Just In
- 12 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 13 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 14 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 16 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Movies
ಸ್ಯಾಂಡಲ್ವುಡ್ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾಟ್ಸಾಪ್‌ನಲ್ಲಿ ಜಿಫ್ ಇಮೇಜ್ ಕ್ರಿಯೇಟ್ ಮತ್ತು ಸೆಂಡ್ ಹೇಗೆ?
ವಾಟ್ಸಾಪ್ ಈ ವರ್ಷದಲ್ಲಿ ಹಲವು ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಿರುವುದು ಗಿಜ್‌ಬಾಟ್ ಓದುಗರಿಗೆ ಬಹುಶಃ ಈಗಾಗಲೇ ತಿಳಿದಿರುತ್ತದೆ. ಆದರೆ ಇತ್ತೀಚೆಗೆ ಬಿಡುಗಡೆ ಮಾಡಿದ ಹೆಚ್ಚು ಗಾಳಿ ಸುದ್ದಿ ಪಡೆದ ಫೀಚರ್ ಒಂದು ಆಂಡ್ರಾಯ್ಡ್ ಬೀಟಾ ವರ್ಸನ್ ವಾಟ್ಸಾಪ್ ಆಪ್‌ನಲ್ಲಿ ಲಭ್ಯವಿದೆ.
ವಾಟ್ಸಾಪ್ ಫೇಸ್‌ಬುಕ್‌ಗೆ ವೈಯಕ್ತಿಕ ಮಾಹಿತಿ ಶೇರ್ ಸ್ಟಾಪ್ ಹೇಗೆ?
ಅಂದಹಾಗೆ ಈ ಫೀಚರ್‌ನಿಂದ ಆಂಡ್ರಾಯ್ಡ್ ಬಳಕೆದಾರರು 6 ಸೆಕೆಂಡ್‌ಗಳ ವೀಡಿಯೊವನ್ನು GIF (ಜಿಫ್) ಇಮೇಜ್ ಆಗಿ ಕನ್ವರ್ಟ್ ಮಾಡಿ ಇತರರಿಗೆ ಕಳುಹಿಸಬಹುದು. ಈಗಾಗಲೇ ಕಳೆದ ತಿಂಗಳುಗಳ ಹಿಂದೆ ಪ್ರಾಥಮಿಕವಾಗಿ ಐಓಎಸ್‌ನಲ್ಲಿ ಜಿಫ್ ಸಪೋರ್ಟ್ ಆಗಿತ್ತು. ಈಗ ಆಂಡ್ರಾಯ್ಡ್ ಬೀಟಾ ವರ್ಸನ್ ನಲ್ಲಿಯೂ ಜಿಫ್ ಸಪೋರ್ಟ್ ಆಗುತ್ತಿದೆ.
'ಜಿಫ್' ಸಪೋರ್ಟ್ ಫೀಚರ್ ಬೀಟಾ ವರ್ಸನ್ 2.16.242 ಮತ್ತು ಅದಕ್ಕೂ ಹೆಚ್ಚಿನ ಬೆಟಾ ವರ್ಸನ್‌ನಲ್ಲಿ ರನ್ ಆಗುತ್ತಿರುವ ಆಂಡ್ರಾಯ್ಡ್ ಬಳಕೆದಾರರಿಗೆ ಅವಕಾಶವಿದೆ. ಜಿಫ್ ಸಪೋರ್ಟ್ ಫೀಚರ್ ಅನ್ನು ಪರೀಕ್ಷೆ ಮಾಡಲು ಆಸಕ್ತಿ ಉಳ್ಳವರು "Beta Program"ಗೆ ಸೈನಪ್ ಆಗಿ ಗೂಗಲ್ ಪ್ಲೇ ಸ್ಟೋರ್‌ನಿಂದ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ಜಿಫ್ ಇಮೇಜ್ ಅನ್ನು ಸರಳವಾಗಿ ನಿಮ್ಮ ಡಿವೈಸ್‌ಗಳಲ್ಲೇ ಕ್ರಿಯೇಟ್ ಮಾಡುವುದು ಮತ್ತು ಸೆಂಡ್ ಮಾಡುವುದು ಹೇಗೆ ಎಂದು ತಿಳಿಯಲು ಸ್ಲೈಡರ್‌ನಲ್ಲಿನ ಮಾಹಿತಿ ಓದಿರಿ.
ಎಲ್ಲರ ಸ್ಟೇಟಸ್ ಚೇಂಜ್ ಮಾಡೋ 12 ವಾಟ್ಸಾಪ್ ಸ್ಟೇಟಸ್‌ಗಳು
ವಾಟ್ಸಾಪ್‌ನಲ್ಲಿ ಜಿಫ್ ಶೇರ್ ಆಯ್ಕೆ ಸದಾಕಾಲ ಇರುತ್ತದೆ. ಆದರೆ ಮೊದಲು ನಾವು ಪೀಠಿಕೆಯಲ್ಲಿ ಹೇಳಿದ ಬೀಟಾ ವರ್ಸನ್ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಫೀಚರ್ 6 ಸೆಕೆಂಡ್ ವೀಡಿಯೊ ರೆಕಾರ್ಡ್ ಮಾಡಲು ಅವಕಾಶ ನೀಡುತ್ತದೆ, ನಂತರ ಅದನ್ನು ಜಿಫ್ ಆಗಿ ಕನ್ವರ್ಟ್ ಮಾಡುತ್ತದೆ. ಅಥವಾ ನಿಮ್ಮ ಗ್ಯಾಲರಿಯಲ್ಲಿನ ವೀಡಿಯೊವನ್ನು ಸಹ ಜಿಫ್ ಇಮೇಜ್ ಆಗಿ ಕನ್ವರ್ಟ್ ಮಾಡಬಹುದು. ಹಂತ 1: ಮೊದಲಿಗೆ ಚಾಟ್ ಸ್ಕ್ರೀನ್‌ನ ಟಾಪ್‌ನಲ್ಲಿ ಅಟಾಚ್‌ಮೆಂಟ್ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಕ್ಯಾಮೆರಾ ಮೇಲೆ ಕ್ಲಿಕ್ ಮಾಡಿ, ರೆಕಾರ್ಡ್ ವೀಡಿಯೊ ಆಯ್ಕೆ ಮಾಡಿ. ಹಂತ 2: 6 ಸೆಕೆಂಡ್ ಅಥವಾ ಕಡಿಮೆ ಸೆಕೆಂಡ್‌ನ ವೀಡಿಯೊ ರೆಕಾರ್ಡ್ ಮಾಡಿ ನಂತರ ಆರೋ (Arrow) ಬಟನ್ ಮೇಲೆ ಟ್ಯಾಪ್ ಮಾಡಿ. ರೆಕಾರ್ಡ್ ವೀಡಿಯೊ ಸೆಂಡ್ ಮಾಡುವ ಮೊದಲು ಟ್ರಿಮ್ಮಿಂಗ್ ಪೇಜ್ ಪ್ರದರ್ಶನವಾಗುತ್ತದೆ. ಹಂತ 3: ಸ್ಕ್ರೀನ್‌ನ ಟಾಪ್‌ನಲ್ಲಿ ಬಲಭಾಗವನ್ನು ಗಮನಿಸಿದರೆ, ಅಲ್ಲಿ ಕ್ಯಾಮ್‌ಕಾರ್ಡರ್ ಐಕಾನ್ ಕಾಣುತ್ತದೆ. ಅದರ ಮೇಲೆ ಟ್ಯಾಪ್ ಮಾಡಿದರೆ, ನಂತರ GIF ಐಕಾನ್ ಕಾಣುತ್ತದೆ. ನಂತರ ರೆಕಾರ್ಡ್ ಆದ ವೀಡಿಯೊ ಜಿಫ್ ಇಮೇಜ್ ಆಗಿ ಕನ್ವರ್ಟ್ ಆಗುತ್ತದೆ. ಒಮ್ಮೆ ಈ ಪ್ರಕ್ರಿಯೆ ಮುಗಿದರೆ ಜಿಫ್ ಇಮೇಜ್ ಸೆಂಡ್ ಆಗುತ್ತದೆ. ಸೂಚನೆ: ಕ್ಯಾಮ್‌ಕಾರ್ಡರ್ ಐಕಾನ್ ವೀಡಿಯೊ 6 ಸೆಕೆಂಡ್ ಇದ್ದರೆ, ಅದಕ್ಕಿಂತ ಕಡಿಮೆ ಸೆಕೆಂಡ್ ವೀಡಿಯೊ ಇದ್ದರೆ ಮಾತ್ರ ಪ್ರದರ್ಶನವಾಗುತ್ತದೆ. ಪ್ರಕಟಣೆ ಪ್ರಕಾರ ಕನ್ಟರ್ಟ್ ಆದ ಜಿಫ್ ಫೈಲ್ ಆಡಿಯೊ ಇಲ್ಲದ MP4 ಫೈಲ್ ಆಗಿ ಸೆಂಡ್ ಆಗುತ್ತದೆ. ಜಿಫ್ ಇಮೇಜ್ ಪಡೆದ ಸ್ವೀಕೃತದಾರರ ಚಾಟ್‌ನಲ್ಲಿ ಜಿಫ್ ಇಮೇಜ್ ಆಟೋ ಪ್ಲೇ ಆಗುತ್ತದೆ. ಅಲ್ಲದೇ ನೀವು ಶೇರ್ ಮಾಡಿದ MP4 ಫೈಲ್ WhatsApp > Media > WhatsApp Animated GIFs > Sent folder ನಲ್ಲಿ ಇರುತ್ತದೆ. ವಾಟ್ಸಾಪ್ ಇತ್ತೀಚೆಗೆ ವಾಯ್ಸ್‌ಮೇಲ್ ಫೀಚರ್ ಮತ್ತು ಉಲ್ಲೇಖ (quote) ಫೀಚರ್ ಅನ್ನು ಅಭಿವೃದ್ದಿಪಡಿಸಿತ್ತು.ವಾಟ್ಸಾಪ್‌ನಲ್ಲಿ ಜಿಫ್ ಇಮೇಜ್
ಜಿಫ್ ಕ್ರಿಯೇಟ್ ಮಾಡುವುದು ಹೇಗೆ?
ಜಿಫ್ ಕ್ರಿಯೇಟ್ ಮಾಡುವುದು ಹೇಗೆ?
ಜಿಫ್ ಕ್ರಿಯೇಟ್ ಮಾಡುವುದು ಹೇಗೆ?
ಜಿಫ್ ಫೈಲ್
ವಾಟ್ಸಾಪ್ ಇತ್ತೀಚಿನ ಬದಲಾವಣೆಗಳು
ಗಿಜ್‌ಬಾಟ್
ಗಿಜ್‌ಬಾಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470