Home
ಟೆಕ್ ನೌಕರಿ

ಫೇಸ್‌ಬುಕ್‌ ಪೇಜ್‌ ಲೈಕ್ ಮಾಡಲು, ಎಲ್ಲಾ ಸ್ನೇಹಿತರನ್ನು ಒಂದೇ ಕ್ಲಿಕ್‌ನಿಂದ ಇನ್‌ವೈಟ್‌ ಮಾಡುವುದು ಹೇಗೆ?

5000 ಫೇಸ್‌ಬುಕ್ ಸ್ನೇಹಿತರನ್ನು ಒಂದೇ ಕ್ಲಿಕ್‌ನಿಂದ ಪೇಜ್‌ ಲೈಕ್‌ ಮಾಡಲು ಇನ್‌ವೈಟ್ ಮಾಡಬಹುದು.

By Suneel

ಫೇಸ್‌ಬುಕ್‌ ಇಂದು ಪ್ರಪಂಚದಲ್ಲೇ ಹೆಚ್ಚು ಜನರು ಬಳಸುವ ಪ್ರಖ್ಯಾತ ಸಾಮಾಜಿಕ ಜಾಲತಾಣ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಂದು ಫೇಸ್‌ಬುಕ್‌ ಅನ್ನು ನ್ಯೂಸ್‌ ಫೀಡ್‌ಗಾಗಿ, ಹಲವರು ಹಲವು ಗ್ರೂಪ್‌ಗಳನ್ನು ಕ್ರಿಯೇಟ್‌ ಮಾಡಿಕೊಂಡು ಈವೆಂಟ್ ಮ್ಯಾನೇಜ್‌ ಮಾಡಲು ಬಳಸುತ್ತಾರೆ. ಫೇಸ್‌ಬುಕ್‌ ಪೇಜ್‌ ಮತ್ತು ಫೇಸ್‌ಬುಕ್‌ ಗ್ರೂಪ್‌ ಇಂದು ಹಲವು ಈವೆಂಟ್, ಸಮುದಾಯಗಳು, ಬ್ಯುಸಿನೆಸ್ ಅನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

FB ಪೇಜ್‌ ಲೈಕ್‌ಗಾಗಿ, ಎಲ್ಲಾ ಸ್ನೇಹಿತರನ್ನು ಒಂದೇ ಕ್ಲಿಕ್‌ನಿಂದ ಇನ್‌ವೈಟ್‌ ಹೇಗೆ

ಅಂದಹಾಗೆ ಇಂದಿನ ಲೇಖನದಲ್ಲಿ ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಲು ಅಥವಾ ಗ್ರೂಪ್‌ಗೆ ಬಹುಸಂಖ್ಯಾತರನ್ನು ಒಂದೇ ಕ್ಲಿಕ್‌ನಿಂದ ಆಹ್ವಾನ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.

'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

ಉದಾಹರಣೆಗೆ ಫೇಸ್‌ಬುಕ್‌ನಲ್ಲಿ 5000 ಸ್ನೇಹಿತರು ಇರುತ್ತಾರೆ. 5000 ಸ್ನೇಹಿತರನ್ನು ನಿಮ್ಮ ನಿರ್ಧಿಷ್ಟ ಫೇಸ್‌ಬುಕ್‌ ಪೇಜ್‌ ಅನ್ನು ಲೈಕ್ ಮಾಡಲು ಅಥವಾ ಗ್ರೂಪ್‌ಗೆ ಆಹ್ವಾನ ಮಾಡುವುದಾದರೆ ನಿಮಗೆ 1.5 ಗಂಟೆಗಳ ಕಾಲಾವಕಾಶ ಬೇಕು. ಆದರೆ ನಾವು ಇಂದು ತಿಳಿಸುತ್ತಿರುವ ಟ್ರಿಕ್ಸ್‌ನಿಂದ ಕೇವಲ ಒಂದೇ ಕ್ಲಿಕ್‌ನಿಂದ 5000 ಸ್ನೇಹಿತರನ್ನು ಒಮ್ಮೆಯೇ ಪೇಜ್‌ ಲೈಕ್‌ ಮಾಡಲು ಆಹ್ವಾನ ನೀಡಬಹುದು. ಅದು ಹೇಗೆ ಎಂದು ಮುಂದೆ ಓದಿ ತಿಳಿಯಿರಿ.

ಹಂತ 1

ಹಂತ 1

ಈ ಕೆಳಗೆ ನೀಡಲಾದ ಗೂಗಲ್ ಕ್ರೋಮ್ ಎಕ್ಸ್ಟೆನ್ಷನ್ ಇನ್‌ಸ್ಟಾಲ್‌ ಮಾಡಿ.
Add Extension

ಹಂತ 2

ಹಂತ 2

ಗೂಗಲ್‌ ಕ್ರೋಮ್‌ಗೆ ಈ ಎಕ್ಸ್ಟೆನ್ಷನ್ ಆಡ್‌ ಮಾಡಿ. ಎಕ್ಸ್ಟೆನ್ಷನ್ ನಿಮ್ಮ ಫೇಸ್‌ಬುಕ್‌ ಪೇಜ್‌ ಅನ್ನು ನಿಮ್ಮ ಎಲ್ಲಾ ಸ್ನೇಹಿತರನ್ನು ಒಂದೇ ಕ್ಲಿಕ್‌ನಿಂದ ಲೈಕ್‌ ಮಾಡಲು ಆಹ್ವಾನಿಸಲು ಸಹಾಯ ಮಾಡುತ್ತದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 3

ಹಂತ 3

ಗೂಗಲ್‌ ಕ್ರೋಮ್ ಎಕ್ಸ್ಟೆನ್ಷನ್ ಒಮ್ಮೆ ಆಡ್‌ ಮಾಡಿದರೆ ಬ್ರೌಸರ್‌ನ ಮೇಲ್ಭಾಗದ ಬಲಭಾಗದಲ್ಲಿ ಐಕಾನ್ ಪ್ರದರ್ಶನವಾಗುತ್ತದೆ.

ಅಂದಹಾಗೆ ಈ ಐಕಾನ್ ಕೇವಲ ಫೇಸ್‌ಬುಕ್‌ ವೆಬ್‌ಸೈಟ್‌ನಲ್ಲಿ ಮಾತ್ರ ಕಾಣುತ್ತದೆ.

ಹಂತ 4

ಹಂತ 4

ಈ ಹಂತದಲ್ಲಿ ನೀವು ಯಾವ ಪೇಜ್‌ ಲೈಕ್ ಮಾಡಲು ಸ್ನೇಹಿತರನ್ನು ಆಹ್ವಾನಿಸಬೆಕೋ ಆ ಪೇಜ್‌ಗೆ ಲಾಗಿನ್‌ ಆಗಿ, ನಂತರ 'Invite all Facebook friends button' ಕ್ಲಿಕ್ ಮಾಡಿ.

ಹಂತ 5

ಹಂತ 5

ಫೇಸ್‌ಬುಕ್ ಫ್ರೆಂಡ್‌ಗಳನ್ನು ಆಹ್ವಾನಿಸುವ ಬಾಕ್ಸ್ ಓಪನ್‌ ಆಗಲೇಬೇಕು.

ಹಂತ 6

ಹಂತ 6

ಒಮ್ಮೆ ನೀವು ಎಕ್ಸ್ಟೆನ್ಷನ್ ಐಕಾನ್‌ ಮೇಲೆ ಕ್ಲಿಕ್‌ ಮಾಡಿದರೆ ನಿಮ್ಮ ಎಲ್ಲಾ ಸ್ನೇಹಿತರನ್ನು ಪೇಜ್‌ ಲೈಕ್ ಮಾಡಲು ಆಹ್ವಾನ ನೀಡಲು ಆರಂಭಿಸಲಾಗುತ್ತದೆ. ಈ ಮೇಲಿನ ಚಿತ್ರ ಗಮನಿಸಿ.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
How To Invite All Friends To Like Facebook Page By A Single Click. To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+