Just In
Don't Miss
- News
ಮೋರ್ಬಿ ಸೇತುವೆ ದುರಂತ: ಒರೆವಾ ಗ್ರೂಪ್ ಎಂಡಿ ವಿರುದ್ಧ ಅರೆಸ್ಟ್ ವಾರೆಂಟ್
- Sports
ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ; ಈ ಬ್ಯಾಟಿಂಗ್ ದಿಗ್ಗಜರ ನಡುವೆ ಪ್ಯಾಟ್ ಕಮ್ಮಿನ್ಸ್ ಆಯ್ಕೆ ಯಾರು?
- Movies
ಮೇಘಾ ಶೆಟ್ಟಿ ಹೊಸ ಫೋಟೋ ಶೂಟ್: ಕಣ್ಣೋಟಕ್ಕೆ ಬಿದ್ದೋದ್ರು ಹುಡುಗ್ರು..!
- Finance
2 ಕೋಟಿಗೂ ಕಡಿಮೆ FD ಹಣಕ್ಕೆ ಹೆಚ್ಚು ಬಡ್ಡಿ ನೀಡುವ 5 ಬ್ಯಾಂಕ್ ಯಾವವು, ಅವುಗಳ ಬಡ್ಡಿ ದರ ಬಗ್ಗೆ ತಿಳಿಯಿರಿ
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮ್ಯಾಕ್ ಬುಕ್ ಕೀಬೋರ್ಡಿನ ಬ್ಯಾಕ್ ಲೈಟ್ ಕೆಲಸ ಮಾಡದಿದ್ದರೆ ಹೀಗೆ ಮಾಡಿ.
2003ರಷ್ಟು ಹಿಂದೆಯೇ ಬ್ಯಾಕ್ ಲೈಟ್ ಹೊಂದಿರುವ ಕೀಬೋರ್ಡುಗಳನ್ನು ಮಾರುಕಟ್ಟೆಗೆ ತಂದಿದ್ದು ತಂತ್ರಜ್ಞಾನ ದೈತ್ಯ ಆ್ಯಪಲ್. ಈ ಬ್ಯಾಕ್ ಲಿಟ್ ತಂತ್ರಜ್ಞಾನದಿಂದ ಬೆಳಕು ಕಡಿಮೆಯಿರುವ ಸಮಯದಲ್ಲಿ ಟೈಪಿಸುವುದು ಸುಲಭದ ಕೆಲಸ. ಇದು ಎಲ್.ಇ.ಡಿ ಬೆಳಕು, ಹಾಗಾಗಿ ಇದು ಕಡಿಮೆ ಶಕ್ತಿಯನ್ನು ಉಪಯೋಗಿಸುತ್ತದೆ ಮತ್ತು ಬ್ಯಾಟರಿಯ ಮೇಲೆ ಕಡಿಮೆ ಒತ್ತಡವನ್ನು ಹಾಕುತ್ತದೆ.

ಕೆಲವೊಮ್ಮೆ ಈ ಬ್ಯಾಕ್ ಲಿಟ್ ಕೀಬೋರ್ಡ್ ಕೆಲಸ ಮಾಡುವುದಿಲ್ಲ ಅಥವಾ ಯಾವುದೇ ವಿಶೇಷ ಕಾರಣವಿಲ್ಲದೆ ಡಿಸೇಬಲ್ ಆಗಿಬಿಟ್ಟಿರುತ್ತದೆ. ನೀವು ಮ್ಯಾಕ್ ಬುಕ್ಕನ್ನು ಉಪಯೋಗಿಸುವವರಾಗಿದ್ದರೆ, ಈ ರೀತಿಯ ಪರಿಸ್ಥಿತಿಯನ್ನು ಒಂದಲ್ಲ ಒಂದು ಬಾರಿ ಅನುಭವಿಸಿರುತ್ತೀರಿ. ಅದ್ಯಾಕೆ ಆರ ರೀತಿ ಆಗುತ್ತದೆ ಎನ್ನುವುದಕ್ಕೆ ಕೆಲವು ಕಾರಣಗಳನ್ನು ಇಲ್ಲಿ ಹೇಳಿದ್ದೀವಿ. ಅದಕ್ಕಿರುವ ಸರಳ ಪರಿಹಾರಗಳನ್ನೂ ಇಲ್ಲಿ ತಿಳಿಸಿದ್ದೀವಿ, ನಿಮ್ಮ ಅನುಕೂಲಕ್ಕಾಗಿ!
ಓದಿರಿ: ಐಫೋನ್ ಕ್ಯಾಮೆರಾ ಮತ್ತು ಫ್ಲ್ಯಾಶ್ ನಡುವಿನ ಸಣ್ಣ ಬ್ಲಾಕ್ ಹೋಲ್ ರಹಸ್ಯ ಏನು ಗೊತ್ತೇ?
ಲೈಟ್ ಸೆನ್ಸಾರನ್ನು ಮತ್ತು ಮ್ಯಾಕನ್ನು ಸರಿಪಡಿಸಿ.
ಕೆಲವೊಂದು ಸಂದರ್ಭದಲ್ಲಿ, ಸುತ್ತಲಿನ ಬೆಳಕು ನೇರವಾಗಿ ಲೈಟ್ ಸೆನ್ಸಾರ್ ಮೇಲೆ ಬೀಳುತ್ತಿದ್ದರೆ, ಬ್ಯಾಕ್ ಲೈಟ್ ಡಿಸೇಬಲ್ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮ್ಯಾಕ್ ಬುಕ್ಕನ್ನು ಸರಿಪಡಿಸಿ, ಪರದೆಯ ಮೇಲೆ ಅಥವಾ ಮುಂದಿನ ಕ್ಯಾಮೆರಾದ ಮೇಲೆ ನೇರವಾಗಿ ಬೆಳಕು ಬೀಳದಂತೆ ನೋಡಿಕೊಳ್ಳಿ.

ಮ್ಯಾನುಯಲ್ ಆಗಿ ಬ್ಯಾಕ್ ಲೈಟನ್ನು ನಿಯಂತ್ರಿಸಿ.

ಮೇಲಿನ ಸಲಹೆ ಕೆಲಸ ಮಾಡದಿದ್ದರೆ, ಬ್ಯಾಕ್ ಲೈಟನ್ನು ಮ್ಯಾನುಯಲ್ ಆಗಿ ನಿಯಂತ್ರಿಸಬಹುದು. ಅದನ್ನು ಮಾಡುವುದು ಹೇಗೆ?
• ಆ್ಯಪಲ್ ಮೆನುವಿನಲ್ಲಿ ಸಿಸ್ಟಮ್ ಪ್ರಿಫರೆನ್ಸಸ್ ಅನ್ನು ತೆರೆಯಿರಿ, ಕೀಬೋರ್ಡ್ ಪ್ಯಾನೆಲ್ ಗೆ ಹೋಗಿ.
• "ಆಟೋಮೆಟಿಕಲಿ ಇಲ್ಯುಮಿನೇಟ್ ಕೀಬೋರ್ಡ್ ಇನ್ ಲೋ ಲೈಟ್" ಆಯ್ಕೆಯನ್ನು ಅನ್ ಚೆಕ್ ಮಾಡಿ.
ಮ್ಯಾನುಯಲಿ ನಿಯಂತ್ರಿಸುವಾಗ, F5 ಮತ್ತು F6 ಕೀಗಳನ್ನು ಉಪಯೋಗಿಸಿಕೊಂಡು ಬೆಳಕನ್ನು ನಿಯಂತ್ರಿಸಬಹುದು. ಲೈಟುಗಳು ತನ್ನಿಂತಾನೆ ಕೆಲಸ ಮಾಡುವುದಿಲ್ಲ ಈಗ ಎನ್ನುವುದನ್ನು ಮರೆಯಬೇಡಿ.
ಓದಿರಿ: ಅಂತರ್ಜಾಲದಲ್ಲಿ ಈಗ ಅಕ್ರಮವಾಗಿರುವ ಟೊರೆಂಟ್ ಮತ್ತು ಇತರೆ ಆರು ಸಂಗತಿಗಳು.
ಎಸ್ ಎಂ ಸಿ ಮರುಹೊಂದಿಸಲು
"ಆಟೋಮೆಟಿಕಲಿ ಇಲ್ಯುಮಿನೇಟ್ ಕೀಬೋರ್ಡ್ ಇನ್ ಲೋ ಲೈಟ್" ಆಯ್ಕೆ ನಿಮ್ಮ ಕಂಪ್ಯೂಟರಿನಲ್ಲಿಲ್ಲವೇ? ಆಗಿದ್ದರೆ ಮೊದಲು ನೀವು ಸಿಸ್ಟಮ್ ಮ್ಯಾನೇಜ್ ಮೆಂಟ್ ಕಂಟ್ರೋಲರನ್ನು ರೀಸೆಟ್ ಮಾಡಬೇಕು.

ಸಿಸ್ಟಮ್ ಮ್ಯಾನೇಜ್ ಮೆಂಟ್ ಕಂಟ್ರೋಲರ್ ನಲ್ಲಿ ಹಲವು ಹಾರ್ಡ್ ವೇರ್ ಆಯ್ಕೆಗಳಿರುತ್ತವೆ ಮತ್ತು ಸಿಸ್ಟಮ್ ಲೆವಲ್ ಪವರ್ ಆಯ್ಕೆಗಳಿರುತ್ತವೆ. ಉಳಿದೆಲ್ಲ ಕ್ರಮಗಳು ವಿಫಲವಾದರೆ ಮಾತ್ರ ನೀವಿದನ್ನು ಉಪಯೋಗಿಸಬೇಕು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470