ಕಳೆದುಹೋದ ಸ್ಮಾರ್ಟ್‌ಫೋನ್ ಹುಡುಕುವುದು ಬಹಳ ಸುಲಭ!! ಹೇಗೆ?
ಈ ಡಿವೈಸ್‌ನಲ್ಲಿ ಇರುವುದರಿಂದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದು ಬಹಳ ಸುಲಭ.!!
ಮೊಬೈಲ್ ಕಳೆದು ಹೋದರೆ ಹುಡುಕಲು ಈಗಾಗಲೇ ಹಲವು ಆಪ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಆದರೆ, ಅವುಗಳ ಕಾರ್ಯನಿರ್ವಹಣೆ ಮಾತ್ರ ಅಷ್ಟಕಷ್ಟೆ.!! ಹಾಗಾಗಿ, ಅತ್ಯುತ್ತಮ ಮೊಬೈಲ್ ಟ್ರಾಕರ್ ಆಪ್ ಹುಡುಕಲು ಅಮೆರಿಕಾ ಮೂಲದ ಮೊಬೈಲ್ ವ್ಯಾಪಾರ ಸಮೂಹ 'ಸಿಟಿಐಎ' ಹೊಸದೊಂದು ತಂತ್ರಜ್ಞಾನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.!!
ಓದಿರಿ: ನಿಮ್ಮ ವಾಟ್ಸ್ಆಪ್ ಪ್ರೋಫೈಲ್ ಯಾರು ನೋಡಿದ್ದಾರೆ ಎಂದು ತಿಳಿಯುವುದು ಹೇಗೆ? ಫುಲ್ ಟ್ರಿಕ್ಸ್!!
ಕಾಣೆಯಾದ ಅಥವಾ ಕಳ್ಳತನವಾದ ಮೊಬೈಲ್‌ನ್ನು ಸುಲಭವಾಗಿ ಪತ್ತೆ ಹಚ್ಚಬಹುದಾದ ಅತ್ಯತ್ತಮ ತಂತ್ರಜ್ಞಾನ ಇದಾಗಿದ್ದು, ಜಿಎಸ್ಎಂಎ(GSMA) ಡಿವೈಸ್ ಚೆಕ್ ಹೆಸರಿನ ಈ ಆಪ್ ಈಗಾಗಲೇ ಟ್ರೆಂಡ್ ಹುಟ್ಟಿಹಾಕಿದೆ.!! ಹಾಗಾದರೆ ಜಿಎಸ್ಎಂಎ ಡಿವೈಸ್ ಚೆಕ್ ಆಪ್ ಹೇಗೆ ಕಾರ್ಯನಿರ್ವಹಣೆ ನೀಡುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.!!

ಏನಿದು ಜಿಎಸ್ಎಂಎ ಡಿವೈಸ್ ಚೆಕ್ ಆಪ್!!
ಪ್ರತಿ ಸ್ಮಾರ್ಟ್‌ಫೋನ್‌ನಲ್ಲಿಯೂ ಇಂಟರ್‌ನ್ಯಾಷನಲ್ ಮೊಬೈಲ್ ಇಕ್ವಿಪ್‌ಮೆಂಟ್ ಐಡೆಂಟಿಫಯರ್ (IMEI) ಎಂಬ ವಿಶಿಷ್ಟವಾದ ಕೋಡ್ ಇರುತ್ತದೆ. ಇದು ಪ್ರತ್ಯೇಕ ಮೊಬೈಲ್ ಫೋನ್‌ನಲ್ಲಿ ಬೇರೆ ಬೇರೆಯಾಗಿ ಲಭ್ಯವಿದ್ದು, ಈ ಸಂಖ್ಯೆಗಳನ್ನು ಬಳಸಿಕೊಂಡು ಜಿಎಸ್ಎಂಎ ಡಿವೈಸ್ ಚೆಕ್ ಆಪ್ ಕಾರ್ಯನಿರ್ವಹಿಸುತ್ತದೆ.!!

ಮೊಬೈಲ್ ಹುಡುಕುತ್ತದೆ.!!
ಹೊಸದಾಗಿ ಅಭಿವೃದ್ದಿಯಾಗಿರುವ ಜಿಎಸ್ಎಂಎ ಡಿವೈಸ್ ಚೆಕ್ ಆಪ್ ಮೊಬೈಲ್ ಕಾಣೆಯಾದರೆ (IMEI) ಎಂಬ ವಿಶಿಷ್ಟವಾದ ಕೋಡ್ ಉಪಯೋಗಿಸಿ ಮೊಬೈಲ್ ಹುಡುಕಲು ನೆರವಾಗುತ್ತದೆ. ಈ ಆಪ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದರೆ ಡಿವೈಸ್ ಬಗೆಗಿನ ಎಲ್ಲಾ ಮಾಹಿತಿಯನ್ನು ಬಳಕೆದಾರರಿಗೆ ಒದಗಿಸುತ್ತದೆ.!!

ಜಿಎಸ್ಎಂಎ ಡಿವೈಸ್!!
ಜಿಎಸ್ಎಂಎ ಆಪ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದರೆ 'ಜಿಎಸ್ಎಂಎ ಡಿವೈಸ್' ಅನ್ನು ಖರೀದಿಸಬೇಕು. ಈ ಡಿವೈಸ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಪ್ ನೀಡುವ ಸಂದೇಶಗಳನ್ನು ಪಡೆದು ನಿಮಗೆ ನೀಡುತ್ತದೆ..! ಆದರೆ, ಈ ಡಿವೈಸ್ ಉಚಿತವಲ್ಲ, ಬೆಲೆ ಇನ್ನು ನಿಗದಿಯಾಗಿಲ್ಲ.!!

10 ವರ್ಷಕ್ಕೂ ಹೆಚ್ಚಿನ ರೆಕಾರ್ಡ್
ಜಿಎಸ್ಎಂಎ ಡಿವೈಸ್ ಸ್ಮಾರ್ಟ್‌ಫೋನ್ ಮಾಹಿತಿ ಮತ್ತು ಅದರ ಕಾರ್ಯಕ್ಷಮತೆಯ ಕುರಿತಾದ 10 ವರ್ಷಕ್ಕೂ ಹೆಚ್ಚಿನ ಮಾಹಿತಿಯನ್ನು ರೆಕಾರ್ಡ್ ಮಾಡಿ ಇಡುತ್ತದೆ. ಆಪ್ ಕಳುಹಿಸುವ ಎಲ್ಲಾ ಮಾಹಿತಿಗಳು ಈ ಡಿವೈಸ್‌ನಲ್ಲಿ ಇರುವುದರಿಂದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದು ಬಹಳ ಸುಲಭ.!!
ಓದಿರಿ:ಬೆಂಗಳೂರಿನಲ್ಲಿ ತಯಾರಾದ ಆಪಲ್ ಐಫೋನ್ ಮಾರಾಟ ಆರಂಭ!! ಬೆಲೆ ಎಷ್ಟು?


Click it and Unblock the Notifications