ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್ ವೇಗ ಕಡಿಮೆಯಾಗಿದೆಯೇ?..ವೇಗ ಹೆಚ್ಚಿಸುವುದು ಹೇಗೆ?

ನಾನು 4ಜಿ ಸ್ಮಾರ್ಟ್‌ಫೋನ್ ಹೊಂದಿದ್ದೇನೆ. 4ಜಿ ಇಂಟರ್ನೆಟ್ ಕನೆಕ್ಷನ್‌ ಕೂಡ ಲಭ್ಯವಿದೆ. ಆದರೆ, ಸ್ಮಾರ್ಟ್‌ಫೋನಿನಲ್ಲಿ ಇಂಟರ್‌ನೆಟ್ ವೇಗ 2ಜಿಗಿಂತ ಕಡಿಮೆ ಇದೆ ಎಂದು ಬಹುತೇಕರು ಹೇಳುತ್ತಾರೆ.

|

ನಾನು 4ಜಿ ಸ್ಮಾರ್ಟ್‌ಫೋನ್ ಹೊಂದಿದ್ದೇನೆ. 4ಜಿ ಇಂಟರ್ನೆಟ್ ಕನೆಕ್ಷನ್‌ ಕೂಡ ಲಭ್ಯವಿದೆ. ಆದರೆ, ಸ್ಮಾರ್ಟ್‌ಫೋನಿನಲ್ಲಿ ಇಂಟರ್‌ನೆಟ್ ವೇಗ 2ಜಿಗಿಂತ ಕಡಿಮೆ ಇದೆ ಎಂದು ಬಹುತೇಕರು ಹೇಳುತ್ತಾರೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್ ವೇಗ ಹೆಚ್ಚಿಸಲು ಏನು ಮಾಡಬೇಕು ಎಂಬ ಕೆಲವು ಸಲಹೆಗಳು ನಮ್ಮಲ್ಲಿವೆ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್ ಬ್ರೌಸಿಂಗ್ ವೇಗ ಹೆಚ್ಚಿಸಲು ಮೊದಲ ಸಲಹೆ ಎಂದರೆ ನಿವು ಸ್ಮಾರ್ಟ್‌ಫೋನ್‌ ಬಳಸುವ ಅಭ್ಯಾಸ ಹಾಗೂ ಬ್ರೌಸಿಂಗ್ ಮಾಡುವ ಮಾರ್ಗದಲ್ಲಿ ಒಂದಷ್ಟು ಶಿಸ್ತು ರೂಢಿಸಿಕೊಳ್ಳುವುದು. ಈ ಎರಡೂ ಅಭ್ಯಾಸಗಳಿದ್ದರೆ ಮಾತ್ರ ನೀವು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು.

ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್ ವೇಗ ಕಡಿಮೆಯಾಗಿದೆಯೇ?.ವೇಗ ಹೆಚ್ಚಿಸುವುದು ಹೇಗೆ

ಸ್ಮಾರ್ಟ್‌ಫೋನಿನ ಬ್ರೌಸಿಂಗ್ ವೇಗವು ನೀವು ಯಾವ ಬ್ರೌಸರ್ ಬಳಸುತ್ತಿದ್ದೀರಿ ಎಂಬುದನ್ನೂ ಕೂಡ ಅವಲಂಬಿಸಿರುತ್ತದೆ. ಈಗ ಬಹುತೇಕರು ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಕ್ರೋಮ್‌ ಬ್ರೌಸರ್‌ ಬಳಸುವುದು ಸಾಮಾನ್ಯವಾಗಿರುವುದರಿಂದ, ಕ್ರೋಮ್‌ನಲ್ಲಿ ಬ್ರೌಸ್ ಮಾಡುವಾಗ ಬ್ರೌಸಿಂಗ್ ವೇಗ ತಗ್ಗುವುದೇಕೆ ಎಂಬುದನ್ನು ತಿಳಿದುಕೊಳ್ಳೋಣ.

ಗೂಗಲ್‌ ಕ್ರೋಮ್‌ ಉತ್ತಮ ಬ್ರೌಸರ್ ಆದರೂ ಅದರ ಮೂಲಕ ಬ್ರೌಸ್ ಮಾಡುವಾಗ ಬ್ರೌಸಿಂಗ್ ವೇಗ ತಗ್ಗುತ್ತದೆ. ಕ್ರೋಮ್ ಬಳಸುವ ಪಾಸ್‌ವರ್ಡ್‌, ಬುಕ್‌ಮಾರ್ಕ್‌ ಹಾಗೂ ಹಿಸ್ಟರಿಯನ್ನು ಕ್ರೋಮ್‌ ನೆನಪಿಟ್ಟುಕೊಳ್ಳುವುದರಿಂದ ಹಿಸ್ಟರಿ ಕ್ಲಿಯರ್ ಮಾಡದೆ ಬ್ರೌಸಿಂಗ್ ಮಾಡಿದರೆ ವೇಗ ತಗ್ಗುತ್ತದೆ. ಹಾಗಾಗಿ, ಪ್ರತಿ ಬಾರಿ ಬ್ರೌಸ್ ಮಾಡುವ ಮುನ್ನ ಹಿಸ್ಟರಿ ಕ್ಲಿಯರ್ ಮಾಡಿ.

ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್ ವೇಗ ಕಡಿಮೆಯಾಗಿದೆಯೇ?.ವೇಗ ಹೆಚ್ಚಿಸುವುದು ಹೇಗೆ

ಇನ್ನು ಸ್ಮಾರ್ಟ್‌ಫೋನ್‌ನ ಇತರೆ ಆಪ್‌ಗಳ ಕ್ಯಾಚ್‌ ಕ್ಲಿಯರ್ ಮಾಡದೇ ಇರುವುದು ಕೂಡ ಬ್ರೌಸಿಂಗ್‌ ವೇಗ ತಗ್ಗಲು ಕಾರಣವಾಗಬಹುದು. ಹೀಗಾಗಿ ಆಪ್‌ ಕ್ಯಾಚ್‌ ಕ್ಲಿಯರ್ ಮಾಡಿ. ಮೊಬೈಲ್‌ ಸೆಟ್ಟಿಂಗ್ಸ್ ತೆರೆದು ಯಾವ ಆಪ್‌ನ ಕ್ಯಾಚ್‌ ಕ್ಲಿಯರ್‌ ಮಾಡಬೇಕೋ ಅದರ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಕ್ಯಾಚ್‌ ಕ್ಲಿಯರ್ ಆಯ್ಕೆ ಮಾಡಿದರೆ ನಿಮ್ಮ ಫೋನ್ ಮತ್ತು ಡೇಟಾ ವೇಗ ಹೆಚ್ಚುತ್ತದೆ.

Unboxing of Rs. 8,499 LED TV from Daiwa

ಇದರ ಜೊತೆಗೆ ತಿಳಿಯಬೇಕಾದ ಅಂಶ ಎಂದರೇ ಎಷ್ಟೇ ದುಬಾರಿ ಸ್ಮಾರ್ಟ್‌ಫೋನ್‌ ನಿಮ್ಮಲ್ಲಿದ್ದರೂ ಇಂಟರ್ನೆಟ್‌ನ ವೇಗವು ಸ್ಥಳ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ ಎಂಬುದೂ ಸತ್ಯ. ಹಾಗಾಗಿ, ನಿಮ್ಮ ಇಂಟರ್‌ನೆಟ್ ವೇಗಕ್ಕೆ ಈ ಎರಡೂ ತೊಂದರೆಗಳು ಎದುರಾಗಿದ್ದರೆ, ಆ ಸಮಸ್ಯೆಗಳಿಗೆ ನೀವು ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಕೂಡ ನಿಜ.

ಓದಿರಿ: ಸ್ಮಾರ್ಟ್‌ಫೋನಿನಲ್ಲಿ "ಗೂಗಲ್ ಡಾಕ್ಸ್" ಆಪ್ ಇದ್ದರೆ ಏನೆಲ್ಲಾ ಲಾಭ ಗೊತ್ತಾ?

Best Mobiles in India

English summary
Unfortunately, phones don’t always run at peak efficiency; sometimes you have to step in and lend a helping hand. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X