ದಕ್ಷಿಣ ಭಾರತದಲ್ಲಿ 75 ನಗರಗಳಿಗೆ ಐಡಿಯಾ 4ಜಿ ಸೇವೆ

By Shwetha
|

ಐಡಿಯಾ ಸೆಲ್ಯುಲಾರ್ ತನ್ನ 4ಜಿ ಎಲ್‌ಟಿಇ ಸೇವೆಗಳನ್ನು ದಕ್ಷಿಣ ಭಾರತದ ಐದು ರಾಜ್ಯಗಳಾದ್ಯಂತ ಲಾಂಚ್ ಮಾಡಿದೆ. ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ತಮಿಳು ನಾಡು ಮತ್ತು ತೆಲಂಗಾಣ ಆ ರಾಜ್ಯಗಳಾಗಿವೆ. ಮೊದಲ ಹಂತದಲ್ಲಿ ಇದು ದಕ್ಷಿಣ ಭಾರತದ 75 ನಗರಗಳಿಗೆ ಲಭ್ಯವಿದ್ದು ಕೊಚ್ಚಿ, ಹೊಸೂರು, ಕಡಪ, ಮಲಪ್ಪುರಮ್, ಮಧುರೈ, ಮೈಸೂರು, ರಾಜಮಂಡ್ರಿ, ತಿರುಚಿರಾಪಳ್ಳಿ, ತಿರುನಲ್‌ವೇಲಿ, ವಿಜಯವಾಡಾ, ತಿರುಪ್ಪೂರ್ ಮತ್ತು ವಿಶಾಖಾಪಟ್ಟಣಮ್‌ಗಳನ್ನು ಒಳಗೊಂಡಿದೆ.

ಓದಿರಿ: ಮೊಬೈಲ್‌ಗಳ ನಡುವೆ ಟಾಕ್‌ಟೈಮ್‌ ಹಂಚಿಕೆ ಹೇಗೆ

ಅಂತೆಯೇ ಬೆಳಗಾಮ್, ಕ್ಯಾಲಿಕಟ್, ಕಡಲೂರ್, ಚಿತ್ರದುರ್ಗಾ, ಗುಂಟೂರ್, ಕಾಕಿನಾಡಾ, ಕಾಂಚೀಪುರಮ್ ಮತ್ತು ತ್ರಿಚೂರ್ ಅನ್ನು ಡಿಸೆಂಬರ್ 31 2015 ರಿಂದ ಇದು ಅನುಸರಿಸಲಿದೆ ಎಂದು ಐಡಿಯಾ ತಿಳಿಸಿದೆ. ದೊಡ್ಡ ನಗರಗಳಾದ ಬೆಂಗಳೂರು, ಚೆನ್ನೈ, ಹೈದ್ರಾಬಾದ್, ತ್ರಿವೇಂಡ್ರಮ್, ಮಂಗಳೂರು ಮತ್ತು ಕೊಯಂಬತ್ತೂರು ಐಡಿಯಾ 4ಜಿ ಸೇವೆಯನ್ನು ಮಾರ್ಚ್ 2016 ರಂದು ಪಡೆದುಕೊಳ್ಳಲಿದೆ. ಅಂತೆಯೇ ಇತರ ರಾಜ್ಯಗಳಾದ ಮಧ್ಯಪ್ರದೇಶ್, ಚತ್ತೀಸಘಡ, ಮಹಾರಾಷ್ಟ್ರ ಮತ್ತು ಗೋವಾ, ಪಂಜಾಬ್, ಹರಿಯಾಣಾ, ನಾರ್ತ್ ಈಸ್ಟ್ ಮತ್ತು ಒರಿಸ್ಸಾ ಮಾರ್ಚ್ 2016 ರಂದು 4ಜಿ ಸೇವೆಯನ್ನು ಪಡೆದುಕೊಳ್ಳಲಿದೆ.

ಐಡಿಯಾ ಸೇವೆ

ಐಡಿಯಾ ಸೇವೆ

ಐಡಿಯಾ 4ಜಿ ದರಗಳು 1ಜಿಬಿ ಡೇಟಾಗೆ ರೂ 246 ಅನ್ನು ನಿಗದಿಪಡಿಸಿದ್ದರೆ, 12 ಜಿಬಿ ಡೇಟಾ ಬೆಲೆ ರೂ 1497 ಆಗಿದೆ. 4ಜಿ ಪ್ಯಾಕ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬಂದಿದ್ದು ಸರ್ಕಲ್ ಅನ್ನು ಅನುಸರಿಸಿ ದರವನ್ನು ನಿಗದಿಪಡಿಸಲಾಗುತ್ತದೆ. ಡಬಲ್ ಡೇಟಾ ಯೋಜನೆಯನ್ನು ಐಡಿಯಾ ನೀಡುತ್ತಿದ್ದು ಇದು ಪೋಸ್ಟ್ ಪೇಡ್ ಮತ್ತು ಪ್ರೀಪೇಡ್ ಗ್ರಾಹಕರಿಗೆ ಸೀಮಿತ ಅವಧಿಯಲ್ಲಿ ದೊರೆಯಲಿದೆ.

ಸ್ಪೆಕ್ಟ್ರಮ್

ಸ್ಪೆಕ್ಟ್ರಮ್

ಇದು 1800MHZ ಸ್ಪೆಕ್ಟ್ರಮ್ ಆಕ್ಶನ್ ಅನ್ನು ಫೆಬ್ರವರಿ 2014 ಮತ್ತು ಮಾರ್ಚ್ 2015 ರಂದು ನಡೆಸಲಿದೆ. ತನ್ನ 10 ಟೆಲಿಕಾಮ್ ಸರ್ವೀಸ್ ಪ್ರದೇಶಗಳಲ್ಲಿ 4ಜಿ ಸೇವೆಗಳನ್ನು ಬಿಡುಗಡೆ ಮಾಡುವ ಯೋಜನೆಗಳನ್ನು ಇದು ಈಗಾಗಲೇ ಘೋಷಿಸಿದೆ.

2016 ರ ಪ್ರಥಮಾರ್ಧ 750 ಸಣ್ಣ ಮತ್ತು ದೊಡ್ಡ ನಗರಗಳು

2016 ರ ಪ್ರಥಮಾರ್ಧ 750 ಸಣ್ಣ ಮತ್ತು ದೊಡ್ಡ ನಗರಗಳು

ಮಹಾರಾಷ್ಟ್ರ ಮತ್ತು ಗೋವಾ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಚತ್ತೀಸಘಡ, ಕೇರಳಾ, ಪಂಜಾಬ್, ಮತ್ತು ಹರ್ಯಾಣಾ, ಕರ್ನಾಟಕ, ಒರಿಸ್ಸಾ, ತಮಿಳುನಾಡು ಮತ್ತು ನಾರ್ತ್ ಈಸ್ಟ್ ಸೇರಿದಂತೆ 750 ಸಣ್ಣ ಮತ್ತು ದೊಡ್ಡ ನಗರಗಳನ್ನು 2016 ರ ಪ್ರಥಮಾರ್ಧದಲ್ಲೇ ಇದು ಕವರ್ ಮಾಡಲಿದೆ.

ವೀಡಿಯೊಕಾನ್‌ನೊಂದಿಗೆ ಒಪ್ಪಂದ

ವೀಡಿಯೊಕಾನ್‌ನೊಂದಿಗೆ ಒಪ್ಪಂದ

ಇತ್ತೀಚೆಗೆ ತಾನೇ ಐಡಿಯಾ ವೀಡಿಯೊಕಾನ್‌ನೊಂದಿಗೆ ಒಪ್ಪಂದವೊಂದಕ್ಕೆ ಸಹಿಮಾಡಿದ್ದು "ಬಳಸುವ ಹಕ್ಕು" 1800 MHZ ಸ್ಪೆಕ್ಟ್ರಮ್ ಅನ್ನು ಸ್ಪೆಕ್ಟ್ರಮ್ ಟ್ರೇಡಿಂಗ್ ಅಗ್ರಿಮೆಂಟ್ ಅಡಿಯಲ್ಲಿ ಸಹಿ ಹಾಕಿದೆ.

ಪ್ರಮುಖ ನಾಯಕತ್ವ ಮಾರುಕಟ್ಟೆ

ಪ್ರಮುಖ ನಾಯಕತ್ವ ಮಾರುಕಟ್ಟೆ

ತನ್ನ ಎರಡು ಪ್ರಮುಖ ನಾಯಕತ್ವ ಮಾರುಕಟ್ಟೆಗಳಾದ ಗುಜರಾತ್ ಮತ್ತು ಉತ್ತರ ಪ್ರದೇಶಕ್ಕಾಗಿ ಈ ಒಪ್ಪಂದವನ್ನು ಐಡಿಯಾ ವೀಡಿಯೊಕಾನ್‌ನೊಂದಿಗೆ ಮಾಡಿಕೊಂಡಿದೆ.

12 ಸೇವಾ ಪ್ರದೇಶ

12 ಸೇವಾ ಪ್ರದೇಶ

4ಜಿ ಸೇವೆಗಳನ್ನು 12 ಸೇವಾ ಪ್ರದೇಶಗಳಿಗೆ ವಿಸ್ತರಿಸುವ ಯೋಜನೆಯನ್ನು ಕಂಪೆನಿ ಹಾಕಿಕೊಂಡಿದ್ದು, 75% ದಷ್ಟು ಐಡಿಯಾದ ಆದಾಯವನ್ನು ಇದು ಆವರಿಸಿಕೊಳ್ಳುತ್ತದೆ ಎಂಬುದಾಗಿ ಕಂಪೆನಿ ತಿಳಿಸಿದೆ.

 75 ನಗರ

75 ನಗರ

ಈ 75 ನಗರಗಳಲ್ಲಿ 4ಜಿ ಡಿವೈಸ್‌ಗಳನ್ನು ಹೊಂದಿರುವ ಐಡಿಯಾ ಗ್ರಾಹಕರು ತಮ್ಮ ಪ್ರಸ್ತುತ ಸಿಮ್ ಕಾರ್ಡ್‌ಗಳನ್ನು ಹೊಸ 4ಜಿ ಸಿಮ್ ಕಾರ್ಡ್‌ಗಳಿಗೆ ಅಪ್‌ಗ್ರೇಡ್ ಮಾಡುವ ಮೂಲಕ 4ಜಿ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Idea Cellular, today launched its 4G LTE services across five states in South India – Andhra Pradesh, Karnataka, Kerala, Tamil Nadu and Telangana. In the first phase it will be available across 75 Towns in Southern India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X