Subscribe to Gizbot

ಬೆಂಗಳೂರಿನಲ್ಲಿ ತಯಾರಾದ ಆಪಲ್ ಐಫೋನ್ ಮಾರಾಟ ಆರಂಭ!! ಬೆಲೆ ಎಷ್ಟು?

Written By:

ಭಾರತದಲ್ಲಿ ಪ್ರಾಯೋಗಿಕವಾಗಿ ಜೋಡಣೆ ಮಾಡಿದ ಐಫೋನ್‌ಗಳ ಮಾರಾಟ ಆರಂಭವಾಗಿದೆ.!! ಹೌದು, ಸ್ಮಾರ್ಟ್‌ಫೋನ್ ದಿಗ್ಗಜ ಆಪಲ್ ಬೆಂಗಳೂರಿನಲ್ಲಿ ತಯಾರಿಸಿದ ಆಪಲ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟಕ್ಕಿಟ್ಟಿದೆ ಎನ್ನಲಾಗಿರುವ ಸುದ್ದಿಯೊಂದು ಹೊರಬಿದ್ದಿದೆ.!!

32GB ಸಂಗ್ರಹಣಾ ಸಾಮರ್ಥ್ಯದ ಐಫೋನ್ ಎಸ್‌ಇ ಸ್ಮಾರ್ಟ್‌ಫೋನ್ ಮೇಲೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಿನ್ಯಾಸ ಮಾಡಿದ ಹಾಗೂ ಭಾರತದಲ್ಲಿ ಜೋಡಣೆ ಮಾಡಿದ ಐಫೋನ್ ಎಂದು ಸ್ಮಾರ್ಟ್‌ಫೋನ್ ಬಾಕ್ಸ್‌ ಮೇಲೆ ಮುದ್ರಿಸಲಾಗಿದ್ದು, ಆದರೆ, ಈ ಬಗ್ಗೆ ಆಪಲ್ ಯಾವುದೇ ಸ್ಪಷ್ಟನೆ ವಿವರಣೆ ನೀಡಿಲ್ಲ.!!

ಬೆಂಗಳೂರಿನಲ್ಲಿ ತಯಾರಾದ ಆಪಲ್ ಐಫೋನ್ ಮಾರಾಟ ಆರಂಭ!! ಬೆಲೆ ಎಷ್ಟು?

ಓದಿರಿ:ಟೆಲಿಕಾಂ ವಾರ್‌ಗೆ ಬಹುದೊಡ್ಡ ಟ್ವಿಸ್ಟ್!..ಜಿಯೋ ಕೈ ಜೋಡಿಸಿದ ಏರ್‌ಟೆಲ್!! ಏನಿದು ಶಾಕಿಂಗ್ ಸುದ್ದಿ??

ಐಫೋನ್ಗಳ ಪ್ರಾಯೋಗಿಕ ಜೋಡಣೆಗೆ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಕೆಲವು ದಿನಗಳ ಹಿಂದೆ ಚಾಲನೆ ಆಪಲ್ ಕಂಪೆನಿ ಚಾಲನೆ ನೀಡಿತ್ತು. ಹಾಗಾಗಿ, ಬೆಂಗಳೂರು ಘಟಕದಲ್ಲಿ ಏಪ್ರಿಲ್‌ ತಿಂಗಳಿನಲ್ಲಿಯೇ ಈ ಫೋನ್‌ಗಳ ಜೋಡಣೆ ಕಾರ್ಯ ಮುಗಿದಿದೆ ಎನ್ನಲಾಗಿದೆ.!!

ಬೆಂಗಳೂರಿನಲ್ಲಿ ತಯಾರಾದ ಆಪಲ್ ಐಫೋನ್ ಮಾರಾಟ ಆರಂಭ!! ಬೆಲೆ ಎಷ್ಟು?

ಇನ್ನು ಭಾರತದಲ್ಲಿ ಜೋಡಣೆ ಮಾಡಿದ ಐಫೋನ್ ಬೆಲೆ ₹27,800 ಎಂದು ನಮೂದಿಸಲಾಗಿದ್ದು, ಇನ್ನೇನು ಕೆಲವೇ ದಿವಸಗಳಲ್ಲಿ ದೇಶಿ ಮಾರುಕಟ್ಟೆಗೆ ಬೆಂಗಳೂರಿನಲ್ಲಿ ತಯಾರಾಗಿರುವ ಆಪಲ್ ಸ್ಮಾರ್ಟ್‌ಫೋನ್‌ಗಳೂ ಲಗ್ಗೆ ಇಡಲಿವೆ.!! ದೇಶದ ಆಯ್ದ ಮಳಿಗೆಗಳಲ್ಲಿ ಮಾತ್ರ ಸೀಮಿತ ಸಂಖ್ಯೆಯ ಐಫೋನ್ ಎಸ್ಇ ಮಾರಾಟ ಮಾಡಲಾಗುವುದು ಎಂದು ಆಪಲ್ ಮೂಲಗಳು ಹೇಳಿವೆ.!!

ಓದಿರಿ: ಕಳೆದುಹೋದ ಸ್ಮಾರ್ಟ್‌ಫೋನ್ ಹುಡುಕುವುದು ಬಹಳ ಸುಲಭ!! ಹೇಗೆ?

English summary
As part of its trial run strategy, US tech giant Apple has started selling Indian assembled iPhones in select stores in the country. to know more visit to kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot