Home
ಟೆಕ್ ನೌಕರಿ

ಆಂಡ್ರಾಯ್ಡ್‌ನಲ್ಲಿ ಇಂಟರ್‌ನೆಟ್‌ ವೇಗ ಹೆಚ್ಚಿಸುವುದು ಹೇಗೆ?

By Suneel

ಸ್ಮಾರ್ಟ್‌ಫೋನ್ ಬಳಸುವವರೆಲ್ಲಾ ಇಂದು ದಿನದಿಂದ ದಿನಕ್ಕೆ ಹೆಚ್ಚು ಸ್ಮಾರ್ಟ್‌ ಆಗುತ್ತಿದ್ದಾರೆ. ಅದು ಹೇಗೆ ಅಂತ ಕಾರಣ ಹುಡುಕಲು ಎಲ್ಲೂ ಹೋಗಬೇಡಿ. ಸಿಂಪಲ್‌ ಉತ್ತರ ನಾವೇ ಹೇಳ್ತಿವಿ. ಮೊದಲೆಲ್ಲಾ ಯಾವುದಾದರೂ ಒಂದು ಮಾಹಿತಿ ತಿಳಿಯ ಬೇಕಾದ್ರೆ ಟಿವಿ ಮುಂದೆ ಕೂರ ಬೇಕಿತ್ತು ಅಥವಾ ದಿನನಿತ್ಯ ಪತ್ರಿಕೆಗಳಿಗೆ ಕಾದು ಕೂರಬೇಕಿತ್ತು, ಆದರೆ ಇಂದು ಪ್ರತಿ ಸೆಕೆಂಡಿನ ಹೊಸ ಮಾಹಿತಿಯು ಸಹ ಸ್ಮಾರ್ಟ್ ಇರುವವರಿಗೆ ಬೇಗ ತಿಳಿದು ಬಿಡುತ್ತದೆ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ಟ್ವಿಟರ್‌, ವಾಟ್ಸಾಪ್ ಹೀಗೆ ಹಲವು ಮೂಲಗಳಿಂದ ಒಬ್ಬರಿಂದ ಒಬ್ಬರಿಗೆ ಬೇಗ ಮಾಹಿತಿ ತಲುಪಿ ಬಿಡುತ್ತದೆ.

ಓದಿರಿ: ಹೋನರ್ 7 ಓನರ್ ಆದವನೇ ಅದೃಷ್ಟಶಾಲಿ

ಎಷ್ಟೇ ಬ್ರೇಕಿಂಗ್‌ ಮಾಹಿತಿಗಳು ಬಂದರೂ ಸಹ ನಾವು ಇತರ ಮಾಹಿತಿಗಳಿಗಾಗಿ ದಿನನಿತ್ಯ ಕಂಪ್ಯೂಟರ್ ಅಥವಾ ಮೊಬೈಲ್‌ಗಳಲ್ಲಿ ಗೂಗಲ್‌ ಕ್ರೋಮ್ ಬ್ರೌಸರ್ ಬಳಕೆ ಖಂಡಿತ ಮುಖ್ಯವಾಗಿದೆ. ಆದರೆ ಹಲವರು ಗೂಗಲ್ ಕ್ರೋಮ್‌ ಬ್ರೌಸರ್‌ ನಿಧಾನಗತಿಯಲ್ಲಿ ನೆಟ್ ಸಂಪರ್ಕ ಕಾರ್ಯ ನಿರ್ವಹಿಸುತ್ತದೆ ಎಂದು ಬೇಸರ ಪಡುತ್ತಾರೆ. ಅಂತಹವರಿಗೆ ತಮ್ಮ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್‌ ಕ್ರೋಮ್‌ ಬ್ರೌಸರ್‌ನಿಂದ ವೆಬ್‌ಸೈಟ್‌ ಲೋಡ್‌ ವೇಗವಾಗಲು ಕೆಲವು ಸಲಹೆಗಳನ್ನು ಗಿಜ್‌ಬಾಟ್‌ ಇಂದಿನ ಲೇಖನಗಳಲ್ಲಿ ತಂದಿದೆ.

ಓದಿರಿ: ಗೂಗಲ್‌ ಕ್ಯಾಮೆರಾ ನೋಡಿದ ಆಶ್ಚರ್ಯ ಸಂಗತಿಗಳು

ಈ ಲೇಖನದಲ್ಲಿ ನೀಡುವ ಸಲಹೆಗಳು ಸರಳರೀತಿಯಲ್ಲಿದ್ದು, ನಿಮ್ಮ ಆಂಡ್ರಾಯ್ಡ್‌ನಲ್ಲಿ ಗೂಗಲ್‌ ಕ್ರೋಮ್‌ ವೆಬ್‌ಸೈಟ್‌ಗಳನ್ನು ವೇಗವಾಗಿ ಲೋಡ್‌ ಮಾಡಲು ಸಹಾಯವಾಗಿದೆ.

ಲೇಟೆಸ್ಟ್‌ ಗೂಗಲ್‌ ಕ್ರೋಮ್‌ ಅಪ್ಲಿಕೇಶನ್‌

ಲೇಟೆಸ್ಟ್‌ ಗೂಗಲ್‌ ಕ್ರೋಮ್‌ ಅಪ್ಲಿಕೇಶನ್‌

ಮೊದಲನೇಯದಾಗಿ ನಿಮ್ಮ ಆಂಡ್ರಾಯ್ಡ್ ಫೋನ್‌ಗಳಲ್ಲಿ ಲೇಟೆಸ್ಟ್ ಗೂಗಲ್‌ ಕ್ರೋಮ್‌ ವರ್ಸನ್ ಅನ್ನು ಅಪ್‌ಡೇಟ್‌ ಮಾಡಿ

 chrome://Flags ಎಂದು ಟೈಪ್‌

chrome://Flags ಎಂದು ಟೈಪ್‌

ಲೇಟೆಸ್ಟ್‌ ಗೂಗಲ್‌ ಕ್ರೋಮ್‌ ಅಪ್ಲಿಕೇಶನ್‌ ಅನ್ನು ಟ್ಯಾಪ್‌ ಮಾಡುವ ಮೂಲಕ ಓಪೆನ್‌ ಮಾಡಿ ಯುಆರ್‌ಎಲ್‌ ಸರ್ಚ್‌ ಬಾರ್‌ನಲ್ಲಿ chrome://Flags ಎಂದು ಟೈಪ್‌ ಮಾಡಿ ಎಂಟರ್ ಬಟನ್ ಪ್ರೆಸ್‌ಮಾಡಿ.

ಹೈಡೆನ್ ಫೈಲ್‌ಗಳು

ಹೈಡೆನ್ ಫೈಲ್‌ಗಳು

ಹೈಡೆನ್‌ ಆಗಿರುವ ಹೆಚ್ಚು ಫೈಲ್‌ಗಳು ಅಲ್ಲಿ ಓಪೆನ್‌ ಆಗುತ್ತವೆ. ಅಲ್ಲಿ 'Maximum tiles for interest area Mac, Windows, Linux, Chrome OS, Android '' ಆಯ್ಕೆಗಳನ್ನು ಸರ್ಚ್‌ ಮಾಡಿ.

256 ಅಥವಾ 512 ಕ್ಕೆ ಕ್ಲಿಕ್‌ ಮಾಡಿ

256 ಅಥವಾ 512 ಕ್ಕೆ ಕ್ಲಿಕ್‌ ಮಾಡಿ

RAM ಸಾಮರ್ಥ್ಯಕ್ಕೆ ತಕ್ಕಂತೆ ಅದು ಡಿಫಾಲ್ಟ್‌ ಆಗಿರುತ್ತದೆ. ಅದನ್ನು ನೀವು ಗರಿಷ್ಟ ಸಾಮರ್ಥ್ಯ 256 ಅಥವಾ 512 ಕ್ಕೆ ಕ್ಲಿಕ್‌ ಮಾಡಿ ಬದಲಿಸಿ.

Relaunch Now

Relaunch Now

ನಂತರದಲ್ಲಿ ಕೆಳಗೆ Relaunch Now ಬಟನ್‌ಪ್ರೆಸ್‌ ಮಾಡಿ.

ವೇಗವಾಗಿ ವೆಬ್‌ಪೇಜ್‌ ಲೋಡ್

ವೇಗವಾಗಿ ವೆಬ್‌ಪೇಜ್‌ ಲೋಡ್

ಮೇಲಿನ ಹಂತಗಳನ್ನು ಅನುಸರಿಸಿದ ನಂತರದಲ್ಲಿ ನಿಮ್ಮ ಆಂಡ್ರಾಯ್ಡ್ ಗೂಗಲ್‌ ಕ್ರೋಮ್‌ ಅಪ್ಲಿಕೇಶನ್‌ ಹಿಂದಿನಕ್ಕಿಂತ ಈಗ ವೇಗವಾಗಿ ವೆಬ್‌ಪೇಜ್‌ಗಳನ್ನು ಲೋಡ್ ಮಾಡುತ್ತದೆ. ಅಲ್ಲದೇ ಹೆಚ್ಚು ಟ್ಯಾಬ್‌ಗಳನ್ನು ಒಮ್ಮೆಯೇ ವೇಗವಾಗಿ ಓಪೆನ್‌ ಮಾಡಬಹುದು.

ಸರಳವಾಗಿ ಬದಲಿಸಿ

ಸರಳವಾಗಿ ಬದಲಿಸಿ

ಗೂಗಲ್‌ ಕ್ರೋಮ್‌ನಲ್ಲಿನ ಹೈಡೆನ್‌ ಸೆಟ್ಟಿಂಗ್ಸ್‌ಗಳನ್ನು ಸರಳವಾಗಿ ಬದಲಿಸಿ ನಿಮ್ಮ ನೆಟ್‌ ಸಂಪರ್ಕ ವೇಗಗೊಳಿಸಿ.

Best Mobiles in India

English summary
Today we are here with a cool method for How To Make Google Chrome Browse Faster On Android. Google chrome is one the most popular web browser for PC user and is also available for all OS like android.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+