Subscribe to Gizbot

ವಾಟ್ಸಾಪ್ ಫೇಸ್‌ಬುಕ್‌ಗೆ ವೈಯಕ್ತಿಕ ಮಾಹಿತಿ ಶೇರ್‌ ಸ್ಟಾಪ್ ಹೇಗೆ?

Written By:

ವಾಟ್ಸಾಪ್‌ ಶೀಘ್ರದಲ್ಲೇ ನಿಮ್ಮ ವೈಯಕ್ತಿಕ ಡಾಟಾವನ್ನು ಫೇಸ್‌ಬುಕ್‌ನೊಂದಿಗೆ ಶೇರ್‌ ಮಾಡಲಿದೆ. ನಿಮ್ಮ ವೈಯಕ್ತಿಕ ಡಾಟಾ ಬಳಕೆಯಿಂದ ಫೇಸ್‌ಬುಕ್ ಟಾರ್ಗೆಟ್‌ ಜಾಹಿರಾತುಗಳನ್ನು ನೀಡಲಿದೆ. ಆದರೆ ಜಾಹಿರಾತುಗಳನ್ನು ವಾಟ್ಸಾಪ್‌ನಲ್ಲಿ ನೋಡುವುದಿಲ್ಲ. ನಿರಂತರವಾಗಿ ನೀವು ಫೇಸ್‌ಬುಕ್‌ ಲಾಗಿನ್ ಆದಾಗ ನೋಡುತ್ತೀರಿ.

ಕೆಲವರಂತು ಫೇಸ್‌ಬುಕ್‌ಗೆ ಲಾಗಿನ್ ಆಗೋದೆ ಅಪರೂಪ, ಅದರಲ್ಲೂ ಆಗಾಗ ಜಾಹಿರಾತುಗಳು ಬಂದು ಕಿರಿಕ್ಕು ಮಾಡಿದ್ರೆ ಇತ್ತ ಮೊಬೈಲ್‌ ಡಾಟಾನು ವೇಸ್ಟ್‌, ಟೈಮ್‌ ಸಹ ವೇಸ್ಟ್. ವಾಟ್ಸಾಪ್‌ನಲ್ಲಿನ ವೈಯಕ್ತಿಕ ಡಾಟಾ ಮತ್ತು ಸ್ನೇಹಿತರ ಸಲಹೆಗಳನ್ನು ಬಳಸಿಕೊಂಡು ಫೇಸ್‌ಬುಕ್‌ ನೀಡುವ ಜಾಹಿರಾತುಗಳು ನಮಗೆ ಕಂಫರ್ಟ್‌ ಅಲ್ಲ ಎನ್ನುವುದೇ ಆದಲ್ಲಿ, ವಾಟ್ಸಾಪ್‌ ಮಾಹಿತಿಗಳು ಫೇಸ್‌ಬುಕ್‌ಗೆ ಶೇರ್‌ ಆಗುವುದನ್ನು ತಡೆಗಟ್ಟಲೇಬೇಕು.

ವೈಯಕ್ತಿಕ ಡಾಟಾ ಶೇರ್‌, ಮೊಬೈಲ್ ಡಾಟಾ ವೇಸ್ಟ್, ಅಲ್ಲದೇ ಫೇಸ್‌ಬುಕ್‌ಗೆ ಲಾಗಿನ್ ಆದಾಗ ನ್ಯೂಸ್‌ ಫೀಡ್‌ ನೋಡಲು ಸಾಧ್ಯವಾಗದೇ ಜಾಹಿರಾತುಗಳು ಪ್ರದರ್ಶನವಾಗುವುದರಿಂದ ಟೈಮ್ ಸಹ ವೇಸ್ಟ್. ಈ ಎಲ್ಲಾ ಚಟುವಟಿಕೆಗಳನ್ನು ತಡೆಗಟ್ಟಲು, ವಾಟ್ಸಾಪ್‌ನಲ್ಲಿನ ವೈಯಕ್ತಿಕ ಮಾಹಿತಿಗಳು ಫೇಸ್‌ಬುಕ್‌ಗೆ ಶೇರ್‌ ಆಗದಂತೆ ತಡೆಗಟ್ಟುವುದು ಹೇಗೆ ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಫೇಸ್‌ಬುಕ್‌

ಫೇಸ್‌ಬುಕ್‌

ಫೇಸ್‌ಬುಕ್ ವಾಟ್ಸಾಪ್‌ನಲ್ಲಿನ ವೈಯಕ್ತಿಕ ಡಾಟಾವನ್ನು ಶೇರ್‌ ಮಾಡಿಕೊಳ್ಳದಂತೆ ಮಾಡಲು, ವಾಟ್ಸಾಪ್‌ನಲ್ಲಿ ಮ್ಯಾನುವಲಿ ಸೆಟ್ಟಿಂಗ್ ಅನ್ನು ಡಿಸೇಬಲ್ ಮಾಡಬೇಕು.

ವಾಟ್ಸಾಪ್‌ ಅಪ್‌ಡೇಟ್‌ ನಿಯಮಗಳಿಗೆ ಒಪ್ಪದಿರಿ

ವಾಟ್ಸಾಪ್‌ ಅಪ್‌ಡೇಟ್‌ ನಿಯಮಗಳಿಗೆ ಒಪ್ಪದಿರಿ

ವಾಟ್ಸಾಪ್ ಆಪ್‌ ತನ್ನ ಹೊಸ ಸೇವೆ ಮತ್ತು ಅಪ್‌ಡೇಟ್‌ ಸಮಯದಲ್ಲಿ ನಿಮಗೆ ನೋಟಿಫೈ ಮಾಡುತ್ತದೆ. ಆಪ್‌ ಓಪನ್‌ ಮಾಡಿದಾಗ ಹೊಸ ಸೇವೆ ಮತ್ತು ನಿಯಮಗಳ ಬಗ್ಗೆ ಪೇಜ್‌ ಪ್ರದರ್ಶಿತವಾಗಿ 'Agree' ಆಯ್ಕೆಯನ್ನು ಟ್ಯಾಪ್‌ ಮಾಡುವಂತೆ ಕೇಳುತ್ತದೆ. ಈ ಪೇಜ್‌ನಲ್ಲಿ ನೀವು ಇದ್ದಲ್ಲಿ ನಾವು ಹೇಳುವಂತೆ ಮಾಡಿ. ಮುಂದಿನ ಸ್ಲೈಡರ್‌ ಓದಿರಿ.

ವಾಟ್ಸಾಪ್ ಅಪ್‌ಡೇಟ್‌ ನೋಟಿಫೈ

ವಾಟ್ಸಾಪ್ ಅಪ್‌ಡೇಟ್‌ ನೋಟಿಫೈ

ವಾಟ್ಸಾಪ್ ಹೊಸ ಸೇವೆಗೆ ನೀಡಿದ ಪೇಜ್‌ನಲ್ಲಿ 'Read' ಎಂಬಲ್ಲಿ ಟ್ಯಾಪ್‌ ಮಾಡಿ. ನಂತರ " Share my WhatsApp account information with Facebook." ಎಂಬುದನ್ನು ಅನ್‌ಚೆಕ್‌ ಅಥವಾ ಡಿಸೇಬಲ್‌ ಮಾಡಿ.

ಎರಡನೇ ವಿಧಾನ

ಎರಡನೇ ವಿಧಾನ

ಈಗಾಗಲೇ ನೀವು ವಾಟ್ಸಾಪ್‌ ಹೊಸ ಸೇವೆ ಮತ್ತು ಅಪ್‌ಡೇಟ್‌ಗೆ 'Agree' ಆಗಿದ್ದಲ್ಲಿ, ಮಾಹಿತಿ ಓದದೇ ಟ್ಯಾಪ್‌ ಮಾಡಿದ್ದಲ್ಲಿ ಸಹ ವಾಟ್ಸಾಪ್‌ ಫೇಸ್‌ಬುಕ್‌ಗೆ ಮಾಹಿತಿ ಶೇರ್‌ ಮಾಡದಂತೆ ಸ್ಟಾಪ್ ಮಾಡಬಹುದು.

ಐಫೋನ್ ಬಳಕೆ ಮಾಡುತ್ತಿದ್ದಲ್ಲಿ

ಐಫೋನ್ ಬಳಕೆ ಮಾಡುತ್ತಿದ್ದಲ್ಲಿ

Settings>>Account>>Uncheck Share my account info ಕ್ಲಿಕ್ ಮಾಡಿ.

ಆಂಡ್ರಾಯ್ಡ್‌ ಬಳಕೆದಾರರು

ಆಂಡ್ರಾಯ್ಡ್‌ ಬಳಕೆದಾರರು

... ಐಕಾನ್‌ ಮೇಲೆ ಕ್ಲಿಕ್ ಮಾಡಿ Settings>>Account>>Unchek Share My Account info. ಈ ರೀತಿಯಲ್ಲಿ ವಾಟ್ಸಾಪ್ ನಿಮ್ಮ ಮಾಹಿತಿಯನ್ನು ಫೇಸ್‌ಬುಕ್‌ನೊಂದಿಗೆ ಶೇರ್‌ ಮಾಡುವುದನ್ನು ನಿಲ್ಲಿಸಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

ಎಲ್ಲರ ಸ್ಟೇಟಸ್ ಚೇಂಜ್‌ ಮಾಡೋ 12 ವಾಟ್ಸಾಪ್‌ ಸ್ಟೇಟಸ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಫೇಸ್‌ಬುಕ್‌ ಗಿಜ್‌ಬಾಟ್‌ ಫೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
How to Stop WhatsApp From Sharing Details With Facebook. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot