ತು?
ಏರ್‌ಟೆಲ್ ಉಚಿತ ಅನ್‌ಲಿಮಿಟೆಡ್ ಡೇಟಾ ಆಫರ್ ಅನ್ನು 3 ತಿಂಗಳು ಕಾಲ ನೀಡುತ್ತಿದೆ ಎಂದು ಇತ್ತೀಚೆಗೆ ಒಂದು ಇದೇ ರೀತಿಯ ವಂಚನೆ ನಡೆದಿತ್ತು. ಆದರೆ ಬಿಎಸ್‌ಎನ್‌ಎಲ್ ಸ್ಕ್ಯಾಮ್ ಏರ್‌ಟೆಲ್ ಸ್ಕ್ಯಾಮ್‌ಗಿಂತ ನಿಖರ ರೀತಿಯಲ್ಲಿ ಜನರನ್ನು ನಂಬಿಸುವಂತಿತ್ತು. ಆದರೆ ಕಂಪನಿ ಹೀಗೆ ಮಾಡಿಲ್ಲ ನೆನಪಿಡಿ.
ಇನ್ನುಮುಂದೆಯಾದರೂ ಇಂತಹ ಮೆಸೇಜ್ ಕ್ಲಿಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ಆಫರ್ ಖಚಿತ ಪಡಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಮೊದಲು ಚೆಕ್ ಮಾಡಿಕೊಳ್ಳಿ. ಇತರರಿಗೆ ಫಾರ್ವರ್ಡ್ ಮಾಡದಿರಿ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470