ಅಂತರ್ಜಾಲದಲ್ಲಿ ಈಗ ಅಕ್ರಮವಾಗಿರುವ ಟೊರೆಂಟ್ ಮತ್ತು ಇತರೆ ಆರು ಸಂಗತಿಗಳು.

|

ಅಂತರ್ಜಾಲವೆಂಬುದು ವಿಸ್ತಾರದ ಕಡಲು. ಅಂತರ್ಜಾಲವನ್ನು ಉಪಯೋಗಿಸಿಕೊಂಡು ನೀವು ಹತ್ತಲವು ಕಾರ್ಯಗಳನ್ನು ಮಾಡಬಹುದು, ನಿಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳಬಹುದು, ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು, ಇತ್ಯಾದಿ ಇತ್ಯಾದಿ.

ಅಂತರ್ಜಾಲದಲ್ಲಿ ಈಗ ಅಕ್ರಮವಾಗಿರುವ ಟೊರೆಂಟ್ ಮತ್ತು ಇತರೆ ಆರು ಸಂಗತಿಗಳು.

ಆದರೆ ಅಂತರ್ಜಾಲದಲ್ಲಿರುವ ಹಲವು ಕಾನೂನುಬಾಹಿಯ ಸಂಗತಿಗಳ ಬಗ್ಗೆ ನಿಮಗೆ ಅರಿವಿಲ್ಲದೇ ಹೋಗಬಹುದು ಮತ್ತು ಅರಿವಿನ ಕೊರತೆಯ ಕಾರಣದಿಂದ ನೀವದನ್ನು ಉಪಯೋಗಿಸುತ್ತಲೂ ಇರಬಹುದು. ಕೃತಿಸ್ವಾಮ್ಯಕ್ಕೆ ಒಳಪಟ್ಟಿರುವ ಸಂಗತಿಗಳನ್ನು ನೀವು ಡೌನ್ ಲೋಡ್ ಮಾಡಿಕೊಳ್ಳುತ್ತಿರಬಹುದು, ಅದು ಅಪಾಯಕಾರಿ ಎನ್ನುವುದನ್ನು ನೆನಪಿನಲ್ಲಿಡಿ.

ಓದಿರಿ: ವಾಟ್ಸಾಪ್ ಫೇಸ್‌ಬುಕ್‌ಗೆ ವೈಯಕ್ತಿಕ ಮಾಹಿತಿ ಶೇರ್‌ ಸ್ಟಾಪ್ ಹೇಗೆ?

ಪರಿಣಾಮಗಳಿಂದ ಬಚಾವಾಗಬೇಕೆಂದಿದ್ದಲ್ಲಿ, ಯಾವ್ಯಾವುದು ಕಾನೂನು ಬಾಹಿರ ಎನ್ನುವುದರ ಕುರಿತು ಮೊದಲು ನೀವು ತಿಳಿದುಕೊಳ್ಳಬೇಕು. ಸದ್ಯದ ಬಿಸಿ ಬಿಸಿ ಸುದ್ದಿಯೆಂದರೆ ಟೊರೆಂಟ್ಸ್! ಟೊರೆಂಟ್ಸ್ ವೆಬ್ ಪುಟಕ್ಕೆ ಭೇಟಿ ಕೊಡುವುದು ಮೂರು ವರ್ಷದ ಜೈಲು ಶಿಕ್ಷೆಗೆ ಕಾರಣವಾಗಬಹುದು ಎಂಬ ತಪ್ಪು ತಿಳುವಳಿಕೆ ಉಂಟಾಗಿತ್ತು. ಅದು ಸುಳ್ಳು ಸುದ್ದಿ ಎಂದು ನಂತರ ಘೋಷಿಸಲಾಯಿತು. ಹಾಗಿದ್ರೂ, ಟೊರೆಂಟಿನಿಂದ ಕೃತಿಸ್ವಾಮ್ಯ ಹೊಂದಿರುವ ಕೃತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಕಾನೂನು ಬಾಹಿರ.

ಓದಿರಿ: ಏರ್‌ಟೆಲ್ 4ಜಿ ಯನ್ನೂ ಮೂಲೆಗುಂಪಾಗಿಸಿತೇ ರಿಲಾಯನ್ಸ್ ಜಿಯೋ

ಕಾನೂನು ಬಾಹಿರವಾಗಿರುವ ಏಳು ಸಂಗತಿಗಳ ಬಗ್ಗೆ ತಿಳಿಯಿರಿ.

ಕೃತಿಸ್ವಾಮ್ಯಕ್ಕೊಳಪಟ್ಟಿರುವುದನ್ನು ಟೊರೆಂಟಿನಲ್ಲಿ ಡೌನ್ ಲೋಡ್ ಮಾಡುವುದು.

ಕೃತಿಸ್ವಾಮ್ಯಕ್ಕೊಳಪಟ್ಟಿರುವುದನ್ನು ಟೊರೆಂಟಿನಲ್ಲಿ ಡೌನ್ ಲೋಡ್ ಮಾಡುವುದು.

ಟೊರೆಂಟ್ ಉಪಯೋಗಿಸುವುದು ಕಾನೂನಾತ್ಮಕವೇ, ಆದರೆ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುವ ವಿಷಯವನ್ನು ಟೊರೆಂಟಿಗೆ ಅಪ್ ಲೋಡ್ ಮಾಡುವುದು ಅಥವಾ ಟೊರೆಂಟಿನಿಂದ ಡೌನ್ ಲೋಡ್ ಮಾಡುವುದು ಅಕ್ರಮ. ಪಿ2ಪಿ ನೆಟ್ ವರ್ಕಿನಲ್ಲಿ ಮತ್ತು ಫೈಲ್ ಹಂಚುವ ತಂತ್ರಾಂಶಗಳಲ್ಲಿರುವ ಡಾಟಾ ಹೆಚ್ಚಿನಂಶ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತದೆ. ಕೃತಿಸ್ವಾಮ್ಯಕ್ಕೆ ಒಳಪಟ್ಟಿರುವ ಚಿತ್ರ/ಹಾಡನ್ನು ಹಂಚಿಕೊಳ್ಳುವುದು ಅಕ್ರಮ. ಬಂಧನವಾಗುವವರೆಗೂ ತೊಂದರೆ ಏನಿಲ್ಲವಾದರೂ ಈ ಕ್ರಮ ಕಾನೂನುಬಾಹಿರ ಮತ್ತು ಬಂಧನದ ಸಾಧ್ಯತೆ ಇದ್ದೇ ಇದೆ.

ಆನ್ ಲೈನಿ ಕಮ್ಯುನಿಟಿಯಲ್ಲಿ ಟ್ರಾಲ್ ಮಾಡುವುದು.

ಆನ್ ಲೈನಿ ಕಮ್ಯುನಿಟಿಯಲ್ಲಿ ಟ್ರಾಲ್ ಮಾಡುವುದು.

ಅಂತರ್ಜಾಲದಲ್ಲಿ ಟ್ರಾಲಿಂಗ್ ಮಾಡುವುದು ತುಂಬಾ ಸಾಮಾನ್ಯ. ಬಹಳಷ್ಟು ಜನರಿಗೆ ತಮ್ಮ ಕಮೆಂಟುಗಳನ್ನು ಕಮ್ಯುನಿಟಿಯನ್ನು ನಿಯಂತ್ರಿಸುವವರು ತೆಗೆದು ಹಾಕಿದ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಟ್ರಾಲಿಂಗಿಗೆ ಕ್ರಿಮಿನಲ್ ಕ್ರಿಯೆಯೇನೂ ಇರುವುದಿಲ್ಲ, ಆದರೆ ಟ್ರಾಲಿಂಗ್ ಶೋಷಣೆಯಾಗಿ ಪರಿವರ್ತನೆಯಾದರೆ ಅದು ಅಪರಾಧ.

ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕುವುದು.

ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕುವುದು.

ಟ್ರಾಲಿಂಗ್ ತರವೇ, ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಬೆದರಿಕೆ ಹಾಕುವುದು ಅಪರಾಧ. ಆನ್ ಲೈನಿನಲ್ಲಿ ನೀವು ಯಾರನ್ನೂ ಬೆದರಿಸಬಾರದು, ಶೋಷಿಸಬಾರದು. ಪರಿಸ್ಥಿತಿ ಯಾವುದೇ ಇರಲಿ ನೀವು ಬೆದರಿಕೆ ಹಾಕುವುದರಿಂದ ದೂರವಿರಿ.

ಅನುಮತಿ ಇಲ್ಲದೆ ವೀಡಿಯೋ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುವುದು.

ಅನುಮತಿ ಇಲ್ಲದೆ ವೀಡಿಯೋ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುವುದು.

ನಿಮ್ಮ ಸ್ನೇಹಿತರೊಂದಿಗಿನ ವೀಡಿಯೋ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುವುದು ಚೆಂದದ ವಿಷಯವೇನೋ ಹೌದು, ಆದರೆ ಮೊದಲು ನೀವು ಆ ನಿಮ್ಮ ಸ್ನೇಹಿತನೊಂದಿಗೆ ಇದರ ಕುರಿತು ಚರ್ಚಿಸಬೇಕಷ್ಟೇ. ಆ ವ್ಯಕ್ತಿಯ ಅನುಮತಿಯಿಲ್ಲದೇ ರೆಕಾರ್ಡ್ ಮಾಡಿಕೊಳ್ಳುವುದು ಕಾನೂನು ಬಾಹಿರ. ಆ ವ್ಯಕ್ತಿಯ ಅನುಮತಿಯಿಲ್ಲದೇ ಕರೆಯನ್ನು ನೀವು ಆನ್ ಲೈನಿನಲ್ಲಿ ಹಾಕಿಬಿಟ್ಟರೆ ತೊಂದರೆಗೆ ಸಿಕ್ಕಿಹಾಕಿಕೊಳ್ಳುವಿರಿ.

ನಕಲಿ ಖಾತೆಯನ್ನು ಹೊಂದುವುದು.

ನಕಲಿ ಖಾತೆಯನ್ನು ಹೊಂದುವುದು.

ಆನ್ ಲೈನಿನಲ್ಲಿ ಜನರು ನಕಲಿ ಹೆಸರುಗಳನ್ನು ಉಪಯೋಗಿಸುವುದು ಸಾಮಾನ್ಯವಾದರೂ, ತಾಂತ್ರಿಕವಾಗಿ ಅದು ಕಾನೂನುಬಾಹಿರ. ನಕಲಿ ವಿವರಗಳನ್ನು ನೀಡುವ ಮೊದಲು ಆ ವೆಬ್ ಪುಟದ ನೀತಿ ನಿಯಮಗಳನ್ನು ಓದಿ ತಿಳಿದುಕೊಳ್ಳಿ.

ಬೇರೆಯವರ ಅಂತರ್ಜಾಲ ನೆಟ್ ವರ್ಕನ್ನು ಉಪಯೋಗಿಸುವುದು.

ಬೇರೆಯವರ ಅಂತರ್ಜಾಲ ನೆಟ್ ವರ್ಕನ್ನು ಉಪಯೋಗಿಸುವುದು.

ಬಹಳಷ್ಟು ಜನರು ಇತರರ ಅಂತರ್ಜಾಲ ನೆಟ್ ವರ್ಕನ್ನು ಉಪಯೋಗಿಸಿಕೊಂಡು ಅಂತರ್ಜಾಲವನ್ನು ಸಂಪರ್ಕಿಸುತ್ತಾರೆ. ಆ ನೆಟ್ ವರ್ಕಿಗೆ ಪಾಸ್ ವರ್ಡ್ ಇಲ್ಲದಿದ್ದರೂ, ಅದು ಸೆಕ್ಯೂರ್ ಅಲ್ಲದಿದ್ದರೂ ಆ ರೀತಿ ಉಪಯೋಗಿಸುವುದನ್ನು ನಿಲ್ಲಿಸಿ. ಈ ರೀತಿಯ ಪ್ರಕರಣಗಳು ವರದಿಯಾಗಿಲ್ಲವಾದರೂ, ಬೇರೆಯವರ ಅಂತರ್ಜಾಲ ನೆಟ್ ವರ್ಕನ್ನು ಉಪಯೋಗಿಸುವುದು ಕಾನೂನಿನ ಪ್ರಕಾರ ಅಪರಾಧ.

ಕೃತಿಸ್ವಾಮಕ್ಕೊಳಪಟ್ಟಿರುವ ವಿಷಯವನ್ನು ಮರುಬಳಸುವುದು.

ಕೃತಿಸ್ವಾಮಕ್ಕೊಳಪಟ್ಟಿರುವ ವಿಷಯವನ್ನು ಮರುಬಳಸುವುದು.

ಅಂತರ್ಜಾಲದಲ್ಲಿ ಚಿತ್ರಗಳನ್ನು ಹುಡುಕುವಾಗ ಬಹಳಷ್ಟು ಚಿತ್ರಗಳು ಕೃತಿಸ್ವಾಮ್ಯಕ್ಕೆ ಒಳಪಟ್ಟಿರುವುದು ತಿಳಿಯುತ್ತದೆ. ಆ ಚಿತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಉಪಯೋಗಿಸಬಹುದೆಂದು ಬಹಳಷ್ಟು ಜನರು ತೀರ್ಮಾನಿಸಿ ಬಿಟ್ಟಿರುತ್ತಾರೆ. ಆದರೆ ನೆನಪಿಡಿ, ಕೃತಿಸ್ವಾಮ್ಯಕ್ಕೊಳಪಟ್ಟಿರುವ ಚಿತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವುದಾಗಲೀ, ಅದನ್ನು ಉಪಯೋಗಿಸುವುದಾಗಲೀ ಕಾನೂನು ಬಾಹಿರವಾದ ಕೆಲಸ.

Best Mobiles in India

Read more about:
English summary
Using torrents and downloading and uploading copyrighted content via the same has become illegal right now. Take a look at some things such as trolling, cyberbullying, etc. that are illegal online. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X