ಈ 8 ಹಂತಗಳನ್ನು ಪಾಲಿಸಿ ಯಾವುದೇ ಆಂಡ್ರಾಯ್ಡ್‌ನಲ್ಲಿ ಜಿಯೋ 4G ಸಿಮ್ ಬಳಸಿ
ರಿಲಾಯನ್ಸ್ ಜಿಯೋ ಆಫರ್‌ನಿಂದಾಗಿ ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರೂ ಸಹ ಸಿಮ್ ಖರೀದಿಸುತ್ತಿದ್ದಾರೆ. ಆದರೆ ಸಮಸ್ಯೆ ಇರುವುದು ಇಲ್ಲೇ. ಯಾಕಂದ್ರೆ ಜಿಯೋ ಸಿಮ್ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲೂ ಸಪೋರ್ಟ್ ಆಗುವುದಿಲ್ಲ. ಅಲ್ಲದೇ ಸಪೋರ್ಟ್ ಆದರೂ ಸಹ 4G VoLTE ಸ್ಮಾರ್ಟ್‌ಫೋನ್ ಆಗಿರದಿದ್ದಲ್ಲಿ, ಉಚಿತ ವಾಯ್ಸ್ ಕರೆ ಆಫರ್ ಲಭ್ಯವಾಗುವುದಿಲ್ಲ.
ಆದ್ದರಿಂದ ಇಂದಿನ ಲೇಖನದಲ್ಲಿ ಯಾವುದೇ ಆಂಡ್ರಾಯ್ಡ್(android) ಸ್ಮಾರ್ಟ್‌ಫೋನ್ ಬಳಕೆದಾರರು ರಿಲಾಯನ್ಸ್ ಜಿಯೋ ಸಿಮ್ ಬಳಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಗಿಜ್‌ಬಾಟ್ ತಿಳಿಸುವ 8 ಹಂತಗಳನ್ನು ಪಾಲಿಸಿ ಜಿಯೋ ಸಿಮ್ ಆಕ್ಟಿವೇಟ್ ಮಾಡಿ ಬಳಸುವುದು ಹೇಗೆ ಎಂದು ತಿಳಿಯಿರಿ.
ರಿಲಾಯನ್ಸ್ ಜಿಯೋ ಸಿಮ್ ಖರೀದಿಗೆ ಮುನ್ನ ತಿಳಿಯಲೇಬೇಕಾದ 5 ಆಘಾತಕಾರಿ ಸತ್ಯಗಳು
ಜಿಯೋ ಸಿಮ್, ಸ್ಮಾರ್ಟ್‌ಫೋನ್‌ನ IMEI ನಂಬರ್, 4G LTE ರೂಟೆಡ್ ಆಂಡ್ರಾಯ್ಡ್ ಡಿವೈಸ್, IMEI ಬದಲಾವಣೆ ಆಪ್. ರಿಲಾಯನ್ಸ್ ಜಿಯೋ ಸಿಮ್ ಬಳಕೆ ಮಾಡಲು ನಿಮ್ಮ ಆಂಡ್ರಾಯ್ಡ್ ಡಿವೈಸ್ ರೂಟೆಡ್ ಆಗಿದ್ದಲ್ಲಿ, ಹಾಗೂ 4G VoLTE ಸಪೋರ್ಟ್ ಮಾಡಿದಲ್ಲಿ ಮಾತ್ರ ಜಿಯೋದ 4G ಉತ್ತಮ ಆಫರ್‌ಗಳನ್ನು ಎಂಜಾಯ್ ಮಾಡಲು ಸಾಧ್ಯ.ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ರೂಟ್ ಮಾಡುವುದು ಹೇಗೆ? ನಿಮ್ಮ ಆಂಡ್ರಾಯ್ಡ್ ರೂಟೆಡ್ ಆಗಿ ರೆಡಿಯಾಗಿದ್ದಲ್ಲಿ, Xposed ಇನ್‌ಸ್ಟಾಲರ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿ. ನಂತರ ಅದರಲ್ಲಿ IMEI ಬದಲಾವಣೆ ಆಪ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ. Xposed ಇನ್‌ಸ್ಟಾಲರ್'ಗೆ ಹೋಗಿ ಫ್ರೇಮ್‌ವರ್ಕ್ ಅನ್ನು ಆಕ್ಟಿವೇಟ್ ಮಾಡಿ ಮಾಡ್ಯೂಲ್ಸ್ ಕ್ಲಿಕ್ ಮಾಡಿ. ಇಲ್ಲಿ IMEI ಚೇಂಜರ್ ಪ್ರೊ ಆಪ್ ಅನ್ನು ಎನೇಬಲ್ ಮಾಡಿ IMEI ಚೇಂಜರ್ ಪ್ರೊ ಆಪ್ ಅನ್ನು ಓಪನ್ ಮಾಡಿ, ಜಿಯೋ ಸಿಮ್ ಬಳಸಬೇಕಾದ ಡಿವೈಸ್‌ನ IMEI ನಂಬರ್ ಎಂಟರ್ ಮಾಡಿ ಅಪ್ಲೇ ಮೇಲೆ ಕ್ಲಿಕ್ ಮಾಡಿ. ಆದರೆ ಕೊನೆಯ 3 IMEI ಡಿಜಿಟ್‌ಗಳನ್ನು ನಿಮಗೆ ತೋಚಿದಂತೆ ಬದಲಿಸಿ. ಮೊಬೈಲ್ ಸ್ವಿಚ್ ಆಫ್ ಮಾಡಿ ಜಿಯೋ ಸಿಮ್ ಅನ್ನು ಸ್ಲಾಟ್ ಒಂದರಲ್ಲಿ ಇನ್‌ಸರ್ಟ್ ಮಾಡಿ. ನಂತರ ಸಿಮ್ ಆಕ್ಟಿವೇಟ್ ಆಗುತ್ತದೆ. ಆಕ್ಟಿವೇಟ್ ಆದ ನಂತರ ಡಿವೈಸ್‌ನಲ್ಲಿ ನೆಟ್‌ವರ್ಕ್ ಸಿಗ್ನಲ್ ಬರದಿದ್ದಲ್ಲಿ Settings>>Mobile Networks>>Networks Operator>>Search Manully>> Reliance Jio ಆಯ್ಕೆ ಮಾಡಿ. ನಂತರ Settings>>More>>Mobile Networks>> Access Point Names>>Create New APN ಆಯ್ಕೆ ಮಾಡಿ. APN Jionet ಎಂದು ಇರಲಿ. ಮೊಬೈಲ್ ನೆಟ್‌ವರ್ಕ್‌ನಲ್ಲಿ LTE ಮೋಡ್ ಆಯ್ಕೆ ಮಾಡಿ ಮತ್ತು ಡಾಟಾ ಸೇವೆ ಆನ್ ಮಾಡಿ. ನಂತರದಲ್ಲಿ 4G ಡಾಟಾವನ್ನು ಅನ್‌ಲಿಮಿಟೆಡ್ ಆಗಿ ಬಳಸಬಹುದು.
ಮೊಬೈಲ್‌ನಲ್ಲಿ ಜಿಯೋ ಸಿಮ್ ಬಳಸಲು ಅಗತ್ಯಾಂಶಗಳು

ಆಂಡ್ರಾಯ್ಡ್ ಡಿವೈಸ್ ರೂಟೆಡ್ ಆಗಿರಬೇಕು

Xposed ಇನ್‌ಸ್ಟಾಲರ್ ಮತ್ತು IMEI ಬದಲಾವಣೆ ಆಪ್ ಇನ್‌ಸ್ಟಾಲ್ ಮಾಡಿ

ಮಾಡ್ಯೂಲ್ಸ್ ಎನೇಬಲ್ ಮಾಡಿ

IMEI ನಂಬರ್

ಡಿವೈಸ್ ರೀಬೂಟ್ ಮಾಡಿ

ಟ್ರಬಲ್‌ಶೂಟಿಂಗ್ ಅಗತ್ಯ

LTE ಓನ್ಲಿ ಮೋಡ್ ಅಗತ್ಯವಾಗಿ ಸೆಲೆಕ್ಟ್ ಆಗಿರಲಿ


Click it and Unblock the Notifications








