ಐಡಿಯಾ ಸಿಮ್ ಅಪ್‌ಗ್ರೇಡ್ ಮಾಡಿ ಉಚಿತ 2GB 4G ಡಾಟಾ ಪಡೆಯುವುದು ಹೇಗೆ?
ಸಿಂಪಲ್ ಸ್ಟೆಪ್‌ಗಳಿಂದ ಸಿಮ್ ಅಪ್‌ಗ್ರೇಡ್ ಮಾಡಿ, 2GB 4G ಡಾಟಾ ಉಚಿತವಾಗಿ ಪಡೆಯುವುದು ಹೇಗೆ ಎಂದು ತಿಳಿಯಿರಿ.
ವಾಟ್ ಆನ್ ಐಡಿಯಾ ಜಿ! ರಿಲಾಯನ್ಸ್ ಜಿಯೋ ಮುಂದೆ ಪೈಪೋಟಿ ನೀಡಲು ಎಲ್ಲಾ ಟೆಲಿಕಾಂ ಕಂಪನಿಗಳು ಸಹ ದಿನಕ್ಕೊಂದು ವಾಟ್ ಆನ್ ಐಡಿಯಾ ಬಗ್ಗೆ ಚಿಂತಿಸುತ್ತಿರುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಹಾಗೆ ದಿನನಿತ್ಯವೋ ಒಂದೊಂದು ಉಚಿತ ಆಫರ್‌ಗಳು, ಟ್ಯಾರಿಫ್ ಪ್ಲಾನ್‌ಗಳ ಬದಲಾವಣೆ ಬರದಲ್ಲಿ ಸಾಗುತ್ತಲೇ ಇದೆ.
ಈಗ ಅದಕ್ಕೆ ಸಾಕ್ಷಿಯಾಗಿ ವಾಟ್ ಆನ್ ಐಡಿಯಾ ಪಡೆದಿರುವ 'ಐಡಿಯಾ' ಟೆಲಿಕಾಂ ಸಿಮ್ ಕಾರ್ಡ್ ಅಪ್‌ಗ್ರೇಡ್ ಮಾಡಿಕೊಂಡವರಿಗೆ 2GB 4G ಡಾಟಾವನ್ನು ಉಚಿತವಾಗಿ ಆಫರ್ ಮಾಡುತ್ತಿದೆ.
ಐಡಿಯಾ'ದಿಂದ ಅನ್‌ಲಿಮಿಟೆಡ್ ವಾಯ್ಸ್ ಕರೆ ಪ್ಯಾಕ್‌ಗಳು: ಜಿಯೋಗೆ ಪ್ರತಿಕ್ರಿಯೆ
ಈ ಹಿಂದೆ ಐಡಿಯಾ(Idea) ಕಂಪನಿ 3G ಇಂದ 4G ಗೆ ಸಿಮ್ ಕಾರ್ಡ್ ಅಪ್‌ಗ್ರೇಡ್ ಮಾಡಿಕೊಂಡವರಿಗೆ ಕೇವಲ 1GB 4G ಡಾಟಾ ಆಫರ್ ಮಾಡಿತ್ತು. ಆಗ ಕೆಲವು ನಿರ್ಧಿಷ್ಟ 4G ವೃತ್ತಗಳಿಗೆ ಮಾತ್ರ ಆಫರ್ ನೀಡಲಾಗಿತ್ತು. ಆದರೆ ಈಗ ಕಂಪನಿ ಉಚಿತ ಡಾಟಾ ಆಫರ್ ಅನ್ನು ಎಲ್ಲಾ ರಾಜ್ಯಗಳಿಗೆ ವಿಸ್ತರಿಸಿದ್ದು, ಸಿಮ್ ಕಾರ್ಡ್ ಅಪ್‌ಗ್ರೇಡ್ ಮಾಡಿಕೊಂಡವರಿಗೆ 2GB 4G ಉಚಿತ ಡಾಟಾ ನೀಡುತ್ತಿದೆ.
ಕೇವಲ ಸಿಮ್ ಕಾರ್ಡ್ ಅಪ್‌ಗ್ರೇಡ್‌ನೊಂದಿಗೆ 2GB 4G ಡಾಟಾವನ್ನು ಉಚಿತವಾಗಿ ಪಡೆಯುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.
ದಕ್ಷಿಣ ಭಾರತದಲ್ಲಿ 75 ನಗರಗಳಿಗೆ ಐಡಿಯಾ 4ಜಿ ಸೇವೆ

ಹಂತ 1ː ಹೊಸ 4G ಸಿಮ್ ಕಾರ್ಡ್‌ಗಾಗಿ ಅಪ್ಲೇ ಮಾಡಿ
ಮೊದಲ ಹಂತದಲ್ಲಿ ಈ ಲಿಂಕ್ ಕ್ಲಿಕ್ ಮಾಡಿ ಹೊಸ 4G ಸಿಮ್ ಕಾರ್ಡ್‌ಗಾಗಿ ಅಪ್ಲೇ ಮಾಡಿ. ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ ಇತರೆ ಪ್ರಕ್ರಿಯೆಗಳನ್ನು ಮುಂದುವರೆಸಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 2ː ಸಿಮ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿ
ವೆಬ್‌ಸೈಟ್ ನಿಮ್ಮ ಸಿಮ್ ಕಾರ್ಡ್ 4G ಗೆ ಅಪ್‌ಗ್ರೇಡ್ ಆಗಬಲ್ಲದೇ ಅಥವಾ ಇಲ್ಲವೇ ಎಂಬುದನ್ನು ಚೆಕ್ ಮಾಡುತ್ತದೆ. ಅಲ್ಲದೇ ನೀವಿರುವ ಪ್ರದೇಶ 4G ವೃತ್ತವೇ ಎಂಬುದನ್ನು ಚೆಕ್ ಮಾಡುತ್ತದೆ.

ಹಂತ 3ː ನಿಮ್ಮ ವಿಳಾಸವನ್ನು ಫಿಲ್ ಮಾಡಿ
ಈ ಹಂತದಲ್ಲಿ, ನಿಮ್ಮ ಸಂಪೂರ್ಣ ವಿಳಾಸವನ್ನು ಪಿನ್ ಕೋಡ್ ಸಹಿತ ಎಂಟರ್ ಮಾಡಿ ಮತ್ತು ಸಿಮ್ ಕಾರ್ಡ್‌ಗಾಗಿ ಕಾಯಿರಿ
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 4ː ಸಿಮ್ ಕಾರ್ಡ್‌ಗಾಗಿ ಕಾಯಿರಿ
3-4 ದಿನಗಳ ಒಳಗಾಗಿ, ಐಡಿಯಾ ಪ್ರತಿನಿಧಿ ನಿಮಗೆ ಕರೆ ಮಾಡಿ, ನಿಮ್ಮ ವಿಳಾಸ ಕೇಳುತ್ತಾರೆ. ಅವರಿಗೆ ನಿಮ್ಮ ವಿಳಾಸ ಖಚಿತಪಡಿಸಿ. ನಂತರ ಪ್ರತಿನಿಧಿ ಸಿಮ್ ಕಾರ್ಡ್ ನೀಡಲು ನಿಮ್ಮ ಮನೆಗೆ ಬರುತ್ತಾರೆ.

ಹಂತ 5ː ಹೊಸ 4G ಸಿಮ್ ಕಾರ್ಡ್ ಆಕ್ಟಿವೇಟ್ ಮಾಡಿ
ಸಿಮ್ ಕಾರ್ಡ್ ಪಡೆದ ನಂತರ, ನಿಮ್ಮ ಸ್ಮಾರ್ಟ್‌ಫೋನ್‌ಗೆ ಇನ್‌ಸರ್ಟ್ ಮಾಡಿ. 24-48 ಗಂಟೆಗಳ ಒಳಗಾಗಿ ನಿಮ್ಮ ಸಿಮ್ ಆಕ್ಟಿವೇಟ್ ಆಗುತ್ತದೆ. ನಂತರ 4G 2GB ಪ್ರೊಮೋಶನಲ್ ಡಾಟಾ ಉಚಿತವಾಗಿ ಕ್ರೆಡಿಟ್ ಆಗುತ್ತದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








