ಏನಿದು ಗೂಗಲ್‌ ಪಬ್ಲಿಕ್‌ ಡೇಟಾ ಎಕ್ಸ್‌ಪ್ಲೋರರ್‌?

Posted By:

ನೀವು ಭಾರತದ ಬಗ್ಗೆ ಯಾವುದೋ ವಿಚಾರವಾಗಿ ಸಂಶೋಧನೆ ಮಾಡುತ್ತಿದ್ದೀರಿ ಅಂತ ಇಟ್ಟುಕೊಳ್ಳಿ.ಈ ಸಂದರ್ಭ‌ದಲ್ಲಿ ನಿಮಗೆ ವಿಶ್ವ ಸಂಸ್ಥೆ,ವಿಶ್ವ ಬ್ಯಾಂಕ್‌‌ಗೆ ಸಂಬಂಧಿಸಿದ ಮಾಹಿತಿ ಬೇಕಾಗುತ್ತದೆ. ಈ ಮಾಹಿತಿ ಪಡೆಯಲು ಇಂಟರ್‌ನೆಟ್‌ ಜಾಲಾಡುತ್ತೀರಿ. ಇಲ್ಲೂ ನಿಖರವಾದ ಮಾಹಿತಿ ಸಿಗದಿದ್ದಲ್ಲಿ ವಿಶ್ವ ಬ್ಯಾಂಕ್‌ ವೆಬ್‌ಸೈಟ್‌ಗೆ ಹೋಗಿ ಮಾಹಿತಿ ಪಡೆದುಕೊಳ್ಳುತ್ತೀರಿ. ಸಾಮಾನ್ಯವಾಗಿ ಸಂಶೋಧನೆ ನಡೆಸುವ ಮಂದಿ ಈ ರೀತಿ ಮಾಹಿತಿ ಪಡೆದು ಸಂಶೋಧನೆ ನಡೆಸುತ್ತಿರುತ್ತಾರೆ.

ಆದರೆ ಈ ಮಾಹಿತಿಗಳನ್ನು ಕಷ್ಟಪಡದೇ ,ಅರ್ಥವಾಗುವಂತೆ ಕ್ಷಣ ಮಾತ್ರದಲ್ಲೇ ಪಡೆಯಬಹುದು. ವಿಶ್ವದ ಶಿಕ್ಷಣ, ಆರೋಗ್ಯ,ಆರ್ಥಿ‌ಕ ಇನ್ನಿತರ ವಿಚಾರಗಳ ಬಗ್ಗೆ ವಿಶ್ವಬ್ಯಾಂಕ್‌,ಯುನೆಸ್ಕೋ ನೀಡಿರುವ ಅಧಿಕೃತ ವರದಿಯನ್ನು ನೀವು ಕುಳಿತಲ್ಲಿಂದಲೇ ನೋಡಬಹುದು. ಜನರು ಈ ಮಾಹಿತಿಗಳನ್ನು ಸುಲಭವಾಗಿ ಪಡೆಯಲು ಗೂಗಲ್‌ ಒಂದು ಪ್ರೊಡಕ್ಟ್‌ನ್ನು ಈಗಾಗಲೇ ಆರಂಭಿಸಿದೆ. ಗೂಗಲ್‌ ಪಬ್ಲಿಕ್‌ ಡೇಟಾ ಎಕ್ಸ್‌ಪ್ಲೋರರ್‌(Google Public Data Explorer)ಹೋಗಿ ಬೇಕಾದ ವರದಿ ಟೈಪಿಸಿದರೆ ಆಯ್ತು ನಿಮ್ಮ ಸ್ಕ್ರೀನ್‌ನಲ್ಲಿ ಈ ಮಾಹಿತಿ ಕಾಣುತ್ತಿರುತ್ತದೆ!

ಏನಿದು ಗೂಗಲ್‌ ಪಬ್ಲಿಕ್‌ ಡೇಟಾ ಎಕ್ಸ್‌ಪ್ಲೋರರ್‌?

ಏನಿದು ಗೂಗಲ್‌ ಪಬ್ಲಿಕ್‌ ಡೇಟಾ ಎಕ್ಸ್‌ಪ್ಲೋರರ್‌?
ವಿಶ್ವದ ಅಭಿವೃದ್ಧಿಗಾಗಿ ವಿವಿಧ ಸಂಸ್ಥೆಗಳು ದುಡಿಯುತ್ತಿದ್ದು, ಈ ಸಂಸ್ಥೆಗಳು ಎಲ್ಲಾ ದೇಶಗಳ ಅರ್ಥಿ‌ಕತೆ, ಆರೋಗ್ಯ, ಶಿಕ್ಷಣ,ಲಿಂಗ ಸಮಾನತೆ.. ಇತ್ಯಾದಿ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ತನ್ನ ವರದಿಯನ್ನು ತಯಾರಿಸುತ್ತದೆ. ಈ ಎಲ್ಲಾ ಅಧ್ಯಯನಗಳ ವರದಿಗಳು ಇಂಟರ್‌ನೆಟ್‌ನಲ್ಲಿದ್ದರೂ ಒಂದೇ ವೇದಿಕೆಯಲ್ಲಿ ಸಿಗುವುದು ಕಷ್ಟ.ಹೀಗಾಗಿ ಈ ಎಲ್ಲಾ ವರದಿಗಳು ಸುಲಭವಾಗಿ ಜನರಿಗೆ ತಿಳಿಸಲು ಗೂಗಲ್‌ ಆರಂಭಿಸಿರುವ ಉತ್ಪನ್ನವೇ ಪಬ್ಲಿಕ್‌ ಡೇಟಾ ಎಕ್ಸ್‌ಪ್ಲೋರರ್‌.

ಈ ಪಬ್ಲಿಕ್ ಡೇಟಾ ಎಕ್ಸ್‌ಪ್ಲೋರರ್‌ನಲ್ಲಿ ಇದುವರೆಗಿನ ಅಧ್ಯಯನದ ಮಾಹಿತಿಗಳನ್ನು ಗ್ರಾಫ್‌ ನಕ್ಷೆಯಲ್ಲಿ ನೀಡಲಾಗಿದ್ದು, ಜನರು ಸುಲಭವಾಗಿ ಬೇಕಾದ ಸಂಸ್ಥೆಯ ಮಾಹಿತಿಗಳನ್ನು ಪಡೆಯಬಹುದಾಗಿದೆ.ಜೊತಗೆ ಇಲ್ಲಿ ಬೇರೆ ಬೇರೆ ದೇಶಗಳ ಜೊತೆ ಹೋಲಿಕೆ ಸಹ ಮಾಡಬಹುದಾಗಿದೆ.

ಸಂಶೋಧಕರಿಗೆ,ಪತ್ರಕರ್ತರಿಗೆ, ಮತ್ತು ಮಾಹಿತಿಯನ್ನು ತಿಳಿಯುವ ಆಸಕ್ತರಿಗೆ ಈ ಪಬ್ಲಿಕ್ ಡೇಟಾ ಎಕ್ಸ್‌ಪ್ಲೋರರ್‌ ತುಂಬಾ ಸಹಕಾರಿಯಾಗಿದ್ದು, ಉಚಿತವಾಗಿ ಮಾಹಿತಿಯನ್ನು ಹುಡುಕಬಹುದಾಗಿದೆ.

ಅಷ್ಟೇ ಅಲ್ಲದೇ ಬಳಕೆದಾರರು ಸಹ ತಮ್ಮ ಸಂಶೋಧನೆಯ ಮಾಹಿತಿಯನ್ನು ಇದರಲ್ಲಿ ಆಪ್‌ಲೋಡ್‌ ಮಾಡಬಹುದಾಗಿದೆ.

ಇದನ್ನೂ ಓದಿ : ನೀವು ತಿಳಿಯದ ಗೂಗಲ್‌ ಪ್ರೊಡೆಕ್ಟ್‌ಗಳು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot