ಯೂಟೂಬ್‌ನಲ್ಲಿ ಹೆಚ್ಚು ವಿಡಿಯೋ ನೋಡುವವರಿಗಾಗಿ...!!!
ಯೂಟೂಬ್ ನಲ್ಲಿ ವಿಡಿಯೋ ನೋಡುವ ವೇಳೆಯಲ್ಲಿ ಪ್ರತಿ ಬಾರಿಯೂ ಮೊಸ್ ಬಳಸುವುದನ್ನು ಬಿಟ್ಟು ನಿಮ್ಮ ಕೀ ಬೋರ್ಡ್ ಶಾರ್ಟಕಟ್ ಬಳಸಿ.
ದೇಶದಲ್ಲಿ ರಿಲಯನ್ಸ್ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ದೇಶದಲ್ಲಿ ಯೂಟೂಬ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಜಿಯೋ ಬಿಡುಗಡೆ ಮಾಡಿರುವ ಡೇಟಾದಲ್ಲಿಯೇ ಈ ವಿಷಯವನ್ನು ಒತ್ತಿ ಹೇಳಲಾಗಿದೆ. ಅಲ್ಲದೇ ಯೂಟೂಬ್ ನಲ್ಲಿ ವಿಡಿಯೋ ನೋಡಲು ವೇಗದ ಇಂಟರ್ನೆಟ್ ಬೇಕಾಗಿದ್ದು, ಸದ್ಯ ಹೆಚ್ಚಿನ ವೇಗದ ಇಂಟರ್ನೆಟ್ ಕಡಿಮೆ ಬೆಲೆಗೆ ಲಭ್ಯವಿರುವುದು ಇದಕ್ಕೆ ಕಾರಣವಾಗಿದೆ.

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!
ಈ ಹಿನ್ನಲೆಯಲ್ಲಿ ಯೂಟೂಬ್ ನಲ್ಲಿ ವಿಡಿಯೋ ನೋಡುವ ವೇಳೆಯಲ್ಲಿ ಪ್ರತಿ ಬಾರಿಯೂ ಮೊಸ್ ಬಳಸುವುದನ್ನು ಬಿಟ್ಟು ನಿಮ್ಮ ಕೀ ಬೋರ್ಡ್ ಶಾರ್ಟಕಟ್ ಬಳಸಿಕೊಂಡು ಹೇಗೆ ವಿಡಿಯೋವನ್ನು ಹಿಂದೆಕ್ಕೆ, ಮುಂದೆಕ್ಕೆ ಮಾಡುವುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ.
ಓದಿರಿ: ಬಿಡುಗಡೆಯಾಗಿದೆ ಜಿಯೋ DTH: ವಿಡಿಯೋ ನೋಡಿ..!!!!

ವಿಡಿಯೋವನ್ನು ಪ್ಲೇ ಮತ್ತು ಸ್ಟಾಪ್ ಮಾಡಲು:
ನೀವು ಯೂಟೂಬ್‌ನಲ್ಲಿ ವಿಡಿಯೋ ನೋಡುತ್ತಿದ್ದ ಸಂದರ್ಭದಲ್ಲಿ ವಿಡಿಯೋವನ್ನು ಮಧ್ಯದಲ್ಲೇ ನಿಲ್ಲಸಲು ಮತ್ತು ಮಧ್ಯದಲ್ಲೇ ನಿಂತ ವಿಡಿಯೋವನ್ನು ಮತ್ತೇ ಪ್ಲೇ ಮಾಡುಲು 'K' ಕೀಯನನ್ನು ಬಳಸಿಕೊಳ್ಳಿ

ವಿಡಿಯೋ ವಿವೈಂಡ್ ಮಾಡಲು:
ಯೂಟೂಬ್‌ನಲ್ಲಿ ನೀವು ನೋಡುತ್ತಿರುವ ವಿಡಿಯೋವನ್ನು 10 ಸೆಕೆಂಡ್‌ಗಳ ಕಾಲ ಹಿಂದಕ್ಕೆ ಹೋಗಬೇಕಾದ ಸಂದರ್ಭದಲ್ಲಿ ನೀವು 'J' ಕೀಯನ್ನು ಬಳಕೆ ಮಾಡಿರಿ.

ವಿಡಿಯೋವನ್ನು ಫಾರ್ವರ್ಡ್ ಮಾಡಲು:
ಯೂಟೂಬ್‌ನಲ್ಲಿ ಪ್ಲೇಯಾಗುತ್ತಿರುವ ವಿಡಿಯೋವನ್ನು 10 ಸೆಕೆಂಡ್‌ಗಳ ಕಾಲ ಮುಂದಕ್ಕೆ ಹಾಕಬೇಕಾದ ಸಂದರ್ಭದಲ್ಲಿ ನೀವು 'L' ಕೀಯನ್ನು ಬಳಕೆ ಮಾಡಿರಿ.

ವಿಡಿಯೋವನ್ನು ಮ್ಯೂಟ್ ಮಾಡಬೇಕಾದಲ್ಲಿ:
ಯೂಟೂಬ್ ವಿಡಿಯೋ ನೋಡುತ್ತಿರುವ ಸಂದರ್ಭದಲ್ಲಿ ಮ್ಯೂಟ್ ಮಾಡಬೇಕಾದ ಸಂದರರ್ಭದಲ್ಲಿ 'M' ಕೀಯನ್ನು ಉಪಯೋಗಿಸಿರಿ.

ವಿಡಿಯೋ ಶುರುವಿಗೆ ಹೋಗಲು:
ನೀವು ಒಂದು ವಿಡಿಯೋವನ್ನು ನೋಡುತ್ತಿರುವ ಸಂದರ್ಭದಲ್ಲಿ ವಿಡಿಯೋ ಶುರುವಿಗೆ ಹಿಂತಿರುಗಬೇಕಾದ ಸಂದರ್ಭದಲ್ಲಿ 'ನಂಬರ್ ೦' (ಸೋನ್ನೆ)ಯನ್ನು ಒತ್ತಿರಿ.

ವಿಡಿಯೋವನ್ನು ವೇಗವಾಗಿ ಓಡಿಸಲ:
ನೀವು ಒಂದು ವಿಡಿಯೋದಲ್ಲಿ ಏನಿದೇ ಎಂಬುದನ್ನು ಮಾತ್ರವೇ ನೋಡಲು 10% ನಷ್ಟ ಓಡಿಸಬೇಕಾದ ಸಂದರ್ಭದಲ್ಲಿ ನಂಬರ್‌ಗಳಲ್ಲಿ 1 ರಿಂದ 9ರ ವರೆಗೆ ಯಾವುದನ್ನು ಬೇಕಾದರು ಬಳಕೆ ಮಾಡಿಕೊಳ್ಳಿ.

ಅಕ್ಷರಗಳನ್ನು ಹಿಗ್ಗಿಸಿಕೊಳ್ಳಲು:
ಯೂಟೂಬ್ ವಿಡಿಯೋ ಪ್ಲೇ ಆಗುತ್ತಿದ್ದ ಸಂದರ್ಧದಲ್ಲಿ ಅಲ್ಲಿರುವ ಅಕ್ಷರಗಳನ್ನು ಹಿಗ್ಗಿಸಿಕೊಳ್ಳುವ ಸಲುವಾಗಿ '+' ಚಿನ್ಹೆಯನ್ನು ಬಳಕೆ ಮಾಡಿಕೊಳ್ಳಿ.

ಅಕ್ಷರಗಳನ್ನು ಕುಗ್ಗಿಸಿಕೊಳ್ಳಲು:
ವಿಡಯೋ ನೋಡುವ ಸಂದರ್ಧದಲ್ಲಿ ಅಲ್ಲಿರುವ ಅಕ್ಷರಗಳನ್ನು ಕುಗ್ಗಿಸಿಕೊಳ್ಳಲ '-' ಚಿನ್ಹೆಯನ್ನು ಉಪಯೋಗಿಸಿಕೊಳ್ಳಿರಿ.


Click it and Unblock the Notifications








