Home
ಟೆಕ್ ನೌಕರಿ

ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಮೊಬೈಲ್‌ನಲ್ಲಿಯೇ ತಿಳಿಯುವುದು ಹೇಗೆ?

ಹೊಸ ಬ್ಯಾಂಕ್ ಖಾತೆ ತೆರೆಯುವವರು ಮತ್ತು ಈಗಾಗಲೇ ಬ್ಯಾಂಕ್‌ಗಳ ಖಾತೆ ಹೊಂದಿರುವ ಎಲ್ಲರೂ ತಪ್ಪದೆ ತಮ್ಮ ಆಧಾರ್ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಿ ಬ್ಯಾಂಕ್ ಖಾತೆಗಳೊಯೊಂದಿಗೆ ಆಧಾರ್ ಜೋಡಿಸಿರಬೇಕು

By Bhaskar N J
Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!

ಹೊಸ ಬ್ಯಾಂಕ್ ಖಾತೆ ತೆರೆಯುವವರು ಮತ್ತು ಈಗಾಗಲೇ ಬ್ಯಾಂಕ್‌ಗಳ ಖಾತೆ ಹೊಂದಿರುವ ಎಲ್ಲರೂ ತಪ್ಪದೆ ತಮ್ಮ ಆಧಾರ್ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಿ ಬ್ಯಾಂಕ್ ಖಾತೆಗಳೊಯೊಂದಿಗೆ ಆಧಾರ್ ಜೋಡಿಸಿರಬೇಕು ಎಂಬುದನ್ನು ತಿಳಿದಿರುವ ನೀವು, ಆಧಾರ್ ಅನ್ನು ನಿಮ್ಮೆಲ್ಲಾ ಬ್ಯಾಂಕ್ ಖಾತೆಗಗಳಿಗೆ ಜೋಡಿಸಿದ್ದೀರಾ ಎಂದುಕೊಳ್ಳುತ್ತೇವೆ.

ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿಯುವುದು ಹೇಗೆ?

ನಿಮ್ಮೆಲ್ಲಾ ಬ್ಯಾಂಕ್ ಖಾತೆಗಳಿಗೂ ಆಧಾರ್ ಜೋಡಿಸಿದ್ದೀರಾ ಎಂಬುದು ನಿಮಗೆ ದೃಢೀಕರಣವಾಗಿದೆ. ಆದರೆ ಅಪ್ಪಿತಪ್ಪಿ ಬ್ಯಾಂಕ್‌ನಲ್ಲಿಯೋ ಅಥವಾ ನಿಮ್ಮದೇ ತಪ್ಪಿನಿಂದ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರದಿದ್ದರೆ? ಹೌದು. ಇಂತಹ ಘಟನೆಗಳು ಹಲವೆಡೆ ನಡೆದಿರುವುದರಿಂದ ಆಧಾರ್ ನಿಮ್ಮೆಲ್ಲಾ ಬ್ಯಾಂಕ್ ಖಾತೆಗೆ ಜೋಡಣೆಯಾಗಿದೆಯೇ ಎಂದು ಮತ್ತೊಮ್ಮೆ ಚೆಕ್ ಮಾಡಬೇಕಿದೆ.

ಆಧಾರ್ ನಿಮ್ಮೆಲ್ಲಾ ಬ್ಯಾಂಕ್ ಖಾತೆಗೆ ಜೋಡಣೆಯಾಗಿದೆಯೇ ಎಂಬುದನ್ನು ತಿಳಿಯಲು ಆಧಾರ್ ಪ್ರಾಧಿಕಾರ ಕೂಡ ವ್ಯವಸ್ಥೆ ಮಾಡಿಕೊಟ್ಟಿದ್ದು, ಹಾಗಾದರೆ, ಯಾವ ಯಾವ ಬ್ಯಾಂಕ್ ಖಾತೆಗಳಿಗೆ ಆಧಾರ್ ಅನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕವೇ ತಿಳಿಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿಯುವುದು ಹೇಗೆ?

ಕಂಪ್ಯೂಟರ್ ಮೂಲಕ ಮಾಹಿತಿಯನ್ನು ತಿಳಿಯ ಬಯಸಿದರೆ ಹೀಗೆ ಮಾಡಿ

ಹಂತ 1: ಆಧಾರ್ ನ ಅಧಿಕೃತ ವೆಬ್ಸೈಟ್ "www.uidai.gov.in" ತೆರೆಯಿರಿ.

ಹಂತ 2: "ಚೆಕ್ ಆಧಾರ್ ಆಂಡ್ ಬ್ಯಾಂಕ್ ಅಕೌಂಟ್ ಲಿಂಕಿಂಗ್ ಸ್ಟೇಟಸ್" ಮೇಲೆ ಕ್ಲಿಕ್ ಮಾಡಿ

ಹಂತ 3: ಈಗ ಅದು ನಿಮ್ಮ ಆಧಾರ್ ಸಂಖ್ಯೆ ಮತ್ತು ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸುವಂತೆ ನಿಮ್ಮನ್ನು ಕೇಳಿಕೊಳ್ಳುತ್ತದೆ.

ಹಂತ 4: ನಂತರ ಆಧಾರ್ ಡೇಟಾಬೇಸ್ನಲ್ಲಿ ನೋಂದಾವಣೆಗೊಂಡಿರುವ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕೋಡ್ ಒಂದನ್ನು ಕಳುಹಿಸಲಾಗುತ್ತದೆ.

ಹಂತ 5: ಈಗ ನಿಮ್ಮ ಮೊಬೈಲ್ ಗೆ ಬಂದ OTP ಯನ್ನು ನಮೂದಿಸಿ ಲಾಗಿನ್ ಎಂದು ಕ್ಲಿಕ್ ಮಾಡಿ.

ಮೊಬೈಲ್ ಮೂಲಕ ಮೂಲಕ ಮಾಹಿತಿಯನ್ನು ತಿಳಿಯ ಬಯಸಿದರೆ ಹೀಗೆ ಮಾಡಿ

ಹಂತ 1: *99*99*1 ಎಂದು ಡಯಲ್ ಮಾಡಿ(ಮೆಸೇಜ್ ಒಂದಕ್ಕೆ 50 ಪೈಸೆ ಶುಲ್ಕ ವಿಧಿಸಲಾಗುತ್ತದೆ)

ಹಂತ 2: ಈಗ ಅದು ನಿಮ್ಮನ್ನು ನಿಮ್ಮ 12-ಅಂಕಿ ಯ ಆಧಾರ್ ಸಂಖ್ಯೆಯನ್ನು ನಮೂದಿಸುವಂತೆ ವಿನಂತಿಸುತ್ತದೆ.

ಹಂತ 3: ಆಧಾರ್ ಸಂಖ್ಯೆ ನಮೂದಿಸಿದ ನಂತರ ಅದು ನಿಮ್ಮನ್ನು ಆಧಾರ್ ಸಂಖ್ಯೆ ಸರಿಯಾಗಿದೆಯೇ ಎಂದು ದೃಢೀಕರಿಸುವಂತೆ ಕೇಳುತ್ತದೆ. ಆಧಾರ್ ಸಂಖ್ಯೆಯಲ್ಲಿ ಏನಾದರೂ ತಪ್ಪಾಗಿದ್ದರೆ ಈ ಹಂತದಲ್ಲಿ ಅದನ್ನು ಸರಿಪಡಿಸಿ ಮತ್ತು ದೃಢೀಕರಿಸಿ ಮುಂದಿನ ಹಂತಕ್ಕೆ ಹೋಗಬಹುದಾಗಿದೆ

ಹಂತ 4: ಈಗ ನಿಮ್ಮ ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ನಿಮಗೆ ನೀಡುತ್ತದೆ.

ಓದಿರಿ: ನಕಲಿ ಐಫೋನ್ ಅನ್ನು ಸುಲಭವಾಗಿ ಗುರುತಿಸುವುದು ಹೇಗೆ?!!

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್ ವೇಗ ಕಡಿಮೆಯಾಗಿದೆಯೇ?..ವೇಗ ಹೆಚ್ಚಿಸುವುದು ಹೇಗೆ?

Best Mobiles in India

English summary
Here's a step-by-step guide to check whether your Aadhaar has been linked with yourbank account. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+