'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

Written By:

ಫೇಸ್‌ಬುಕ್‌(Facebook), ಜನರನ್ನು ತಲುಪಲು ಇರುವ ಬೃಹತ್‌ ವಿಶಾಲವಾದ ಸಾಮಾಜಿಕ ಜಾಲತಾಣ(Social Media). ಅಂದಹಾಗೆ ಫೇಸ್‌ಬುಕ್‌ನಲ್ಲಿ ಪ್ರೊಫೈಲ್‌, ಗ್ರೂಪ್‌, ಪೇಜ್‌ ಮುಖಾಂತರ ಜನರನ್ನು ತಲುಪಬಹುದು. ಇಂದು ಫೇಸ್‌ಬುಕ್, 'ಜಾಹಿರಾತು ನೀಡಲು ಅಥವಾ ಒಂದು ಬ್ರ್ಯಾಂಡ್‌ ಅನ್ನು ಅಧಿಕವಾಗಿ ಪ್ರಖ್ಯಾತಗೊಳಿಸಲು ಬಳಸುವ ಮಾಧ್ಯಮವು ಹೌದು'. ಫೇಸ್‌ಬುಕ್‌ನಲ್ಲಿ ಗರಿಷ್ಠ ಎಂದರೆ 5000 ಗೆಳೆಯರನ್ನು ಪೇಜ್‌ ಲೈಕ್‌ ಮತ್ತು ಫ್ರೆಂಡ್‌ ರಿಕ್ವೆಷ್ಟ್‌ ಸ್ವೀಕರಿಸುವ ಮೂಲಕ ಹೊಂದಬಹುದು. ಆ ನಂತರದಲ್ಲಿ ಫ್ರೆಂಡ್‌ ಆಡ್‌ ಮಾಡಲು ಸಾಧ್ಯವಾಗುವುದಿಲ್ಲ. ಆದ್ರೆ ಅಭಿಮಾನಿಗಳು ಸಬ್‌ಸ್ಕ್ರೈಬ್‌ ಮಾಡಬಹುದು ಅಷ್ಟೆ.

ಫೇಸ್‌ಬುಕ್‌ ಪೇಜ್‌ ಇಂದು ಪ್ರತಿಯೊಬ್ಬರ ಸಂಪರ್ಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ಪ್ರತ್ಯೇಕವಾಗಿ ರಚಿಸಿದ ಫೇಸ್‌ಬುಕ್‌ ಪೇಜ್‌ ಲೈಕ್‌ ಯಾವುದೇ ಪರಿಮಿತಿಯನ್ನು ಹೊಂದಿಲ್ಲ. ಫೇಸ್‌ಬುಕ್‌ ಪೇಜ್ ಬಗ್ಗೆ ಇಷ್ಟೆಲ್ಲಾ ಏಕೆ ಹೇಳ್ತಿದ್ದೀವಿ ಅಂದ್ರೆ ಇಂದು ಫೇಸ್‌ಬುಕ್‌ ಪೇಜ್‌ ಬ್ಯುಸಿನೆಸ್ ಮತ್ತು ಕಂಪನಿಗಳನ್ನು ಪ್ರಾರಂಭಿಸಲು ಹೆಚ್ಚು ಅಭಿಮಾನಿಗಳನ್ನು ತಲುಪಲು ಇರುವ ಉತ್ತಮ ಮಾಧ್ಯಮವಾಗಿದೆ. ಆದ್ದರಿಂದ ಇಂದಿನ ಲೇಖನದಲ್ಲಿ ಫೇಸ್‌ಬುಕ್‌ ಪೇಜ್‌ ಅನ್ನು ಹೇಗೆ ಕ್ರಿಯೇಟ್‌ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ. ಲೇಖನದ ಸ್ಲೈಡರ್‌ನಲ್ಲಿ ಹಂತ ಹಂತವಾಗಿ ಫೇಸ್‌ಬುಕ್‌ ಪೇಜ್‌ ಕ್ರಿಯೇಟ್‌ ಮಾಡುವುದು ಹೇಗೆ ಎಂದು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

1

ಮೊದಲು ಫೇಸ್‌ಬುಕ್‌ ಖಾತೆ ಓಪನ್‌ ಮಾಡಿ "Create New page" ಎಂಬಲ್ಲಿ ಕ್ಲಿಕ್‌ ಮಾಡಿ. ಅಥವಾ ಇಲ್ಲಿ ಕ್ಲಿಕ್‌ ಮಾಡಿ.

ಹಂತ 2

ಹಂತ 2

2

ನಂತರ ಓಪನ್‌ ಆದ 6 ಬಾಕ್ಸ್‌ಗಳಲ್ಲಿ ನಿಮಗೆ ಬೇಕಾದ ನಿರ್ಧಿಷ್ಟ ಬಾಕ್ಸ್‌ ಅನ್ನು ಸೆಲೆಕ್ಟ್‌ ಮಾಡಿ. ತಪ್ಪಾಗಿ ಆಯ್ಕೆ ಮಾಡಿದಲ್ಲಿ ನಿಮ್ಮ ಪೇಜ್‌ ಹೆಚ್ಚು ಜನರನ್ನು ತಲುಪುವಲ್ಲಿ ಮತ್ತು ಲೈಕ್ಸ್‌ ಪಡೆಯುವಲ್ಲಿ ಹಿಂದೆ ಉಳಿಯಬಹುದು.

ಹಂತ 3

ಹಂತ 3

3

ಫೇಸ್‌ಬುಕ್‌ ಪೇಜ್‌ನಲ್ಲಿ ಕ್ರಿಯೇಟ್‌ ಮಾಡುವಲ್ಲಿ ಲಭ್ಯವಿರುವ ಹಲವು ವಿಧದ ಪೇಜ್‌ಗಳು ಈ ಕೆಳಗಿನಂತಿವೆ. ಅವುಗಳಲ್ಲಿ ನಿಮಗೆ ಬೇಕಾದ ಪೇಜ್‌ ಅನ್ನು ಆಯ್ಕೆ ಮಾಡಿರಿ.
* Local Business or Place (ಸ್ಥಳೀಯ ವ್ಯವಹಾರ ಅಥವಾ ಸ್ಥಳ)
* Company, Organization And Institution(ಕಂಪನಿ, ಸಂಸ್ಥೆ ಮತ್ತು ಇನ್ಸ್ಟಿಟ್ಯೂಷನ್)
* Brand or Products(ಬ್ರ್ಯಾಂಡ್ ಅಥವಾ ಉತ್ಪನ್ನಗಳು)
* Artist, Band or Public Figure(ಕಲಾವಿದ, ಬ್ಯಾಂಡ್ ಅಥವಾ ಸಾರ್ವಜನಿಕ ಚಿತ್ರ)
* Entertainment(ಮನರಂಜನೆ)
* Cause or Community(ಉದ್ದೇಶ ಮತ್ತು ಸಮುದಾಯ)

ಹಂತ 4

ಹಂತ 4

4

ನಿರ್ಧಿಷ್ಟ ಪೇಜ್‌ ಆಯ್ಕೆ ಮಾಡಿದ ನಂತರ (Get on Started button) ಕ್ಲಿಕ್‌ ಮಾಡಿ.

ಹಂತ 5

ಹಂತ 5

5

ನಂತರ ನೀವು ಕ್ರಿಯೇಟ್‌ ಮಾಡುತ್ತಿರುವ ಪೇಜ್‌ ಬಗೆಗಿನ ಯೂಸರ್‌ ನೇಮ್‌, ವೆಬ್‌ಸೈಟ್‌, ಮಾಹಿತಿ ಮತ್ತು ಪ್ರೊಫೈಲ್‌ ಚಿತ್ರವನ್ನು ಅಪ್‌ಲೋಡ್‌ ಮಾಡಿ.

ಹಂತ 6

ಹಂತ 6

6

ನಿಮ್ಮ ಫೇಸ್‌ಬುಕ್‌ ಪೇಜ್‌ ಕ್ರಿಯೇಟ್‌ ಆಗಿರುತ್ತದೆ. ಕ್ರಿಯೇಟ್‌ ಆದ ನಂತರ ಯಾವಾಗಲು ಪ್ರೊಫೈಲ್‌ ಚಿತ್ರ ಮತ್ತು ಫೋಟೋ ಅಪ್‌ಲೋಡ್‌ ಮಾಡಿ. ಸೆಟ್ಟಿಂಗ್ಸ್‌ಗೆ ಹೋಗಿ ಮಾಹಿತಿ, ಇಮೇಲ್‌ ವಿಳಾಸ, ವೆಬ್‌ಸೈಟ್‌ ವಿಳಾಸ ನೀಡಿ. ಹಾಗೂ ಮೂರು ಉಪ ವಿಭಾಗಗಳನ್ನು ಪೇಜ್‌ ಹೆಚ್ಚು ತಲುಪಲು ಅನುಕೂಲವಾಗುವಂತೆ ನೀಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How To Create New Facebook Page. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot