ನೀವು ತಿಳಿಯದ ಗೂಗಲ್‌ ಪ್ರೊಡಕ್ಟ್‌ಗಳು

Posted By:

ಗೂಗಲ್‌ ಬಳಕೆದಾರರಿಗೆ ವಿವಿಧ ರೀತಿಯ ಸೇವೆಗಳನ್ನು ನೀಡುತ್ತಿದೆ. ಆದರೆ ಬಹಳಷ್ಟು ಜನರು ಕೇವಲ ಜಿಮೇಲ್‌,ಯೂ ಟ್ಯೂಬ್‌, ಗೂಗಲ್‌ ಪ್ಲಸ್‌, ಗೂಗಲ್‌ ಮ್ಯಾಪ್‌ ಇವಷ್ಟೇ ಗೂಗಲ್‌ ಪ್ರೊಡಕ್ಟ್‌ ಎಂದು ತಿಳಿದಿದ್ದಾರೆ. ಆದರೆ ಗೂಗಲ್‌ ಇವಷ್ಟೇ ಅಲ್ಲ ಬೇರೆ ಬೇರೆ ರೀತಿಯಲ್ಲಿ ಬಳಕೆದಾರರಿಗೆ ತನ್ನ ಸೇವೆಗಳನ್ನು ನೀಡುತ್ತಿದೆ.

ಹೀಗಾಗಿ ಇಲ್ಲಿ ಬಹಳಷ್ಟು ಜನ ಬಳಸುತ್ತಿರುವ ಗೂಗಲ್‌ ಇತರ ಪ್ರೊಡಕ್ಟ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ : ಪೆಟ್ರಿ ತಟ್ಟೆಯಲ್ಲಿ ಕೋಳಿ ಹೇಗೆ ಬೆಳೆಯುತ್ತದೆ ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Google Trends

Google Trends

ವಿಶ್ವದಲ್ಲಿ ಬಹಳಷ್ಟು ಜನ ವಿವಿಧ ವಿಚಾರಗಳನ್ನು ಗೂಗಲ್‌ನಲ್ಲಿ ಹುಡುಕುತ್ತಿರುತ್ತಾರೆ. ಹಾಗಾಗಿ ಯಾವ ವಿಚಾರವನ್ನು ಬಹಳಷ್ಟು ಮಂದಿ ಹುಡುಕಿದ್ದಾರೆ ಎಂಬುದನ್ನು ಈ ಟ್ರೆಂಡ್‌ನಲ್ಲಿ ಪತ್ತೆಹಚ್ಚಬಹುದಾಗಿದೆ. ಈ ಹಿಂದೆ ನೀವು ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್‌ ಎಂಬ ಸುದ್ದಿಯನ್ನು ಓದಿರಬಹುದು.ಈ ಸುದ್ದಿಯನ್ನು ಇದೇ ಗೂಗಲ್‌ ಟ್ರೆಂಡ್ಸ್‌ ಆಧಾರದಲ್ಲಿ ಪತ್ತೆ ಮಾಡಲಾಗಿದೆ.

Google Trends ಭೇಟಿ ನೀಡಲು ಕ್ಲಿಕ್‌ ಮಾಡಿ

 Google Think Insights

Google Think Insights

ಇಂಟರ್‌ನೆಟ್‌ ವ್ಯವಹಾರ ಇಂದು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ನಿಮ್ಮ ಯಾವುದೇ ವ್ಯವಹಾರವನ್ನು ಮತ್ತಷ್ಟು ಜನಪ್ರಿಯಗೊಳಿಸುವುದು ಹೇಗೆ? ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಸಿಗುತ್ತದೆ. ವಿವಿಧ ವಿಚಾರಗಳ ಬಗ್ಗೆ ಅಧ್ಯಯನ, ಸಂಶೋಧನೆ ಮಾಡಿರುವ ಲೇಖನಗಳನ್ನು ಇಲ್ಲಿ ನೀವು ಓದಬಹುದು.
Google Think Insights ಭೇಟಿ ನೀಡಲು ಕ್ಲಿಕ್‌ ಮಾಡಿ

Get Your Business Online

Get Your Business Online

ಆನ್‌ಲೈನ್‌ ವ್ಯವಹಾರ ಮಾಡುವ ಸಣ್ಣ ಉದ್ಯಮಿಗಳಿಗೆ ಸಹಾಯವಾಗಬಲ್ಲ ವೆಬ್‌ಸೈಟ್‌. ಈಗ ಇದು ಅಮೆರಿಕದಲ್ಲಿ ಮಾತ್ರ ಲಭ್ಯವಿದೆ.
Get Your Business Online ಭೇಟಿ ನೀಡಲು ಕ್ಲಿಕ್‌ ಮಾಡಿ

Webmaster Tools

Webmaster Tools

ನಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ವೈದ್ಯರು ಹೇಗೇ ನಮ್ಮ ಜೊತೆ ಇದ್ದಾರೋ ಅದೇ ರೀತಿ ವೆಬ್‌ಸೈಟ್‌ ಆರೋಗ್ಯವನ್ನು ಈ Webmaster Toolsನಲ್ಲಿ ಪರೀಕ್ಷಿಸಿಕೊಳ್ಳಬಹುದು. ವೆಬ್‌ಸೈಟ್‌ ಟ್ರಾಫಿಕ್‌ ಹೇಗಿದೆ? ವೆಬ್‌ಸೈಟ್‌ ಕೋಡ್‌ಗಳು ಸರಿಯಿದಿಯೋ ಇಲ್ಲವೋ ಈ ಎಲ್ಲಾ ಮಾಹಿತಿಗಳನ್ನು Webmaster Tools ನಲ್ಲಿ ನೋಡಿ ವೆಬ್‌ಸೈಟ್‌ ಸಮಸ್ಯೆಯನ್ನು ನಿವಾರಿಸಬಹುದು.

Webmaster Tools ಭೇಟಿ ನೀಡಲು ಕ್ಲಿಕ್‌ ಮಾಡಿ

 Schemer

Schemer

ವಿಶೇಷವಾಗಿ ಪ್ರವಾಸಿಗಳಿಗೆ ನೆರವಾಗಬಲ್ಲ ಗೂಗಲ್‌ ಪ್ರೊಡೆಕ್ಟ್. ಇಲ್ಲಿ ನೀವು ಬೇಕಾದ ಸ್ಥಳವನ್ನು ಟೈಪಿಸಿದರೆ ಗೂಗಲ್‌ ಪ್ಲಸ್‌ ಅಕೌಂಟ್‌ ಮೂಲಕ ಆ ಸ್ಥಳ, ಆ ಸ್ಥಳದ ಹತ್ತಿರ ರೆಸ್ಟೋರೆಂಟ್,ಈ ಹಿಂದೆ ಆ ಸ್ಥಳಕ್ಕೆ ಹೋಗಿರುವ ವ್ಯಕ್ತಿ ಇನ್ನಿತರ ಮಾಹಿತಿಗಳನ್ನು ನೀವು ಸುಲಭವಾಗಿ ನೀವು ತಿಳಿಯಬಹುದು.
Schemer ಭೇಟಿ ನೀಡಲು ಕ್ಲಿಕ್‌ ಮಾಡಿ

Google Keep

Google Keep

ನಿಮ್ಮಲ್ಲಿರುವ ಫೋಟೋ,ದಾಖಲೆಗಳನ್ನು ಇದರಲ್ಲಿ ಅಪ್‌ಲೋಡ್‌ ಮಾಡಿ ಶಾಶ್ವತವಾಗಿ ಸಂಗ್ರಹಮಾಡಿಕೊಳ್ಳಬಹುದು.
Google Keep ಭೇಟಿ ನೀಡಲು ಕ್ಲಿಕ್‌ ಮಾಡಿ

Google Sky

Google Sky

ಖಗೋಳಶಾಸ್ತ್ರ ಆಸಕ್ತಿ ಇರುವವರಿಗೆ ಸಹಾಯಕವಾಗಬಲ್ಲ ಗೂಗಲ್ ಪ್ರೊಡೆಕ್ಟ್. ಅಮೆರಿಕದ ನಾಸಾದೊಂದಿಗೆ ಗೂಗಲ್‌ ಒಪ್ಪಂದ ಮಾಡಿಕೊಂಡಿದ್ದು, ನಾಸಾ ಚಿತ್ರದೊಂದಿಗೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸುಲಭವಾಗಿ ಅರ್ಥ‌ವಾಗುವಂತೆ ನೀವೇ ವೀಕ್ಷಿಸಬಹುದು.
Google Sky ಭೇಟಿ ನೀಡಲು ಕ್ಲಿಕ್‌ ಮಾಡಿ

Google Fonts

Google Fonts

ವಿವಿಧ ರೀತಿಯ ಫಾಂಟ್‌ಗಳು ನಿಮಗೆ ಬೇಕಾದಲ್ಲಿ ನೀವು ಗೂಗಲ್‌ ಫಾಂಟ್‌ ತಾಣಕ್ಕೆ ಭೇಟಿ ನೀಡಬಹುದು.ಈಗ 629 ವಿವಿಧ ವಿನ್ಯಾಸದ ಫಾಂಟ್‌ಗಳಿದ್ದು ಇದನ್ನು ಡೌನ್‌ಲೋಡ್‌ ಮಾಡಿ ನಿಮ್ಮ ಕೆಲಸದಲ್ಲಿ ಬಳಸಬಹುದು

ಇದನ್ನೂ ಓದಿ: ಗೂಗಲ್‌ನಿಂದ ಎರಡು ಕನ್ನಡ ಹೊಸ ಫಾಂಟು
Google Fonts ಭೇಟಿ ನೀಡಲು ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot