ನಿಮ್ಮ ಮೊಬೈಲ್ ಫೋನ್‌ನಲ್ಲಿನ ಎಲ್ಲಾ ಎಸ್‌ಎಂಎಸ್ ಸಂದೇಶಗಳನ್ನು ನಿಮ್ಮ ಜಿ ಮೇಲ್ ಖಾತೆಯಲ್ಲಿ ಸೇವ್ ಮಾಡಿ ಇಡುವುದು ಅತ್ಯಂತ ಸುಲಭದ ಕೆಲಸವಾಗಿದೆ. ಇದಕ್ಕಾಗಿ ನೀವು ಯಾವುದೇ ಹೆಚ್ಚಿನ ಹಣ ಪಾವತಿಸುವಂತಿಲ್ಲ ಹಾಗೂ ಯಾವುದೇ ಹೈ-ಟೆಕ್ ಸ್ಟೆಪ್‌ಗಳನ್ನು ಅನುಸರಿಸುವಂತಿಲ್ಲ. ಹಾಗಿದ್ದಲ್ಲಿ ಹೇಗೆ ಸೇವ್‌ಮಾಡುವುದು ಅಂತ ಆಲೋಚಿಸ್ತಾ ಇದೀರಾ?... ಇದಕ್ಕಾಗಿ ನಿಮ್ಮ ಬಳಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಇದ್ದರೆ ಸಾಕು, ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಎಸ್‌ಎಂಎಸ್ ಬ್ಯಾಕಪ್ ಪ್ಲಸ್ (SMS Backup+) ಎಂಬ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ನಿಮ್ಮ ಜಿ ಮೇಲ್ ಅಕೌಂಟ್ ಸೆಟ್ಟಿಂಗ್ಸಗೆ ತಲುಪಿ IMAP ಆಪ್ಷನ್ ಎನೇಬಲ್ ಮಾಡಿಕೊಳ್ಳಿ.
ಎನೇಬಲ್ ಮಾಡಿದ ಬಳಿಕ ನಿಮ್ಮ ಸಂದೇಶಗಳನ್ನು ಜಿ ಮೇಲ್ ಅಕೌಂಟ್ ಯಾವುದೇ ಅಡೆಡಚಣೆ ಇಲ್ಲದೆ ತೆಗೆದುಕೊಳ್ಳುತ್ತದೆ.